ಪ್ರಚಲಿತ

ಮೇಲ್ನೋಟಕ್ಕೆ ಶೋಕಿಲಾಲನಂತೆ ಕಂಡರೂ ಸಾವರ್ಕರ್ ರವರ ಶಿಷ್ಯನಾಗಿದ್ದೇ ದೇಶಕ್ಕೆ ಪ್ರಾಣವನ್ನರ್ಪಿಸಲೂ ಹಿಂಜರಿಯದೇ ನಗು ನಗುತ್ತಾ ಗಲ್ಲಿಗೇರಿದ್ದ ದೇಶಭಕ್ತ ಧಿಂಗ್ರಾ!!!

ಮೇಲ್ನೋಟಕ್ಕೆ ಶೋಕಿಲಾಲನಂತೆ ಕಾಣುತ್ತಿದ್ದ ಆ ಯುವಕನ ಎದೆಯಲ್ಲಿ ದೇಶಭಕ್ತಿಯ ಕಿಡಿಗಳು ಹೊತ್ತಿ ಉರಿಯುತಿತ್ತು. ಕರ್ನಲ್ ವಾಯುಲಿ ಎಂಬ ಇಂಗ್ಲೆಂಡ್ ದೂತನನ್ನು ಕೊಂದಿದ್ದಕ್ಕೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದಾಗ ಥ್ಯಾಂಕ್ಸ್ ಎಂದ ಭಾರತದ ಅಮರಜೀವಿ ಧಿಂಗ್ರ !!! ಈತನ ವೀರ ಮರಣದ ಬಗ್ಗೆ ನಾವು ತಿಳಿಯಲೇ ಬೇಕು.

ಮದನ್‍ಲಾಲ್ ಧಿಂಗ್ರಾ ಜನಿಸಿದ್ದು ಸಿಖ್ಖರ ವೀರ ಭೂಮಿ ಪಂಜಾಬಿನ ಅಮೃತಸರ್ . ತಂದೆ ಅಗರ್ಭ ಶ್ರೀಮಂತ.!! ಹೆಸರಾಂತ ವೈದ್ಯನಾಗಿದ್ದು ಮೂರು
ಜನ್ಮಕ್ಕಾಗುವಷ್ಟು ಆಸ್ತಿಯಿತ್ತು. ಧಿಂಗ್ರ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಇಂಜಿನಿಯರ್ ಆಗಬೇಕು ಎಂದು ಕನಸು ಕಂಡಿದ್ದ. ಇಂಜಿನಿಯರ್ ಓದಬೇಕೆಂದು ನಿರ್ಧರಿಸಿ ತಂದೆಗೆ ಇಷ್ಟವಿಲ್ಲದಿದ್ದರೂ ಇಂಗ್ಲೆಂಡ್‍ಗೆ ಹೋಗಿ ಇಂಗ್ಲೆಂಡ್ ಸಂಸ್ಕøತಿಗೆ ಧಿಂಗ್ರಾ ಮಾರುಹೋಗಿಬಿಟ್ಟ. ಬೆಲೆಬಾಳುವ ಸೂಟು ಬೂಟು ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತಾ ಕಾಲ ಕಳೆಯುತ್ತಿದ್ದ.!!! ವಿಲಾಸಿ ಜೀವನವನ್ನು ನಡೆಸಿ ಇದೇ ಜೀವನ ಎಂದು ನಂಬಿದ್ದ.!!

ಲಂಡನ್ನಿನ ಒಂದು ರಸ್ತೆ, ಅಲ್ಲೊಂದು ಭವನ . ಆ ಕಿಟಕಿಯ ಬಳಿ ಒಬ್ಬ ತರುಣ. ಅವನ ವೇಷ ನೋಡಿದರೆ ಶುದ್ಧ ಪೋಕರಿ ಎನ್ನಬಹುದಿತ್ತು. ಪ್ರಣಯೋನ್ಮಾದದ ಗೀತೆ ಹಾಡುತ್ತಾ ಗ್ರಾಮಾಫೋನ್ ಹಿಡಿದು ತನ್ನದೇ ಲೋಕದಲ್ಲಿ ತಿರುಗಾಡುತ್ತಿದ್ದ.!! ಭವನದ ಹೊರಗಡೆ ಗುಂಪುಗೂಡಿರುವ ಪಡ್ಡೆ ಹುಡುಗಿಯರು. ಪದೇ ಪದೇ ಹಾಡಿದ್ದೇ ಪ್ರಣಯ ಗೀತೆಯ ಸಾಲುಗಳನ್ನು ಹಾಡುತ್ತಿದ್ದ. ಅದಕ್ಕೆ ತಕ್ಕಂತೆ ಕಣ್ಣು ಮಿಟಿಕಿಸಿ ಅಭಿನಯಿಸುತ್ತಿದ್ದ. ಈ ಪೋಕರಿಯನ್ನು ನೋಡಿ ಆ ಹುಡುಗಿಯರಿಗೆ ಖುಷಿಯೋ ಖುಷಿ. ಕಚಕುಳಿ ಇರಿಸಿಕೊಂಡವರಂತೆ ನಕ್ಕು ನಕ್ಕು ಸುಸ್ತಾಗಿದ್ದರು ಅವರು. ಅರೇ ಏನಿದು? ಶಿವಪೂಜೆಯಲ್ಲಿ ಕರಡಿಯಂತೆ ಈತ ಯಾರು? ಒಬ್ಬರು ಅಲ್ಲಿ ಬಂದವರೆ ಈ ಮನ್ಮಥ ರತಿಯರ ಮಧ್ಯೆ ಅಬ್ಬರಿಸಿದರು. ಏನಿದು? ಒಳಗೆ ಸಭೆ ನಡೆಯುತ್ತಿದೆ ಎಂಬುವುದು ಗೊತ್ತಿಲ್ಲವೆ? ನೀನಂತೂ ಸಭೆಗೆ ಹಾಜರಾಗಿಲ್ಲ.. ಸಭೆಗೆ ಹಾಜರಾಗಿವವರನ್ನೇಕೆ ಕೆಡಿಸುತ್ತೀಯ ಎಂದು ಗದರಿದ್ದರು. ಬಾಲ ಕತ್ತರಿಸಿದ ನರಿಯಂತೆ ಈ ಮನ್ಮಥ ಗ್ರಾಮಾಫೋನನ್ನು ಕಂಕುಳಲ್ಲಿರಿಸಿಕೊಂಡು ಅಲ್ಲಿಂದ ಕಾಲ್ತೆಗೆದ. ಹುಡುಗಿಯರೂ ದಿಕ್ಕಾಪಾಲಾದರು.  ಮದನ್ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ.

ಒಂದು ದಿನ ಭಾರತ ಭವನದ ಸುದ್ದಿ ಧಿಂಗ್ರಾ ಕಿವಿಗೆ ಬಿತ್ತು.  ಭಾರತ ಭವನದಲ್ಲಿ ಸಾವರ್ಕರ್ ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಭಾಷಣದಲ್ಲಿ ದೇಶ ಭಕ್ತಿಯ ಜ್ವಾಲೆ ಪಸರಿಸುತ್ತಿತ್ತು. ಅನೇಕ ತರುಣರು ಇವರ ಭಾಷಣವನ್ನುಕೇಳುತ್ತಿದ್ದರು. ಸಾವರ್ಕರ್ ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಭಾಷಣದಲ್ಲಿ ದೇಶ ಭಕ್ತಿಯ ಜ್ವಾಲೆ ಪಸರಿಸುತ್ತಿತ್ತು. ಇದನ್ನು ಕೇಳಿದ ಧಿಂಗ್ರಾಗೆ ಸಾವರ್ಕರ್ ಮೇಲೆ ಅಭಿಮಾನ ಉಂಟಾಯಿತು. ಅವರನ್ನು ಗುರುವಾಗಿ ಸ್ವೀಕರಿಸಿಬಿಟ್ಟ. ಸಾವರ್ಕರ್‍ರಿಂದ ಪ್ರಭಾವಿತನಾದ ಧಿಂಗ್ರಾ ಮಹಾನ್ ದೇಶ ಭಕ್ತನಾಗಿ ಬಿಟ್ಟ. ಸಾವರ್ಕರ್ ಎಂದರೆ ಅವನಿಗೆ ಪೂಜ್ಯರು ಅವರು ಹೇಳಿದ್ದೇ ವೇದ ವಾಕ್ಯ. ಅವರ ಮಾತು ಬಿಟ್ಟು ಬೇರೆ ಯಾರ ಮಾತನ್ನು ಧಿಂಗ್ರಾ ಕೇಳುತ್ತಿರಲಿಲ್ಲ. ಸಾವರ್ಕರ್ ಭಾಷಣವೆಂದರೆ ಅವನಿಗೆಪ್ರಾಣ.

ಇನ್ನೊಮ್ಮೆ ಭಾರತ ಭವನದ ಮೇಲಿನ ಮಹಡಿಯಲ್ಲಿ ಬಾಂಬ್ ತಯಾರಿಕೆಯ ಪ್ರಯೋಗಾಲಯದಲ್ಲಿ ಇವನಿದ್ದ. ಸಾವರ್ಕರ್ ಅಲ್ಲಿಯೇ ಇದ್ದರು. ಇಬ್ಬರೂ ಮಾತಿನಲ್ಲಿಮಗ್ನರು. ಅಲ್ಲಿ ಒಲೆಯ ಮೇಲೆ ಗಾಜಿನ ಪಾತ್ರೆಯಲ್ಲಿ ರಾಸಾಯನಿಕ ಮಿಶ್ರಣ ಕುದಿಯುತ್ತಿತ್ತು. ಅದರ ಉಷ್ಣ 300 ಡಿಗ್ರಿ ಸೆಂಟಿಗ್ರೇಡ್ ದಾಟಲಿತ್ತು.!! ದಾಟಿದರೆ ಅನಾಹುತ ಆಸ್ಪೋಟನೆ! ಭಾರತ ಭವನದ ಗುಟ್ಟು ಬಟ್ಟಬಯಲು! ಕೂಡಲೇ ಸಾವರ್ಕರ್ ಇಕ್ಕಳಕ್ಕಾಗಿ ಹುಡುಕಲಾರಂಭಿಸಿದರು. ಅದು ತಕ್ಷಣಕ್ಕೆ ಸಿಗಲಿಲ್ಲ. ಅಷ್ಟರಲ್ಲೇ ಮದನ್ ತನ್ನಎರಡೂ ಕೈಗಳಿಂದ ಆ ಗಾಜಿನ ಪಾತ್ರೆಯನ್ನು ಹಿಡಿದು ಒಲೆಯಿಂದ ಗೆಳಗಿಳಿಸಿದ. ಕೈಸುಟ್ಟಿತ್ತು , ಮಾಂಸ ಸುಟ್ಟ ವಾಸನೆ. ಮದನ್ ಶಾಂತನಾಗಿದ್ದ. ಸಾವರ್ಕರ್ ಮನಸ್ಸಿನಲ್ಲೇ ಶಹಭಾಸ್ ಎಂದರು.!!

ಆಗ ಭಾರತದಲ್ಲಿ ವಾತಾವರಣ ಕೊತಕೊತ ಕುದಿಯುತ್ತಿತ್ತು. ಖುದಿರಾಂ ಭೋಸ್ ,ಪ್ರಫುಲ್ಲಚಂದ್ರ ಮೊಟ್ಟ ಮೊದಲು ಬಾಂಬ್ ಸಿಡಿಸಿದ್ದರು. ಯುಗಾಂತರ ಅಭಿನವ
ಭಾರತ ,ಲೋಕಮಾನ್ಯ ತಿಲಕ್, ಲಜಪತ್‍ರಾಯ್ ಇವೇ ತರುಣರ ಮನಸ್ಸನ್ನು ತುಂಬಿದ್ದ ಶಬ್ದಗಳು. ಕ್ರಾಂತಿದಾಹ ತರುಣರಲ್ಲಿ ಇವರ ಹೆಸರು ಹೊಕ್ಕಿತ್ತು. ಅಂತೆಯೇಮದನನ ಮನಸ್ಸಿನಲ್ಲೂ ಬೃಹದಾಕಾರ ತಾಳಿದ್ದವು ಕ್ರಾಂತಿಯ ಜ್ವಾಲೆಗಳು. 1907 ರ ಮೇ ತಿಂಗಳಲ್ಲಿ ಭಾರತ ಭವನದಲ್ಲಿ ಸಾವರ್‍ಕರ್ 1857ರ ಮಹಾಸ್ವಾತಂತ್ರ್ಯ ಸಂಗ್ರಾಮದ ಸುವರ್ಣೋತ್ಸವ ಆಚರಿಸಿದರು.

ಲಂಡನ್ನಿನ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಎಂಬ ಸಂಸ್ಥೆ ಇತ್ತು. ಇಂಗ್ಲೆಂಡ್‍ಗೆ ಬಂದ ಭಾರತೀಯ ತರುಣರನ್ನು ಹಾಳು ಮಾಡಿ ಬ್ರಿಟಿಷರಿಗೆ ನಿಷ್ಟೆಯಾಗಿ ಕೆಲಸ ಮಾಡಿಸುವುದು ಈ ಸಂಸ್ಥೆಯ ಕೆಲಸವಾಗಿತ್ತು. ಈ ಸಂಸ್ಥೆಯ ಮುಖ್ಯ ಅಧಿಕಾರಿ ಸರ್ ವಿಲಿಯಮ್ ವಾಯಲಿ ಒಳ್ಳೆಯ ರೀತಿಯಲ್ಲಿ ಭಾರತೀಯರ ಸ್ನೇಹ ಸಂಪಾದಿಸಿಅವರಲ್ಲಿ ವಿಷ ಬೀಜ ತುಂಬುತ್ತಿದ್ದ. ಈ ಕರ್ಜನ್‍ನನ್ನು ಕೊಲ್ಲಬೇಕೆಂದು ನಿಶ್ಚಯಿಸಿದ್ದ. ತನ್ನ ತಂದೆಯ ಸ್ನೇಹ ಬಳಸಿ ಆತನ ಸ್ನೇಹವನ್ನು ಬೆಳೆಸಿಕೊಂಡ. ಪಿಸ್ತೂಲ್ಅಭ್ಯಾಸವನ್ನು ತುಂಬಾ ಸಮಯದಿಂದ ಅಭ್ಯಾಸ ಮಾಡಿಕೊಂಡ. ಸಮಯ ಬಂದೇ ಬಿಟ್ಟಿತು.!!

1909ನೇ ಜಲೈ ಒಂದನೇ ತಾರೀಖು ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್‍ನ ವಾರ್ಷಿಕೋತ್ಸವ ನಡೆಯುತ್ತಿತ್ತು. ಕರ್ಜನ್ ಆ ಸಭೆಗೆ ಬಂದಿದ್ದ. ಸೂಟು ಬೂಟುಹಾಕಿ, ಕಣ್ಣಿಗೊಂದು ಕನ್ನಡಕ ಹಾಕಿ ಪಕ್ಕಾ ಮಾಡೆಲ್ ಹುಡುಗನ ತರಹ ಬಂದು ಸಭೆಯ ಮುಂಬಾಗದಲ್ಲಿ ಬಂದು ಕುಳಿತ. ಅದೇ ಕ್ಷಣದಲ್ಲಿ ಕರ್ನನ್ ವಾಲಿ ಬಂದ. ಅದೇ ಕ್ಷಣದಲ್ಲಿ ಧಿಂಗ್ರೆ ನಿನ್ನ ಬಳಿ ಒಂದು ಗುಟ್ಟನ್ನು ಹೇಳಬೇಕು ಎಂದು ಕರೆದ!! ಗುಟ್ಟನ್ನು ಹೇಳ ಬಯಸುವುದಾದರೆ ಇಡೀ ಸಭೆಗೆ ಕೇಳುವ ಹಾಗೆ ಹೇಳಬಾರದು…ಯಾರಿಗೂ ಕೇಳದ ಹಾಗೆ ಕಿವಿಯ ಹತ್ತಿರ ಬಂದು ಹೇಳು ಎಂದು ಕರ್ಜನ್ ವಾಲಿ ಧಿಂಗ್ರಾಗೆ ಹೇಳುತ್ತಾನೆ.!! ಹತ್ತಿರ ಬಂದ ಕರ್ಜನ್‍ವಾಲಿಗೆ ಗುಟ್ಟು ಹೇಳುವ ಬದಲು ರಿವಾಲ್ವರ್ ತೆಗೆದುಕೊಂಡು ಫಟ್ ಪಟ್ ಪಟ್ ಅಂತ ಅವನನ್ನು ಶೂಟ್ ಮಾಡಿ ಬಿಟ್ಟ!!. ಕುಸಿದ ಕರ್ಜನ್ ಪ್ರಾಣ ಹಾರಿ ಹೋಗಿ ಬಿಟ್ಟಿತ್ತು. ಆ ಸಮಯದಲ್ಲಿ ಧಿಂಗ್ರಾ ಯೋಚಿಸುತ್ತಿದ್ದ ! ಈ ಬ್ರಿಷರನ್ನು ಕೊಲ್ಲಲು ಯಾವ ಅಭ್ಯಾಸವೂ ಬೇಕಾಗಿಲ್ಲ.. ನಮ್ಮಲ್ಲಿ ಬುದ್ದಿ ಶಕ್ತಿ ಇದ್ದರೆ ಇವರನ್ನು ಸಂಪೂರ್ಣವಾಗಿ ನಮ್ಮ ದೇಶದಿಂದ ಓಡಿಸಬಹುದು ಎಂದು ಯೋಚಿಸಿದ್ದ. ಆದರೆ ಧಿಂಗ್ರಾ ಮಾತ್ರ ಎಂದಿನಂತೆ ನಗುತ್ತಾ ಶಾಂತವಾಗಿದ್ದ ಆತನ ನಾಡಿ ಎಂದಿನಂತೆ ಸಾಮಾನ್ಯ ವಾಗಿತ್ತು.!! ಶೋಕಿಲಾಲನಾಗಿ ತಿರುಗುತ್ತಿದ್ದ ಮದನ್‍ಲಾಲ್ ವೀರನಾಗಿಬಿಟ್ಟ.!! ತನ್ನ ಜೀವನವನ್ನು ಸಾರ್ಥಕಗೊಳಿಸಿಬಿಟ್ಟ.!! ಲಂಡನ್ ಒಮ್ಮೆಗೆ ನಡುಗಿ ಹೋಯಿತು..

ಅದೇ ಸಮಯದಲ್ಲಿ ಧಿಂಗ್ರಾನನ್ನು ಹಿಡಿಯಲು ಬಂದ ಒಬ್ಬನ್ನು ಉದ್ಧೇಶಿಸಿ ಮದನ್ ಹೇಳಿದ : ಸ್ವಲ್ಪ ತಾಳು ಕನ್ನಡಕ ಸರಿಪಡಿಸಿಕೊಳ್ಳುತ್ತೇನೆ ಎಂದ . ಅದೇ
ಸಮಯದಲ್ಲಿ ಪೊಲೀಸರು ಧಿಂಗ್ರಾನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.. ಮರು ದಿನದಿಂದಲೇ ವಿಚಾರಣೆ ಆರಂಭ. ಸಾವರ್ಕರ್ ಮದನನನ್ನು ಬ್ರಕ್ಸ್‍ಟನ್ ಜೈಲಿನಲ್ಲಿ ಭೇಟಿ ಮಾಡಿದರು. ಅಬ್ಬಾ ಅವನದೆಂತಹ ಮನಸ್ಸು! ಸ್ಥಿತ ಪ್ರಜ್ಞನೋ ಅಥವಾ ಮಹಾಯೋಗಿಯೋ ಹೊಂದಿರಬಹುದಾದಂತಹ ಅವಿಚಲ ಮನಸ್ಸು ಅವನದು. ಎಂದು ಹೊಗಳಿದರು. ಮದನ್ ಹೇಳಿದ”ಸಾವರ್ಕರ್ ಜೀ ನನ್ನ ಶವ ಸಂಸ್ಕಾರ ಹಿಂದೂ ಪದ್ದತಿಯಲ್ಲಿ ನಡೆಯಬೇಕು. ನನ್ನ ವಸ್ತು ಹರಾಜು
ಹಾಕಿ ಹಣವನ್ನು ರಾಷ್ಟ್ರೀಯ ನಿಧಿಗೆ ಕೊಡಿ.. ಎಂದು ಹೇಳಿದ್ದ. ಓಲ್ಡ್ ಬೈಲೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಮದನನಿಗೆ ಘಾಸಿ ಶಿಕ್ಷೆ. ಮದನ ಉತ್ತರಿಸಿದ : “ಥ್ಯಾಂಕ್ಸ್!! ತಾಯಿನಾಡಿಗಾಗಿ ನನ್ನ ಅಲ್ಪ ಜೀವನವನ್ನು ಧಾರೆ ಎರೆಯುತ್ತಿರುವುದಕ್ಕಾಗಿ ಹೆಮ್ಮೆಯಾಗುತ್ತಿದೆ.

ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಧಿಂಗ್ರಾ ಹುತಾತ್ಮನಾಗಲು ಸಿದ್ಧನಾಗಿದ್ದ. ಮರಣದಂಡನೆ ಶಿಕ್ಷೆ ಪ್ರಾಪ್ತಿಯಾಯಿತು. 1909 ಆಗಸ್ಟ್ 17 ರಂದು ಮರಣದಂಡನೆ ಎಂದು ನಿರ್ಧರಿಸಲಾಯಿತು. ಗಲ್ಲಿಗೇರಿಸುವ ಮುನ್ನ ಧಿಂಗ್ರಾ ಉತ್ಕøಷ್ಟ ಹೇಳಿಕೆಯನ್ನು ನೀಡಿದ. “ತಾಯಿ ಭಾರತೀಯ ಸೇವೆಯೆಂದರೆ ಪ್ರಭುಶ್ರೀರಾಮನ ಸೇವೆ. ಆ ತಾಯಿಯ ಸೇವೆ ದೇವರ ಸೇವೆಗೆ ಸಮಾನ. ಆ ತಾಯಿಗೆ ಅಪಮಾನವಾದರೆ ಶ್ರೀರಾಮನಿಗೆ ಅಪಮಾನವಾದಂತೆ. ಆ ತಾಯಿಯ ಈ ದಡ್ಡ ಮಗತನ್ನ ರಕ್ತವನ್ನಲ್ಲದೆ ಮತ್ತೇನು ಕೊಡಲು ಸಾಧ್ಯ. ಆದುದರಿಂದ ನಾನು ಪ್ರಾನಾರ್ಪಣೆ ಮಾಡುತ್ತಿದ್ದೇನೆ. ಹೆಮ್ಮೆಯಿಂದ ಪ್ರಾಣ ಬಿಡುತ್ತಿದ್ದೇನೆ. ಹೆಮ್ಮೆಯಿಂದ ಪ್ರಾಣಬಿಡುತ್ತೇನೆ. ನನ್ನ ತಾಯಿ ನಾಡು ಸ್ವತಂತ್ರವಾಗುವ ವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆ ಮತ್ತೆ ಹುಟ್ಟಬೇಕು. ಇದೇ ಧ್ಯೇಯಕ್ಕಾಗಿ ಬಲಿದಾನ ನೀಡಬೇಕು.ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ”. ಸರಕಾರಿ ಪೊಲೀಸರು ಇವನ ಹೇಳಿಕೆಯನ್ನು ಕದ್ದು ಮುಚ್ಚಿಟ್ಟರು.!!! ಸಾವರ್‍ಕರ್ ಅದನ್ನು ಮದನನನ್ನು ಗಲ್ಲಿಗೇರಿಸುವ ಮುನ್ನ ಪ್ರಕಟಿಸಲು ವ್ಯವಸ್ಥೆ ಮಾಡಿದರು. ಅಂತೆಯೇ ಪ್ಯಾರಿಸ್ ಮುಂತಾದ ಕಡೆಗಳಲ್ಲಿ ಪ್ರಕಟವಾಯಿತು.. ಲಂಡನ್ನಿನ ಡೈಲಿ ನ್ಯೂಸ್ ಪತ್ರಿಕೆ ಕೂಡಾ ಪ್ರಕಟ ಮಾಡಿತ್ತು.. ಆಗಸ್ಟ್ 17 ರಂದು ಮದನ್‍ಲಾಲ್ ಧಿಂಗ್ರಾಗೆ ಗಲ್ಲು ಶಿಕ್ಷೆಯಾಯಿತು. !! ಲಂಡನ್‍ಗೆ ಬಂದು ಇಂಜಿನಿಯರ್ ಆಗಬೇಕೆಂದು ಆಸೆ ಪಟ್ಟಿದ್ದ ಧಿಂಗ್ರಾ ತನ್ನ ಬಲಿದಾನದ ಮೂಲಕ ಕ್ರಾಂತಿ ಸಿಂಹನಾಗಿ ಬಿಟ್ಟ.!! ಧಿಂಗ್ರಾ ತಂದೆ ಅಗರ್ಭ ಶ್ರೀಮಂತ! ಅದರಲ್ಲೇ ಬದುಕಬಹುದಿತ್ತು. ಆದರೆ ಧಿಂಗ್ರಾ ಸಾಮಾನ್ಯರಲ್ಲಿ ಸಾಮಾನ್ಯನಾಗದೇ ಬಲಿದಾನಗೈದು ಅಜೇಯನಾಗಿ ಬಿಟ್ಟ.

ಇಂತಹ ಅಮರ ಜೀವಿಯ ಧಿಂಗ್ರನ ಹೆಸರು ಯಾರಿಗಾದರೂ ತಿಳಿದಿದೆಯಾ..? ಧಿಂಗ್ರಾನ ಕುರಿತು ನಮ್ಮ ಪಠ್ಯ ಪಸ್ತಕದಲ್ಲಿ ಒಂದಕ್ಷರವೂ ಇಲ್ಲ.. ಇದು ಬಹಳ
ವಿಷಾದನೀಯ ಸಂಗತಿ.!!

source : vijayavani

Tags

Related Articles

Close