ಪ್ರಚಲಿತ

ಕಾಂಗ್ರೆಸ್ ನಾಯಕರೇ, ನಿಮಗೆ ಸರ್ವಾಧಿಕಾರಿ ಪದದ ಅರ್ಥ ಗೊತ್ತಾ?

ಪ್ರಜಾಪ್ರಭುತ್ವ ವಿರೋಧಿ, ನಿರಂಕುಶ ಪ್ರಭುತ್ವಕ್ಕೆ ‘ಹಿಟ್ಲರ್’ ಉದಾಹರಣೆ. ಹಿಂಸಾತ್ಮಕ ಆಡಳಿತ, ಜನರ ಮಾತಿಗೆ, ಜನರ ಅಭಿವೃದ್ಧಿಗೆ ಕಿಮ್ಮತ್ತು ನೀಡದಾತ ಹಿಟ್ಲರ್. ತನಗೆ ಇಷ್ಟ ಬಂದ ಹಾಗೆ, ಸರ್ವಾಧಿಕಾರಿ ಧೋರಣೆಯಿಂದಲೇ ಆಡಳಿತ ನಡೆಸಿ ಹೆಸರುವಾಸಿಯಾದವನು ಈತ. ಇವನ ಆಡಳಿತವನ್ನು ಇತಿಹಾಸ ‘ಕಪ್ಪು ಚುಕ್ಕೆ’‌ ಎಂದೇ ಭಾವಿಸಿದೆ ಎನ್ನಬಹುದು.

ರಾಜ್ಯದ ಕಾಂಗ್ರೆಸ್ ಸರ್ಕಾರ, ಸಿ ಎಂ ಸಿದ್ದರಾಮಯ್ಯ ಅವರಿಗೆ ಹಿಟ್ಲರ್ ಬಗ್ಗೆ ಎಷ್ಟು ಗೊತ್ತು ಎಂಬುದು ತಿಳಿಯದು. ಆದರೆ ಅವರು ಹಿಟ್ಲರ್ ಹಾಗೆ ಸರ್ವಾಧಿಕಾರಿ ಎಂದು ಪ್ರಧಾನಿ ಮೋದಿ ಅವರನ್ನು ಕರೆಯುವ ಮೂಲಕ ತಮಗೆ ಹಿಟ್ಲರ್ ಆಡಳಿತದ ಇತಿಹಾಸವೇ ತಿಳಿಯದು ಎನ್ನುವುದನ್ನು ಜಗಜ್ಜಾಹೀರು ಮಾಡಿದ್ದಾರೆ.

ಪ್ರಧಾನಿ ಮೋದಿ ಅವರೆಂದರೆ ಕಾಂಗ್ರೆಸ್ ನಾಯಕರಿಗೆ ನಡುಕ. ಯಾಕೆಂದರೆ ಕೇವಲ ಸ್ವ ಹಿತ, ಕುಟುಂಬ ರಾಜಕಾರಣದಲ್ಲಿ ಮುಳುಗಿರುವ ಕಾಂಗ್ರೆಸ್‌ನವರಿಗೆ, ಜನರ ತೆರಿಗೆ ಹಣವನ್ನು ಸುಲಿಗೆ ಮಾಡಿ ಭ್ರಷ್ಟಾಚಾರದ ಮೂಲಕವೇ ಜನಪ್ರಿಯರಾದವರಿಗೆ ಪ್ರಧಾನಿ ಮೋದಿ ಅವರಂತಹ ಶುದ್ಧ ಹೃದಯಿ ರಾಜಕಾರಣಿ, ಅಭಿವೃದ್ಧಿಯ ಆಶಯ ಹೊಂದಿರುವ ರಾಜಕಾರಣಿ, ಹೆಚ್ಚಾಗಿ ಇಡೀ ದೇಶವೇ ಮೆಚ್ಚುವ ವ್ಯಕ್ತಿ ಶಕ್ತಿ ಪ್ರಧಾನಿ ಮೋದಿ ಅವರ ಮೇಲೆ ಅಸೂಯೆ, ಭಯ ಇರುವುದು ಸಹಜ.

ತಾನೂ ನುಂಗದ, ಇತರರಿಗೂ ನುಂಗಲು ಬಿಡದ (ಭ್ರಷ್ಟಾಚಾರ) ಪ್ರಧಾನಿ ಮೋದಿ ಅವರು ದೇಶದ ಸಾಮಾನ್ಯ ಜನರಿಗೆ ಈ ವರೆಗೂ ಅಚ್ಚುಮೆಚ್ಚು. ಇವರದ್ದು ಕುಟುಂಬ ರಾಜಕಾರಣವಲ್ಲ. ಅಭಿವೃದ್ಧಿ ಪರ ರಾಜಕಾರಣ. ಜನರ ತೆರಿಗೆ ಹಣ ಜನರಿಗೆಯೇ ತಲುಪಬೇಕು ಎನ್ನುವ ನಿಟ್ಟಿನಲ್ಲಿ, ಅದನ್ನು ವಿನಿಯೋಗಿಸುವಲ್ಲಿ ಯಾವುದೇ ಲೋಪವಾಗದ ಹಾಗೆ ಕ್ರಮ ಕೈಗೊಂಡವರು. ಇದು ಕಾಂಗ್ರೆಸ್ ನಾಯಕರಿಗೆ ಉರಿವಲ್ಲಿಗೆ ಉಪ್ಪು ಇಟ್ಟ ಹಾಗೆ ನೋವು ಕೊಟ್ಟ ವಿಷಯ. ಇಲ್ಲದಿದ್ದರೆ ದೊಡ್ಡ ಮೊತ್ತದ ಲಾಭವನ್ನು ತಮ್ಮ ಖಾತೆಗೆ ಹಾಕಿ, ಸಣ್ಣ ಮೊತ್ತವನ್ನು ಜನರಿಗಾಗಿ ವೆಚ್ಚ ಮಾಡುವ ಮೂಲಕ ಮೋಸ ಮಾಡುತ್ತಿದ್ದ ಕಾಂಗ್ರೆಸ್, ಪ್ರಧಾನಿ ಮೋದಿ ಆಡಳಿತದ ಬಳಿಕ ಜೇಬು ತುಂಬಿಸಲು ಪರದಾಡುವ‌ ಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕೆ ಅವರಿಗೆ ಪ್ರಧಾನಿ ಮೋದಿ ಅವರದ್ದು ಸರ್ವಾಧಿಕಾರಿ ಧೋರಣೆ ಎನಿಸಿರಲೂ ಬಹುದು.

ಕಾಂಗ್ರೆಸ್ ನಾಯಕರೇ, ನೀವು ಗಾಂಧಿ ಅವರ ಹೆಸರಿನಲ್ಲಿ ದೇಶವನ್ನು ದೋಚಿರುವ ನಕಲಿಗಳ ಕೈಕೆಳಗೆ ಜೀವನ ನಡೆಸುತ್ತಿರುವವರು. ಅವರ ಕುಟುಂಬ ರಾಜಕಾರಣಕ್ಕೆ ನೀವು ಸೇವೆ ಸಲ್ಲಿಸುತ್ತಿರುವವರು. ಅಂತಹ ನಕಲಿ ಗಾಂಧಿಗಳಿಂದ ದೇಶಕ್ಕೆ ಯಾವುದೇ ಲಾಭ ಆಗದಿದ್ದರೂ, ಅಭಿವೃದ್ಧಿ ಕನಸಿನ ಮಾತಾಗಿದ್ದರೂ ನೀವು ಅವರು ನೆಟ್ಟ ಆಲದ ಮರಕ್ಕೆಯೇ ನೇಣು ಹಾಕಿಕೊಳ್ಳಲು ಹೊರಟಿದ್ದೀರಿ ಎಂದರೆ ಅದು ನಿಮ್ಮ ಮೂರ್ಖತನ. ನಿಮಗೆ ಇಂತಹ ನಾಯಕರ ಸರ್ವಾಧಿಕಾರಿ ಧೋರಣೆ, ನಿರಂಕುಶ ಪ್ರಭುತ್ವ ಇನ್ನೂ ಅರಿವಾಗದೇ ಇರುವುದು ನಾಚಿಕೆಯ ವಿಷಯ.

ಪ್ರಧಾನಿ ಮೋದಿ ಅವರು ಎಲ್ಲರಿಗೂ ಸ್ಥಾನ ನೀಡುತ್ತಾರೆ. ಬೇಧ ಭಾವಕ್ಕೆ ಅವರ ಆಳ್ವಿಕೆಯಲ್ಲಿ ಸ್ಥಾನವಿಲ್ಲ. ‘ರಾಜ ಪ್ರತ್ಯಕ್ಷ ದೇವತಾ’ ಎನ್ನುವುದಕ್ಕೆ ಪ್ರಧಾನಿ ಮೋದಿ ಅವರು ಜೀವಂತ ಉದಾಹರಣೆ. ಅವರ ಆಡಳಿತದ ಹತ್ತು ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ನಾಗಾಲೋಟವೇ ಇದಕ್ಕೆ ಸಾಕ್ಷಿ. ಬಡವರಿಗಾಗಿ, ದೇಶದ ಎಲ್ಲಾ ಜನರನ್ನು ಮೇಲೆತ್ತಲು ಅವರು ಕೈಗೊಂಡ ಅದೆಷ್ಟೋ ನಿರ್ಣಯಗಳು, ಅವರು ಒದಗಿಸಿ ಕೊಟ್ಟ ಮೂಲಭೂತ ಸೌಲಭ್ಯಗಳು ಅವರೇನು ಎಂಬುದನ್ನು ಜಗತ್ತಿಗೆ ಸಾರುತ್ತಿವೆ.

ನಕಲಿ ಗಾಂಧಿಯನ್ನು ಮೆಚ್ಚಿಸುವ‌ಸಲುವಾಗಿ, ನಿಜವಾದ ಸರ್ವಾಧಿಕಾರಿ ಗಳಿಗೆ ಬೆಂಬಲ ನೀಡುವ ನೀವು ಪ್ರಜಾಪ್ರಭುತ್ವದ ಆಶಯದಲ್ಲಿ ಕೆಲಸ ಮಾಡುವ ಪ್ರಧಾನಿ ಮೋದಿ ಅವರನ್ನು ಸರ್ವಾಧಿಕಾರಿಗೆ ಹೋಲಿಕೆ ಮಾಡಿರುವುದರಲ್ಲಿ ಅಚ್ಚರಿ ಇಲ್ಲ. ಏಕೆಂದರೆ ಕತ್ತೆಗೆ ಕಸ್ತೂರಿ ಪರಿಮಳ ಗೊತ್ತಿರುವುದಿಲ್ಲ. ಹಾಗೆಯೇ ಕಾಂಗ್ರೆಸ್ ಪಕ್ಷದ ನಕಲಿ ಗಾಂಧಿಗಳ ದಾಸರಾಗಿರುವ ನಿಮಗೆ, ಪ್ರಧಾನಿ ಮೋದಿ ಅವರ ಪ್ರಜಾಸತ್ತಾತ್ಮಕ ಆಡಳಿತ ಮತ್ತು ಭಾರತದಲ್ಲಿ ಅಭಿವೃದ್ಧಿಯ ಸೂರ್ಯ ಉದಯಿಸುತ್ತಿರುವುದು ಗಮನಕ್ಕೆ ಬಾರದು.

ಕಾಂಗ್ರೆಸ್ ಪಕ್ಷದ ನಾಲಾಯಕರೇೆ, ದೇಶದ ನಿಜವಾದ ಅಭಿವೃದ್ಧಿ‌ಯನ್ನು ಗಮನಿಸಿದ, ಕೊನೇ ಪಕ್ಷ ಹೇಳಿದರೂ ಅರ್ಥ ಮಾಡಿಕೊಳ್ಳದ ನಿಮ್ಮದು ದಪ್ಪ ಚರ್ಮ. ಗೋರ್ಕಲ್ಲ ಮೇಲೆ ನೀರನೆರೆದಂತೆ ಸರ್ವಜ್ಞ.. ಅಷ್ಟೇ..

Tags

Related Articles

Close