ಪ್ರಚಲಿತ

ಸ್ಫೋಟಕ ಸುದ್ದಿ!! ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಯಾದಾಗ ಕ್ಯಾರೆ ಎನ್ನದ ಸಿಎಂ!! ಆತನ ಮನೆ ಪಕ್ಕದಲ್ಲಿಯೇ ಹೋಗಿ ಮಾಡಿದ್ದೇನು ಗೊತ್ತಾ?!

ರಾಜ್ಯದಲ್ಲಿ ಅದೆಷ್ಟೋ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಕೂಡ ತುಟಿಕ್ ಪಿಟಿಕ್ ಎನ್ನದ ರಾಜ್ಯ ಸರ್ಕಾರ ಕೊಲೆಗಾರರನ್ನು ರಕ್ಷಿಸಿ ತನ್ನ ದರ್ಪವನ್ನು ಪ್ರದರ್ಶಿಸುತ್ತಲೇ ಬರುತ್ತಿದೆ. ಆದರೆ ಇತ್ತೀಚೆಗಷ್ಟೇ ಭಾಜಪ ಕಾರ್ಯಕರ್ತ ಸಂತೋಷ್ ನಡುರಸ್ತೆಯಲ್ಲಿಯೇ ಹತ್ಯೆಯಾಗಿದ್ದರೆ, ಇತ್ತ ಮತಬ್ಯಾಂಕ್ ರಾಜಕೀಯ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯನವರು ಆತನ ಮನೆಯ ಸಮೀಪದಲ್ಲೇ ಬಿರಿಯಾನಿ ತಿನ್ನುವುದರಲ್ಲಿ ಬಿಜಿಯಾಗಿದ್ದರು ಎನ್ನುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ!!

ಹೌದು… ಸಿದ್ದರಾಮಯ್ಯ ಸರ್ಕಾರದಲ್ಲಿ ಆದ ಅನ್ಯಾಯ ಅನಾಚಾರಗಳು ಅಷ್ಟಿಷ್ಟಲ್ಲ!! ಅದೆಷ್ಟೋ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆಯಾದಾಗಲೂ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಕೊಲೆಗಾರರನ್ನು ರಕ್ಷಿಸುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ವಿಪರ್ಯಾಸ ಮತ್ತೊಂದಿಲ್ಲ. ಯಾಕೆಂದರೆ ಈಗಾಗಲೇ ಪರೇಶ್ ಮೇಸ್ತ, ರುದ್ರೇಶ್, ಶರತ್ ಮಡಿವಾಳ, ದೀಪಕ್ ರಾವ್ ಹೀಗೆ ರಾಜ್ಯದಲ್ಲಿ ಅದೆಷ್ಟೋ ಹಿಂದೂ ಯುವಕ ಸರಣಿ ಹತ್ಯೆಗಳು ನಡೆಯುತ್ತಿದ್ದರೂ ಕೂಡ ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ಸರ್ಕಾರ ಕೊಲೆಗಾರರನ್ನು ರಕ್ಷಿಸುವಲ್ಲಿ ತಮ್ಮ ಹಿರಿಮೆಯನ್ನು ಪ್ರದರ್ಶಿಸುತ್ತಿರುವುದಂತೂ ಖಂಡಿತಾ.

ಯಾಕೆಂದರೆ ಈಗಾಗಲೇ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೇ ಅಲ್ಲಿನ ಹೈಕಮಾಂಡ್ ಆಗಿದ್ದು, ಜಿಲ್ಲೆಯ ಕಾಂಗ್ರೆಸ್ಸಿಗರು ಹಾಗೂ ಎಲ್ಲಾ ಅಧಿಕಾರಿಗಳಿಗೂ ಕೂಡ ಸಚಿವ ರಮಾನಾಥ ರೈ ಅವರ ಮಾತು ತಪ್ಪಿದರೆ ಟಾರ್ಗೆಟ್ ಗ್ಯಾರಂಟಿ. ಇದಕ್ಕೆ ಜೀವಂತ ಸಾಕ್ಷಿ ಕೇವಲ ಆರು ತಿಂಗಳಲ್ಲಿ ಇಬ್ಬರು ಎಸ್ಪಿಗಳ ವರ್ಗಾವಣೆ ಮಾಡಿದ್ದು!! ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದರೂ ಸೂಕ್ತ ತನಿಖೆ ನಡೆಸಲು ಬಿಡದೇ ಕೊಲೆಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.

ಆದರೆ ಬೆಂಗಳೂರು ನಗರದಲ್ಲಿ ಬಿಜೆಪಿ ಕಾರ್ಯಕರ್ತ ನಡುರಸ್ತೆಯಲ್ಲೇ ಕೊಲೆಯಾಗಿದ್ರೆ, ಇತ್ತ ಗುರುವಾರ ತಡರಾತ್ರಿ ಅದೇ ಏರಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಫುಲ್ ರಜಾಕ್ ಸಾಹೇಬರ ಬಿರಿಯಾನಿ ತಿಂದು ಪಾರ್ಟಿಯಲ್ಲಿ ಮುಳುಗಿದ್ದರು ಎಂದರೆ ಏನರ್ಥ!!

ಇತ್ತೀಚೆಗಷ್ಟೇ ಹತ್ಯೆಯಾಗಿರುವ ಸಂತೋಷ್ ಜೆ.ಸಿ. ನಗರದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ!! ಅಷ್ಟೇ ಅಲ್ಲದೇ, ಬಿಜೆಪಿ ಪರ ಓಡಾಡಿಕೊಂಡಿದ್ದ ಈತ ಬುಧವಾರ ರಾತ್ರಿ ಸುಮಾರು 7:30 ರಲ್ಲಿ ಹೊತ್ತಿಗೆ ಸಂತೋಷ್ ತಮ್ಮ ಮನೆ ಬಳಿ ಇದ್ದ ಬೇಕರಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದರು. ಈ ವೇಳೆ ಅದೇ ಏರಿಯಾದ ವಾಸೀಮ್, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಎಂಬವರು ಕೂಡ ಅಲ್ಲೇ ಟೀ ಕುಡಿಯುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದು ವಾಸೀಮ್ ಎಂಬಾತ ತನ್ನ ಬಳಿ ಇದ್ದ ಚಾಕುವಿನಿಂದ ಸಂತೋಷ್ ತೊಡೆಗೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸದ್ಯ ಪ್ರಕರಣ ಸಂಬಂಧ ವಸೀಂ, ಫಿಲಿಪ್ಸ್ ಎಂಬ ಇಬ್ಬರೂ ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.

ಇನ್ನು ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಠಾಣೆಯೆದುರು ಪ್ರತಿಭಟನೆ ಸಹ ನಡೆಸಿದ್ದರು. ಸಂತೋಷ್ ಹತ್ಯೆ ರಾಜಕೀಯ ಪ್ರೇರಿತ ಕೊಲೆ ಅಂತ ಆರೋಪಿಸಿದ್ದು, ವಸೀಂ ಸ್ಥಳೀಯ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರ ಮಗ, ಅವನಿಗೂ ಬಿಜೆಪಿಗೂ ಆಗುತ್ತಿರಲಿಲ್ಲ. ಹಾಗಾಗಿ ಬಿಜೆಪಿಯ ಪರ ಓಡಾಡುತ್ತಿದ್ದ ಸಂತೋಷ್‍ನನ್ನು ಕೊಲೆಗೈಯ್ಯಲಾಗಿದೆ ಎಂದು ಆರೋಪಿಸಿದ್ದರು. ಆದರೆ ರಾಜ್ಯದಲ್ಲಿ ಇಷ್ಟೆಲ್ಲಾ ಗದ್ದಲಗಳು ನಡೆಯುತ್ತಿದ್ದರೂ ಕೂಡ ಮುಖ್ಯಮಂತ್ರಿಗಳು ಎಂದೆನಿಸಿಕೊಂಡವರು ಅದೇ ಏರಿಯಾದಲ್ಲಿ ರಜಾಕ್ ಸಾಹೇಬರ ಬಿರಿಯಾನಿ ತಿಂದು ಪಾರ್ಟಿಯಲ್ಲಿ ಮುಳುಗಿದ್ದರು.

ಹೌದು..!! ನಿನ್ನೆ ತಡರಾತ್ರಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯುಟಿ ಖಾದರ್ ಮನೆಯಲ್ಲಿ ಭೋಜನ ಆಯೋಜಿಸಲಾಗಿತ್ತು. ಈ ಭೋಜನ ಕಾರ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಶಾಸಕ ಜಮೀರ್ ಅಹಮ್ಮದ್ ಹಾಗೂ ಮುಸ್ಲಿಂ ಮುಖಂಡರು ಸಹ ಪಾಲ್ಗೊಂಡಿದ್ದರು. ಶಾಸಕ ಜಮೀರ್ ಅಹಮ್ಮದ್ ಇತ್ತೀಚೆಗೆ ಕಾಂಗ್ರೆಸ್ ಸೇರಲು ಸಕಲ ತಯಾರಿಗಳನ್ನು ಮಾಡ್ಕೊಂಡಿರೋ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಅದೇ ರೀತಿ ಈ ಹಿಂದೆ ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲ್ಪಟ್ಟಿದ್ದ ನಾಯಕರುಗಳು ಜಮೀರ್ ರ ಪಕ್ಷಾಂತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅದ್ಯಾವುದಕ್ಕೂ ಡೋಂಟ್ ಕ್ಯಾರ್ ಅಂದಿರೋ ಸಿಎಂ ಬಿಜೆಪಿ ಕಾರ್ಯಕರ್ತನ ಸಾವಿನ ಬೆನ್ನಲ್ಲೇ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಇದೀಗ ಭೋಜನ ಕೂಟಕ್ಕೆ ಸೈ ಎಂದಿದ್ದಾರೆ. ಇದೆಲ್ಲವನ್ನು ನೋಡಿದಾಗ ಮುಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ಜಮೀರ್ ಕಾಂಗ್ರೆಸ್ ಪ್ರವೇಶ ಶತಸಿದ್ಧ ಎನ್ನುವುದರಲ್ಲಿ ಎರಡು ಮಾತಿಲ್ಲ.

ಜಮೀರ್ ರ ಪಕ್ಷಾಂತರಕ್ಕೆ ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್ಸಿಗರನ್ನೇ ಕ್ಯಾರೆ ಅನ್ನದೆ ಮುಖ್ಯಮಂತ್ರಿ ಭಾಜಪ ಕಾರ್ಯಕರ್ತ ಸಂತೋಷ ಹತ್ಯೆಯ ಬೆನ್ನಲ್ಲೇ ಓಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವುದು ನಿಜಕ್ಕೂ ಕೂಡ ನಾಚಿಕೆ ಗೇಡಿನ ವಿಚಾರ!! ಅಷ್ಟೇ ಅಲ್ಲದೇ ಈ ಮತಬ್ಯಾಂಕ್ ರಾಜಕಾರಣವನ್ನೆಲ್ಲವನ್ನು ನೋಡಿದರೇ ಮುಂದಿನ ದಿನಗಳಲ್ಲಿ 100% ಜಮೀರ್ ಕಾಂಗ್ರೆಸ್ ಪ್ರವೇಶ ಶತಸಿದ್ಧ ಎನ್ನುವುದು ಪಕ್ಕಾ ಆಗಿದೆ.

ಸಾವಿನ ಬಗ್ಗೆ ಒಂದು ಚೂರು ಸಂತಾಪ ಸೂಚಿಸದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾರ್ಟಿ ಮಾಡುವಲ್ಲಿ ನಿರತರಾಗಿದ್ದಲ್ಲದೇ, ಮುಸಲ್ಮಾನರ ಮತಕ್ಕೋಸ್ಕರ ಸಾವಿನಲ್ಲೂ ರಾಜಕಾರಣ ಮಾಡುತ್ತಿರುವ ಇವರಿಗೆ ಅದೇನೆನನ್ನಬೇಕೋ ನಾ ಕಾಣೆ!!

– ಅಲೋಖಾ

Tags

Related Articles

Close