ಪ್ರಚಲಿತ

ಪ್ರಧಾನಿ ನರೇಂದ್ರ ಮೋದಿಯಿಂದ ಮತ್ತೊಂದು ಸುರಂಗ ಮಾರ್ಗಕ್ಕೆ ಚಾಲನೆ!! ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗ ಎಂಬ ಸಂದೇಶ ಸಾರಿದ ಮೋದಿ!!

ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಗದ್ದುಗೆಯನ್ನು ಏರಿದರೋ ಅಂದಿನಿಂದ ದೇಶದ ಅಭಿವೃದ್ಧಿಗಾಗಿ ಹಾತೊರೆಯುತ್ತಿರುತ್ತಾರೆ!! ಇಷ್ಟು ವರ್ಷಗಳ ಕಾಲ ಭಾರತವನ್ನು ಕಾಂಗ್ರೆಸ್ ಆಡಳಿತ ನಡೆಸಿದರೂ ಸಹ ಭಾರತವನ್ನು ಅಭಿವೃದ್ಧಿ ಮಾಡದೆ ದೇಶವನ್ನು ಕೊಳ್ಳೆ ಹೊಡೆದದ್ದೇ ಜಾಸ್ತಿ!! ಆದರೆ ಪ್ರಧಾನಿ ನರೇಂದ್ರ ಮೋದಿಜೀಯವರು ಮಾತ್ರ ಕೇವಲ ನಾಲ್ಕು ವರ್ಷಗಳಲ್ಲಿ ಆಡಳಿತ ನಡೆಸಿ ದೇಶದ ಅಭಿವೃದ್ಧಿಯನ್ನು ಮಾಡಿದ್ದು ಒಂದಾ ಎರಡಾ?! ಇದೀಗ ಮತ್ತೊಂದು ಮಹತ್ವ ಪೂರ್ಣ ಯೋಜನೆಗೆ ಚಾಲನೆ ನೀಡಿದ್ದಾರೆ!!

ಬೌದ್ಧಗುರುವಿನ ಕನಸನ್ನು ನನಸು ಮಾಡಿದ ಮೋದಿ!!

ಒಂದು ದಿನದ ಪ್ರವಾಸಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಏಷ್ಯಾದಲ್ಲೇ ಅತ್ಯಂತ ಉದ್ದವಾದ ಜೋಜಿಲಾ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ!! ಬೌದ್ಧ ಗುರು 19ನೇ ಕುಶೋಕ್ ಬಾಕುಲ ರಿನ್‍ಪೆÇಚೆ ಅವರ 100ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿದ ಮೋದಿ ಅವರು ಜೋಜಿಲಾ ಸುರಂಗ ಮಾರ್ಗ ಲಡಾಕ್ ಪ್ರದೇಶವನ್ನು ದೇಶದ ಉಳಿದ ಭಾಗಗಳಿಗೆ ಜೋಡಿಸಲಿದೆ. ಇದು ಕುಶೋಕ್ ಅವರ ಕನಸಾಗಿತ್ತು. ಇಂದು ಅದು ನನಸಾಗುತ್ತಿದೆ. ಜತೆಗೆ ಲೇಹ್‍ನಲ್ಲಿ ಲಡಾಕ್ ಪ್ರದೇಶದ ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸುವ ವರ್ಚುಯಲ್ ಮ್ಯೂಸಿಯಮ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಜೋಜಿಲಾ ಸುರಂಗ ಮಾರ್ಗ ಯೋಜನೆಗೆ ಚಾಲನೆ ನೀಡಿದ ಮೋದಿ

ಶ್ರೀನಗರದಿಂದ ಕಾರ್ಗಿಲ್ ಮಾರ್ಗವಾಗಿ ಲೇಹ್‍ಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಜೋಜಿಲಾ ಪಾಸ್ ಇದೆ. ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿರುವ ಇಲ್ಲಿ ಚಳಿಗಾಲದಲ್ಲಿ ತೀವ್ರ ಹಿಮಪಾತವಾಗುತ್ತದೆ. ಇದರಿಂದಾಗಿ ಸುಮಾರು 5-6 ತಿಂಗಳು ಹೆದ್ದಾರಿ ಬಂದ್ ಆಗುತ್ತದೆ. ಈ ಹಿನ್ನೆಲೆಯಲ್ಲಿ ಜೋಜಿಲಾದಲ್ಲಿ ಸುರಂಗ ನಿರ್ಮಿಸಲು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ.

ಜೋಜಿಲಾ ಸುರಂಗ ಮಾರ್ಗ ಸುಮಾರು 14.15 ಕಿ.ಮೀ. ಉದ್ದ ಇರಲಿದ್ದು, ಎರಡು ಲೇನ್‍ನ ರಸ್ತೆ ಇರಲಿದೆ. ಈ ಸುರಂಗ ಮಾರ್ಗದ ನಿರ್ಮಾಣದಿಂದ ಶ್ರೀನಗರ ಮತ್ತು ಲೇಹ್ ನಡುವೆ ವರ್ಷದ ಎಲ್ಲಾ ಕಾಲದಲ್ಲೂ ಸಂಪರ್ಕ ಸಾಧ್ಯವಾಗಲಿದೆ. ಜತೆಗೆ ಜೋಜಿಲಾ ಪಾಸ್ ದಾಟಲು ಈ ಮೊದಲು ಸುಮಾರು 3.5 ಗಂಟೆ ಸಮಯ ಬೇಕಾಗುತ್ತಿತ್ತು. ಸುರಂಗ ನಿರ್ಮಾಣದ ನಂತರ ಕೇವಲ 15 ನಿಮಿಷಗಳಲ್ಲಿ ಜೋಜಿಲಾ ಪಾಸ್ ದಾಟಬಹುದಾಗಿದೆ. ಜೋಜಿಲಾ ಸುರಂಗ ನಿರ್ಮಾಣ ಯೋಜನೆಯಲ್ಲಿ ಶೇ. 90ರಷ್ಟು ಕೆಲಸವನ್ನು ಸ್ಥಳೀಯ ಯುವಕರಿಗೆ ನೀಡಲಾಗುವುದು ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ!!

ಸುರಂಗ ಮಾರ್ಗವು 14.2 ಉದ್ದ ಇರಲಿದ್ದು, ದ್ವಿಮುಖ ಸಂಚಾರ ವ್ಯವಸ್ಥೆ ಹೊಂದಿರಲಿದೆ ಎನ್ನುವ ವಿಚಾರವು ಇದೀಗ ತಿಳಿದು ಬಂದಿದೆ!! ಹಾಗಾಗಿ ಈ ಸುರಂಗ ಮಾರ್ಗ ನಿರ್ಮಾಣದಿಂದಾಗಿ ಜೋಜಿಲಾ ಪಾಸ್ ಅನ್ನು ಕೇವಲ 15 ನಿಮಿಷಗಳಲ್ಲಿ ದಾಟಬಹುದಾಗಿದೆ. ಅಷ್ಟೇ ಅಲ್ಲದೇ, ಈ ಮೊದಲು ಜೋಜಿಲಾ ಪಾಸ್ ದಾಟಲು 3 ರಿಂದ 4 ಗಂಟೆ ಸಮಯ ಬೇಕಾಗುತ್ತಿತ್ತು ಎಂದು ಕೇಂದ್ರ ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಾಗಾಗಿ ಈ ಯೋಜನೆಯಿಂದಾಗಿ ಜೋಜಿಲಾ ಪಾಸ್ ದಾಟಲು ಕೆಲವೇ ಕೆಲವು ನಿಮಿಷಗಳಲ್ಲಿ ಇನ್ನು ಮುಂದೆ ಸಾಧ್ಯವಾಗಲಿದ್ದು, ಮುಂಬರುವ ಅಡೆ ತಡೆಗಳಿಗೆ ಪೂರ್ಣವಿರಾಮ ಬೀಳಲಿರುವುದಂತೂ ಖಂಡಿತ!!

Zojila pass

ಈಗಾಗಲೇ ಭಾರತದ ಚೊಚ್ಚಲ ವಿಶ್ವದರ್ಜೆಯ ಸುರಂಗ ಎಂಬ ಖ್ಯಾತಿಗೆ ಪಾತ್ರರಾಗಿರುವ ಜಮ್ಮು ಕಾಶ್ಮೀರದ ಉಧಾಮ್‍ಪುರ್ ಜಿಲ್ಲೆಯ ಚೆನಾನಿ ಮತ್ತು ರಾಂಬನ್ ಜಿಲ್ಲೆಯ ನಶ್ರಿ ನಡುವೆ ಈ ಸುರಂಗ ಮಾರ್ಗ ನಿರ್ಮಾಣವು ಪ್ರಬಲ ಭೂಕಂಪ ವಲಯದಲ್ಲಿ ಸುರಂಗ ನಿರ್ಮಾಣ ಮಾಡಿರುವುದೇ ಒಂದು ಅದ್ಭುತ. ಭಾರತದಲ್ಲೇ ಮೊದಲ ಬಾರಿಗೆ ಈ ಸುರಂಗದಲ್ಲಿ ಅಂತರಾಷ್ಟ್ರೀಯ ದರ್ಜೆಯ ಇಂಟಿಗ್ರೇಟೆಡ್ ಟನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ಅಷ್ಟೇ ಅಲ್ಲದೇ ಇದರ ಸಹಾಯದಿಂದ ಗಾಳಿ, ಅಗ್ನಿ ನಿಯಂತ್ರಣ, ಸಿಗ್ನಲ್‍ಗಳು, ಸಂವಹನ ಹಾಗೂ ವಿದ್ಯುತ್ ವ್ಯವಸ್ಥೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. 75 ಮೀಟರ್ ಅಂತರದಲ್ಲಿ ಒಂದರಂತೆ ಒಟ್ಟು 124 ಸಿಸಿಟಿವಿಗಳನ್ನ ಅಳವಡಿಲಾಗಿದೆ. ಎಲ್ಲಾ ಹವಾಮಾನದಲ್ಲೂ ಕಣಿವೆಗೆ ಹೋಗಲು ಈ ರಸ್ತೆ ಸಮರ್ಪಕವಾಗಿರಲಿದೆ ಎನ್ನುವುದು ತಿಳಿದ ವಿಚಾರ.

ಆದರೆ, ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಮತ್ತು ಲೇಹ್ ನಡುವೆ ಸರ್ವಋತು ರಸ್ತೆ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿರುವ ನೀಡಿರುವ ಮೋದಿ ಸರ್ಕಾರವು ಈ ಸುರಂಗ ಮಾರ್ಗ ನಿರ್ಮಾಣದಿಂದಾಗಿ ಜೋಜಿಲಾ ಪಾಸ್ ಇನ್ನು ಮುಂದೆ ಕೇವಲ 15 ನಿಮಿಷಗಳಲ್ಲಿ ದಾಟ ಬಹುದಾಗಿದೆ. ಈ ಮೊದಲು ಜೋಜಿಲಾ ಪಾಸ್ ದಾಟಲು 3 ರಿಂದ 4 ಗಂಟೆ ಸಮಯ ಬೇಕಾಗಿದ್ದು, ಇನ್ನು ಮುಂದೆ ಯಾವುದೇ ಸಮಯದಲ್ಲಿ ಬೇಕಾದರೂ ಅತೀ ಬೇಗನೇ ತಲುಪಬಹುದಾಗಿದೆ.

ಇನ್ನು, ಶ್ರೀನಗರ ಮತ್ತು ಲೇಹ್ ನಡುವಿನ ಹೆದ್ದಾರಿಯು ಚಳಿಗಾಲದಲ್ಲಿ ಜೋಜಿಲಾ ಪಾಸ್ ಬಳಿ ಭಾರೀ ಹಿಮಪಾತದಿಂದಾಗಿ ವರ್ಷದ 5 ತಿಂಗಳು ಮುಚ್ಚಲ್ಪಟ್ಟಿರುತ್ತದೆ. ಇದರಿಂದಾಗಿ ಕಾರ್ಗಿಲ್ ಸೇರಿದಂತೆ ಲಡಾಕ್ ನ ಇತರ ಪ್ರದೇಶಗಳು ರಾಜಧಾನಿಯಿಂದ ಸಂಪರ್ಕ ಕಳೆದುಕೊಳ್ಳುತ್ತವೆ. ಸೇನೆ ಕಾರ್ಗಿಲ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಸೈನಿಕರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ವಾಯು ಮಾರ್ಗವನ್ನು ಮಾತ್ರ ನೆಚ್ಚಿಕೊಳ್ಳಬೇಕಿದೆ. 6809 ಕೋಟಿ ರೂಪಾಯಿಗಳ ಈ ಯೋಜನೆಯ ಈ ಸುರಂಗ ಮಾರ್ಗವು 14.2 ಉದ್ದ ಇರಲಿದ್ದು, ದ್ವಿಮುಖ ಸಂಚಾರ ವ್ಯವಸ್ಥೆ ಹೊಂದಿರಲಿದೆ. ಅಷ್ಟೇ ಅಲ್ಲದೇ, ಈ ಸುರಂಗ ಮಾರ್ಗ ನಿರ್ಮಾಣದಿಂದಾಗಿ ಜೋಜಿಲಾ ಪಾಸ್ ಅನ್ನು ಕೇವಲ 15 ನಿಮಿಷಗಳಲ್ಲಿ ದಾಟಬಹುದು ಅನ್ನೋದೇ ಸಂತಸದ ವಿಚಾರ!!

-ಪವಿತ್ರ

Tags

Related Articles

Close