ಪ್ರಚಲಿತ

ಸೇನೆಯಿಂದ ಭರ್ಜರಿ ಕಾರ್ಯಾಚರಣೆ ಶುರು.! ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳಿಗಿಲ್ಲ ಉಳಿಗಾಲ..!

ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇ ಪದೇ ಗಲಭೆಗಳು ನಡೆಯುತ್ತಲೇ ಇದ್ದು, ಯಾವ ಸರ್ಕಾರ ಬಂದರೂ ಪ್ರತ್ಯೇಕವಾದಿಗಳ ಅಟ್ಟಹಾಸವನ್ನು ನಿಲ್ಲಿಸಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಪಾಕ್ ಉಗ್ರರ ಮತ್ತು ಕಾಶ್ಮೀರದ ಪ್ರತ್ಯೇಕವಾದಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಯಾವುದೇ ಕಾರಣಕ್ಕೂ ದೇಶದಲ್ಲಿ ಉಗ್ರ ಚಟುವಟಿಕೆಗಳು ನಡೆಯದಂತೆ ಸೈನಿಕರಿಗೆ ಸೂಚನೆ ನೀಡಿದ್ದ ಪ್ರಧಾನಿ ಮೋದಿ, ಸೈನಿಕರಿಗೆ ಬೇಕಾದ ಸೌಕರ್ಯಗಳನ್ನು ಕೂಡ ಒದಗಿಸಿದ್ದರು. ಆದ್ದರಿಂದಲೇ ಯಾವೊಬ್ಬ ಉಗ್ರನೂ ಜಮ್ಮು ಕಾಶ್ಮೀರದಿಂದ ಈಚೆಗೆ ಬರಲಾಗುತ್ತಿಲ್ಲ. ಆದ್ದರಿಂದ ಪ್ರತ್ಯೇಕವಾದಿಗಳ ಅಟ್ಟಹಾಸ ಹೆಚ್ಚಾಗುತ್ತಿತ್ತು. ಸೈನಿಕರ ಮೇಲೆಯೇ ಹಿಂಸೆ ಮಾಡಿ ತಮ್ಮ ಕ್ರೌರ್ಯ ಮೆರೆಯುತ್ತಿದ್ದರು. ಆದರೆ ಇದಕ್ಕೂ ಮೋದಿ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತಲೇ ಬಂದಿದೆ. ಆದರೆ ಜಮ್ಮು ಕಾಶ್ಮೀರದ ಪಿಡಿಪಿ ಸರಕಾರ ಈ ಬಗ್ಗೆ ಮೃದು ಧೋರಣೆ ತೋರುತ್ತಿದ್ದರಿಂದ ಸೈನಿಕರಿಗೆ ಕೈಕಟ್ಟಿದ ರೀತಿಯಲ್ಲಿ ಇರಬೇಕಾಗಿತ್ತು. ಆದರೆ ಇದೀಗ ಪಿಡಿಪಿಯ ಜೊತೆ ಮಾಡಿಕೊಂಡಿದ್ದ ಮೈತ್ರಿಯನ್ನು ಭಾರತೀಯ ಜನತಾ ಪಕ್ಷ ಹಿಂಪಡೆದಿದ್ದು, ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿದೆ. ಆದ್ದರಿಂದ ಇನ್ನು ಮುಂದೆ ಸೈನಿಕರು ಸ್ವಾತಂತ್ರ್ಯಗೊಂಡಿದ್ದು, ಯಾವುದೇ ಭಯೋತ್ಪಾದಕರಾಗಲಿ, ಪ್ರತ್ಯೇಕವಾದಿಗಳಾಗಲಿ ಬಾಲ ಬಿಚ್ಚುವುದಕ್ಕೆ ಅವಕಾಶವಿಲ್ಲ..!

ಶುರುವಾಯ್ತು ಭಾರತೀಯ ಸೇನೆಯ ಭರ್ಜರಿ ಭೇಟೆ.!

ರಂಜಾನ್ ತಿಂಗಳಲ್ಲಿ ಉಗ್ರ ಕಾರ್ಯಾಚರಣೆಗೆ ವಿರಾಮ ತೆಗೆದುಕೊಂಡಿದ್ದ ಭಾರತೀಯ ಸೇನೆ ಶಾಂತಿ ಕಾಪಾಡುವ ಸಲುವಾಗಿ ಯಾವುದೇ ರೀತಿಯ ಕಾರ್ಯಾಚರಣೆ ಮಾಡಿರಲಿಲ್ಲ.ಆದರೆ ಇದೀಗ ರಂಜಾನ್ ಕೂಡ ಮುಗಿದಿದ್ದು, ಸೇನೆ ಮತ್ತೆ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ. ಅದೇ ರೀತಿ ಸರಕಾರ ಕೂಡ ಮುರಿದುಬಿದ್ದಿದ್ದು ರಾಜ್ಯಪಾಲರ ಆಳ್ವಿಕೆಯಲ್ಲಿ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದ್ದು, ಇಂದಿನಿಂದಲೇ ಭೇಟೆ ಆರಂಭಿಸಿದ್ದಾರೆ. ಭಾರತೀಯ ಸೈನಿಕರ ಮೇಲೆ ಕಲ್ಲೆಸೆಯುತ್ತಿದ್ದ ಪ್ರತ್ಯೇಕವಾದಿಗಳು ಇದೀಗ ನಾಪತ್ತೆಯಾಗಿದ್ದಾರೆ. ಯಾಕೆಂದರೆ ಕಲ್ಲು ಬಿಸಾಡಲು ಹಣ ನೀಡಲೂ ಇದೀಗ ಯಾರೂ ಇಲ್ಲದಂತಾಗಿದೆ ಈ ದೇಶದ್ರೋಹಿಗಳ ಸ್ಥಿತಿ. ರಾಜ್ಯಪಾಲರ ಆಳ್ವಿಕೆ ಎಂದರೆ , ಹೆಚ್ಚು ಕಮ್ಮಿ ಅದು ಕೇಂದ್ರ ಸರಕಾರದ ಆಡಳಿತವೇ ಆಗಿರುತ್ತದೆ. ಆದ್ದರಿಂದ ಇನ್ನು ಮುಂದೆ ಯಾವುದೇ ಅಟ್ಟಹಾಸಕ್ಕೆ ಎಡೆ ಮಾಡಿಕೊಡಲು ನಮ್ಮ ಸೇನೆ ಬಿಡುವುದಿಲ್ಲ.!

Image result for indian army

ದೇಶದಲ್ಲೇ ಇದ್ದು,ದೇಶಕ್ಕೆ ದ್ರೋಹ ಬಗಿಯುವ ದೇಶದ್ರೋಹಿಗಳಿಗೆ ಇನ್ನು ಮುಂದೆ ಉಳಿಗಾಲವಿಲ್ಲ. ಯಾಕೆಂದರೆ ಸೈನಿಕರಿಗೆ ಈವರೆಗೆ ಜಮ್ಮು ಕಾಶ್ಮೀರದ ಸರಕಾರದ ಆದೇಶಕ್ಕೆ ಕಾಯಬೇಕಾಗಿತ್ತು. ಆದರೆ ಇದೀಗ ಎಲ್ಲವೂ ಕೇಂದ್ರ ಅಥವಾ ರಾಜ್ಯಪಾಲರ ಅಡಿಯಲ್ಲೇ ಇರುವುದರಿಂದ ಸೈನಿಕರ ಭೇಟೆಗೆ ಯಾರೂ ಅಡ್ಡಿಪಡಿಸುವುದಿಲ್ಲ. ಆದ್ದರಿಂದ ಕಾಶ್ಮೀರದಲ್ಲಿ ಪದೇ ಪದೇ ಗಲಭೆ ಎಬ್ಬಿಸಿ ಅದನ್ನು ಮೋದಿ ಸರಕಾರದ ಮೇಲೆ ಆರೋಪಿಸುತ್ತಿದ್ದವರು ಇನ್ನು ಮುಂದೆ ಭಾರತೀಯ ಸೇನೆಯ ಅಸಲಿ ಆಟ ನೋಡಬೇಕಾದ ಪರಿಸ್ಥಿತಿ ಬಂದೊದಗಿದೆ.!

ಸೇನೆಗೆ ಸಿಕ್ಕಿದೆ ವಿಶೇಷ ಪ್ರೋತ್ಸಾಹ..!

ಮೋದಿ ಸರಕಾರ ಆಡಳಿತಕ್ಕೆ ಬಂದ ನಂತರದಲ್ಲಿ ಸೇನೆಗೆ ಒಂದೊಂದೇ ವಿಶೇಷ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದ್ದು, ಇದೀಗ ಮತ್ತಷ್ಟು ಪ್ರೋತ್ಸಾಹ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಜಮ್ಮು ಡಿಜಿಪಿ ಎಸ್ಪಿ ವೈಡ್ ಅವರೇ ಹೇಳಿಕೊಂಡ ಪ್ರಕಾರ, ರಾಜ್ಯಪಾಲರ ಆಳ್ವಿಕೆಯಲ್ಲಿ ನಮ್ಮ ಉಗ್ರರ ವಿರುದ್ಧದ ಕಾರ್ಯಾಚರಣೆ ಇನ್ನಷ್ಟು ವೇಗವಾಗಿ ನಡೆಯುತ್ತದೆ. ರಂಜಾನ್ ತಿಂಗಳಲ್ಲಿ ಸ್ಥಗಿತವಾಗಿದ್ದ ಪೊಲೀಸ್ ಕಾರ್ಯಾಚರಣೆ ಕೂಡ ಇದೀಗ ಆರಂಭವಾಗಿದ್ದು, ಯಾವುದೇ ಕಾರಣಕ್ಕೂ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಭಾರತೀಯ ಸೇನೆ ತಮ್ಮ ಉಗ್ರರ ವಿರುದ್ಧದ ಕಾರ್ಯಾಚರಣೆ ಆರಂಭವಾಗಿದ್ದು, ಉಗ್ರರು ಮಾತ್ರವಲ್ಲದೆ ಪ್ರತ್ಯೇಕವಾದಿಗಳಿಗೂ ಇದರ ಬಿಸಿ ತಟ್ಟಲಿದೆ. ಗಡಿ ಕಾಯುವ ಯೋಧರಿಗೆ ಪಾಕ್ ಉಗ್ರರ ಮತ್ತು ಪಾಕಿಸ್ತಾನ ಸೈನಿಕರ ಉಪಟಳ ಒಂದೆಡೆಯಾದರೆ , ಇತ್ತ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಿಗೆ ಜಮ್ಮು ಕಾಶ್ಮೀರ ಪ್ರತ್ಯೇಕವಾದಿಗಳು ಭಾರೀ ತೊಂದರೆ ನೀಡುತ್ತಿದ್ದರು. ಆದ್ದರಿಂದಲೇ ಇದೀಗ ಇವೆಲ್ಲದಕ್ಕೂ ತಕ್ಕ ಉತ್ತರ ನೀಡಲು ಸೇನೆಗೆ ಒಳ್ಳೆಯ ಅವಕಾಶ ಬಂದಿದ್ದು, ಭಾರತೀಯ ಸೈನಿಕರ ಭೇಟೆ ಇನ್ನು ಮುಂದೆ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.!

–ಸಾರ್ಥಕ್

Tags

Related Articles

Close