ಪ್ರಚಲಿತ

ಭಾರತ-ನೇಪಾಳದ ಸಂಬಂಧಗಳಲ್ಲಿ ಉದಯಿಸಿದೆ ಹೊಸ “ಸೂರ್ಯ ಕಿರಣ “!! ಉತ್ತರಾಖಂಡದ ಅಂಗಳದಲ್ಲಿ ನೇಪಾಳದ ಜೊತೆ ಅತಿ ದೊಡ್ಡ ಮಿಲಿಟರಿ ವ್ಯಾಯಾಮ ಹಮ್ಮಿಕೊಂಡಿದೆ ಭಾರತ!

ಇತ್ತ ಭಾರತದ ಜನರೆಲ್ಲಾ ಪೆಟ್ರೋಲ್-ಡೀಸಲ್ ಬೆಲೆ ಏರಿಕೆಗಾಗಿ ಮೋದಿ ಅವರನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದರೆ, ಅತ್ತ ಮೋದಿ ಮಾತ್ರ ಇದ್ಯಾವುದಕ್ಕೂ ಬೇಸರಿಸದೆ ತನ್ನ ದೇಶವನ್ನು ಜಗತ್ತಿನ ಬಲಿಷ್ಟ ರಾಷ್ಟ್ರವನ್ನಾಗಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ತನ್ನ ನೆರೆಹೊರೆಯ ದೇಶದೊಡನೆ ಬಾಂಧವ್ಯ ವೃದ್ದಿಸುವ ಅಂಗವಾಗಿ ಇತ್ತೀಚೆಗೆ ನೇಪಾಳಕ್ಕೆ ಭೇಟಿ ಕೊಟ್ಟ ಮೋದಿ, ನೇಪಾಳವನ್ನು ಚೀನಾ ತೆಕ್ಕೆಯಿಂದ ತನ್ನತ್ತ ಸೆಳೆಯುವಲ್ಲಿ ಯಶಸ್ವಿ ಆಗಿದ್ದಾರೆ. ಇದೆ ಬಾಂಧವ್ಯದ ಅಂಗವಾಗಿ ಆಪರೇಶನ್ ಸೂರ್ಯಕಿರಣ್ ಉಗ್ರದಮನ ಎಂಬ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಭಾರತ ಮತ್ತು ನೇಪಾಳದ ನಡುವಿನ ಜಂಟಿ ಮಿಲಿಟರಿ ಕಾರ್ಯಾಚರಣೆಯು ಉತ್ತರಾಖಂಡ್ ನ ಪಿಥೋರಗಢ್ ನಲ್ಲಿ ನಡೆದಿದೆ. ಈ ಎರಡೂ ದೇಶಗಳ ಸೈನಿಕರು ಕೌಂಟರ್ ಬಂಡಾಯ ಮತ್ತು ಕೌಂಟರ್ ಉಗ್ರಗಾಮಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಜಂಟಿಯಾಗಿ ಅಭ್ಯಾಸ ಮಾಡಿದ್ದಾರೆ.

ಆಪರೇಶನ್ ‘ಸೂರ್ಯ ಕಿರಣ್’ ಅನುಕ್ರಮವಾಗಿ ಭಾರತ ಮತ್ತು ನೇಪಾಳದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಕಳೆದ ತಿಂಗಳು ಮೇ-30 ರಂದು ಪ್ರಾರಂಭಿಸಲಾದ ಈ ಜಂಟಿ ಸಮರಾಭ್ಯಾಸ ಇದೆ ತಿಂಗಳು ಜೂನ್ 12ಕ್ಕೆ ಮುಗಿಯಲಿದೆ. ಸೂರ್ಯ ಕಿರಣ್ ಸಮರಾಭ್ಯಾಸದಲ್ಲಿ ನೇಪಾಳದೊಂದಿಗೆ ಪಾಲ್ಗೊಳ್ಳುವಿಕೆಯ ದೃಷ್ಟಿಯಿಂದ ಇದು ಭಾರತದ ಅತಿ ದೊಡ್ಡ ಮಿಲಿಟರಿ ವ್ಯಾಯಾಮವಾಗಿದೆ ಎಂದು ಲಕ್ನೋದ ಕೇಂದ್ರ ಕಮಾಂಡ್ ಪ್ರಧಾನ ಕಚೇರಿಯು ತಿಳಿಸಿದೆ. ಪ್ರತಿ ದೇಶದಿಂದ ಮುನ್ನೂರರಂತೆ ಸೈನಿಕರು ಪಾಲ್ಗೊಂಡು ಒಟ್ಟು ಆರು ನೂರು ಸೈನಿಕರು ಈ ಅಭ್ಯಾಸದಲ್ಲಿ ಪಾಲ್ಗೊಂಡು ಇತಿಹಾಸ ರಚಿಸಿದ್ದಾರೆ. ಒಂಭತ್ತು ನೇಪಾಳಿ ಮತ್ತು ಮೂರು ಭಾರತೀಯ ಮಹಿಳಾ ಸೈನಿಕರು ಕೂಡಾ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.

ಮೋದಿ ಏನು ಮಾಡುತ್ತಿದ್ದಾರೆ, ಮೋದಿ ನಮಗೆ ಏನು ಕೊಟ್ಟಿದ್ದಾರೆ, ಮೋದಿ ಬರೀ ಭಾಷಣ ಮಾಡುತ್ತಾರೆ ಎಂದು ಆರೋಪ ಹೊರಿಸುವ ಅಂಧ ಗುಲಾಮರು ಒಮ್ಮೆ ಕಣ್ಬಿಟ್ಟು ನೋಡಿ, ಮೋದಿ ನೇಪಾಳದ ಜೊತೆ ತನ್ನ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸುತ್ತಾ ಇದ್ದಾರೆ. ಚೀನಾದ ಕಪಿಮುಷ್ಟಿಯಿಂದ ನೇಪಾಳವನ್ನು ಕಸಿದು ಕೊಂಡು ಬಂದು ಡೋಕ್ಲಾಮ್ ನಲ್ಲಿ ಗುರುಗುಟ್ಟುತ್ತಿರುವ ಡ್ರಾಗನ್ ಗೆ ತಕ್ಕ ಶಾಸ್ತಿ ಮಾಡುತ್ತಿದ್ದಾರೆ. ಪೆಟ್ರೋಲ್, ಆಲೂಗಡ್ಡೆ, ನೀರುಳ್ಳಿ ಬೆಲೆ ಏರಿತು, ಮೋದಿ ಸೋಲಿಸುತ್ತೇವೆ ಎಂದು ತೀರ್ಮಾನಿಸುವ ಮುನ್ನ ದೇಶದ ಭದ್ರತೆಯ ಬಗ್ಗೆ ಒಮ್ಮೆ ಯೋಚಿಸಿ.

ದೇಶದ ಭದ್ರತೆ ಮತ್ತು ಅಸ್ಮಿತೆಗಿಂತಲೂ ಮುಖ್ಯವೆ ನಮ್ಮ ಅವಶ್ಯಕತೆಗಳು? ದೇಶವೆ ಇಲ್ಲವಾದ ಮೇಲೆ ಅಲೂಗಡ್ಡೆ-ನೀರುಳ್ಳಿ ತಿನ್ನುತ್ತಾ, ವಾಹನಗಳಲ್ಲಿ ತಿರುಗುತ್ತಾ ಮಜಾ ಮಾಡುತ್ತಾ ಕಾಲ ಕಳೆಯಲು ನಾವುಗಳು ಬದುಕಿರುತ್ತೇವೆಯೆ? ಇಷ್ಟು ಚಿಕ್ಕ ವಿಷಯ ಕೂಡಾ ಅರ್ಥವಾಗದ ಮೂರ್ಖರು ನಮ್ಮ ಮಧ್ಯೆ ಇದ್ದಾರೆಂದರೆ ಆಶ್ಚರ್ಯ ಮತ್ತು ಖೇದವಾಗುತ್ತದೆ. ಒಬ್ಬ ಫಕೀರ ತನ್ನ ದೇಶದ ಭದ್ರತೆಗಾಗಿ ಕಾಲಿಗೆ ಚಕ್ರಕಟ್ಟಿಕೊಂಡು ಹಗಲಿರುಳೆನ್ನದೆ ಜಗತ್ತೆನ್ನೆಲ್ಲಾ ಸುತ್ತಾಡಿ ಎಲ್ಲಾ ದೇಶಗಳ ಜೊತೆ ರಕ್ಷಣಾ ಸಂಬಂಧಗಳನ್ನು ಬಲ ಪಡಿಸುತ್ತಿದ್ದರೆ, ಇಲ್ಲಿ ಮಂದಬುದ್ದಿಗಳು ಕ್ಷುಲ್ಲಕ ಕಾರಣಗಳಿಗಾಗಿ ಮೋದಿಯನ್ನು ಸೋಲಿಸಲು ತಯಾರಾಗಿದ್ದಾರೆ! ಇವರದೂ ಒಂದು ಜನ್ಮವೆ? ಹುಟ್ಟಾ ಮಂದಬುದ್ದಿಗಳಿಗೆ ಇದೆಲ್ಲ ಎಲ್ಲಿ ಅರ್ಥವಾಗುತ್ತದೆ?

-ಶಾರ್ವರಿ

Tags

Related Articles

Close