ಪ್ರಚಲಿತ

ಕಾಂಗ್ರೆಸ್ ಗೆ ಬಿತ್ತು ಮತ್ತೊಂದು ಹೊಡೆತ.! ಚುನಾವಣಾ ಹೊಸ್ತಿಲಲ್ಲೇ ತಿರುಗಿ ಬಿದ್ದ ಪಕ್ಷದ ದಿಗ್ಗಜರು.!

ಕಾಂಗ್ರೆಸ್ ಗೆ ಅದ್ಯಾವ ಗ್ರಹಚಾರ ಹಿಡಿದಿದೆಯೋ ದೇವರೇ ಬಲ್ಲ.! ದೇಶವನ್ನೇ ಆಳುತ್ತಿದ್ದ ಪಕ್ಷವೊಂದು ಇದೀಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ ಎಂದರೆ ಕಾಂಗ್ರೆಸ್ ಗೆ ಯಾವ ರೀತಿಯ ಪರಿಸ್ಥಿತಿ ಬಂದೊದಗಿದೆ ಎಂಬುದು ತಿಳಿಯುತ್ತದೆ. ಇತ್ತೀಚೆಗೆ ನಡೆದ ಎಲ್ಲಾ ರಾಜ್ಯಗಳ ಚುನಾವಣೆ ಠೇವಣಿ ತೆರೆಯಲೂ ಪರದಾಡಿದ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದೆ.!

ಅಧಿಕಾರದ ಅವಧಿಯಲ್ಲಿ ಮಾಡಿದ ಹಗರಣಗಳನ್ನು ಒಂದೊಂದಾಗಿಯೇ ಹೊರ ಹಾಕುತ್ತಿರುವ ಮೋದಿ ಸರಕಾರ ಕಾಂಗ್ರೆಸ್ ಗೆ ಹೊಡೆತಗಳ ಮೇಲೆ ಹೊಡೆತ ನೀಡಿ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸಲು ಪಣ ತೊಟ್ಟಿದ್ದಾರೆ. ಏನೂ ಮಾಡಲಾಗದ ಸ್ಥಿತಿಗೆ ತಲುಪಿರುವ ಕಾಂಗ್ರೆಸ್ ಗೆ ಇದೀಗ ಸ್ವತಃ ಕಾಂಗ್ರೆಸ್ ನಾಯಕರೇ ಶಾಕ್ ನೀಡುತ್ತಿದ್ದಾರೆ.!

ಕಾಂಗ್ರೆಸ್ ಹಿರಿಯ ನಾಯಕನಿಂದ ಬಂಡಾಯದ ಬಿಸಿ..!

ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಅಸಮಧಾನಗೊಂಡು ಪಕ್ಷ ತೊರೆಯುತ್ತಿರುವ ಹಿರಿಯ ನಾಯಕರು , ಇದೀಗ ಬಂಡಾಯದ ಬಿಸಿ ಏರಿಸುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ವಿ.ಆರ್.ಸುದರ್ಶನ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ , ಪಕ್ಷಾಂತರದ ಮುನ್ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ನಿಂದ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಧಾನ ಹೊರಹಾಕಿದ ಸುದರ್ಶನ್ ಕೋಲಾರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಬಾರಿ ಸ್ಪರ್ಧಿಸುವುದಾಗಿ ತನ್ನ ಕ್ಷೇತ್ರದಲ್ಲಿ ಭರ್ಜರಿ ತಯಾರಿ ನಡೆಸಿಕೊಂಡಿದ್ದ ಸುದರ್ಶನ್ ಗೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷದಿಂದಲೇ ಹೊರನಡೆದಿದ್ದಾರೆ.

ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಟಿಕೆಟ್ ವಂಚಿತರು ಪಕ್ಷ ತೊರೆಯುವುದು , ಬಂಡಾಯವಾಗಿ ಸ್ಪರ್ಧಿಸುವುದು, ರಾಜೀನಾಮೆ ನೀಡಿ ಬೇರೆ ಪಕ್ಷ ಸೇರಗಪೇಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಸುದರ್ಶನ್ ಕಾಂಗ್ರೆಸ್ ನ‌ ಹಿರಿಯ ಮುಖಂಡರು, ರಾಜ್ಯ ಉಪಾಧ್ಯಕ್ಷರು ಆಗಿದ್ದು, ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗಿದೆ.

ಈ ಹಿಂದೆ ಹೈದರಾಬಾದ್ ಕರ್ನಾಟಕ ಭಾಗದ ಕಾಂಗ್ರೆಸ್ ನ ಬಲಿಷ್ಠ ನಾಯಕ ಗುತ್ತೇದಾರ್ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪೇಗೊಂಡಿದ್ದರು. ಇದರಿಂದ ಕಾಂಗ್ರೆಸ್ ಗೆ ಈ ಭಾಗದಲ್ಲಿ ಸೋಲು ಖಚಿತ ಎಂಬುದು ಅರಿವಾಗಿದೆ.

ಈಗಾಗಲೇ ದೇಶಾದ್ಯಂತ ಕೇಸರಿ ಪತಾಕೆ ಹಾರಿಸುವ ಮೂಲಕ ಬಿಜೆಪಿ ಸರಕಾರವನ್ನು ರಚನೆ ಮಾಡಿಕೊಂಡು ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸುತ್ತಿರುವ ಮೋದಿ – ಷಾ ಜೋಡಿ ಸದ್ಯ ಕಣ್ಣಿಟ್ಟಿರುವುದು ಕರ್ನಾಟಕದ ಮೇಲೆ.ಕಾಂಗ್ರೆಸ್ ಗೆ ಇರುವ ಒಂದೇ ಒಂದು ಅವಕಾಶ ಅದು ಕರ್ನಾಟಕ ಮಾತ್ರ. ಆದರೆ ಇದೀಗ ರಾಜ್ಯ ಕಾಂಗ್ರೆಸ್ ನಲ್ಲೂ ಬಿರುಕು ಉಂಟಾಗಿದ್ದು , ಚುನಾವಣೆಯಲ್ಲಿ ಸೋಲಿನ ಭೀತಿ ಹೆಚ್ಚಾಗತೊಡಗಿದೆ.!

source: https://m.dailyhunt.in/news/india/kannada/kannada+dunia-epaper-kannadad/chunaavane+hostilalli+kaangres+ge+big+shaak-newsid-85748810?ss=pd&s=a

– Arjun

Tags

Related Articles

Close