ಪ್ರಚಲಿತ

35 ಪೀಸ್ ಆದ ಪ್ರಕರಣವನ್ನೇ ತಿರುಚಿದ ಮಾಧ್ಯಮ! ಹಿಂದೂಸ್ಥಾನದಲ್ಲಿ ಹಿಂದೂಗಳಿಗಿದೆಂತಾ ಮೋಸ?

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲವ್ ಜಿಹಾದ್‌ಗೆ ಬಲಿಯಾಗಿ ಅಫ್ತಾಬ್ ಪೂನಾವಾಲಾ ಎಂಬ ಮುಸ್ಲಿಂ ಮತಾಂಧ‌ನಿಂದ ಹತ್ಯೆಯಾದ ಶ್ರದ್ಧಾ ವಾಕರ್ ವಿಷಯ ಈಗಾಗಲೇ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸೋನಿ ವಾಹಿನಿ ತನ್ನ ಜನಪ್ರಿಯ ಧಾರಾವಾಹಿ ‘ಕ್ರೈಮ್ ಪ್ಯಾಟ್ರೋಲ್’ನಲ್ಲಿ ಸಂಚಿಕೆ ಪ್ರಸಾರ‌ವಾಗುತ್ತಿದ್ದು, ಶ್ರದ್ಧಾಳ ಸಂಪೂರ್ಣ ಪ್ರಕರಣವನ್ನೇ ಬುಡಮೇಲು ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಎಲ್ಲ ಸತ್ಯಗಳು ಜಗಜ್ಜಾಹೀರು ಆಗಿರುವಾಗ, ಈ ಪ್ರಕರಣಕ್ಕೆ ಸಂಬಂಧಿಸಿ‌ದಂತೆ ಇರುವ ಪಾತ್ರಗಳನ್ನು ಬೇಕಾಬಿಟ್ಟಿ ಬದಲಾಯಿಸಿ, ಜನರಿಗೆ ಮಂಕುಬೂದಿ ಎರಚಲು ಸೋನಿ ವಾಹಿನಿ ಹೊರಟಿದೆ.

ಶ್ರದ್ಧಾ ವಾಕರ್ ಹತ್ಯೆ‌ಗೆ ಸಂಬಂಧಿಸಿದಂತೆ ಕಥೆಯನ್ನು ಬಿತ್ತರಿಸುತ್ತಿರುವ ಈ ವಾಹಿನಿ, ಕೊಲೆಗಡುಕನಿಗೆ ಮಿಹಿರ್ ಎಂದು ಹಿಂದೂ ಹೆಸರಿಡುವ ಮೂಲಕ ಮತ್ತು ಶ್ರದ್ಧಾಳ ಹೆಸರನ್ನು ಅನ್ನಾ ಫೆರ್ನಾಂಡಿಸ್ ಎಂದು ಕ್ರೈಸ್ತ ಧರ್ಮದ ಹೆಸರನ್ನಿರಿಸುವ ಮೂಲಕ ಆರೋಪಿ ಅಫ್ತಾಬ್‌ನ ಮತ್ತು ಶ್ರದ್ಧಾಳ ಧರ್ಮವನ್ನು ಬದಲಿಸಿದೆ. ಆ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಧಾರ್ಮಿಕ ಗುರುತನ್ನೇ ತಿದ್ದುವ ಮೂಲಕ ಘಟನೆಯ ಸಂಪೂರ್ಣ ತಪ್ಪನ್ನು ಹಿಂದೂ ಧರ್ಮದ ಮೇಲೆ ಮತ್ತು ಈ ಘಟನೆಗೆ ಯಾವುದೇ ಸಂಬಂಧ ಇಲ್ಲದ ಕ್ರೈಸ್ತ ಧರ್ಮ‌ದ ಹುಡುಗಿಯ ಹೆಸರನ್ನು ಶ್ರದ್ಧಾ‌ ಎಂಬ ಹತ್ಯೆಯಾದ ಹಿಂದೂ ಹುಡುಗಿಗೆ ಇರಿಸುವ ಮೂಲಕ ಸತ್ಯದ ಮುಖವಾಡವನ್ನೇ ಮುಚ್ಚಿಡುವ ಪ್ರಯತ್ನ ನಡೆಸುವ ಮೂಲಕ ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಹಾಗೆಯೇ ಈ ಜೋಡಿಗಳು ಹಿಂದೂ ದೇವಾಲಯದ‌ಲ್ಲಿ ಮದುವೆಯಾಗಿರುವಂತೆ ತೋರಿಸಲಾಗಿದೆ. ಶ್ರದ್ಧಾಳ‌ನ್ನು ಅಮಾನುಷವಾಗಿ ಕೊಂದು, ಆಕೆಯನ್ನು ತುಂಡರಿಸಿ, ದೇಹದ ಭಾಗಗಳನ್ನು ಪ್ರಿಡ್ಜ್‌ನಲ್ಲಿಟ್ಟು, ಆಕೆಯ ದೇಹದ ಭಾಗಗಳಿರುವಾಗಲೇ ಇನ್ನೊಂದು ಹುಡುಗಿ‌ಯ ಜೊತೆಗೆ ಅದೇ ಮನೆಯಲ್ಲಿ ರೊಮ್ಯಾನ್ಸ್‌ನಲ್ಲಿ ತೊಡಗಿಸಿಕೊಂಡಿದ್ದು, ಪ್ರೇಮದ ಹೆಸರಿನಲ್ಲಿ ಮತ್ತೊಬ್ಬಳನ್ನು ತನ್ನ ಕಾಮಕ್ಕೆ ಬಳಸಿಕೊಂಡ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು.

ಈ ಘಟನೆಯನ್ನು ಸೋನಿ ವಾಹಿನಿ ತನ್ನ ಧಾರಾವಾಹಿ‌ಯಲ್ಲಿ ಹಿಂದೂ ಧರ್ಮದ ತಲೆಗೆ ಕಟ್ಟುವುದಕ್ಕೆ ಹೊರಟಿದ್ದು, ಈ ಗಂಭೀರ ಪ್ರಕರಣದ ಮತ್ತು ಜನರ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿರುವುದು ಆಕ್ಷೇಪಾರ್ಹ. ಇದರಲ್ಲಿ ಅಫ್ತಾಬ್‌ನ ತಾಯಿ ಸಹ ಹಿಂದೂ ಎಂಬಂತೆ ತೋರಿಸಲಾಗಿದ್ದು, ಆ ಮೂಲಕ ಹಿಂದೂ ಧರ್ಮಕ್ಕೆ ,ಸತ್ಯಕ್ಕೆ ಮಸಿ ಬಳಿಯುವ ಕೆಲಸವನ್ನು ಸೋನಿ ವಾಹಿನಿ ಮಾಡಿದೆ.

ಈ ಧಾರಾವಾಹಿಯ ವಿರುದ್ಧ ಹಿಂದೂ ಸಮಾಜ ಸಿಡಿದೇಳಬೇಕಿದೆ. ಆ ಮೂಲಕ ಶ್ರದ್ಧಾಳ ಹತ್ಯೆ ಪ್ರಕರಣದ ಸತ್ಯಾಸತ್ಯತೆ ಸತ್ತು ಹೋಗದಂತೆ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ.

Tags

Related Articles

Close