ಪ್ರಚಲಿತ

ಶಾಕಿಂಗ್! ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸ್ವತಃ ಕಾಂಗ್ರೆಸಿಗೇ ಇಷ್ಟವಿರಲಿಲ್ಲ.! ರಹಸ್ಯ ಬಿಚ್ಚಿಟ್ಟ ಕೈ ಶಾಸಕ..!

ಚುನಾವಣಾ ನಂತರದಲ್ಲಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಬಗ್ಗೆ ಇಡೀ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಯಾಕೆಂದರೆ ಕೇವಲ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಸಲುವಾಗಿಯೇ ಅಪವಿತ್ರ ಮೈತ್ರಿ ಮಾಡಿಕೊಂಡು ಸದ್ಯ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರಕಾರ ಸದ್ಯ ಒಂದೊಂದೇ ಭಿನ್ನಾಭಿಪ್ರಾಯಗಳಿಂದ ಸುದ್ಧಿಯಾಗುತ್ತಿದೆ. ಯಾಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಚುನಾವಣೆಗೂ ಮೊದಲು ನರಿಗಳಂತೆ ಕಿತ್ತಾಡಿಕೊಂಡಿದ್ದವರು. ಆದರೆ ಅಧಿಕಾರದ ಆಸೆಗೆ ಬಿದ್ದು, ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕಂಗಾಲಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಆದರೆ ಇದೀಗ ಈ ಮೈತ್ರಿಯ ಹಿಂದಿನ ಅಸಲಿಯತ್ತು ಹೊರಬೀಳುತ್ತಿದ್ದು, ಯಾವ ಕಾರಣಕ್ಕಾಗಿ ಅನಿವಾರ್ಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಕೈಜೋಡಿಸಿಕೊಂಡಿದ್ದಾರೆ ಎಂಬುದು ಬಹಿರಂಗವಾಗಿದೆ.!

ರಾಜ್ಯ ನಾಯಕರ ವಿರೋಧದ ನಡುವೆಯೂ ಹೈಕಮಾಂಡ್‌ನಿಂದ ನಿರ್ಧಾರ..!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪರಸ್ಪರ ಕಿತ್ತಾಡಿಕೊಂಡೇ ಇರುತ್ತಿದ್ದರು.ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ ನಡೆದ ವಾಗ್ದಾಳಿ ಗಮನಿಸಿದರೆ ಇವರಿಬ್ಬರೂ ಮತ್ತೆಂದೂ ಜೊತೆಯಾಗುವುದೇ ಇಲ್ಲ ಎಂಬಂತಿತ್ತು. ಆದರೆ ಬದಿಗಿಟ್ಟು ಚುನಾವಣಾ ಫಲಿತಾಂಶದ ನಂತರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಮೈತ್ರಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಇಷ್ಟವಿರಲಿಲ್ಲ ಎಂಬುದು ಇದೀಗ ಬಯಲಾಗಿದೆ. ಯಾಕೆಂದರೆ ಸ್ವತಃ ಕಾಂಗ್ರೆಸ್ ಶಾಸಕರೇ ಹೇಳಿಕೊಂಡಿರುವಂತೆ , ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳಲು ಒಂಚೂರು ಇಷ್ಟವಿರಲಿಲ್ಲ. ಆದರೆ ಹೈಕಮಾಂಡ್ ಮಾತಿಗೆ ಒಪ್ಪಿಗೆ ಸೂಚಿಸಲೇಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಯಿತು ಎಂದು ರಹಸ್ಯ ಬಿಚ್ಚಿಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಕೆ. ಸುಧಾಕರ ಅವರೇ ಈ ಮಾತನ್ನು ಹೇಳಿಕೊಂಡಿದ್ದಾರೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಲು ತಯಾರಿಯನ್ನೂ ನಡೆಸಿಕೊಂಡಿದ್ದರು. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಬೇರೆ ದಾರಿಯೇ ಇಲ್ಲವಾದ್ದರಿಂದ ಅನಿವಾರ್ಯವಾಗಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳಲು ರಾಜ್ಯ ನಾಯಕರಿಗೆ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.!

ಶಾಸಕರಿಂದಲೂ ಮೈತ್ರಿಗೆ ವಿರೋಧ..!

ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ನ ಯಾವುದೇ ಶಾಸಕರಿಗೂ ಇಷ್ಟವಿರಲಿಲ್ಲ. ಆದರೂ ಮುಖಂಡರ ಮಾತಿಗೆ ಮಣಿಯಲೇಬೇಕಾದ ಪರಿಸ್ಥಿತಿ ನಮ್ಮ ಮುಂದಿತ್ತು. ಆದ್ದರಿಂದಲೇ ನಮ್ಮನ್ನು ರೆಸಾರ್ಟ್ ಗಳಲ್ಲಿ ಕೂಡಿ ಹಾಕಿ ಬಹುಮತ ಸಾಬೀತುಪಡಿಸಿದ್ದರು ಎಂದು ಪಕ್ಷದ ಮುಖಂಡರ ವಿರುದ್ಧವೂ ಅಸಮಧಾನ ವ್ಯಕ್ತಪಡಿಸಿದರು. ಕೇವಲ ಅಧಿಕಾರ ಹಿಡಿಯುವ ಆಸೆಯಿಂದಲೇ ಮೂರನೇ ಸ್ಥಾನಕ್ಕೆ ಕುಸಿದ ಜೆಡಿಎಸ್‌ ಜೊತೆ ಕೈಜೋಡಿಸಿ ಇದೀಗ ಅವರ ಕೈಗೆ ಮುಖ್ಯಮಂತ್ರಿ ಪಟ್ಟ ನೀಡುವಂತಾಗಿದೆ ಎಂದು ಹೇಳಿದರು.!

ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ ಇನ್ನೈದು ವರ್ಷ ಆರಾಮವಾಗಿ ಆಡಳಿತ ನಡೆಸುತ್ತೇವೆ ಎಂದು ಎಷ್ಟೇ ಹೇಳಿದರೂ , ಒಳಗಿಂದೊಳಗೆ ಒಬ್ಬೊಬ್ಬರೇ ಅಸಮಧಾನ ಹೊರಹಾಕುತ್ತಿದ್ದು, ಮೈತ್ರಿ ಸರಕಾರ ಎಷ್ಟು ಸಮಯ ಉಳಿಯುತ್ತದೆ ಎಂಬೂದೇವ ಅನುಮಾನವಾಗಿದೆ..!

source : public tv

–ಅರ್ಜುನ್

Tags

Related Articles

Close