ಪ್ರಚಲಿತ

ಕಾಂಗ್ರೆಸ್‌ ಪಾಳಯದಲ್ಲಿ ಉಗ್ರರ ಪಡೆ!

ಕಾಂಗ್ರೆಸ್ ಪಕ್ಷದ ಪರ ಯಾತಕ್ಕಾಗಿ ವಕಾಲತ್ತು ವಹಿಸುತ್ತಾರೆ ಎನ್ನುವುದಕ್ಕೆ ಆಗಾಗ್ಗೆ ಸಾಕ್ಷ್ಯಗಳು ದೊರೆಯುತ್ತಿದೆ. ಉಗ್ರಗಾಮಿಗಳನ್ನು ‘ಮೈ ಬ್ರದರ್ಸ್’ ಎನ್ನುವುದರ ಹಿಂದಿರುವ ಕರಾಳ ಸತ್ಯದ ಅನಾವರಣವಾಗುತ್ತಲೇ ಇದೆ.

ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಕತರ್‌ನಾಕ್ ಉಗ್ರಗಾಮಿ ಶಾರಿಕ್‌ನ ಬಗ್ಗೆ ಎಲ್ಲರಿಗೂ ಗೊತ್ತು. ಈ ಪಾಪಿ ತಾನು ನಡೆಸಲು ಹೊರಟಿದ್ದ ದಾಳಿಗೂ ಮೊದಲೇ ಬಾಂಬ್ ಸ್ಫೋಟ ಕೊಂಡು ತಾನು ತೋಡಿದ ಖೆಡ್ಡಾಕ್ಕೆ ತಾನೇ ಬಿದ್ದ ಖದೀಮ. ಈ ಖದೀಮನನ್ನು ಪೊಲೀಸ್ ಇಲಾಖೆಯೇ ಉಗ್ರಗಾಮಿ ಎಂದು ಘೋಷಣೆ ಮಾಡಿದ್ದರೂ ಸಹ, ಆತನನ್ನು ಬಿಜೆಪಿ ಉಗ್ರಗಾಮಿಯ ಪಟ್ಟ ಕಟ್ಟಿ ರಾಜಕೀಯ ಮಾಡುತ್ತಿದೆ. ಅವರು ನಮ್ಮ ಸಹೋದರರು ಎನ್ನುವುದು ಕಾಂಗ್ರೆಸ್ ನಾಯಕರ ವಾದ.

ಉಗ್ರರನ್ನು ಸಹೋದರರು ಎನ್ನುವ ಕಾಂಗ್ರೆಸ್ ನಾಯಕರಿಗೆ, ಉಗ್ರರ ಮೇಲೆ ಯಾತಕ್ಕಾಗಿ ಅಷ್ಟೊಂದು ಪ್ರೇಮ? ಎನ್ನುವ ಪ್ರಶ್ನೆ ಕೆಲ ಸಮಯದಿಂದ ದೇಶಪ್ರೇಮಿಗಳನ್ನು ಕಾಡುತ್ತಿತ್ತು. ಇದಕ್ಕೆ ಉತ್ತರ ನಿನ್ನೆ ಎನ್‌ಐಎ ಬಲೆಗೆ ಬಿದ್ದ ಉಗ್ರರಲ್ಲಿ ಓರ್ವನ ಹಿನ್ನೆಲೆ ಗಮನಿಸಿದರೆ ತಿಳಿಯುತ್ತದೆ. ನಿನ್ನೆ ಬ್ರಹ್ಮಾವರದಲ್ಲಿ ಉಗ್ರರ ಬಲೆಗೆ ಬಿದ್ದ ರಿಹಾನ್ ಶೇಖ್ ಎಂಬಾತ ಅಲ್ಲಿನ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷನಾಗಿದ್ದು, ಬ್ರಹ್ಮಾವರದ ಕುಮ್ರಗೋಡು ಎಂಬಲ್ಲಿನ ಜಾಮಿಯಾ ಮಸೀದಿ ಉಪಾಧ್ಯಕ್ಷ. ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಸಹ ಹೌದು.

ಈ ಹಿಂದೆ ಮುಂಬೈ ದಾಳಿಯಲ್ಲಿ ಸೆರೆಸಿಕ್ಕ ಉಗ್ರ ಕಸಬ್‌ನನ್ನು ಕಾಂಗ್ರೆಸ್ ಸರ್ಕಾರ ರಾಜಾತಿಥ್ಯ ನೀಡಿ ಕಾರಾಗೃಹದಲ್ಲಿ ನೋಡಿಕೊಳ್ಳುತ್ತಿತ್ತು ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಭಯೋತ್ಪಾದನೆಗೆ ಬೆಂಬಲಿಸುವವರು, ಭಯೋತ್ಪಾದಕರ ಜೊತೆಗೆ ನಂಟು ಹೊಂದಿದವರು, ಆಂತರಿಕ ಭಯೋತ್ಪಾದಕರಾಗಿರುವವರನ್ನು, ಗಲಭೆ ಎಬ್ಬಿಸುವ ಅಶಾಂತಿದೂತರನ್ನೇ ಜೊತೆಗಿರಿಸಿಕೊಂಡವರಿಂದ ‘ಭಯೋತ್ಪಾದಕರು ನಮ್ಮ ಸಹೋದರರು’ ಎನ್ನುವ ಹೇಳಿಕೆ ಬಂದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ.

ಭಯೋತ್ಪಾದನೆಗೆ ಸಾಥ್ ನೀಡುವ ಕಾಂಗ್ರೆಸ್‌ಗೆ ಏನಾದರೂ ಅಧಿಕಾರ ದೊರೆತರೆ ನಮ್ಮ ದೇಶದ ಕಥೆ ಏನಾಗಬಹುದು ಎಂಬುದನ್ನೊಮ್ಮೆ ಆಲೋಚಿಸಿ.

Tags

Related Articles

Close