ಪ್ರಚಲಿತ

ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥರ ಕ್ರಮಕ್ಕೆ ಬೆದರಿ ತಾನೇ ಶರಣಾದ ಆರೋಪಿ!! ಯೋಗಿ ರಾಜ್ಯದಲ್ಲಿ ಅಪರಾಧಿಗಳಿಗಿಲ್ಲ ಉಳಿಗಾಲ!!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಆಡಳಿತದಿಂದಾಗಿ ಇಡೀ ಉತ್ತರಪ್ರದೇಶ ರಾಜ್ಯ ಅದೆಷ್ಟು ಬದಲಾಣೆಯನ್ನು ಕಂಡಿದೆ ಎಂದರೆ ಅಟ್ಟಹಾಸದಿಂದ ಬೀಗುತ್ತಿದ್ದ ರೌಡಿಗಳು ತಮ್ಮ ವರಸೆಯನ್ನೇ ಬದಲಾಯಿಸಿಕೊಂಡು ಮಾಮುಲಿ ಮನುಷ್ಯರಂತೆ ಬದುಕುತ್ತಿದ್ದಾರೆ ಎಂದರೆ ಯೋಗಿ ಆದಿತ್ಯನಾಥರ ಆಡಳಿತ ಅದೆಷ್ಟು ಸಮರ್ಥವಾಗಿದೆ ಎನ್ನುವುದನ್ನು ಗಮನಿಸಬಹುದು!! ಅಷ್ಟೇ ಅಲ್ಲದೇ ಫೈರ್ ಬ್ರ್ಯಾಂಡ್ ಖ್ಯಾತಿ ಯೋಗಿ ಆದಿತ್ಯನಾಥರು 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಹೇಗೆ ಮನೆಮಾತಾಗಿವೆಯೋ, ಅವರು ಕೈಗೊಂಡ ಕಾನೂನು ಸುವ್ಯವಸ್ಥೆಯೂ ರಾಜ್ಯದ ಗಡಿದಾಟಿ ಸುದ್ದಿಯಾಗುತ್ತಿದೆ. ಇದೀಗ ಯೋಗಿ ರಾಜ್ಯದಲ್ಲಿ ಮತ್ತೆ ಇಂತಹ ವಿಸ್ಮಯವೊಂದು ನಡೆದಿದ್ದು ಎಲ್ಲರು ಮೂಗಿನ ಮೇಲೆ ಬೆರಳಿಡುವ ಹಾಗೆ ಆಗಿದೆ!!

ತಾನೇ ಶರಣಾದ ತಲೆಮರೆಸಿಕೊಂಡ ಅಪರಾಧಿ !!

ಹಲವು ದರೋಡೆ, ಕೊಲೆ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಪೆÇಲೀಸರಿಗೆ ಶರಣಾಗಿದ್ದಾನೆ. ದೀಪಸ್ರಾವ್ ಎಂಬಲ್ಲಿ ನೆಲೆಸಿದ್ದ ಫೈಜನ್ ಅಹ್ಮದ್ ಎಂಬಾತ ಹಲವು ಕಳ್ಳತನ ಹಾಗೂ ಕೊಲೆಗೆ ಯತ್ನ ಆರೋಪದಲ್ಲಿ ಪ್ರಕರಣ ದಾಖಲಾದ ಕಾರಣ 2014ರಿಂದಲೇ ತಲೆಮರೆಸಿಕೊಂಡಿದ್ದ. ಆದರೆ ಯೋಗಿ ಆದಿತ್ಯನಾಥರು ಯಾವಾಗ ಆಡಳಿತಕ್ಕೆ ಬಂದು ಅಪರಾಧಿಗಳನ್ನು ಹೆಡೆಮುರಿಕಟ್ಟಲು ಶುರು ಮಾಡಿದರೋ ಈತನಿಗೆ ಭಯವಾಗಿದೆ. ಅಲ್ಲದೆ ಎನ್ಕೌಂಟರ್ ಮೂಲಕ ಗೂಂಡಾಗಳನ್ನು ಮಟ್ಟ ಹಾಕುವ ಕ್ರಮದಿಂದ ಈತ ತೀರಾ ಭೀತಿಗೊಳಗಾಗಿದ್ದಾನೆ ಎಂದು ತಿಳಿದುಬಂದಿದೆ. ಹಾಗಾಗಿ ಅಹ್ಮದ್ ಅಮ್ರೋಹಾ ಪೆÇಲೀಸ್ ವರಿಷ್ಠಾಕಾರಿ ಕಚೇರಿಗೆ ಬಂದು ಶರಣಾಗಿದ್ದಾನೆ.

Image result for yogi

ಅಲ್ಲದೆ ಆತನ ಕೊರಳಿನಲ್ಲಿ ಭಿತ್ತಿಪತ್ರವೊಂದು ಸಿಕ್ಕಿದ್ದು, ನಾನು ಇನ್ನೆಂದೂ ಅಪರಾಧದಲ್ಲಿ ತೊಡಗುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ನನಗೆ ಗುಂಡು ಹಾರಿಸಬೇಡಿ ಎಂದು ಬರೆದುಕೊಂಡಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಪೆÇಲೀಸ್ ವರಿಷ್ಠಾಕಾರಿ ಕಚೇರಿಗೆ ಆಗಮಿಸುವ ಮುನ್ನ ಆತ ಮಾಧ್ಯಮದವರಿಗೆ ತಾನು ಶರಣಾಗುವ ಕುರಿತು ಮಾಹಿತಿ ನೀಡಿದ್ದ. ಬಳಿಕ ಕಚೇರಿಗೆ ತೆರಳಿದ ಅಹ್ಮದ್ ಹೆಚ್ಚುವರಿ ಪೆÇಲೀಸ್ ವರಿಷ್ಠಾಕಾರಿ ಬ್ರಿಜೇಶ್ ಸಿಂಗ್ ಅವರನ್ನು ಭೇಟಿಯಾಗಿ ಶರಣಾಗಿದ್ದಾನೆ.ಇನ್ನೆಂದೂ ನಾನು ಯಾವುದೇ ಕಳ್ಳತನ, ಕೊಲೆ ಮಾಡುವುದಿಲ್ಲ. ನನ್ನನ್ನು ಕೊಲ್ಲಬೇಡಿ, ನನ್ನ ಕೊನೆ ಉಸಿರಿರುವವರೆಗೂ ಜೈಲಿನಲ್ಲೇ ಉಳಿಯುತ್ತೇನೆ ಎಂದು ಪೆÇಲೀಸರಿಗೆ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪೆÇಲೀಸರು ಆರೋಪಿಯನ್ನು ಕಸ್ಟಡಿಗೆ ವಹಿಸಿದ್ದಾರೆ.

ಅದಲ್ಲದೆ ಕಳೆದ ವರ್ಷ ಆರಂಭದಲ್ಲಿ ಯೋಗೀಜೀ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 1,240 ಎನ್ ಕೌಂಟರ್ ಗಳು ನಡೆದಿದ್ದು, ಅದರಲ್ಲಿ 40 ಅಪರಾಧಿಗಳು ಎನ್ ಕೌಂಟರ್ ಗೆ ಬಲಿಯಾಗಿದ್ದರೆ 305 ಮಂದಿ ಗಾಯಗೊಂಡಿರುವ ವಿಚಾರ ತಿಳಿದೇ ಇದೆ!! ಇದಾದ ಬಳಿಕ ಮತ್ತೊಂದು ದಿಟ್ಟ ನಿರ್ಧಾರವನ್ನು ಕೈಗೊಂಡಿರುವ ಸಿಎಂ ಆದಿತ್ಯನಾಥ್ ಸರ್ಕಾರವು ರೌಡಿಗಳನ್ನು ಎನ್ ಕೌಂಟರ್ ಮಾಡಲು ಆದೇಶಿಸಿದ್ದು, ಶರಣಾಗಲು ಒಪ್ಪದವರನ್ನು ಸಹ ಎನ್ ಕೌಂಟರ್ ಮಾಡುವಂತೆ ದಿಟ್ಟ ಆದೇಶ ಹೊರಡಿಸಿದ್ದರು!! ಇದರಿಂದ ಪತರಗುಟ್ಟಿರುವ ಉತ್ತರ ಪ್ರದೇಶದ ರೌಡಿಗಳು ಹಿಂಡು ಹಿಂಡಾಗಿ ಬಂದು ಶರಣಾಗುತ್ತಿದ್ದು, ಅವರನ್ನು ಇಡಲು ಜೈಲಿನಲ್ಲಿ ಸ್ಥಳವೇ ಸಾಕಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು!! ತದನಂತರದಲ್ಲಿ ಜೈಲಿನಲ್ಲಿದ್ದ ರೌಡಿಗಳಿಗೆ ಜಾಮೀನೂ ಸಿಕ್ಕರೂ ಕೂಡ ಜೈಲು ಬಿಟ್ಟು ತೊಲಗುತ್ತಿಲ್ಲ, ಹಾಗಾಗಿ ಸುಮಾರು ಎಪ್ಪತ್ತೊಂದು ಮಂದಿ ಅಪರಾಧಿಗಳು ತಮಗೆ ಸಿಕ್ಕಿರುವ ಜಾಮೀನು ಬಾಂಡ್ ಗಳನ್ನೇ ಹರಿದು ಮತ್ತೆ ಜೈಲಿಗೆ ಹಿಂತಿರುಗುವ ಮೂಲಕ ಇದಾಗಲೇ ಸುದ್ದಿಯಾಗಿದ್ದರು!!

ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಆಡಳಿತಕ್ಕೆ ಬಂದ ಬಳಿಕ ಅಪರಾಧ ಪ್ರಕರಣದಲ್ಲಿ ಸಿಲುಕಿದ ಆರೋಪಿಗಳೇ ಖುದ್ದು ಪೆÇಲೀಸ್ ಠಾಣೆಗೆ ಬಂದು ಶರಣಾಗುತ್ತಿರುವುದು ಉತ್ತಮ ಬೆಳವಣಿಗೆಯ ಜತೆಗೆ ಯೋಗಿ ಆದಿತ್ಯನಾಥರ ದಕ್ಷತೆಯ ಪ್ರತಿಬಿಂಬವೂ ಆಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆಯಾದರೂ, 22 ಹಿಂದೂಗಳ ಮಾರಣ ಹೋಮ ನಡೆಸಿದರೂ ರಾಜ್ಯ ಸರ್ಕಾರ ಮಾತ್ರ ಸುಮ್ಮನೆ ಕುಳಿತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ!! ಹೀಗಾಗಿ ಈ ಬಾರಿ ಕಾಂಗ್ರೆಸ್‍ನ್ನು ಗೆಲ್ಲಿಸಲೇ ಬಾರದು ಎಂದು ಜನರು ಶಪಥ ಮಾಡಿದಂತಿದೆ!!

ಪವಿತ್ರ

Tags

Related Articles

Close