ಪ್ರಚಲಿತ

ಕಾಂಗ್ರೆಸ್‌ನ ಮಾಜಿ ಉಸ್ತುವಾರಿ ಸಚಿವರ ಅಕ್ರಮ ಬಯಲಿಗೆಳೆದ ನಾಗರಿಕರು.! ಮರಳಿನಲ್ಲೇ ಕೋಟಿ ಗಳಿಸಿದರೇ ರೈ..?

ಕರಾವಳಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಶಾಸಕರು ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿ ಇಡೀ ಕರಾವಳಿ ಪ್ರದೇಶವನ್ನೇ ತಮ್ಮ ಖಜಾನೆ ತುಂಬಿಸಿಕೊಳ್ಳುವುದಕ್ಕಾಗಿ ಬಳಸಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರಿಗೇನೂ ಕಮ್ಮಿಯಿಲ್ಲ, ಯಾಕೆಂದರೆ ಅಧಿಕಾರವನ್ನು ಬಳಸಿಕೊಂಡು ಎಲ್ಲಾ ಜೇಬು ತುಂಬಿಸಿಕೊಂಡ ಶಾಸಕರು ಸದ್ಯ ಚುನಾವಣೆಯಲ್ಲಿ ಸೋತು ಮೂಲೆಗುಂಪಾಗಿದ್ದಾರೆ. ಅದ್ಯಾವ ರೀತಿಯಲ್ಲಿ ದೋಚಿಕೊಂಡಿದ್ದಾರೆ ಎಂದರೆ ನದಿಯಲ್ಲಿ ಸಿಗುವ ಮರಳನ್ನೂ ಬಿಡದೆ ತಮ್ಮ ಖಜಾನೆ ಭರ್ತಿ ಮಾಡಿಕೊಂಡಿದ್ದರು. ಸಿದ್ದರಾಮಯ್ಯನವರ ಸರಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಕಾಂಗ್ರೆಸ್‌ನ ಸೋಲಿಲ್ಲದ ಸರದಾರ ಎಂದೇ ಖ್ಯಾತರಾದ ಬಿ.ರಮನಾಥ್ ರೈ ಅವರ ಒಂದೊಂದೇ ಅಕ್ರಮಗಳು ಇದೀಗ ಹೊರಬೀಳುತ್ತಿದೆ. ಸುಮಾರು ೩೦ ವರ್ಷ ಶಾಸಕರಾಗಿ ಆಯ್ಕೆಯಾದ ರಮಾನಾಥ್ ರೈ, ಬಂಟ್ವಾಳದಲ್ಲಿ ಭಾರತೀಯ ಜನತಾ ಪಕ್ಷ ಮೇಲೇಳದಂತೆ ಮಾಡಿಬಿಟ್ಟಿದ್ದರು. ಆದರೆ ಸಂಘಪರಿವಾರದ ಪ್ರಾಬಲ್ಯ ಹೆಚ್ಚುತ್ತಾ ಹೋದಂತೆ ಕಾಂಗ್ರೆಸ್ ತನ್ನ ಬಲ ಕಳೆದುಕೊಳ್ಳುತ್ತಾ ಬಂದಿದ್ದರಿಂದಲೇ ಈ ಬಾರಿಯೂ ಗೆಲುವು ನನ್ನದೇ ಎಂದು ಹೋದಲ್ಲೆಲ್ಲಾ ಹೇಳಿಕೊಂಡು ತಿರುಗುತ್ತಿದ್ದ ರಮಾನಾಥ್ ರೈ, ಬಿಜೆಪಿ ಅಭ್ಯರ್ಥಿ ಯು ರಾಜೇಶ್ ನಾಯ್ಕ್ ಅವರ ಎದುರು ಮಕಾಡೆ ಮಲಗಿದ್ದರು. ಇದೀಗ ಶಾಸಕರಾಗಿದ್ದ ಸಂದರ್ಭದಲ್ಲಿ ರಮಾನಾಥ್ ರೈ ಅವರು ಮಾಡಿದ್ದ ಅಕ್ರಮಗಳ ಬಗ್ಗೆ ಮಾಹಿತಿ ಲಭಿಸಿದೆ.!

ಮರಳು ಮಾಫಿಯಾಗೆ ಕೈಜೋಡಿಸಿದ್ದ ಮಾಜಿ ಸಚಿವ..!

ಜಿಲ್ಲೆಯ ಉಸ್ತುವಾರಿಯಾಗಿ ನೇಮಕಗೊಂಡ ರಮಾನಾಥ್ ರೈ ಅವರು ಇಡೀ ಕರಾವಳಿಯಲ್ಲಿ ತಮ್ಮ ಚೇಳಾಗಳ ಅಕ್ರಮಗಳಿಗೆ ಬಹಿರಂಗವಾಗಿಯೇ ನೆರವು ನೀಡುತ್ತಿದ್ದರು ಎಂಬ ಸತ್ಯಾಂಶ ಇದೀಗ ಬಯಲಾಗಿದೆ. ಯಾಕೆಂದರೆ ಸದ್ಯ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ. ಆದರೆ ಬಂಟ್ವಾಳ ತಾಲೂಕಿನ ಮುಲಾರ್‌ಪಟ್ಣ ಎಂಬಲ್ಲಿ ನಿನ್ನೆ ನಡೆದ ಘಟನೆ ಇಡೀ ಕರಾವಳಿಯಲ್ಲಿ ಆತಂಕದ ಮನೆ ಮಾಡಿದೆ. ಯಾಕೆಂದರೆ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯೊಂದು ಏಕಾಏಕಿ ಕುಸಿದು ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ಇದಕ್ಕೆ ಕಾರಣ ಏನೆಂದು ನೋಡಿದರೆ ಸಾರ್ವಜನಿಕರು ನೇರವಾಗಿ ಮಾಜಿ ಸಚಿವ ಮತ್ತು ಶಾಸರಕಾಗಿದ್ದ ಬಿ ರಮಾನಾಥ್ ರೈ ಅವರೇ ಕಾರಣ ಎನ್ನುತ್ತಿದ್ದಾರೆ.!

ಯಾಕೆಂದರೆ ರಮಾನಾಥ್ ರೈ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಮರಳು ಮಾಫಿಯಾ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಅಕ್ರಮವಾಗಿ ಮರಳು ಸಾಗಿಸುವವರ ವಿರುದ್ಧ ಗ್ರಾಮಸ್ಥರು ಅನೇಕ ಬಾರಿ ಪೊಲೀಸ್ ಇಲಾಖೆಗೆ ಮತ್ತು ಸಚಿವರಿಗೆ ದೂರು ನೀಡಿದ್ದರು. ಆದರೆ ಮರಳು ದಂಧೆಯಲ್ಲಿ ಕಮಿಷನ್ ಪಡೆಯುತ್ತಿದ್ದ ಕಾರಣದಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮರಳು ಕಳ್ಳರು ಅದ್ಯಾವ ರೀತಿಯಲ್ಲಿ ನದಿಯಲ್ಲಿ ಮರಳು ತೆಗೆಯುತ್ತಿದ್ದರು ಎಂದರೆ, ಬೃಹತ್ ಸೇತುವೆಯ ಕೆಳಗಿರುವ ಕಂಬಗಳ ಬುಡವನ್ನೂ ಬಿಡದೆ ಮರಳು ತೆಗೆಯುತ್ತಿದ್ದರು. ಒಂದು ದಿನಕ್ಕೆ ಸುಮಾರು ನೂರಕ್ಕೂ ಹೆಚ್ಚು ಲಾರಿಗಳು ಮರಳು ಸಾಗಿಸುತ್ತಿದ್ದು , ಇಡೀ ಸೇತುವೆಯೆ ಬಲ ಕಳೆದುಕೊಂಡು ಇದೀಗ ನದಿಗುರುಳಿ ಬಿದ್ದಿದೆ.!

೨೦೧೫ರಲ್ಲಿ ಅಕ್ರಮವಾಗಿ ನಡೆಯುವ ಮರಳು ದಂಧೆಯ ವಿರುದ್ಧ ಗ್ರಾಮಸ್ಥರು ಮಾತ್ರವಲ್ಲದೆ ತಹಶಿಲ್ದಾರರು ಕೂಡ ಅಂದಿನ ಶಾಸಕರಾದ ಬಿ ರಮಾನಾಥ್ ರೈ ಅವರಿಗೆ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದ ಶಾಸಕರು ಮರಳು ದಂಧೆಗೆ ಸಂಪೂರ್ಣ ಬೆಂಬಲ ನೀಡಿದ್ದರು. ಮುಲಾರ್‌ಪಟ್ಣ ನಾಗರಿಕ ಹಿತ ರಕ್ಷಣಾ ಸಮಿತಿಯ ಸದಸ್ಯರು ಜಿಲ್ಲಾಧೀಕಾರಿ ಮತ್ತು ಶಾಸಕರ ಗಮನಕ್ಕೆ ಅಕ್ರಮಗಳ ಬಗ್ಗೆ ಗಮನ ಸೆಳೆದಿದ್ದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಈ ಸೇತುವೆ ೧೯೭೮ರಲ್ಲಿ ನಿರ್ಮಿಸಲಾಗಿತ್ತು ಮತ್ತು ಬಂಟ್ವಾಳ ಮತ್ತು ಮಂಗಳೂರು ನಗರಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಇದೀಗ ಈ ಸೇತುವೆ ಕುಸಿದು ಬಿದ್ದಿದ್ದು, ಭಾರೀ ಅನಾಹುತ ತಪ್ಪಿದೆ.!

 

ತಕ್ಷಣ ಸ್ಪಂಧಿಸಿದ ನೂತನ ಬಿಜೆಪಿ ಶಾಸಕರು..!

ಕರಾವಳಿಯಲ್ಲಿ ೮ ಕ್ಷೇತ್ರಗಳಲ್ಲಿ ೭ ಕ್ಷೇತ್ರವನ್ನು ಬಿಜೆಪಿ ವಶಪಡಿಸಿಕೊಂಡಿದೆ. ಬಿಜೆಪಿ ಶಾಸಕರ ಮೇಲೆ ಅಪಾರ ನಂಬಿಕೆ ಇಟ್ಟ ಜನರಿಗೆ ಸೂಕ್ತ ಸ್ಪಂದನೆ ಸಿಗುತ್ತಿದ್ದು, ಜನರ ಸಮಸ್ಯೆಗಳಿಗೆ ಶಾಸಕರು ತಕ್ಷಣ ಹಾಜರಾಗಿ ಸ್ಪಂದಿಸುತ್ತಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಬಿಜೆಪಿ ಶಾಸಕರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಅವರು ಘಟನೆ ನಡೆದ ಕೂಡಲೇ ಸಂಸದರಾದ ಶ್ರೀ ನಳೀನ್ ಕುಮಾರ್ ಕಟೀಲ್ ಅವರ ಜೊತೆ ಭೇಟಿ ನೀಡಿದ್ದು, ಸಂಚಾರಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಹೊಸ ಸೇತುವೆ ನಿರ್ಮಾಣಕ್ಕೂ ಕೂಡಲೇ ಸ್ಪಂದಿಸುವುದಾಗಿ ಹೇಳಿದ ಶಾಸಕ ರಾಜೇಶ್ ನಾಯ್ಕ್ ಮತ್ತು ಸಂಸದ ನಳೀನ್ ಕುಮಾರ್ ಕಟೀಲ್ ಅವರ ಮಾತಿಗೆ ಗ್ರಾಮಸ್ಥರು ನಿಟ್ಟುಸಿರು ಬುಡುವಂತಾಗಿದೆ.

ರಾಜೇಶ್ ನಾಯ್ಕ್ ಅವರು ಶಾಸಕರಾಗಿ ಆಯ್ಕೆಯಾಗುವುದಕ್ಕೂ ಮೊದಲೇ ಜನಸಾಮಾನ್ಯರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಸಹಾಯಕ್ಕಾಗಿ ಯಾರೇ ಬಂದರು ಅವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದ ರಾಜೇಶ್ ನಾಯ್ಕ್ ಅವರಿಗೆ ಇದೀಗ ಅಧಿಕಾರ ಸಿಕ್ಕಿದೆ. ಆದ್ದರಿಂದ ತಮಗೆ ಸಿಕ್ಕ ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಶಾಸಕರು ತಮ್ಮ ಕ್ಷೇತ್ರದಲ್ಲಿ ಯಾವುದೇ ತೊಂದರೆಯಾದಾಗಲೂ ಕೂಡಲೇ ಧಾವಿಸಿ ಅದಕ್ಕೆ ಬೇಕಾದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.!

–ಸಾರ್ಥಕ್ ಶೆಟ್ಟಿ

Tags

Related Articles

Close