ಪ್ರಚಲಿತ

ಉಗ್ರವಾದಕ್ಕೆ ಪ್ರೋತ್ಸಾಹ ನೀಡುವ ಪಾಕ್‌ಗೆ ಖಡಕ್ ಎಚ್ಚರಿಕೆ ನೀಡಿದ ಭಾರತ

ಭಯೋತ್ಪಾದಕ ಚಟುವಟಿಕೆಗಳಿಗೆ ನೆಲೆ ಕಲ್ಪಿಸಿದ ದೇಶ ಪಾಕಿಸ್ತಾನ. ಅಲ್ಲಿ ಉಗ್ರರನ್ನು ಸಾಕಿ, ಸಲಹಿ ನಂತರ ತನ್ನ ನೆರೆಯ ದೇಶಗಳಿಗೆ ಅಥವಾ ತನ್ನ ಶತ್ರು ದೇಶಗಳಿಗೆ ಛೂ ಬಿಟ್ಟು, ಅಲ್ಲಿ ಅಶಾಂತಿ‌ ಸೃಷ್ಟಿ ಮಾಡುವ ರಾಷ್ಟ್ರ ಪಾಕಿಸ್ತಾನ. ಅಂತಹ ಪಾಕಿಸ್ತಾನಕ್ಕೆ ಭಾರತ ತಕ್ಕ ತಿರುಗೇಟು ನೀಡಿದೆ.

ಪಾಕಿಸ್ತಾನ ಈ ಹಿಂದೆ ಭಾರತದ ಮೇಲೆಯೂ ಸಾಕಷ್ಟು ಬಾರಿ ಉಗ್ರ ದಾಳಿ ನಡೆಸಿದೆ. ಭಾರತ ಜನರನ್ನೇ ಬಳಕೆ ಮಾಡಿಕೊಂಡು, ಭಾರತದ ವಿರುದ್ಧವೇ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿ, ಭಾರತದ ಕೆಂಗಣ್ಣಿಗೆ ಗುರಿಯಾದ ರಾಷ್ಟ್ರ ಪಾಕಿಸ್ತಾನ. ಭಾರತ ಇದಕ್ಕೆ ಸಾವಿರಾರು ಬಾರಿ ಪ್ರತೀಕಾರ ತೆಗೆದುಕೊಂಡು, ಪಾಕಿಸ್ತಾನದ ಹುಟ್ಟಡಗಿಸಿದ್ದರೂ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿಕೊಂಡು ಬಂದಿದೆ. ಭಯೋತ್ಪಾದನೆ ಎಂದರೆ ಪಾಕಿಸ್ತಾನ ಎನ್ನುವ ಮಟ್ಟಿಗೆ ಇದರ ಉಗ್ರವಾದ ಜಗತ್ತಿನೆಲ್ಲೆಡೆ ಪಸರಿಸಿದೆ ಎಂದರೆ ಅದು ಅತಿಶಯವಲ್ಲ. ಇಂದು ಇಡೀ ವಿಶ್ವವೇ ಭಯೋತ್ಪಾದನೆಗೆ ಸಂಬಂಧಿಸಿದ ಹಾಗೆ ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತಿದೆ ಎನ್ನುವುದು ಸತ್ಯ.

ಉಗ್ರವಾದ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಹಾಗೆ ಭಾರತದ ಪರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿದ್ದು, ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆ ತಡೆಯಲು, ನಿರ್ಮೂಲನೆ ಮಾಡಲು ಬೇಕಾದ ನೆರವನ್ನು ಆ ದೇಶಕ್ಕೆ ನೀಡಲು ಭಾರತ ಸಿದ್ಧ ಎಂದು ತಿಳಿಸಿದ್ದಾರೆ.

ಉಗ್ರವಾದವನ್ನು ತಡೆಯುವಲ್ಲಿ ಪಾಕಿಸ್ತಾನ ಅಸಮರ್ಥ ಎಂದು ಭಾವಿಸಿದಲ್ಲಿ, ಅದಕ್ಕೆ ಸಹಾಯ ಮಾಡಲು ಭಾರತ ಸಹಾಯ ಸಿದ್ಧ‌. ಆದರೆ ಉಗ್ರವಾದವನ್ನು ಬಳಸಿಕೊಂಡು ಭಾರತವನ್ನು ಅಸ್ತಿರಗೊಳಿಸಲು ಪ್ರಯತ್ನ ನಡೆಸಿದಲ್ಲಿ, ಅಂತಹ ಧ್ಯೇಯವನ್ನು ಪಾಕಿಸ್ತಾನ ಹೊಂದಿದ್ದಲ್ಲಿ , ಅದರ ಪರಿಣಾಮವನ್ನು ಪಾಕಿಸ್ತಾನ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಭಾರತದ ಗಡಿ ದಾಟಿ ಬಂದು ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸುವ ಯಾವುದೇ ಉಗ್ರರನ್ನು ಭಾರತ ಸುಮ್ಮನೆ ಬಿಡುವುದಿಲ್ಲ. ಅಂತಹ ಉಗ್ರರನ್ನು ಭಾರತ ಹಿಂಬಾಲಿಸುತ್ತದೆ ಎನ್ನುವ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡಿದ ಬಳಿಕ, ಭಾರತದ ಪರ ಈ ದೃಢವಾದ ಹೇಳಿಕೆಯನ್ನು ಪಾಕ್‌ಗೆ ಭಾರತ ನೀಡಿರುವುದಾಗಿದೆ.

ಭಾರತಕ್ಕೆ ಬಂದು ಇಲ್ಲಿ ಅಶಾಂತಿ ಸೃಷ್ಟಿ ಮಾಡಿ, ಪಾಕಿಸ್ತಾನಕ್ಕೆ ಓಡಿ ಹೋಗುವ ಉಗ್ರರನ್ನು ವಧಿಸಲ ನಾವು ಅವರ ದೇಶಕ್ಕೆಯೇ ‌ನುಗ್ಗುತ್ತೇವೆ ಎಂದೂ ಅವರು ತಿಳಿಸಿದ್ದಾರೆ. 

ಒಂದು ವೇಳೆ ಭಯೋತ್ಪಾದಕರನ್ನು ಎದುರಿಸುವ ಶಕ್ತಿ ಪಾಕಿಸ್ತಾನಕ್ಕೆ ಇಲ್ಲ ಎಂದು ಭಾವಿಸಿದರೆ, ಭಾರತದ ನೆರವನ್ನು ಪಡೆಯಬಹುದು. ಭಾರತ ಈಗಾಗಲೇ ತನ್ನ ದೇಶದಲ್ಲಿ ಶತ್ರುಗಳನ್ನು ಹೊಡೆಯುವ ಶಕ್ತಿ ಹೊಂದಿದೆ. ಅಗತ್ಯ ಬಿದ್ದಲ್ಲಿ ಇನ್ನೊಂದು ರಾಷ್ಟ್ರದಲ್ಲೂ ಶತ್ರುಗಳನ್ನು ಹೊಡೆದೋಡಿಸುವ ಶಕ್ತಿ ಪ್ರದರ್ಶಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close