ಪ್ರಚಲಿತರಾಜ್ಯ

ಯೋಗಿ ರಾಜ್ಯದಲ್ಲಿ, ಸ್ವತಃ ರೌಡಿಗಳೇ ಜಾಮೀನು ಬಾಂಡನ್ನೇ ಹರಿದು ಹಾಕಿ ಮತ್ತೆ ಜೈಲಿಗೆ ವಾಪಸ್!! ಯು.ಪಿಯ ಜೈಲಿನಲ್ಲಿ ರಶ್ಸೋ ರಶ್ಸು!!

ಯೋಗಿ ಆದಿತ್ಯನಾಥ್ ರಂತಹ ಮುಖ್ಯಮಂತ್ರಿ ಪ್ರತಿಯೊಂದು ರಾಜ್ಯದಲ್ಲಿ ಏಕೆ ಇಲ್ಲ ಎನ್ನುವ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿ ಬರುತ್ತಿದ್ದು, 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಮನೆಮಾತಾಗಿದ್ದವು. ಆದರೆ ಇದೀಗ ಸಮಾಜದ ನೆಮ್ಮದಿ ಹಾಳು ಮಾಡುತ್ತಿರುವ ರೌಡಿಗಳು ಯೋಗಿ ಆದಿತ್ಯನಾಥರ ಕಾನೂನಿಗೆ ನಲುಗಿ ಹೋಗಿದ್ದಂತೂ ಅಕ್ಷರಶಃ ನಿಜ!!

ಈಗಾಗಲೇ ಉತ್ತರ ಪ್ರದೇಶದ ಗಲಭೆ ಪೀಡಿತ ಮುಸ್ಲಿಂ ಬಾಹುಳ್ಯದ ಖೈರಾನ್ ದಲ್ಲಿ ಮೂಲಭೂತವಾದಿಗಳ ಕಿರುಕುಳಕ್ಕೆ ಊರು ಬಿಟ್ಟಿದ್ದ ಹಿಂದೂ ಕುಟುಂಬಗಳು ಇದೀಗ ಮರಳಿ ಗೂಡು ಸೇರುತ್ತಿವೆ. ಮುಸ್ಲಿಂ ಮೂಲಭೂತವಾದಿಗಳಿಂದ ನಿತ್ಯ ಆತಂಕದಿಂದ ಖೈರಾನ್ ಬಿಟ್ಟು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿದ್ದು, ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾನೂನು ಸುವ್ಯವಸ್ಥೆ ಕುರಿತು ಕೈಗೊಂಡ ಕಠಿಣ ಕ್ರಮಗಳು, ದಿಟ್ಟ ನಿಲುವುಗಳಿಂದ ಹಿಂದೂಗಳಿಗೆ ಸೂಕ್ತ ಭದ್ರತೆ ದೊರಕಿಸಿ ಕೊಟ್ಟಿದ್ದಾರೆ.

ಆದರೆ ಇದೀಗ, ಫೈರ್ ಬ್ರ್ಯಾಂಡ್ ಖ್ಯಾತಿ ಯೋಗಿ ಆದಿತ್ಯನಾಥರು 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಹೇಗೆ ಮನೆಮಾತಾಗಿವೆಯೋ, ಅವರು ಕೈಗೊಂಡ ಕಾನೂನು ಸುವ್ಯವಸ್ಥೆಯೂ ಪ್ರಸ್ತುತ ರಾಜ್ಯದ ಗಡಿದಾಟಿ ಸುದ್ದಿಯಾಗುತ್ತಿದೆ. ಹೌದು, ಸಮಾಜದ ನೆಮ್ಮದಿ ಹಾಳು ಮಾಡುತ್ತಿರುವ ರೌಡಿಗಳನ್ನು ಎನ್ ಕೌಂಟರ್ ಮಾಡಲು ಆದೇಶಿಸಿರುವ ಸಿಎಂ ಆದಿತ್ಯನಾಥರು, ಶರಣಾಗಲು ಒಪ್ಪದವರನ್ನು ಸಹ ಎನ್ ಕೌಂಟರ್ ಮಾಡುವಂತೆ ದಿಟ್ಟ ಆದೇಶ ಹೊರಡಿಸಿದ್ದಾರೆ.

ಕಳೆದ ವರ್ಷ ಆರಂಭದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 1,240 ಎನ್ ಕೌಂಟರ್ ಗಳು ನಡೆದಿವೆ. ಯುಪಿ ಡಿಜಿಪಿ ಕಚೇರಿಯಿಂದ ನೀಡಲ್ಪಟ್ಟ ಮಾಹಿತಿಯ ಪ್ರಕಾರ, 142 ಮಂದಿ ಅಪರಾಧಿಗಳು ವಾಟೆಂಡ್ ಲಿಸ್ಟ್ ನಲ್ಲಿದ್ದು, ಅವರನ್ನು ಶರಣಾಗುವಂತೆ ಸರ್ಕಾರ ಹೇಳಿತ್ತು!!

ಅಷ್ಟೇ ಅಲ್ಲದೇ ಯೋಗಿ ಸರ್ಕಾರವು ಅಪರಾಧಿಗಳನ್ನು ಬೇಟೆಯಾಡುವ ಬಗ್ಗೆ ಪ್ರತಿ ಜಿಲ್ಲೆಯ ಪೆÇಲೀಸ್ ಮುಖ್ಯಸ್ಥರಿಗೆ ಸೂಚನೆಗಳನ್ನು ನೀಡುತ್ತಿದ್ದು, ಸಮಾಜದ ನೆಮ್ಮದಿ ಹಾಳು ಮಾಡುತ್ತಿರುವ ರೌಡಿಗಳನ್ನು ಎನ್ ಕೌಂಟರ್ ಮಾಡಲು ಆದೇಶಿಸಿದೆಯಲ್ಲದೇ, ಶರಣಾಗಲು ಒಪ್ಪದವರನ್ನು ಸಹ ಎನ್ ಕೌಂಟರ್ ಮಾಡುವಂತೆ ದಿಟ್ಟ ಆದೇಶ ಹೊರಡಿಸಿದ್ದಾರೆ. ಆದರೆ ಕಳೆದ ವರ್ಷ ಆರಂಭದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 1,240 ಎನ್ ಕೌಂಟರ್ ಗಳು ನಡೆದಿದ್ದು, ಅದರಲ್ಲಿ 40 ಅಪರಾಧಿಗಳು ಎನ್ ಕೌಂಟರ್ ಗೆ ಬಲಿಯಾಗಿದ್ದರೆ 305 ಮಂದಿ ಗಾಯಗೊಂಡಿದ್ದಾರೆ.

ಇದೀಗ ಮತ್ತೊಮ್ಮೆ ದಿಟ್ಟ ನಿರ್ಧಾರವನ್ನು ಕೈಗೊಂಡಿರುವ ಸಿಎಂ ಆದಿತ್ಯನಾಥ್ ಸರ್ಕಾರವು ರೌಡಿಗಳನ್ನು ಎನ್ ಕೌಂಟರ್ ಮಾಡಲು ಆದೇಶಿಸಿದ್ದು, ಶರಣಾಗಲು ಒಪ್ಪದವರನ್ನು ಸಹ ಎನ್ ಕೌಂಟರ್ ಮಾಡುವಂತೆ ದಿಟ್ಟ ಆದೇಶ ಹೊರಡಿಸಿದ್ದಾರೆ. ಇದರಿಂದ ಪತರಗುಟ್ಟಿರುವ ಉತ್ತರ ಪ್ರದೇಶದ ರೌಡಿಗಳು ಈಗ ಹಿಂಡು ಹಿಂಡಾಗಿ ಬಂದು ಶರಣಾಗುತ್ತಿದ್ದು, ಅವರನ್ನು ಇಡಲು ಜೈಲಿನಲ್ಲಿ ಸ್ಥಳವೇ ಸಾಕಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಉತ್ತರ ಪ್ರದೇಶ ಡಿಜಿಪಿ ಕಚೇರಿಯೇ ಮಾಹಿತಿ ನೀಡಿರುವ ಪ್ರಕಾರ, ಪೆÇಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದ ಸುಮಾರು 142 ಕ್ರಿಮಿನಲ್ ಗಳು ಶರಣಾಗಿದ್ದಾರೆ. ಈ ಕುರಿತು ಸುಮಾರು 26 ಕ್ರಿಮಿನಲ್ ಗಳಿಗೆ ಜಾಮೀನು ಮಂಜೂರಾಗಿದ್ದರೂ ಜೈಲು ಬಿಟ್ಟು ಹೋಗುತ್ತಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆಲ್ಲ ಕಾರಣ ಯೋಗಿ ಆದಿತ್ಯನಾಥರು ಕೈಗೊಂಡ ನಿರ್ಧಾರವೇ ಆಗಿದ್ದು, 2017ರ ಮಾರ್ಚ್ 20ರಿಂದ ಇದುವರೆಗೆ ಉತ್ತರ ಪ್ರದೇಶದಲ್ಲಿ 1240 ಎನ್ ಕೌಂಟರ್ ನಡೆದಿವೆ. ಅದರಲ್ಲಿ 40ಕ್ಕೂ ಅಧಿಕ ಕ್ರಿಮಿನಲ್ ಗಳು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ರೌಡಿಗಳು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಯೋಗಿ ಸರ್ಕಾರ ಆದೇಶಿಸಿದಂತೆ ಮಾರ್ಚ್ 20, 2017ರಿಂದ ಆರಂಭವಾಗಿ ಫೆಬ್ರವರಿ 14 ರ ವರೆಗೆ 2,956 ಅಪರಾಧಿಗಳನ್ನು ಅರೆಸ್ಟ್ ಮಾಡಲಾಗಿದೆ. ಅಷ್ಟೇ ಅಲ್ಲದೇ, ಪೆÇಲೀಸರು ಈಗಾಗಲೇ ಸುಮಾರು 147ಕೋಟಿ ರೂಪಾಯಿ ಬೆಳೆಬಾಳುವ 169 ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಯುಪಿ ಡಿಜಿಪಿ ಕಚೇರಿಯಿಂದ ನೀಡಲ್ಪಟ್ಟ ಮಾಹಿತಿಯ ಪ್ರಕಾರ, ಪೆÇಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದ ಸುಮಾರು 142 ಕ್ರಿಮಿನಲ್ ಗಳು ಶರಣಾಗಿದ್ದಾರೆ. ಅಷ್ಟೇ ಅಲ್ಲದೇ ಜೈಲಿನಲ್ಲಿದ್ದ ರೌಡಿಗಳಿಗೆ ಜಾಮೀನೂ ಸಿಕ್ಕರೂ ಕೂಡ ಜೈಲು ಬಿಟ್ಟು ತೊಲಗುತ್ತಿಲ್ಲ, ಹಾಗಾಗಿ ಸುಮಾರು ಎಪ್ಪತ್ತೊಂದು ಮಂದಿ ಅಪರಾಧಿಗಳು ತಮಗೆ ಸಿಕ್ಕಿರುವ ಜಾಮೀನು ಬಾಂಡ್ ಗಳನ್ನೇ ಹರಿದು ಮತ್ತೆ ಜೈಲಿಗೆ ಹಿಂತಿರುಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಸಮಾಜದಲ್ಲಿ ಶಾಂತಿ ಕೆಡಿಸುವವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆಯಲ್ಲದೇ ಖೈರಾನ ಪ್ರದೇಶದ ಜನರಿಗೆ ಹೊಸ ಭರವಸೆ ಮೂಡಿಸಿದೆ. ಮುಸ್ಲಿಂ ಗುಂಡಾಗಳಿಂದ, ಗಲಭೆಗಳಿಂದ ಚಿಂತಿತರಾಗಿದ್ದ ಹಿಂದೂಗಳಿಗೆ ಹಿಂದಿನ ಸರ್ಕಾರ ಸೂಕ್ತ ಭದ್ರತೆ ನೀಡಿರಲಿಲ್ಲ. ಇದರಿಂದ ಹಿಂದೂಗಳು ವಲಸೆ ಹೋಗಿದ್ದರು. ಆದರೆ ಇದೀಗ ಯೋಗಿ ಆಡಳಿತದ 10 ತಿಂಗಳಲ್ಲಿ ಚಮತ್ಕಾರಿ ಬದಲಾವಣೆಯಾಗಿದ್ದು, ಸುಮಾರು ಒಂದು ಡಜನ್ ಗಿಂತ ಹೆಚ್ಚು ಹಿಂದೂ ಕುಟುಂಬಗಳು ಇದೀಗ ಖೈರಾನ್ ಕ್ಕೆ ವಾಪಸ್ಸ್ ಆಗಿವೆ.

ಅಷ್ಟೇ ಅಲ್ಲದೇ, ಮುಸ್ಲಿಂ ಗುಂಡಾಗಳ ಕಿರುಕುಳಕ್ಕೆ ಬೇಸತ್ತು ವಲಸೆ ಹೋಗಿದ್ದ ಹಿಂದೂಗಳ ಎಲ್ಲ ಮನೆ ಎದುರು ಮನೆ ಮಾರಾಟಕ್ಕಿವೆ ಎಂಬ ಬೋರ್ಡ್ ಗಳೇ ಇಷ್ಟು ದಿನ ಕಾಣುತ್ತಿದ್ದವು. ಯಾವಾಗ ಯೋಗಿ ಅಧಿಕಾರ ವಹಿಸಿಕೊಂಡರೋ ಆಗ ಖೈರಾನ್ ದಲ್ಲಿನ ಚಿತ್ರಣ ಬದಲಾಗಿದ್ದು, ಹಿಂದೂಗಳು ವ್ಯಾಪಾರ ಆರಂಭಿಸಿದ್ದು, ತಮ್ಮ ನಿತ್ಯದ ಕಾರ್ಯಕಲಾಪಗಳಲ್ಲಿ ತೊಡಗಿದ್ದಾರೆ.

ಇತ್ತೀಚೆಗಷ್ಟೇ ಕೊಲೆ ಮತ್ತು ದರೋಡೆ ಕುರಿತ 20 ಪ್ರಕರಣಗಳಿದ್ದ ಸಮಾಜಘಾತುಕ ಶಾರ್ಪಶೂಟರ್ ಶಬ್ಬೀರ್ ಅಹ್ಮದ್ ಎಂಬಾತನನ್ನು ಪೆÇಲೀಸರು ಹತ್ಯೆ ಮಾಡಿದ್ದರು. ಹಾಗಾಗಿ ಈ ಶಬ್ಬೀರ್ ಹತ್ಯೆಯಿಂದ ಹಿಂದೂಗಳಲ್ಲಿ ಹೊಸ ಆಶಾಕಿರಣವೊಂದು ಮೂಡಿದ್ದು, ಯೋಗಿ ಸರ್ಕಾರ ರಕ್ಷಣೆ ನೀಡುತ್ತದೆ ಎಂಬ ಭರವಸೆ ಮೂಡಿಸಿದೆ. ಅಷ್ಟೇ ಅಲ್ಲದೆ, ಶರಣಾಗಲು ಒಪ್ಪದಿದ್ದರೆ ಎನ್ ಕೌಂಟರ್ ಮಾಡಿ ಎಂದು ಯೋಗಿ ಆದಿತ್ಯನಾಥರು ಆದೇಶಿಸಿರುವುದರಿಂದ ಜೀವ ಉಳಿದರೆ ಸಾಕು ಎನ್ನುತ್ತಿರುವ ರೌಡಿಗಳು, ಜೈಲಿಗೆ ಬಂದು ಶರಣಾಗುತ್ತಿದ್ದಾರೆ ಎಂದರೆ ಅಲ್ಲಿರುವ ಕಾನೂನು ವ್ಯವಸ್ಥೆ ಎಷ್ಟು ಸದೃಡವಾಗಿದೆ ಎನ್ನುವುದನ್ನು ಪರೀಕ್ಷೆ ಮಾಡಬೇಕೆಂದೇ ಇಲ್ಲ!!

ಈಗಾಗಲೇ ಬಿಎಸ್ಪಿ /ಎಸ್ಪಿಗಳು ತಮ್ಮ ಮತಬ್ಯಾಂಕಿಗೋಸ್ಕರ ದಲಿತರನ್ನು ಹಾಗೂ ಮುಸ್ಲಿಮರನ್ನು ಬಳಸಿಕೊಂಡು, ಕೊಳಕು ರಾಜಕೀಯವನ್ನು ನಡೆಸುವ ದಶಕಗಳ ಭ್ರಷ್ಟಾಚಾರದ ನಿಯಮದಿಂದ ಸೃಷ್ಟಿಯಾದ ಸಮಾಜದ ಕೊಳಕನ್ನು ಶುದ್ಧೀಕರಿಸಲು “ಯೋಗಿ” ಮಾಡುತ್ತಿರುವ ಈ ದಿಟ್ಟ ಹೆಜ್ಜೆಯಿಂದ, ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರಳಿ ತರುವ ಮಹಾನ್ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸ ಕರ್ನಾಟಕದಲ್ಲಿ ಅದ್ಯಾವಾಗ ನಡೆಯುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.

– ಅಲೋಖಾ

Tags

Related Articles

Close