ಪ್ರಚಲಿತ

“ಮನ್ ಕೀ ಬಾತ್”ನಲ್ಲಿ ಮೋದಿಯವರಿಂದಲೇ ಶಬ್ಬಾಸ್ ಗಿರಿ ಗಿಟ್ಟಿಸಿಕೊಂಡ ಈ ಬಾಲಕಿಯ ಕನಸಿಗೆ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗಿದ್ದು ಹೇಗೆ ಗೊತ್ತಾ ?

ಹೌದು…. ಅಕ್ಟೋಬರ್ 2ರ ಗಾಂಧಿ ಜಯಂತಿ­ಯಂದು ದೇಶದ ಪ್ರಧಾನಿ ನರೇಂದ್ರ ಮೋದಿ­ಯವರು ಸ್ವತಃ ಕೈಯಲ್ಲಿ ಪೆÇರಕೆ ಹಿಡಿದು, ಸ್ವಚ್ಛ­ಗೊಳಿಸಿ, ಸ್ವಚ್ಛ ಭಾರತ ಅಭಿಯಾನ­ಕ್ಕೆ ಚಾಲನೆ­ ನೀಡುವ ಮೂಲಕ ದೇಶದ ಜನ­ರಲ್ಲಿ ಸ್ವಚ್ಛತೆಯ ಬಗೆಗೆ ಜಾಗೃತಿಯನ್ನು ಮೂಡಿಸಿದ್ದರು!! ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ತಾವೇನೂ ಮಾಡ­ಲಾ­ಗದೇ, ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊಡೆದಿದ್ದವು. ಅಂತಹ ಅದೆಷ್ಟೋ ಭಾರತೀಯರಲ್ಲಿ ಕರ್ನಾಟಕದ ಕೊಪ್ಪಳ ಜಿಲ್ಲೆಯ 15 ವರ್ಷದ ವಿದ್ಯಾರ್ಥಿನಿಯೂ ಒಬ್ಬಳು!!

ಆದರೆ ಈಕೆ ಮಾಡಿರುವ ಸಾಧನೆಯನ್ನು ಸ್ವತಃ ನರೇಂದ್ರ ಮೋದಿಯವರೇ ಶ್ಲಾಘಿಸಿದ್ದು, ಇದೀಗ ಈ ಬಾಲಕಿಯ ಕನಸಿಗೆ ಮತ್ತೊಂದು ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ!! ಯಾಕೆಂದರೆ ಒಂದು ಉತ್ತಮ ಕೆಲಸ ಮಾಡಲು ಕೇವಲ ಸೆಲೆಬ್ರಿಟಿಗಳೇ ಆಗಬೇಕೆಂದಿಲ್ಲ. ಒರ್ವ ಸಾಮಾನ್ಯ ಪ್ರಜೆಯಾಗಿಯೂ ಮಾಡಿ ತೋರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿರುವ ಕರ್ನಾಟಕದ ಕೊಪ್ಪಳ ಜಿಲ್ಲೆಯ 15 ವರ್ಷದ ವಿದ್ಯಾರ್ಥಿನಿ ಮಲ್ಲಮ್ಮ ತನ್ನ ಕುಟುಂಬದ ವಿರುದ್ಧವೇ ಉಪವಾಸ ಸತ್ಯಾಗ್ರಹ ನಡೆಸಿದ್ದಳು!!

ಅದು ತನಗೋಸ್ಕರ ಅಲ್ಲ, ಬಟ್ಟೆಗಾಗಿ ಅಲ್ಲ, ಮಿಠಾಯಿಗಾಗಿಯೂ ಅಲ್ಲ, ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು ಎನ್ನುವ ಹಠಕ್ಕೋಸ್ಕರ!! ಹಾಗಾಗಿ ಶೌಚಾಲಯಕ್ಕಾಗಿ ಉಪವಾಸ ಬಿದ್ದು, ಆ ಕಾರ್ಯದಲ್ಲಿ ಯಶಸ್ವಿಯಾಗಿದ್ದಳು. ಆದರೆ ಇದೀಗ ಈ ಬಾಲಕಿ ಉಪವಾಸ ಕುಳಿತು ತನ್ನ ಮನೆಗೊಂದು ಶೌಚಾಲಯ ಗಿಟ್ಟಿಸಲು ಯಶಸ್ವಿಯಾದ ನಿಜ ಜೀವನದ ಕಥೆ ಈಗ ಸಿನೆಮಾ ರೂಪದಲ್ಲಿ ಹೊರಬರುತ್ತಿದೆ ಎಂದರೆ ನಂಬ್ತೀರಾ?? ಆದರೆ ಇದನ್ನು ನಂಬಲೇ ಬೇಕು!!

ಅಷ್ಟಕ್ಕೂ ಈ ಬಾಲಕಿ ಮಾಡಿರುವ ಸಾಧನೆಯಾದರೂ ಏನು ಗೊತ್ತೇ??

ಮನೆಯಲ್ಲಿ ಶೌಚಾಲಯ ಇರಲಿಲ್ಲ. ಅಕ್ಕಂದಿರು ಗರ್ಭಿಣಿಯರಾಗಿದ್ದ ವೇಳೆ ಬಯಲಿಗೆ ತೆರಳಲು ಮುಜುಗರವಾಗುತ್ತದೆ ಎನ್ನುವ ಕಾರಣಕ್ಕಾಗಿ ಮನೆಯಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಸುವಂತೆ ಮಲ್ಲಮ್ಮ ಪೆÇೀಷಕರಿಗೆ ದುಂಬಾಲು ಬಿದ್ದಿದ್ದಳು. ಆದರೆ ಹಣ ಹಾಗೂ ಜಾಗದ ಕೊರತೆಯಿಂದ ಶೌಚಾಲಯ ಕಟ್ಟಿಸಲು ಸಾಧ್ಯವಿಲ್ಲ ಎಂದು ಆಕೆಯ ತಾಯಿಯೇ ಹೇಳಿದ್ದರು!! ಮನನೊಂದ ಬಾಲಕಿ ಮಲ್ಲಮ್ಮ ತನ್ನ ತಾಯಿಯ ವಿರುದ್ಧವೇ ಉಪವಾಸ ಸತ್ಯಾಗ್ರಹ ನಡೆಸಿದ್ದಳು. ಈ ವಿಷಯವನ್ನು 2016ರ ಜುಲಾಯಿ 14ರಂದು ಗ್ರಾಮಕ್ಕೆ ಭೇಟಿ ನೀಡಿದ್ದ ಜಿಪಂ ಸಿಇಒ ಆರ್. ರಾಮಚಂದ್ರನ್ ಅವರಿಗೆ ಗ್ರಾಮಸ್ಥರು ತಿಳಿಸಿದ್ದರು.

ಸ್ವಚ್ಛತೆಯ ಅರಿವು ಹಾಗೂ ಶೌಚಾಲಯದ ಮಹತ್ವ ತಿಳಿದಿದ್ದ ಮಲ್ಲಮ್ಮ, ಸ್ವಾಭಿಮಾನಕ್ಕಾಗಿ ಮನೆಯಲ್ಲಿ ಶೌಚಾಲಯ ಹೊಂದಲು ಬಯಸಿದ್ದು ಅಧಿಕಾರಿಯ ಅಂತಃಕರಣ ಕಲಕಿತ್ತು. ಶೌಚಾಲಯ ಕಟ್ಟಿಸಿಕೊಳ್ಳಲು 15 ಸಾವಿರ ರೂಪಾಯಿ ಪೆÇ್ರೀತ್ಸಾಹಧನ ಮಂಜೂರು ಮಾಡಿದರು. ಅಷ್ಟೇ ಅಲ್ಲದೇ, ಸ್ಥಳೀಯ ಜನಪ್ರತಿನಿಧಿಗಳೂ ಸಿಇಒ ಒತ್ತಾಸೆಗೆ ಸಹಕಾರ ನೀಡಿದರು ಮಾತ್ರವಲ್ಲದೇ ಒಂದು ವಾರದೊಳಗೆ ಶೌಚಾಲಯವೂ ನಿರ್ಮಾಣವಾಯಿತು.

ಆದರೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ತಮ್ಮ “ಮನ್ ಕಿ ಬಾತ್” ಕಾರ್ಯಕ್ರಮದ 23ನೇ ಅವತರಣಿಕೆಯಲ್ಲಿ ಈ ರೀತಿ ಪ್ರಸ್ತಾಪಿಸಿದ್ದರು!! “ಮಲ್ಲಮ್ಮ ಬಾಗಲಾಪುರ, ಗಂಗಾವತಿ ತಾಲೂಕಿನ ಢಣಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ. ಕಡುಬಡತನದ ದಲಿತ ಕುಟುಂಬದ ಬಾಲಕಿ ಈಕೆ. ಆದರೆ ಶೌಚಾಲಯಕ್ಕಾಗಿ ಕಳೆದ ಜುಲೈನಲ್ಲಿ ಸತ್ಯಾಗ್ರಹದ ಹಾದಿ ಹಿಡಿದು ದೇಶದ ಗಮನ ಸೆಳೆದಿದ್ದಳು. ಈ ವಿಷಯ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹ್ಮದ್ ಶಫಿ ಅವರಿಗೆ ತಿಳಿಯಿತು. ಒಂದು ವಾರದೊಳಗೆ ಮನೆಯಲ್ಲಿ ಶೌಚಾಲಯ ನಿರ್ಮಾಣವಾಯಿತು. ಸಮಸ್ಯೆಗಳ ಪರಿಹಾರಕ್ಕೆ ಎಲ್ಲೆಲ್ಲಿಂದಲೊ ಮಾರ್ಗ ತೆರೆದುಕೊಳ್ಳುತ್ತವೆ. ಇದೇ ಜನ ಶಕ್ತಿ” ಎಂದು ಮೋದಿ ತಮ್ಮ ಭಾಷಣದಲ್ಲಿ ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದ್ದರು.

ಇಂತಹದ್ದೇ ಒಂದು ಘಟನೆ ರಾಯಚೂರು ಜಿಲ್ಲೆಯ ಸಿರಗುಪ್ಪ ತಾಲೂಕಿನ ತಾಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಏಳನೇ ತರಗತಿ ಓದುತ್ತಿರುವ ಎಚ್.ಮಹಾಕಾಳಿ ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಿತಳಾಗಿದ್ದು, ಇದೀಗ ಜಿಲ್ಲೆಯಲ್ಲಿ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾಳೆ!! ಹೌದು… ಮಹಾಕಾಳಿ, ಮನೆ ಎದುರು ಶೌಚಾಲಯ ನಿರ್ಮಿಸಬೇಕು ಎಂದು ಪೆÇೀಷಕರಲ್ಲಿ ಒತ್ತಾಯಿಸಿದ್ದಳು. ಪೆÇೀಷಕರು ಒಪ್ಪದ ಕಾರಣ, ಎರಡು ದಿನ ಅನ್ನ, ನೀರು ಬಿಟ್ಟು ಕೊನೆಗೂ ಶೌಚಾಲಯ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಳು. ಈ ಪುಟ್ಟ ಬಾಲಕಿಯ ಮಹೋನ್ನತ ಆಶಯ, ಸ್ವಚ್ಛ ಭಾರತ ಯೋಜನೆ, ಸ್ವಚ್ಛತೆ, ಮಹಿಳೆಯರಿಗೆ ಶೌಚಾಲಯದ ಕುರಿತು ಆಕೆಗಿರುವ ಅರಿವನ್ನು ಗುರುತಿಸಿ ಆಕೆಯನ್ನು ಪ್ರಚಾರ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಹೊಸ ಮೈಲಿಗಲ್ಲು ಸ್ಥಾಪನೆಗೆ ಮುಂದಾದ “ಸಂಡಾಸ್” ಚಿತ್ರ ತಂಡ!!

ಆದರೆ ಇದೀಗ ಮಲ್ಲಮ್ಮಳ ಈ ಮಹತ್ ಕಾರ್ಯಕ್ಕೆ ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ದಾರಿಯಾಗಿದ್ದು, “ಸಂಡಾಸ್” ಎಂಬ ಚಿತ್ರ ತಂಡ!! ಹೌದು… ಇದೀಗ ಈ ಚಿತ್ರ ತಂಡ ದಾನಾಪುರದಲ್ಲಿ ನೂರು ಶೌಚಾಲಯ ಕಟ್ಟಿಸಲು ಮುಂದಾಗಿದೆ. ಅಷ್ಟೇ ಅಲ್ಲದೇ, ಈ ಚಿತ್ರದಲ್ಲಿ ಮಲ್ಲಮ್ಮನ ಪಾತ್ರಧಾರಿಯಾಗಿರುವ ಬೆಂಗಳೂರಿನ 9ನೇ ತರಗತಿ ಬಾಲಕಿ ಪ್ರತ್ಯಕ್ಷ, ಆ ಗ್ರಾಮದ ಬಾಲಕಿಯ ಕಾರ್ಯದಿಂದ ಅದೆಷ್ಟು ಪ್ರಭಾವಿತಳಾಗಿದ್ದಾಳೆಂದರೆ ತನಗೆ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಸಿಗುವ ಸುಮಾರು 1 ಲಕ್ಷ ರೂಪಾಯಿ ಸಂಭಾವನೆಯನ್ನು ಅದೇ ಗ್ರಾಮದ ಜನರಿಗೆ ಶೌಚಾಲಯ ನಿರ್ಮಿಸಲು ದೇಣಿಗೆ ನೀಡುವುದಾಗಿ ತಿಳಿಸಿದ್ದಾಳೆ.

ಗ್ರಾಮದಲ್ಲಿ ಚಿತ್ರೀಕರಣ ನಡೆದಾಗ ಗ್ರಾಮದ ಜನರ ಕಷ್ಟ ಕಾರ್ಪಣ್ಯಗಳನ್ನು ಕಣ್ಣಾರೆ ಕಂಡು ಆಕೆ ಮರುಗಿದ್ದಾಳೆ. ಆಕೆಯ ಈ ನಿರ್ಧಾರ ಚಿತ್ರ ತಂಡಕ್ಕೂ ಪ್ರೇರಣೆಯೊದಗಿಸಿದೆ. ಅಷ್ಟೇ ಅಲ್ಲದೇ, ಗ್ರಾಮದಲ್ಲಿ 100 ಶೌಚಾಲಯ ನಿರ್ಮಿಸುವ ಕಾರ್ಯವನ್ನು ತಾನು ಕೈಗೆತ್ತಿಕೊಳ್ಳುವುದಾಗಿಯೂ ಚಿತ್ರ ತಂಡ ಹೇಳಿದೆ.

ಒಟ್ಟಿನಲ್ಲಿ ದೇಶವನ್ನು ಸ್ವಚ್ಛಗೊಳಿಸಲು ದೇಶದ ಪ್ರಧಾನಿಯೇ ರೋಡಿಗೆ ಬಂದು ಪೆÇರಕೆ ಹಿಡಿದು ನಿಂತರೆ, ಜನ ಸುಮ್ಮನಿರುತ್ತಾರೆಯೇ ಹೇಳಿ!! ಜನರೂ ಕೂಡ ತಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಮುಂದಾಗಿಯೇ ಬಿಟ್ಟರು. ಆ ಮೂಲಕ ಪ್ರಧಾನಿ ಮೋದಿ ನೀಡಿದ ಕರೆಗೆ ಬೆಂಬಲವಾಗಿ ನಿಂತರು. ಆದರೆ ಇದೀಗ ಈ ಪುಟ್ಟ ಬಾಲಕಿಯರು ತಾವು ಮಾಡಿದ ಮಹತ್ ಕಾರ್ಯದಿಂದಾಗಿ ಎಲ್ಲೆಡೆ ಸುದ್ದಿಯಾಗಿದ್ದಲ್ಲದೇ ಸ್ವಚ್ಛತೆಯ ಬಗೆಗೆ ಈಡೀ ದೇಶಕ್ಕೆ ಅರಿವು ಮೂಡಿಸಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವಾಗಿದೆ!!

– ಅಲೋಖಾ

Tags

Related Articles

Close