ಪ್ರಚಲಿತ

ದೈವಾರಾಧನೆಯನ್ನು ಅವಮಾನಿಸಿ
‘ತೀಟೆ’
ತೀರಿಸಿಕೊಂಡ ಕ್ರಿಸ್ಮಸ್ ಹಬ್ಬ

ಹಿಂದೂ ಧರ್ಮದ ಆಚರಣೆಗಳನ್ನು ಅವಹೇಳನ ಮಾಡೋದು ಅಂದ್ರೆ ಕೆಲವು ಅತೃಪ್ತ ಆತ್ಮ‌ಗಳಿಗೆ ಅದೇನೋ ಸಂತೋಷ ಅಂತ ಅನ್ಸುತ್ತೆ. ಹಿಂದೂ ದೈವ ದೇವರುಗಳನ್ನು ಅವಹೇಳನ ಮಾಡೋದು.. ಹಿಂದೂ ಧರ್ಮದ ಆಚಾರ, ವಿಚಾರಗಳನ್ನು ಹಾಸ್ಯದ ವಸ್ತುವಿನಂತೆ ಬಳಕೆ ಮಾಡೋದು, ಹಿಂದೂ ಸಂಪ್ರದಾಯ‌ದ ಬಗ್ಗೆ ಅವಹೇಳನ ಮಾಡೋದು.. ಹೀಗೆ ಅನ್ಯ ಧರ್ಮದ ಕೆಲವು ನಾಮರ್ಧರಿಗೆ ಹಿಂದೂ ಧರ್ಮ‌ವನ್ನು ಮನ ಬಂದ ಹಾಗೆ ಅವಮಾನ, ಅವಹೇಳನ ಮಾಡೋದು ಒಂದು ಕೆಟ್ಟ ಚಟ ಆಗಿಬಿಟ್ಟಿದೆ.

ಬಟ್ಟೆಗಳ ಮೇಲೆ, ಚಪ್ಪಲಿ‌ಗಳಲ್ಲಿ ದೇವರ ಚಿತ್ರ‌ಗಳನ್ನು ಬಿಡಿಸಿ ಅವಮಾನ ಮಾಡೋದು, ಹಿಂದೂ ದೇವರುಗಳಿಗೆ ಮಾತಿನ ಮೂಲಕ ಅವಮಾನ ಮಾಡೋದು, ಹಿಂದೂ ಆಚಾರ ವಿಚಾರ‌ಗಳನ್ನು ಬಾಯಿಗೆ ಬಂದಂತೆ, ನಾಲಿಗೆ ತಿರುಗಿದಂತೆಲ್ಲಾ ಅವಹೇಳನ ಮಾಡೋದು ಎಲ್ಲರಿಗೂ ಗೊತ್ತಿದೆ. ಇದೀಗ ಮುಂದುವರಿದಿರುವ ಅನ್ಯ ಧರ್ಮದ ಕೆಲ ನಾಲಾಯಕು ಜನರು ಹಿಂದೂ ದೈವಗಳನ್ನು ಅವಹೇಳನ ಮಾಡೋದಿಕ್ಕೂ ಮುಂದಾಗಿರೋದು ದುರಾದೃಷ್ಟ.

ಮೊನ್ನೆಯಷ್ಟೇ ಕ್ರೈಸ್ತರ ಕ್ರಿಸ್ಮಸ್ ಕಳೆಯಿತು. ಕ್ರಿಸ್ಮಸ್ ಎಂದಾಕ್ಷಣ ನೆನಪಾಗೋದು ಸಾಂತಾ ಕ್ಲಾಸ್. ಸಾಂತಾ ಬರ್ತಾನೆ. ಗಿಫ್ಟ್ ತರ್ತಾನೆ ಅಂತ ನಂಬಿಕೆ ಆ ಧರ್ಮದ ಜನರಲ್ಲಿ ಇದೆ. ಸಾಂತಾ‌ನನ್ನು ಗೌರವಿಸುವ ಆ ಧರ್ಮದ ಜನರು ಸಾಂತಾನ ವೇಷ ಧರಿಸಿ ಮನರಂಜನೆ ಕೊಡೋದು, ಉಡುಗೊರೆ ನೀಡೋದು ಇತ್ಯಾದಿಗಳನ್ನು ಮಾಡ್ತಾನೆ ಅನ್ನೋದನ್ನು ಎಲ್ಲರೂ ಬಲ್ಲರು.

ಆದ್ರೆ ಇಲ್ಲೊಬ್ಬ ಸಾಂತಾ ವೇಷದ ವಕ್ರ ಬುದ್ಧಿಯ ವ್ಯಕ್ತಿ ಇತ್ತೀಚೆಗೆ ಬಿಡುಗಡೆ‌ಯಾದ ಕಾಂತಾರಾ ಚಲನಚಿತ್ರ‌ದ ‘ವರಾಹ ರೂಪಂ’ ಹಾಡು ಹಾಕಿಕೊಂಡು, ಆ ಚಿತ್ರದಲ್ಲಿ ಬರುವಂತೆ ಪಂಜುರ್ಲಿ ದೈವ ಊರವರ ಕೈ ಹಿಡಿದು ಒಗ್ಗೂಡಿಸುವ ದೃಶ್ಯ‌ವನ್ನು ಅಣಕ ಮಾಡಿದ್ದಾನೆ. ಇದಕ್ಕೆ ಅವನಿಗೆ ಆತನ ಕೋರಸ್ ಸಹ ಸಹಕಾರ ನೀಡಿದೆ. ಹಿಂದೂ ಧರ್ಮ‌ದಲ್ಲಿ ನಡೆಯುವ ದೈವಾರಾಧನೆ ಸಂದರ್ಭದಲ್ಲಿ ದೈವ ನಡೆಸುವ ಕ್ರಿಯೆಯನ್ನು ಹಾಸ್ಯ ಎಂಬಂತೆ ಈ ಸಾಂತಾ ವೇಷದ ಮತಾಂಧ ತೋರಿಸಿದ್ದು, ಇದಕ್ಕೆ ಆತನೊಂದಿಗಿದ್ದ ಇತರರು ಅಟ್ಟಹಾಸ ಮೆರೆಯುತ್ತಾ ಬೆಂಬಲ ನೀಡಿರುವ, ಸಾಂತಾ ಟಾರ್ಚ್ ‌ ಅನ್ನು ದೊಂದಿಯಂತೆ ಬಳಸಿ ಬೊಬ್ಬೆ ಹೊಡೆಯುತ್ತಾ ದೂರಕ್ಕೆ ಓಡಿ ಕಲ್ಲಿನ ಮೇಲೆ ಕೂರುತ್ತಾನೆ‌. ಆ ಮೂಲಕ ತೌಳವರ ಆರಾಧನೆ, ನಂಬಿಕೆ ಭೂತಾರಾಧನೆ‌ಯನ್ನು ಅವಮಾನಿಸಿದ್ದಾನೆ. ಇದು ಆತನ ವಿಕೃತ ಮನಸ್ಸಿಗೆ ಹಿಡಿದ ಕೈಗನ್ನಡಿ.

ಸಾಂತಾ‌ನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆತನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿದೆ. ಕ್ರೈಸ್ತ ಧರ್ಮದ ಸಾಂತಾ ಎಂಬ ನಂಬಿಕೆಯನ್ನು ಮೂಡನಂಬಿಕೆ ಎನ್ನದ ಕ್ರೈಸ್ತರು, ಹಿಂದೂ ಧರ್ಮದ ಆಚರಣೆಗಳಿಗೆ ಅವಮಾನ ಮಾಡುವುದು ಅವರ ತಿಳುವಳಿಕೆ‌ಯ ಮಟ್ಟ ಎಷ್ಟು ಕೆಟ್ಟು ಹೋಗಿದೆ ಎನ್ನುವುದಕ್ಕೆ ಸಾಕ್ಷಿ.

ಹಿಂದೂ ದೈವ ದೇವರು‌ಗಳನ್ನು ಅವಮಾನ ಮಾಡಿದವರು ಯಾರೂ ಸಹ ಈ ವರೆಗೆ ಉದ್ಧಾರ‌ವಾದ ಮಾತೇ ಇಲ್ಲ. ದೈವಗಳಿಗೆ ಅಪಚಾರ ಎಸಗಿದವರು ನಿರ್ನಾಮ‌ವಾಗಿರುವ ಇತಿಹಾಸ ನಮ್ಮ. ಕಣ್ಣ ಮುಂದೆಯೇ ಇದೆ. ಈ ಸಾಂತಾ ವೇಷದ ಹುಚ್ಚನಿಗೆ ಮತ್ತು ಆತನ ಹುಚ್ಚಾಟಕ್ಕೆ ಬೆಂಬಲ ನೀಡಿದ ಅವನ ಸಹ ಕಲಾವಿದರಿಗೂ ದೈವ ದೇವರಿಂದ ಸಿಗಬೇಕಾದ ಫಲ ಸಿಕ್ಕೇ ಸಿಗುತ್ತದೆ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ಈ ಅವಹೇಳನಕ್ಕೆ ಆ ಸಾಂತಾನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅದನ್ನು ನೋಡಿಯಾದರೂ ಇನ್ನು ಯಾರೂ ಸಹ ಇಂತ ಅಪಹಾಸ್ಯ‌ಕ್ಕೆ ಹಿಂದೂ ಧರ್ಮದ ನಂಬಿಕೆ, ಆಚಾರ, ವಿಚಾರ, ದೈವ ದೇವರುಗಳನ್ನು ಬಳಸಿಕೊಳ್ಳದಿರಲಿ. ಅಂತಹ ಶಿಕ್ಷೆ ಈ ಸಾಂತಾ‌ನಿಗಾಗಲಿ ಎಂಬ ಬಯಕೆ ನಮ್ಮದು.

Tags

Related Articles

Close