ಪ್ರಚಲಿತ

ಚಿರಂಜೀವಿಯಾಗಿರುವ ವೀರ ಮಾರುತಿ ವಾನರನಾಗಿ ಅವತಾರ ಎತ್ತಿದ ಹಿಂದಿರುವ ಆ ಕಾರಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕೇಸರಿ ತನಯನಾದ ಹನುಮಂತನ ವೀರ ಸಾಹಸದ ಕಥೆಗಳನ್ನು ಒಂದು ಸಲ ಮೆಲುಕು ಹಾಕುತ್ತಾ ಹೋದರೆ ಆತನ ಪರಾಕ್ರಮಗಳ ಚಿತ್ರಣಗಳು ಕಣ್ಣ ಮುಂದೆ ಬರುತ್ತದೆಯಲ್ಲದೇ, ಸೀತಾರಾಮನ ಪರಮ ಭಕ್ತನಾಗಿ ಭಕ್ತಿಯ ಸುಧೆಯನ್ನೇ ತುಂಬಿರುವ ಪರಮಮೂರ್ತಿಯನ್ನು ಎಷ್ಟು ಕೊಂಡಾಡಿದರೂ ಕೂಡ ಅದು ಸಾಲದು!! ಆದರೆ ಅಂಜನಾ ಸುತನಾದ ಅಂಜನೇಯನ ಪರಾಕ್ರಮಕ್ಕೆ ಸರಿಸಾಟಿ ಮತ್ತೊಬ್ಬರಿಲ್ಲ ಎನ್ನುವ ವಿಚಾರ ತಿಳಿದಿದ್ದರೂ ಕೂಡ ವೀರ ಮಾರುತಿ, ವಾನರನಾಗಿ ಜನಿಸಲು ಕಾರಣಗಳೇನು ಎಂಬುವುದನ್ನು ತಿಳಿಯುವ ಗೋಜಿಗೆ ಮಾತ್ರ ಹೋಗುವುದೇ ಇಲ್ಲ!!

ಹಿಂದೂ ಧರ್ಮದಲ್ಲಿ ಹನುಮಂತನನ್ನು ಹೆಚ್ಚು ಪ್ರಬಲ ಮತ್ತು ಶಕ್ತಿಶಾಲಿ ದೇವರು ಎಂದು ಬಿಂಬಿಸಲಾಗಿದ್ದು, ಶಕ್ತಿಯ ಪ್ರತಿಬಿಂಬವೆಂದೂ ಕರೆಯಲಾಗುತ್ತದೆ!! ಹಾಗಾಗಿ ಅದೆಷ್ಟೋ ಅಸಂಖ್ಯಾತ ಭಕ್ತರ ಸಮೂಹವನ್ನೇ ಹೊಂದಿರುವ ಕೇಸರಿ ತನಯ ಹನುಮಂತನನ್ನು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತನ್ನ ಜೇಬಿನಲ್ಲಿ ಕಿರು ಹನುಮಂತನ ಪ್ರತಿಮೆಯನ್ನು ಇಟ್ಟುಕೊಂಡು ಓಡಾಡುತ್ತಾರೆ ಎನ್ನುವ ವಿಚಾರವೂ ತಿಳಿದೇ ಇದೆ. ಶಕ್ತಿ ಮತ್ತು ಚೈತನ್ಯದ ಮೂಲವಾಗಿರುವ ಹನುಮಂತನನ್ನು ಕೇವಲ ಭಾರತೀಯರಲ್ಲದೇ, ಅಸಂಖ್ಯಾತ ವಿದೇಶಿಯರು ಆರಾಧಿಸುತ್ತಾರೆ.

ಆದರೆ ವಾಯು ಪುತ್ರ, ಪವನಪುತ್ರ, ಬ್ರಹ್ಮಚಾರಿ, ಮಾರುತಿ ಮೊದಲಾದ ಹೆಸರುಗಳನ್ನು ಪಡೆದುಕೊಂಡಿರುವ ಹನುಮಾನ್ ಒರ್ವ ವಾನರನಾಗಿ ಏಕೆ ಹುಟ್ಟಿದ ಎನ್ನುವ ಪ್ರಶ್ನೆಗಳಿಗೆ ಹಲವಾರು ಕಥೆಗಳಿವೆ. ಹೌದು….. ಏಳು ಚಿರ0ಜೀವಿಗಳ ಪೈಕಿ ಹನುಮನೂ ಓರ್ವನಾಗಿದ್ದು, ಲ0ಕಾಧಿಪತಿಯಾದ ರಾವಣನ ಬ0ಧನದಿ0ದ ಸೀತಾಮಾತೆಯನ್ನು ಬಂಧಮುಕ್ತಗೊಳಿಸಿ, ಆಕೆಯು ಶ್ರೀ ರಾಮನನ್ನು ಸೇರುವ0ತಾಗುವಲ್ಲಿ ಹನುಮನ ಪಾತ್ರವು ಅಪಾರವಾದುದು. ಅಷ್ಟೇ ಅಲ್ಲದೇ, ಈಡೀ ಲಂಕೆಯನ್ನೇ ತನ್ನ ಬಾಲದಲ್ಲಿ ಸುಟ್ಟುಹಾಕಿರುವ ವೀರ ಅಂಜನೇಯ ಸಂಜೀವಿನಿ ಪರ್ವತವನ್ನೇ ಎತ್ತಿ ತನ್ನ ಪರಾಕ್ರಮವನ್ನೇ ಜಗತ್ತಿಗೆ ಸಾರಿದಂತಹ ಮಹಾನ್ ಶಕ್ತಿಶಾಲಿ!!

ಸಕಲ ದೇವ ದೇವತೆಗಳ ಪೈಕಿ ಭಗವಾನ್ ಹನುಮ0ತನು ಚಿರ0ಜೀವಿ!! ಹನುಮನೆ0ದರೆ ಆತನು ವಾನರ ಹಾಗೂ ಮಾನವ ಇವರೀರ್ವರ ಮಿಶ್ರ ಸ್ವರೂಪವೂ ಹೌದು!! ಹನುಮಾನ್ ಪದದ ಒ0ದು ಅರ್ಥವೇನೆ0ದರೆ “ಯಾವುದೇ ಅಹ0ಭಾವವಿಲ್ಲದಿರುವುದು”. “ಹನು” ಎ0ದರೆ ಕೊಲ್ಲುವುದು ಹಾಗೂ “ಮಾನ್” ಎ0ದರೆ ಅಹ0ಕಾರ ಎ0ದರ್ಥವಾಗಿದೆ. ಆದ್ದರಿ0ದ ಅಹ0ಕಾರವನ್ನು ಕೊ0ದುಕೊ0ಡಿರುವ ವ್ಯಕ್ತಿಯೇ ಹನುಮಾನ್ ಎ0ದು ಗುರುತಿಸಲ್ಪಡುತ್ತಾನೆ. ಹನುಮನು ಕೋತಿಯಾಗಿ ಹುಟ್ಟಿರುವುದಕ್ಕೆ ಹಲವಾರು ದೃಷ್ಟಾಂತಗಳಿವೆ.

ಅವುಗಳಲ್ಲಿ ಶಿವ ಪಾರ್ವತಿಯರ ಪಾತ್ರವೂ ಬಹು ದೊಡ್ಡದಿದೆ ಎಂದು ಪುರಾಣಗಳು ಹೇಳುತ್ತವೆ. ಆ ಪ್ರಕಾರ, ಒಮ್ಮೆ ಶಿವ ಪಾರ್ವತಿಯರು ತಮ್ಮನ್ನು ತಾವು ವಾನರರನ್ನಾಗಿ ಮಾಡಿಕೊಂಡು ಕಾಡಿನಲ್ಲಿ ಆಟವಾಡಲು ನಿರ್ಧರಿಸಿದರು. ತ್ರಿಕಾಲವನ್ನು ತಿಳಿದುಕೊಂಡಿರುವ ಈಶ್ವರನು ತನ್ನ ಮಡದಿ ಗಿರಿಜೆಯೊಂದಿಗೆ ವಾನರರಾಗಿ ಕಳೆದ ಕೆಲವೇ ಸಮಯದಲ್ಲಿ ಪಾರ್ವತಿ ಗರ್ಭವತಿಯಾದಳೆಂದು ಹೇಳಲಾಗುತ್ತದೆ.

ಆ ಸಂದರ್ಭದಲ್ಲಿ ಶಿವನು ತನ್ನ ದೈವಿಕ ಜವಬ್ದಾರಿಗಳನ್ನು ಬಹಳವಾಗಿ ಅರಿತುಕೊಂಡಿದ್ದರಿಂದ ಪಾರ್ವತಿಯ ಗರ್ಭವನ್ನು ತೆಗೆದುಕೊಂಡು ಹೋಗುವಂತೆ ವಾಯುವಿನಲ್ಲಿ ಹೇಳುತ್ತಾರೆ. ಇತ್ತ ತಮಗೆ ಗಂಡು ಮಗುವಾಗಬೇಕೆಂದು ಅಂಜನಾದೇವಿ ಶಿವನನ್ನು ಪ್ರಾರ್ಥಿಸುತ್ತಿರುವಾಗ ಈಶ್ವರನ ಸಲಹೆಯಂತೆ ವಾಯುವು ಪಾರ್ವತಿಯ ಗರ್ಭವನ್ನು ಅಂಜನಾದೇವಿಯಲ್ಲಿ ಇರಿಸುತ್ತಾರೆ. ಇದರ ಫಲವಾಗಿ ಹನುಮಂತನು ಜನಿಸುತ್ತಾರೆ ಎಂದು ಹೇಳಲಾಗಿದೆ.

ಹಾಗೆಯೇ ಇನ್ನೊಂದು ಕಥೆಯಲ್ಲಿ ಹೇಳುವಂತೆ, ರಾಜಾ ದಶರಥ ಕೂಡ ಪುತ್ರ ಸಂತಾನಕ್ಕಾಗಿ ಪ್ರಾರ್ಥಿಸುತ್ತಿದ್ದ ವೇಳೆ ಅವರಿಗೆ ಪ್ರಸಾದ ದೊರೆಯುತ್ತದೆ. ಇತ್ತ ಅಂಜನಾ ಕೂಡ ಪುತ್ರ ಸಂತಾನವನ್ನು ಪಡೆಯಲು ಶಿವನನ್ನು ಪ್ರಾರ್ಥಿಸುತ್ತಿರುವಾಗ ದಶರಥ ಮಹಾರಾಜರಿಗೆ ದೊರೆತ ಪ್ರಸಾದದಲ್ಲಿನ ಸ್ವಲ್ಪ ಪಾಲನ್ನು ವಾಯು ಅಂಜನೆಗೆ ನೀಡುತ್ತಾರೆ. ಹೀಗೆ ಈ ಪ್ರಸಾದವನ್ನು ಸೇವಿಸಿ ಆಕೆ ಕೋತಿಯ ಮುಖವನ್ನು ಹೊಂದಿರುವ ಮಾರುತಿಗೆ ಜನ್ಮವನ್ನು ನೀಡುತ್ತಾರೆ.

ಅಷ್ಟೇ ಅಲ್ಲದೇ, ಇನ್ನೊಂದು ಪುರಾಣದ ಪ್ರಕಾರ, ರಾವಣನಿಗೆ ಈಶ್ವರನ ವಾಹನನಾದ ನಂದಿಯು ಇತ್ತ ಶಾಪದಿಂದಾಗಿ ಹನುಮಂತನ ಜನನವಾಯಿತು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ, ಅಂಜನಾದೇವಿಯೂ ಒರ್ವ ಶಾಪಗ್ರಸ್ತ ದೇವಕನ್ಯೆಯಾಗಿದ್ದು, ಭೂಲೋಕದಲ್ಲಿ ಇಂತಹ ಪರಾಕ್ರಮಿಗೆ ಜನ್ಮ ನೀಡಲೆಂದೇ ವಾನರಳಾಗಿ ಹನುಮಂತನಿಗೆ ಜನ್ಮವಿತ್ತಳೂ ಎಂದೂ ಹೇಳಲಾಗುತ್ತದೆ.

ಇನ್ನೊಂದು ಕಥೆಯಲ್ಲಿ ಹೇಳುವಂತೆ ರಾಮಾಯಣ ಸಮಯದಲ್ಲಿ ದೇವತೆಗಳೆಲ್ಲರೂ ಕೋತಿಗಳ ರೂಪವನ್ನು ಪಡೆದುಕೊಂಡು ಯುದ್ಧದಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದ್ದರು. ಶಿವನು ಹನುಮನ ರೂಪವನ್ನು ತಾಳಿ ರಾಮನ ಅವತಾರದಲ್ಲಿದ್ದ ವಿಷ್ಣುವಿಗೆ ಸಹಾಯ ಮಾಡಿದ್ದರು ಎಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಹನುಮನನ್ನು ಪೂಜಿಸುವಂತೆ ಬೌದ್ಧ ಮತ್ತು ಜೈನ ಧರ್ಮದಲ್ಲಿ ಕೂಡ ಹನುಮನನ್ನು ಪೂಜಿಸುತ್ತಾರೆ. ಅಷ್ಟೇ ಅಲ್ಲದೇ, ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಮಯನ್ಮಾರ್, ಬಾಲಿ, ಮಲೇಶಿಯಾ ಮತ್ತು ಥೈಲಾಂಡ್‍ನಲ್ಲಿರುವ ಅಸಂಖ್ಯಾತ ಜನರು ಹನುಮಂತನನ್ನು ಪೂಜಿಸುತ್ತಾರೆ ಎಂದೂ ಹೇಳಲಾಗುತ್ತದೆ.

ಧೈರ್ಯ ಮತ್ತು ಶಕ್ತಿಯ ಪ್ರತೀಕವಾಗಿರುವ ಹನುಮನನ್ನು ಧೈರ್ಯ ಮತ್ತು ಶಕ್ತಿಯ ಇನ್ನೊಂದು ರೂಪವೆಂದು ನೆನೆದು ಪೂಜಿಸುತ್ತಾರೆ. ದೈವೀ ಶಕ್ತಿ, ತ್ಯಾಗ ಮತ್ತು ಸೇವೆಗೆ ಹನುಮಂತನು ಹೆಸರುವಾಸಿಯಾಗಿದ್ದು, ಭಗವಾನ್ ಶ್ರೀ ಗಣೇಶನ0ತೆಯೇ, ಸಕಲವಿಘ್ನಗಳನ್ನೂ ನಿವಾರಿಸಿ ಬಿಡುವನೆ0ಬ ಖ್ಯಾತಿಯೂ ಭಗವಾನ್ ಹನುಮ0ತನಿಗೂ ಇದೆ.

ರಾಮಭಕ್ತ ಹನುಮಾನ್ ಕೀ……… ಜೈ!!

– ಅಲೋಖಾ

Tags

Related Articles

Close