ಪ್ರಚಲಿತ

ಬ್ರೇಕಿಂಗ್! ಕಮಲ ಹಿಡಿದು ಅಬ್ಬರಿಸಿದ ಗೋಲ್ಡನ್ ಸ್ಟಾರ್..! ಯಾರ ಪರವಾಗಿ ಗಣೇಶ್ ಮತಪ್ರಚಾರ..?

ಎಲ್ಲರ ಚಿತ್ತ ಮುಂದಿನ ಚುನಾವಣೆಯತ್ತ ನೆಟ್ಟಿದೆ. ಈ ಬಾರಿ ಕಪ್ ಯಾರದ್ದು ಎಂಬ ಪ್ರಶ್ನೆಯೇ ಎಲ್ಲರನ್ನೂ ಕಾಡುತ್ತಿದೆ. ಈ ಮಧ್ಯೆ ಸ್ಟಾರ್ ನಟರೆಲ್ಲಾ ಈ ಬಾರಿ ಭಾರತೀಯ ಜನತಾ ಪಕ್ಷದತ್ತ ಮುಖ ಮಾಡಿದ್ದು ಪಕ್ಷ ಮತ್ತಷ್ಟು ಹುಮ್ಮಸ್ಸಿನಲ್ಲಿದೆ.

ರಾಕಿಂಗ್ ಸ್ಟಾರ್ ನಟ ಯಶ್ ಹಾಗೂ ಕಿಚ್ಚ ಸುದೀಪನ ಎಂಟ್ರಿಯಿಂದ ರಾಜ್ಯ ಭಾರತೀಯ ಜನತಾ ಪಕ್ಷದಲ್ಲಿ ಪ್ರಚಾರದ ರಂಗೇ ಬದಲಾಗಿ ಹೋಗಿದೆ. 5ಕ್ಕೂ ಅಧಿಕ ಕಡೆಗಳಲ್ಲಿ ನಟ ಯಶ್ ಭಾರತೀಯ ಜನತ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರೆ ಹಲವಾರು ಕಡೆಗಳಲ್ಲಿ ಮಾಣಿಕ್ಯ ಸುದೀಪ್ ಪ್ರಚಾರ ನಡೆಸಿದ್ದಾರೆ. ಬಳ್ಳಾರಿ ಸಂಸದ ಶ್ರೀ ರಾಮುಲು ಸ್ಪರ್ಧಿಸುತ್ತಿರುವ ಮೊಳಕಾಲ್ಮೂರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನು ನಡೆಸಿದ ಕಿಚ್ಚ ಸುದೀಪ್ ನಂತರ ಬಳ್ಳಾರಿಯಲ್ಲಿ ಸೋಮಶೇಖರ್ ರೆಡ್ಡಿ ಪರವಾಗಿ ಪ್ರಚಾರ ನಡೆಸಿದ್ದರು. ಮಾತ್ರವಲ್ಲದೆ ಸುರಪುರ ವಿಧಾನ ಸಾಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಜೂಗೌಡ ಅವರ ಪರವಾಗಿಯೂ ನಟ ಸುದೀಪ್ ಪ್ರಚಾರ ನಡೆಸಿದ್ದರು.

ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪನ ಜೊತೆಗೆ ಇದೀಗ ಮತ್ತೊಬ್ಬ ಸ್ಟಾರ್ ನಟ ಪ್ರಚಾರ ಅಖಾಡಕ್ಕೆ ಇಳಿದಿದ್ದಾರೆ. ಭಾರತೀಯ ಜನತಾ ಪಕ್ಷದ ಪರವಾಗಿ ಪ್ರಚಾರದ ಅಖಾಡಕ್ಕಿಳಿದ ಗೋಲ್ಡನ್ ಸ್ಟಾರ್ ಗಣೇಶ್ ರೋಡ್ ಶೋ ಮೂಲಕ ಮತಯಾಚನೆ ನಡೆಸಿದ್ದಾರೆ. ತಮ್ಮ ಅಪಾರ ಅಭಿಮಾನಿಗಳು ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೊಂದಿಗೆ ನಟ ಗೋಲ್ಡನ್ ಸ್ಟಾರ್ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. 

ಬೆಂಗಳೂರಿನ ಪದ್ಮನಾಭ ನಗರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪರವಾಗಿ ಗೋಲ್ಟನ್ ಸ್ಟಾರ್ ಗಣೇಶ್ ಪ್ರಚಾರಕ್ಕಿಳಿದಿದ್ದಾರೆ. ಪದ್ಮನಾಭನಗರದಲ್ಲಿ ಪಕ್ಷದ ಅಭ್ಯರ್ಥಿ ಆರ್.ಅಶೋಕ್ ಪರವಾಗಿ ಮತಯಾಚನೆ ನಡೆಸುವ ಮೂಲಕ ಅಧಿಕೃತವಾಗಿ ಭಾರತೀಯ ಜನತಾ ಪಕ್ಷದ ಪರವಾಗಿ ಕಮಲ ಹಿಡಿದು ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

ಮುಂಗಾರು ಮಳೆ ಸಿನಿಮಾ ಖ್ಯಾತಿಯ ನಟ ಗೋಲ್ಟನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದರ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಈ ಹಿಂದೆ ಯವುದೇ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಹಾಗೂ ಅದರೊಂದಿಗೆ ಅಧಿಕೃತ ಸಂಬಂಧ ಇಟ್ಟುಕೊಳ್ಳದ ನಟ ಗಣೇಶ್ ಇದೀಗ ಇದೇ ಮೊದಲ ಬಾರಿಗೆ ರಾಜಕೀಯ ಅಖಾಡಕ್ಕಿಳಿದು ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ.

ನಟ ಗಣೇಶ್ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಕಾರಣವೂ ಇದೆ. ನಟ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಭಾರತೀಯ ಜನತಾ ಪಕ್ಷದ ನಾಯಕಿಯಾಗಿದ್ದಾರೆ. ರಾಜ್ಯ ಮಹಿಳಾ ಮೋರ್ಛಾದಲ್ಲಿ ಪ್ರಮುಖ ಹುದ್ದೆಯಲ್ಲಿರುವ ಶಲ್ಪಾ ಗಣೇಶ್ ಭಾರತೀಯ ಜನತಾ ಪಕ್ಷದ ನಾಯಕ ಆರ್. ಅಶೋಕ್ ಅವರ ಆಪ್ತರು. ಹೀಗಾಗಿಯೇ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಶೋಕ್ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ ಎನ್ನಲಾಗುಯತ್ತಿದೆ.

ಒಟ್ಟಾರೆ ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸಿನಿಮಾ  ನಟರಿಂದಲೇ ರಂಗೇರುತ್ತಿದ್ದು ಬಹತೇಕ ಸ್ಟಾರ್ ನಟರು ಕಮಲವನ್ನು ಹಿಡಿದು ಝಗಮಗಿಸಿದ್ದಾರೆ. ಬಹುತೇಕ ಯಾವೊಬ್ಬ ನಟನೂ ಕಾಂಗ್ರೆಸ್ ಪರ ಪ್ರಚಾರ ನಡೆಸದೆ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಧಿಕ್ಕರಿಸಿದ್ದು ಕಾಂಗ್ರೆಸ್ ಮುಖವಾಡ ಗಾಂಧಿನಗರಕ್ಕೂ ಅರ್ಥವಾದಂತೆ ಭಾಸವಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close