ಪ್ರಚಲಿತ

ಈ ಒಂದು ವರ್ಗದ ಅನುಕೂಲಕ್ಕಾಗಿ ವೀರಶೈವ-ಲಿಂಗಾಯುತರನ್ನು ಒಡೆದರಾ ಸಿದ್ದರಾಮಯ್ಯ? ಇಲ್ಲಿದೆ ಸ್ಫೋಟಕ ಮಾಹಿತಿ!

ವೀರಶೈವ-ಲಿಂಗಾಯಿತರನ್ನು ಒಡೆಯಲು ಕರ್ನಾಟಕದ ಮುಖ್ಯಮಂತ್ರಿ ಹೂಡಿದ ಕುತಂತ್ರವೊಂದು ಬಟಾಬಯಲಾಗಿದೆ. ಈ ಸುದ್ದಿ ಖಂಡಿತಾ ಇಡೀ ರಾಜ್ಯದಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಯಾಗಬಹುದು. ಒಂದು ಸರಕಾರ ಜನರನ್ನು ಒಡೆಯಲು ಈ ರೀತಿಯೂ ಕುತುಂತ್ರ ಹೂಡುತ್ತದೆಯೇ? ಲಿಂಗಾಯಿತ ಮತ್ತು ವೀರಶೈವರನ್ನು ಒಡೆದರೆ ಸಿದ್ದರಾಮಯ್ಯನಿಗೆ ಆಗುವ ವೈಯಕ್ತಿಕ ಲಾಭಕ್ಕಾಗಿ ವೀರಶೈವ ಲಿಂಗಾಯಿತ ಸಮಾಜವನ್ನು ಒಡೆದು ಬಲಿಪಡೆಯಲಾಗುತ್ತಿದೆ.

ಇದರ ಬಗ್ಗೆ ರಹಸ್ಯಪತ್ರವೊಂದು ಪೋಸ್ಟ್‍ಕಾರ್ಡ್‍ಗೆ ಲಭಿಸಿದ್ದು, ಇದರಲ್ಲಿರುವ ಕುತಂತ್ರ ಬಟಾಬಯಲಾಗಿದ್ದು, ಸಿದ್ದರಾಮಯ್ಯನ ಕುತಂತ್ರ ಸ್ಫೋಟಗೊಂಡಿದೆ. ಈ ಪತ್ರವನ್ನು ಕೂಲಂಕುಶವಾಗಿ ಅವಲೋಕಿಸಿದಾಗ ಲಿಂಗಾಯಿತ ಪ್ರತ್ಯೇಕ ಧರ್ಮದಿಂದ ಲಿಂಗಾಯಿತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇದರ ಜೊತೆಗೆ ಸಿದ್ದರಾಮಯ್ಯನಿಗೂ ಇದರಿಂದ ರಹಸ್ಯ ಲಾಭಗಳಿವೆ.

ಲಿಂಗಾಯಿತರನ್ನು ಒಡೆದು ಪ್ರತ್ಯೇಕ ಧರ್ಮವನ್ನಾಗಿಸಿದರೆ ಲಿಂಗಾಯಿತರಿಗೆ ನಿಜವಾಗಿಯೂ ಲಾಭವಿದೆಯೇ? ಲಿಂಗಾಯಿತರಿಗೆ ಸದ್ಯಕ್ಕೆ ಇರುವ ಮೀಸಲಾತಿ ಪ್ರಮಾಣವೇನು? ಧರ್ಮವನ್ನು ಒಡೆದು ಕುರುಬರಿಗಾಗುವ ನಷ್ಟವೇನು? ನಿಜವಾಗಿಯೂ ಲಿಂಗಾಯಿತ ಮತ್ತು ವೀರಶೈವರಲ್ಲಿ ಒಡಕು ಮೂಡಿಸಲು ಸಿದ್ದರಾಮಯ್ಯ ಮಾಡಿದ್ದ ಹುನ್ನಾರವೇನು. ಪ್ರತ್ಯೇಕ ಧರ್ಮಕ್ಕಾಗಿ ಮಾಡಿದ ಸಮಾವೇಶದ ಉದ್ದೇಶವೇನು? ಮುಂದಿನ ಚುನಾವಣೆಯಲ್ಲಿ ಈ ಧರ್ಮರಾಜಕೀಯದ ಪ್ರಭಾವವೇನು? ಹಾವನೂರ ಆಯೋಗದ ಶಿಫಾರಸ್ಸಿನಲ್ಲಿರುವು ಏನು?

ಹೌದು ಇಂಥದೊಂದು ಪ್ರಶ್ನೆಗಳು ಸ್ವತಃ ಲಿಂಗಾಯಿತರಿಂದ ಹಿಡಿದು ಇಡೀ ರಾಜ್ಯದ ಜನತೆಯನ್ನೇ ಕಾಡುತ್ತಿದೆ. ಪ್ರತ್ಯೇಕ ಧರ್ಮದಿಂದ ಲಿಂಗಾಯಿತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಬಗ್ಗೆ ಲಿಂಗಾಯಿತರನ್ನು ಕತ್ತಲಲ್ಲಿ ಇಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ನಮಗೆ ಲಭಿಸಿದ ಪತ್ರ ಉತ್ತರ ನೀಡಲಿದ್ದು, ಎಲ್ಲಾ ಷಡ್ಯಂತ್ರ ಬಯಲಾಗಲಿದೆ.

ಆ ಪತ್ರದಲ್ಲಿರುವ ಯಥಾಪ್ರತಿಯನ್ನು ಇಲ್ಲಿದೆ…

ಕುರುಬರ ಮೀಸಲಾತಿ ಪ್ರಮಾಣವನ್ನು ಅನಧಿಕೃತವಾಗಿ ಹೆಚ್ಚಸಿಕೊಳ್ಳಲು ವೀರಶೈವ-ಲಿಂಗಾಯಿತ ಸಮುದಾಯವನ್ನು ವ್ಯವಸ್ಥಿತವಾಗಿ ಒಡೆಯುವ ತಂತ್ರ ರೂಪಿಸುತ್ತಿರುವ ಸಿದ್ದರಾಮಯ್ಯನ ಬಳಿ ಇದಕ್ಕೆ ಉತ್ತರವಿದೆಯೇ? ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆ ಪ್ರಕಾರ(ಹಾವನೂರ ಆಯೋಗದ ಶಿಫಾರಸ್ಸಿನಂತೆ) ಕುರುಬರು-ಕುರುಬ, ಕುರುಂಬ, ಕುಡುಂಬಿ ಎಂಬ ಪರ್ಯಾಯ ಹೆಸರುಗಳಲ್ಲಿ ಪ್ರವರ್ಗ 2ಎನಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ. ಪ್ರವರ್ಗ 2 ಎನಲ್ಲಿ ನೂರಾರು ಜಾತಿಗಳು ಮೀಸಲಾತಿ ಸೌಲಭ್ಯ ಪಡೆಯುತ್ತಿರುವುದರಿಂದ, ಮೀಸಲಾತಿ ಪ್ರಮಾಣ ಪ್ರತಿಶತ ಶೇ.15 ಎಂದು ನಿಗದಿಪಡಿಸಲಾಗಿದೆ.

ಈ ಶೇ.15 ಮೀಸಲಾತಿಯನ್ನು ಸಂಪೂರ್ಣವಾಗಿ ಕಬಳಿಸಲು ಕುರುಬರಿಗೆ ಅಡ್ಡಿಯಾಗಿರುವುದು ಉತ್ತರ ಕರ್ನಾಟಕದ ಉತ್ತರ ಕರ್ನಾಟಕದ ವೀರಶೈವ ಲಿಂಗಾಯಿತರಲ್ಲಿನ ಉಪಜಾತಿಗಳು. (ದಕ್ಷಿಣ ಕರ್ನಾಟಕದಲ್ಲಿ ಕುರುಬರಿಗೆ ಪ್ರವರ್ಗ 2ಎನಲ್ಲಿನ ಮೀಸಲಾತಿ ಕಬಳಿಸಲು ರಾಜಕೀಯವಾಗಿ ಪ್ರಬಲಾರದ ಸ್ಪರ್ಧಿಗಳೇ ಇಲ್ಲ)
ಆರ್ಥಿಕವಾಗಿ ಒಂದಷ್ಟು ಬಲಿಷ್ಟರಾಗಿದ್ದ ಕುರುಬರಿಗೆ ಸವಾಲೊಡ್ಡುವ ಸಾಮಥ್ರ್ಯ ಹೊಂದಿದ್ದ ಬಲಿಜ ಸಮುದಾಯವನ್ನು ಹಿಂದುಳಿದ ಪ್ರವರ್ಗ 2ಎದಿಂದ ಕಿತ್ತು ಹಾಕಲಾಯಿತು. (ಕಾಂಗ್ರೆಸ್ ಸರಕಾರದ ಅವಧಿಯಲ್ಲೇ..) ಗಮನಿಸಬೇಕಾದ ಸಂಗತಿಯೆಂದರೆ ಬಲಿಜ ಸಮುದಾಯಕ್ಕೆ ಪ್ರವರ್ಗ 2ಎ ನಲ್ಲಿ ಶೈಕ್ಷಣಿಕ ಸವಲತ್ತುಗಳನ್ನು ಪಡೆಯಲು ಅನುಕೂಲ ಮಾಡಿಕೊಟ್ಟವರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು..

ಪ್ರವರ್ಗ 2ಎಯಲ್ಲಿನ ಶೇ.15ರಷ್ಟು ಮೀಸಲಾತಿ ಕುರುಬರ ಪಾಲಾಗಬೇಕೆಂಬ ಏಕೈಕ ಕಾರಣಕ್ಕೆ ರಾಜ್ಯದಲ್ಲಿ ಜನಗಣತಿ ನಡೆಸಲು ಸಿದ್ದರಾಮಯ್ಯ ನಿರ್ಧಾರ ಮಾಡಿದರು. ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ ಶೇ.18ರಷ್ಟಿರುವ ವೀರಶೈವ ಲಿಂಗಾಯಿತರನ್ನು ರಾಜಕೀಯವಾಗಿ ಆರ್ಥಿಕವಾಗಿ ದುರ್ಬಲಗೊಳಿಸುವ ಗುರಿ ಜಾತಿಗಣತಿಯದಾಗಿತ್ತು. ಆದರೆ ಸುಪ್ರೀಂ ಕೋರ್ಟು ಆದೇಶದನ್ವಯ ಜಾತಿ ಗಣತಿ ನಡೆಸುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ.

ಜಾತಿಗಣತಿ ವಿವಾದ ನ್ಯಾಯಾಲಯದ ಮೆಟ್ಟಿಲೇರಿದಾಗ `ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ’ಯ ಸಮೀಕ್ಷೆ ಮಾತ್ರ ನಡೆಸಲಾಗುತ್ತಿದೆ. ಜಾತಿಗಣತಿ ಮಾಡುತ್ತಿಲ್ಲ ಎಂದು ಕೋರ್ಟಿಗೆ ಸುಳ್ಳು ಹೇಳಲಾಯಿತು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಎಚ್. ಕಾಂತರಾಜ್ ಎಂಬ ಕುರುಬ ಸಮಾಜದ ಆಪ್ತರನ್ನು ಸಿದ್ದರಾಮಯ್ಯ ಅಧ್ಯಕ್ಷರಾಗಿ ನೇಮಿಸಿದರು. ಎಲ್ಲದಕ್ಕೂ ತಲೆ ಆಡಿಸುವ ಎಚ್. ಆಂಜನೇಯನವರನ್ನು ಸಿದ್ದರಾಮಯ್ಯ ಸಮಾಜ ಕಲ್ಯಾಣ ಇಲಾಖೆಗೆ ಮಂತ್ರಿ ಮಾಡಿದರು.

ಹಾವನೂರ ಆಯೋಗದ ವರದಿ ಜಾರಿಗೆ ಬಂದಾಗಿನಿಂದ ವೀರಶೈವ ಲಿಂಗಾಯಿತರಲ್ಲಿನ ನೂರಕ್ಕೂ ಹೆಚ್ಚು ಉಪಜಾತಿಗಳು ಪ್ರವರ್ಗ 2ಎ ನಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಾ ಬಂದಿದೆ. ಈ ಮೀಸಲಾತಿ ಶಿಕ್ಷಣ-ಉದ್ಯೋಗಕ್ಕಾಗಿ ಮಾತ್ರ ಸೀಮಿತವಾಗಿಲ್ಲ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಹಾಗೂ ಜಿಲ್ಲಾ ಪಂಚಾಯಿತ್ ಚುನಾವಣೆಗಳಿಗೆ ಸ್ಪರ್ಧಿಸಲು ಮೀಸಲಾತಿ ಸವಲತ್ತು ಬಳಸಿಕೊಳ್ಳುತ್ತಾ ಬರಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದಂತೆ ಕಾಂತರಾಜ ಮತ್ತ್ವರ ತಂಡ ಜಾತಿಗಣತಿ ನಡೆಸಲು ಆರಂಭಿಸಿದಾಗ ಹೆಎಚ್ಚು ಗೊಂದಲ ಮತ್ತು ಸಂದಿಗ್ಧತೆ ಎದುರಿಸಿದ್ದು, ವೀರಶಯವ ಲಿಂಗಾಯಿತ ಸಮಾಜ. ವೀರಶಯವ-ಲಿಂಗಾಯಿತರಲ್ಲಿನ ಎಲ್ಲಾ ಉಪಜಾತಿಗಳು `ಜಾತಿಗಣತಿ’ಯನ್ನು ಸವಾಲಾಗಿ ಸ್ವೀಕರಿಸಿ ಜಾಣತನ ಮೆರೆದವು. ಕಾಂಗ್ರೆಸ್ ಮನಸ್ಥಿತಿಯ ವ್ಯಕ್ತಿಗಳು ಎಷ್ಟೇ ಪ್ರಚೋದನೆ ನೀಡಿದರೂ ವೀರಶೈವ ಲಿಂಗಾಯಿತರಲ್ಲಿನ ಸಮಸ್ತ ಉಪಜಾತಿಗಳು ಪ್ರವರ್ಗ 2ಎ ಮೀಸಲಾತಿ ವ್ಯಾಪ್ತಿಯಲ್ಲಿ ಉಳಿಯುವ ನಿರ್ಧಾರ ಕೈಗೊಂಡವು. ಜಾತಿಗಣತಿ ಸಂದರ್ಭದಲ್ಲಿ ಹಿಂದೂ ಗಾಣಿಗ, ಹಿಂದೂ ಸಾದರ, ಹಿಂದೂಕುಡು. ಒಕ್ಕಲಿಗ, ಹಿಂದೂಕುಂಬಾರ, ಹಿಂದೂ ನೇಕಾರ, ಹಿಂದೂ ಹಡಪದದ, ಹಿಂದೂರೆಡ್ಡಿ, ಹಿಂದೂ ಹೂಗಾರ ಇತ್ಯಾದಿ ಬರೆಸಿದವು.

ಪ್ವರ್ಗ 2ಎಯಲ್ಲಿನ ಶೇ.15ರಷ್ಟು ಮೀಸಲಾತಿ ಕುರುಬರು ಮಾತ್ರ ಬಳಸುವಂತಾಗಬೇಕೆಂಬ ಹುನ್ನಾರ ಯಶಸ್ಸು ಕಾಣದೇ ಇದ್ದಾಗ ಜಾತಿಗಣತಿಯ ಮಾಹಿತಿ ಸೋರಿಕೆಯಾಯಿತು. ಕರ್ನಾಟಕದಲ್ಲಿ ವೀರಶೈವ ಲಿಂಗಾಯಿತ ಒಟ್ಟು ಜನಸಂಖ್ಯೆ ಕೇವಲ 60 ಲಕ್ಷ ಎಂಬ ಸಂಗತಿ ಜಾತಿಗಣತಿ ಮೂಲಕ ಪ್ರಚಾರಪಡಿಸಲಾಯಿತು. ಆದರೆ ವೀರಶೈವ ಲಿಂಗಾಯಿತರ ಸಂಖ್ಯಾ ಬಲ ಕಮ್ಮಿ ಇದೆ ಎಂದು ಸಾಬೀತುಪಡಿಸುವ ಭರಾಟೆಯಲ್ಲಿ ಸಿದ್ದು ಸರಕಾರ ಒಂದು ಎಡವಟ್ಟು ಮಾಡಿಕೊಂಡಿತು.

ಸಂಖ್ಯಾಬಲದಲ್ಲಿ ದಲಿತರಲ್ಲಿನ ಎಡಗೈ(ಮಾದಿಗರು) ಸಮುದಾಯ, ಬಲಗೈ(ಹೊಲೆಯರು) ಸಮುದಾಯಕ್ಕಿಂತ ಹೆಚ್ಚಾಗಿದೆ ಎಂಬ ಸಂಗತಿ ಕೂಡಾ ಬಹಿರಂಗಗೊಂಡಿತು. ದಲಿತರಲ್ಲಿನ ಎಡಗೈ (ಮಾದಿಗರು) ಸಮುದಾಯ ಸಂಖ್ಯಾಬಲದಲ್ಲಿ ಹೆಚ್ಚಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಬಲಗೈ ಸಮುದಾಯದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ ಪರಮೇಶ್ವರ, ಮೋಟಮ್ಮ ಕೆಂಡಾಮಂಡಲರಾದರು.

ಅಷ್ಟು ಮಾತ್ರವಲ್ಲ ಕಾಂಗ್ರೆಸ್ ಹೈಕಮಾಂಡಿಗೆ ಹೇಳಿ ಜಾತಿಗಣತಿ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದಂತೆ ತಾಕೀತು ಮಾಡಿಸಿದರು. ವೀರಶೈವ ಮಹಾಸಭದ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಎನ್. ತಿಪ್ಪಣ್ಣ ಮುಂತಾದವರು ಜಾತಿಗಣತಿಯಲ್ಲಿ ಸಮುದಾಯದ ಸಂಖ್ಯಾಬಲ ಕೇವಲ 60 ಲಕ್ಷ ಇದೆ ಎಂದು ಹೊರಹಾಕಿದ್ದರ ಬಗ್ಗೆ ಬಹಿರಂಗವಾಗಿಯೇ ಟೀಕಿಸಿದ್ದರು.
ಇದು ಒಂದೆಡೆಯಾದರೆ ಇನ್ನೊಂದೆಡೆ ಸತತ ಬರಗಾಲದಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದರೂ ಸಿದ್ದು ಸರಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲೇ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಆಡಳಿತ ವಿರೋಧಿ ಅಲೆ ವ್ಯಾಪಕವಾಯಿತು.

ಬಿಜೆಪಿಯ ರಾಷ್ಟ್ರೀಯ ನಾಯಕರು ಬಿ.ಎಸ್. ಯಡಿಯೂರಪ್ಪನವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದಲ್ಲದೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು ಸಿದ್ದರಾಮಯ್ಯನವರ ನಿದ್ದೆಗೆಡಿಸಿತು. ಆಗ ಸಿದ್ದರಾಮಯ್ಯ ಉರುಳಿಸಿದ ದಾಳವೇ ಲಿಂಗಾಯತ-ವೀರಶೈವರ ನಡುವೆ ಒಡಕುಂಟು ಮಾಡುವುದು.

ಬಸವಣ್ಣ, ಅಕ್ಕಮಹಾದೇವಿ ಮುಂತಾದ ಶರಣರು ಮೊದಲು ನಾಲ್ಕು ವರ್ಷ ಸಿದ್ದರಾಮಯ್ಯನವರಿಗೆ ನೆನಪಾಗಲೇ ಇಲ್ಲ. ಬಸವಣ್ಣನವರ ಬಗ್ಗೆ ನಿಜವಾದ ಗೌರವ ಇದ್ದಿದ್ದರೆ ಮುಖ್ಯಮಂತ್ರಿಯಾದ ಕೂಡಲೇ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರು ಇಡಬಹುದಿತ್ತು. ಬಸವಣ್ಣನವರ ಭಾವಚಿತ್ರವನ್ನು ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಹಾಕಲು ಆದೇಶ ಮಾಡಬಹುದಿತ್ತು. ಬಸವಣ್ಣ ಮತ್ತು ವಚನಕಾರರ ಹೆಸರಲ್ಲಿ ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರ ಸ್ಥಾಪಿಸಿ ಅವರ ತತ್ವಾದರ್ಶಗಳನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡಬಹುದಿತ್ತು.
ಮುಖ್ಯಮಂತ್ರಿ ಜೆಎಚ್ ಪಟೇಲರು ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ವಿದ್ಯಾಲಯ ಎಂದು ನಾಮಕರಣ ಮಾಡಿದಾಗ ಇದೇ ಸಿದ್ದರಾಮಯ್ಯ ಬಸವಣ್ಣನವರ ಹೆಸರಿಡದಂತೆ ಮಾಡಿದರು. ಪಟೇಲರು ಕೂಡಲಸಂಗಮದಲ್ಲಿ ವಚನ ಸಾಹಿತ್ಯದ ರಾಷ್ಟ್ರೀಯ ಅಧ್ಯಯನ ಕೇಂದ್ರ ಸ್ಥಾಪಿಸಿ ದಶಕಗಳೇ ಕಳೆದಿವೆ. ಈ ಕೇಂದ್ರವನ್ನು ಕಳೆದ ನಾಲ್ಕು ವರ್ಷಗಳಲ್ಲಿ ನಿಷ್ಟ್ರಿಯಗೊಳಿಸಿದ ಯಶಸ್ಸು ಕೂಡಾ ಬಸವಣ್ಣನವರ ತಾತ್ಕಾಲಿಕ ಭಕ್ತ ಸಿದ್ದರಾಮಯ್ಯನವರಿಗೆ ಸಲ್ಲಬೇಕು.

ಕಳೆದ ನಾಲ್ಕು ವರ್ಷಗಳಿಂದ ಸಮಸ್ತ ವೀರಶೈವ ಲಿಂಗಾಯಿತ ಸಮಾಜದವನ್ನು ಎಲ್ಲಾ ಹಂತದಲ್ಲೂ ಮೂಲೆಗುಂಪು ಮಾಡಿದ ಸಿದ್ದರಾಮಯ್ಯ ಈಗ ದಿಢೀರನೆ ಲಿಂಗಾಯಿತರಿಗೆ ಪ್ರತ್ಯೇಕ ಧರ್ಮ ದಯಪಾಲಿಸಲು ಹೊರಟಿದ್ದಾರೆ. ಅಷ್ಟಕ್ಕೂ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡುವ ಅಧಿಕಾರವೇ ಸಿದ್ದರಾಮಯ್ಯಗೆ ಇಲ್ಲ. ತಮ್ಮ ನಿಷ್ಠ ಅನುಚರ ಎಂ.ಬಿ. ಪಟೇಲರ ಮೂಲಕ ಲಿಂಗಾಯಿತ ಪ್ರತ್ಯೇಕ ಧರ್ಮದ ಬೇಡಿಕೆಯ ಕೃತಕ ಸಮಾವೇಶಗಳನ್ನು ಮಾಡಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ.

ಸಿದ್ದರಾಮಯ್ಯರ ಮುಖ್ಯ ಉದ್ದೇಶವೆಂದರೆ..

ವೀರಶೈವ ಲಿಂಗಾಯಿತರನ್ನು ಒಡೆಯುವುದು, ಆಮೂಲಕ ಸಮುದಾಯವನ್ನು ರಾಜಕೀಯವಾಗಿ ದುರ್ಬಲಗೊಳಿಸುವುದು.
ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಒಡಕು, ಗೊಂದಲ ಮೂಡಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗದಂತೆ ತಡೆಯುವುದು. ವೀರಶೈವ ಲಿಂಗಾಯಿತರು ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದರಿಂದಲೇ ಎಲ್ಲಾ ರಾಜಕೀಯ ಪಕ್ಷಗಳು ಆ ಸಮುದಾಯಕ್ಕೆ ಮೊದಲ ಆದ್ಯತೆಯಲ್ಲಿ ಮನ್ನಣೆ ನೀಡುತ್ತಾ ಬಂದಿದೆ.
ವೀರಶೈವ ಲಿಂಗಾಯಿತರ ರಾಜಕೀಯ ಪ್ರಾಬಲ್ಯ ತಗ್ಗಿಸಬೇಕೆಂದರೆ ಅವರಿಗೆ ಹೇಗಾದರೂ `ಅಲ್ಪಸಂಖ್ಯಾತ’ ಹಣೆಪಟ್ಟಿ ಅಂಟಿಸಬೇಕು ಇದು ಸಿದ್ದರಾಮಯ್ಯರ ಕುತಂತ್ರದ ತಿರುಳು. ಒಂದು ಸಲ ವೀರಶೈವ ಲಿಂಗಾಯಿತರಿಗೆ `ಅಲ್ಪಸಂಖ್ಯಾತ’ ಹಣೆಪಟ್ಟಿ ಅಂಟಿಸಿದರೆ ಯಾವ ಹೈಕಮಾಂಡ್ ಕೂಡಾ ಆ ಸಮುದಾಯಕ್ಕೆ ಮೊದಲ ಆದ್ಯತೆಯ ಮನ್ನಣೆ ನೀಡುವುದಿಲ್ಲ.(ರಾಜ್ಯದಲ್ಲಿ ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಾಗ ಯಾರು ತಾನೆ ಮೊದಲ ಆದ್ಯತೆಯ ಮನ್ನಣೆ ನೀಡುತ್ತಾರೆ?)

ವೀರಶೈವ ಲಿಂಗಾಯಿತರ ರಾಜಕೀಯ ಪ್ರಾಬಲ್ಯ, ಪ್ರಾತಿನಿದ್ಯ ಕಡಿಮೆಯಾದರೆ ಪ್ರವರ್ಗ 2ಎನಲ್ಲಿರುವ ಮೀಸಲಾತಿಯನ್ನು ಈಗಿನಂತೆ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ರಾಜ್ಯದಲ್ಲಿ ವೀರಶೈವ ಲಿಂಗಾಯಿತರಲ್ಲಿನ ನೂರಕ್ಕೂ ಹೆಚ್ಚು ಉಪಜಾತಿಗಳು ಪ್ರವರ್ಗ 2ಎನ್ನಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. ಉದಾಹರಣೆಗೆ ಕಂಬಾರ, ಕುಂಬಾರ, ಹೂಗಾರ, ಹಡಪದ, ಗಾಣಿಗ, ನೇಕಾರ ಇತ್ಯಾದಿ.
ವೀರಶೈವ ಲಿಂಗಾಯಿತರಿಗೆ ಹಿಂದುಳಿದ ಪ್ರವರ್ಗ 3ಬಿಯಲ್ಲಿ ಪ್ರತಿಶತ ಶೇ. 5ರಷ್ಟು ಮೀಸಲಾತಿ ಸೌಲಭ್ಯ ದೊರೆಯುತ್ತದೆ. ವೀರಶೈವ ಲಿಂಗಾಯಿತರು ರಾಜಕೀಯವಾಗಿ ದುರ್ಬಕವಾದರೆ ಆ ಸಮುದಾಯದ ಉಪಜಾತಿಗಳು (ಕಾಯಕ ಜೀವಿಗಳು) ಪ್ರವರ್ಗ 2ಎಯಲ್ಲಿನ ಮೀಸಲಾತಿ ಪಡೆಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ರಾಜಕೀಯ ಅಧಿಕಾರ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಿಂದುಳಿದ ವರ್ಗದಲ್ಲಿ ನೂರಾರು ಜಾತಿಗಳಿವೆ. ಆದರೆ ಕುರುಬರು ಮಾತ್ರ ಮೀಸಲಾತಿ ಸೌಲಭ್ಯವನ್ನು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಕಾರಣ ಸ್ಪಷ್ಟ. ಕುರುಬರು ರಾಜಕೀಯವಾಗಿ ಪ್ರಬಲರಾಗಿದ್ದಾರೆ.

ವೀರಶಯವ ಲಿಂಗಾಯಿತರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ದೊರೆತರೆ ಅವರು ಪ್ರವರ್ಗ 3ಬಿಯಲ್ಲಿ ಶೇ5 ಮೀಸಲಾತಿ ಕಳೆದುಕೊಳ್ಳುತ್ತಾರೆ. ಪ್ರವರ್ಗ 2ಎ ನ ಶೇ. 15ರ ಮೀಸಲಾತಿಯನ್ನು ಸಂಪೂರ್ಣವಾಗಿ ಕುರುಬರ ವಶಕ್ಕೆ ಒಪ್ಪಿಸಿದಂತಾಗುತ್ತದೆ ಅಷ್ಟು ಮಾತ್ರವಲ್ಲ ಮೀಸಲಾತಿಗಾಗಿ ಮುಸ್ಲಿಂ ಸಮುದಾಯದೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಅಂದಾಜು ಶೇ.14ರಷ್ಟಿದೆ ಆ ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯಕ್ಕೆ ಶೇ.4 ರಷ್ಟು ಮೀಸಲಾತು ನಿಗದಿಪಡಿಸಲಾಗಿದೆ.

ಜೈನ, ಕ್ರೈಸ್ತ ಹಾಗೂ ಬೌದ್ಧರಿಗೆ ಶೇ.5ರ ಪ್ರಮಾಣದಲ್ಲಿ ಮೀಸಲಾತಿ ನೀಡಲಾಗುತ್ತಿದೆ.
ವೀರಶೈವ ಲಿಂಗಾಯಿತರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ದೊರೆತರೆ ಒಂದೋ ಅವರಿಗೆ ಜೈನ, ಕ್ರೈಸ್ತ, ಬೌದ್ಧರ ಗುಂಪಿಗೆ ಸೇರಿಸಿ ಶೇ. 5ರ ಮೀಸಲಾತಿಯನ್ನೇ ಹಂಚಿಕೆ ಮಾಡಬಹುದು. ಇಲ್ಲವಾದರೆ ಮುಸ್ಲಿಮರ ಮೀಸಲಾತಿಯಲ್ಲಿ ಪಾಲು ಕೊಡಬಹುದು. ಇದೆಲ್ಲದಕ್ಕೂ ಮೀರಿದ ಸಾಧ್ಯತೆ ಎಂದರೆ ವೀರಶೈವ ಲಿಂಗಾಯಿತರಿಗೆ ಪ್ರತ್ಯೇಕವಾಗಿ ಒಂದಷ್ಟು ಪ್ರಮಾಣದ ಮೀಸಲಾತಿ ನಿಗದಿಪಡಿಸಬಹುದು.
ಸಿದ್ದರಾಮಯ್ಯ್ನ ಜಾತಿಗಣತಿ ಪ್ರಕಾರ ವೀರಶೈವ ಲಿಂಗಾಯಿತರ ಜನಸಂಖ್ಯೆ ಕೇವಲ 60 ಲಕ್ಷ. ವೀರಶೈವ ಲಿಂಗಾಯಿತರ ಒಡಕು ತಾರ್ಕಿಕ ಅಂತ್ಯ ಕಂಡು ಲಿಂಗಾಯಿತರ ಜಾತಿಗಣತಿ ನಡೆಸಿದರೆ ಅಬ್ಬಬ್ಬಾ ಎಂದರೆ ಹತ್ತು ಲಕ್ಷ ದಾಟುವುದಿಲ್ಲ. ಧಾರ್ಮಿಕ ಅಲ್ಪಸಂಖ್ಯಾತ ಕೋಟಾದಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನಿಗದಿಯಾಗಿರುವಾಗ ಕೇವಲ ಹತ್ತು ಲಕ್ಷ ಸಂಖ್ಯಾಬಲ ಹೊಂದಿರುವ ಲಿಂಗಾಯಿತ ಧರ್ಮದವರಿಗೆ ಯಾವ ಪ್ರಮಾಣದ ಮೀಸಲಾತಿ ಸಿಗಬಹುದು? ನೀವೇ ಊಹಿಸಿ.

ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗಾಗುವ ಲಿಂಗಾಯಿತರಿಗೆ ಅಲ್ಪಪ್ರಮಾಣದ ಅವಕಾಶಗಳು ಮಾತ್ರ ದೊರೆಯುತ್ತದೆ. ಲಿಂಗಾಯಿತರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ದೊರೆತರೆ ಆ ಸಮುದಾಯ ಪ್ರತಿನಿಧಿಸುವವರ ಶಿಕ್ಷಣ ಸಂಸ್ಥೆಗಳಿಗೆ ಕೆಲವು ಸೌಲಭ್ಯ ಹಾಗೂ ವಿನಾಯಿತಿ ದೊರೆಯುತ್ತದೆ.
ಕೇಂದ್ರಸರಕಾರ ಜಾರಿಗೆ ತಂದ `ಶಿಕ್ಷಣ ಹಕ್ಕು’ ಕಾಯಿದೆಯನ್ವಯ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಎಲ್‍ಕೆಜಿಯಿಂದ ಪಿಜಿಯವರೆಗೆ ಶೇ.30ರಷ್ಟು ಸ್ಥಾನಗಳನ್ನು ಕಡ್ಡಾಯವಾಗಿ ಬಡಪ್ರತಿಭಾನ್ವಿತ (ಮೆರಿಟ್) ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು.

ಎಂ.ಬಿ. ಪಟೇಲರು ಏಕಸ್ವಾಮ್ಯದ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ದೊರೆತರೆ ಸಹಜವಾಗಿಯೇ ಭಾರೀ ಪ್ರಮಾಣದ ಲಾಭ ದೊರೆಯುತ್ತದೆ. (ಉದಾ; ಮೆಡಿಕಲ್ ಸೀಟು ಹಂಚಿಕೆಯ ಪ್ರಮಾಣ ಉಳಿದ ಶಿಕ್ಷಣ ಸಂಸ್ಥೆಗಳಿಗೆ 60:40ರ ಅನುಪಾತದಲ್ಲಿ ನಿಗದಿಯಾಗಿದ್ದರೆ , ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ 75:25 ಅನುಪಾತ ಇದೆ. ಅಂದರೆ ಹೆಚ್ಚುವರಿಯಾಗಿ ಶೇ.15 ಮೆಡಿಕಲ್ ಸೀಟುಗಳು ಎಂ.ಬಿ. ಪಟೇಲರಂಥವರು ಭರ್ತಿ ಮಾಡುತ್ತಾರೆ.)

ಎಂ.ಬಿ ಪಟೇಲರಂಥವರು ಲಿಂಗಾಯಿತರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ದೊರೆಯಲೇಬೇಕು ಎಂದು ಯಾಕೆ ಪಟ್ಟು ಹಿಡಿದಿದ್ದಾರೆ ಎಂಬ ಪ್ರಶ್ನೆಗೆ ಇದೇ ನಿಜವಾದ ಉತ್ತರ. ಹಿಂದೂ ಧರ್ಮದ ವಿರೋಧಿ ಎಂದು ಬಡಾಯಿಕೊಚ್ಚಿಕೊಳ್ಳುವ ಸಿದ್ದರಾಮಯ್ಯ ತಾವಾಗಲೀ, ತಮ್ಮ ಸಮುದಾಯವಾಗಲೀ ಧರ್ಮ ಜಾತಿ ಕಾಲಮ್ಮಿನಲ್ಲಿ `ಹಿಂದೂ ಕುರುಬ’ ಎಂದು ಬರೆಸಿಕೊಳ್ಳುವ ಮೂಲಕ ಪಡೆದುಕೊಳ್ಳುವ ಮೀಸಲಾತಿ ಪ್ರಮಾಣ ಕೇವಲ ಶೇ.6ರಷ್ಟು ಜನಸಂಖ್ಯೆ ಹೊಂದಿರುವ ಕುರುಬರು ಪ್ರವರ್ಗ 2ಎನಲ್ಲಿನ ಶೇ.15ರ ಸಿಂಹಪಾಲು ಕಬಳಿಸುತ್ತಾರೆ. ಇಷ್ಟು ಪ್ರಮಾಣದ ಮೀಸಲಾತಿ ಪರಿಶಿಷ್ಠ ಜಾತಿ ಪಂಗಡದವರಿಗೂ ದೊರೆಯುವುದಿಲ್ಲ.
ಜೊತೆಗೆ ಕಾಡುಕುರುಬ, ಜೇನುಕುರುಬ, ಗೊಂಡ, ರಾಜಗೊಂಡ, ಪರ್ಯಾಯ ಹೆಸರುಗಳಲ್ಲಿ ಪರಿಶಿಷ್ಠ ಪಂಗಡದವರ ಮೀಸಲಾತಿ ಕಿತ್ತುಕೊಳ್ಳುತ್ತಿದ್ದಾರೆ. (ಕೆಂಪಯ್ಯ ಜೇನುಕುರುಬ ಪ್ರಮಾಣ ಪತ್ರದಲ್ಲಿಯೇ ಎಸ್‍ಟಿ ಕೋಟಾದಲ್ಲಿ ಐಪಿಎಸ್ ಆಗಿದ್ದು)

ಪ್ರವರ್ಗ 1ರ ಮೀಸಲಾತಿ ನ್ಯಾಯವಾಗಿ ಗೊಲ್ಲ-ಕಾಡುಗೊಲ್ಲ, ಯಾದವರಿಗೆ ದಕ್ಕಬೇಕು. ಧನಗಾರ, ಗೌಳಿ ಪರ್ಯಾಯ ಹೆಸರುಗಳಲ್ಲಿ ಪ್ರವರ್ಗ 1ರ ಶೇ.4ರಷ್ಟು ಮೀಸಲಾತಿಯನ್ನು ಕುರುಬರೇ ಲಪಟಾಯಿಸುತ್ತಾರೆ. ಅಷ್ಟು ಮಾತ್ರವಲ್ಲ ವೀರಶೈವ ಲಿಂಗಾಯಿತರಿಗೆ ನಿಗದಿಯಾದ ಪ್ರವರ್ಗ 3 ಬಿ ಯ ಶೇ.5ರ ಮೀಸಲಾತಿಯಲ್ಲೂ ಕುರುಬರು ಪಾಲು ಪಡೆಯುತ್ತಿದ್ದಾರೆ. ಹಂಡೆ ವಜೀರ, ಹಂಡೆ ಕುರುಬರು, ಹಂಡೆ ಲಿಂಗಾಯಿತರು ಎಂಬ ಪರ್ಯಾಯ ಹೆಸರುಗಳಲ್ಲಿ ಪ್ರವರ್ಗ 3 ಬಿಯಲ್ಲಿ ಮೀಸಲಾತಿ ಸೌಲಭ್ಯ ದಕ್ಕಿಸಿಕೊಳ್ಳುತ್ತಿದ್ದಾರೆ. (ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕುರುಬ ಸದಸ್ಯ ಬಲಶಾಲಿಯಾಗಿದ್ದರೆ ಆತ ಕುರುಬರಿಗೆ ಪ್ರವರ್ಗ 2ಎ ಎಸ್‍ಟಿ, ಪ್ರವರ್ಗ 1 ಹಾಗೂ ಪ್ರವರ್ಗ 3ಬಿಯಲ್ಲಿ ಅಂದರೆ ನಾಲ್ಕು ಕಡೆ ಮೀಸಲಾತಿ ಸೌಲಭ್ಯ ದಕ್ಕಿಸಿಕೊಳ್ಳುವಂತೆ ಮಾಡಿಕೊಳ್ಳುತ್ತಾನೆ. ಹಿಂದಿನ ಕೆಪಿಎಸ್‍ಸಿಯಲ್ಲಿ ಅಧ್ಯಕ್ಷ ದೊಡ್ಡೇಗೌಡರಿಂದ ಹಿಡಿದು ಕೆ. ಮುಕುಡಪ್ಪನವರಿಗೆ ಎಲ್ಲರೂ ಮಾಡಿದ್ದೂ ಅದನ್ನೇ. ಅವರೆಲ್ಲರ ಕುತಂತ್ರಕ್ಕೆ ರಾಜಕೀಯ ಬಲ ಒತ್ತಾಸೆಗಾಗಿ ನಿಂತಿದೆ ಎನ್ನುವುದು ಯಾರೂ ಮರೆಯುವಂತಿಲ್ಲ.)

12ನೇ ಶತಮಾನದಲ್ಲಿ ಬಸವಣ್ಣನವರ ಕಾರಣಕ್ಕೆ ಸಮಸ್ತ ಕಾಯಕ ಜೀವಿಗಳಾದ ಹಡಪದರು, ಮಡಿವಾಳರು, ನೇಕಾರರು, ಕಂಬಾರರು, ಕುಂಬಾರರು ಇತ್ಯಾದಿ ಜನವರ್ಗ ಲಿಂಗಧರಿಸಿ ಲಿಂಗಾಯಿತರಾಗಿದ್ದರು. ಈ ಹೊತ್ತು ಅವರೆಲ್ಲಾ ಸಿದ್ದರಾಮಯ್ಯನ ಕುತಂತ್ರದಿಂದ ತಾಂತ್ರಿಕವಾದಿಯಾದರೂ ವೀರಶೈವ ಲಿಂಗಾಯಿತ ಸಮುದಾಯದಿಂದ ಬೇರೆಯಾಗಬೇಕಾಯಿತು.
ಮೀಸಲಾತಿ ಸಂವಿಧಾನಬದ್ಧ ಹಕ್ಕು. ಅದು ಬದುಕಿನ ಪ್ರಶ್ನೆ. ಹಾಗಾಗಿಯೇ ಕಾಯಕ ಜೀವಿಗಳು (ಹಡಪದ, ನೇಕಾರ, ಗಾಣಿಗ, ಕಂಬಾರ, ಕುಂಬಾರ, ಹಿಂದೂ ನೇಕಾರ, ಹಿಂದೂ ಹಡಪದ ಎಂದು ಬರೆಸಿಕೊಂಡು `ಬದುಕು’ ದೊಡ್ಡದು ಎಂದು ತೋರಿಸಿಕೊಟ್ಟರು.  ಸಮುದಾಯ ಒಡೆಯುವ ಸಿದ್ದರಾಮಯ್ಯನ ಕುತಂತ್ರಕ್ಕೆ ಜನಶಕ್ತಿ ತಕ್ಕ ಉತ್ತರ ನೀಡಲಿದೆ.

ಇದೆಲ್ಲಾ ಪತ್ರದಲ್ಲಿನ ಉಲ್ಲೇಖಿತ ಅಂಶಗಳಾಗಿದ್ದು, ಪ್ರತ್ಯೇಕ ಧರ್ಮದಿಂದ ಲಿಂಗಾಯಿತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಸಿದ್ದರಾಮಯ್ಯನ ಸ್ವಹಿತಾಸಕ್ತಿಗಾಗಿ ಪ್ರತ್ಯೇಕ ಧರ್ಮದ ದಾಳ ಬೀಸಿದ್ದಾರೆ. ಈ ವಿಚಾರಗಳನ್ನು ಲಿಂಗಾಯಿತರು ಸೇರಿ ಎಲ್ಲರೂ ಅರ್ಥ ಮಾಡಿಕೊಂಡು ಸತ್ಯವನ್ನು ಅರಿಯಬೇಕಾಗಿದೆ. ಯಾಕೆಂದರೆ ಸತ್ಯ ಒಂದಲ್ಲಾ ಒಂದು ದಿನ ಗೊತ್ತಾಗಲೇಬೇಕು.

ಎಂ.ವಿ.ಎಚ್

Tags

Related Articles

Close