ಪ್ರಚಲಿತ

ಗಿನ್ನಿಸ್ ಪುಟಗಳಲ್ಲಿ ಅಚ್ಚಾಯ್ತು ವಿಶ್ವಸಂಸ್ಥೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನ

ಭಾರತದ ಹಿರಿಮೆ, ಗೌರವದ ಪ್ರತೀಕವಾದ ಯೋಗಕ್ಕೆ ೨೦೧೫ ರಲ್ಲಿ ವಿಶ್ವ ಮಾನ್ಯತೆ ಸಿಕ್ಕಿ, ಅಲ್ಲಿಂದೀಚೆಗೆ ಜೂನ್ ೨೧ ರಂದು ಪ್ರತಿ ವರ್ಷ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬದಲಾಗುತ್ತಿರುವ ಸಂಗತಿ ಎಲ್ಲರಿಗೂ ಸಂಗತ.

ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯೋಗದ ಹಿರಿಮೆಯನ್ನು ಅಮೆರಿಕದ ವಿಶ್ವಸಂಸ್ಥೆಯ ಆವರಣದಲ್ಲಿ ಎತ್ತರಕ್ಕೇರಿಸುವ ಕೆಲಸವನ್ನು ನಿನ್ನೆ ಮಾಡಿದ್ದರು. ಈ ಯೋಗ ದಿನಾಚರಣೆಯಲ್ಲಿ ನ್ಯೂಯಾರ್ಕ್ ಮೇಯರ್, ವಿಶ್ವಸಂಸ್ಥೆಯ ಅಧಿಕಾರಿಗಳು, ೧೮೦ ರಾಷ್ಟ್ರ‌ಗಳ ಗಣ್ಯರು, ಅನಿವಾಸಿ ಭಾರತೀಯರು ಸೇರಿದಂತೆ ಹಲವಾರು ಮಂದಿ ಭಾಗವಹಿಸುವ ಮೂಲಕ ಈ ದಿನವನ್ನು ವಿಶೇಷಗೊಳಿಸುವ ಕಾರ್ಯವೂ ನಡೆದಿತ್ತು.

ನಿನ್ನೆ ವಿಶ್ವಸಂಸ್ಥೆಯಲ್ಲಿ ಹಲವು ರಾಷ್ಟ್ರಗಳ ಒಗ್ಗೂಡುವಿಕೆಯಿಂದ ನಡೆದ ಈ ಯೋಗ ದಿನದ ಸಂಭ್ರಮ ಗಿನ್ನಿಸ್ ಪುಟಗಳಲ್ಲಿ ಅಚ್ಚಾಗುವ ಮೂಲಕ ಭಾರತೀಯ ಮೂಲದ ಯೋಗದ ಹಿರಿಮೆಯನ್ನು ಮತ್ತಷ್ಟು ವಿಶೇಷಗೊಳಿಸಿದೆ. ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಒಟ್ಟಾಗಿ, ಏಕಕಾಲಕ್ಕೆ ಮಾಡಿದ ಯೋಗ ಈಗ ಗಿನ್ನಿಸ್ ಪುಟಗಳನ್ನು ಸೇರಿದ್ದು, ಆ ಮೂಲಕ ಅಂತರಾಷ್ಟ್ರೀಯ ಯೋಗ ದಿನಕ್ಕೆ ಮತ್ತಷ್ಟು ಮೆರುಗು ತಂದು ಕೊಟ್ಟಿದೆ, ಯೋಗದ ಗೌರವವನ್ನು, ಯೋಗದ ಮೂಲಕ ಭಾರತದ ಗೌರವವನ್ನು ಹೆಚ್ಚಿಸಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಬಾರಿಯ ಯೋಗ ದಿನ ‘ವಸುದೈವ ಕುಟುಂಬಕಂ’ ಎನ್ನುವ ಧ್ಯೇಯದ ಜೊತೆಗೆ ಆವರಿಸಲ್ಪಟ್ಟಿದೆ. ಎಲ್ಲರಿಗೂ ಆರೋಗ್ಯ, ಆರೋಗ್ಯಕ್ಕಾಗಿ ಯೋಗ ಎಂಬಂತೆ ಯೋಗ ದಿನದ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿಗೆ ಸಾರಿ ಹೇಳುವ ಕೆಲಸವನ್ನು ಸಹ ಮಾಡಿದ್ದಾರೆ. ಆರೋಗ್ಯ ಪೂರ್ಣ ಬದುಕಿಗೆ ಯೋಗ ಅವಶ್ಯಕ. ಎಲ್ಲರೂ ಪ್ರತಿನಿತ್ಯ ಯೋಗ ಮಾಡುವ ಹವ್ಯಾಸವನ್ನು ರೂಢಿಸಿಕೊಳ್ಳಿ ಮತ್ತು ಇತರರಿಗೂ ಯೋಗ ಮಾಡುವಂತೆ ಪ್ರೇರೇಪಿಸಿ ಎನ್ನುವ ಮೂಲಕ ಯೋಗದ ಮಹತ್ವವನ್ನು, ಯೋಗದಿಂದ ಉಂಟಾಗುವ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯನ್ನು ಕುರಿತು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ. ಇವೆಲ್ಲದರ ಜೊತೆಗೆ ಯೋಗಕ್ಕೆ ಗಿನ್ನಿಸ್ ಪುಸ್ತಕದ ಮಾನ್ಯತೆಯನ್ನು ದೊರಕಿಸಿಕೊಟ್ಟ ಕೀರ್ತಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎನ್ನುವುದು ಸತ್ಯ.

ಹಾಗೆಯೇ ವಿಶ್ವಸಂಸ್ಥೆಯಲ್ಲಿ ಯೋಗದ ಜೊತೆಗೆ ಓಂಕಾರ ನಾದವೂ ಮೊಳಗಿದ್ದು, ಇದು ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನದ ಮತ್ತೊಂದು ವಿಶೇಷತೆಯಾಗಿದೆ. ಯೋಗ ಎಲ್ಲರಿಗೂ ಮುಕ್ತವಾಗಿದ್ದು, ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯಕ್ಕೂ ಉಪಯುಕ್ತ. ಇದು ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿಯೂ ಪ್ರಮುಖ ಪಾತ್ರ ವಹಿಸುವುದಾಗಿ ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

Tags

Related Articles

Close