ಪ್ರಚಲಿತ

ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ?: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ಹಿಂದೂ ಯುವಕರ ಮೇಲೆ ಅಶಾಂತಿ ದೂತರು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದ ಹಾಗೆ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಇಂತಹ ಘಟನೆಗಳು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿರುವ ತುಷ್ಟೀಕರಣ ನೀತಿಯಿಂದಲೇ ನಡೆಯುತ್ತಿವೆ. ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ಅಶಾಂತಿದೂತರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳದೇ ಹೋದಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸಹ ಬಿಜೆಪಿ ನೀಡಿದೆ.

ಸಿ ಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಮೂಲಭೂತವಾದಿ ದುಷ್ಟರಿಗೆ ಕರ್ನಾಟಕವನ್ನು ಧಾರೆ ಎರೆದು ಕೊಟ್ಟ ಹಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳು ಭಯದಿಂದಲೇ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಟಿಪ್ಪು ‌ವಿನ ಸಿದ್ದಾಂತ ಅನುಸರಿಸುತ್ತಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿ ಏರಿದ ಬಳಿಕ ಇಸ್ಲಾಮಿಕ್ ಮೂಲಭೂತವಾದಿ ಶಕ್ತಿಗಳು, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಶಕ್ತಿಗಳು ಹಿಂದೂಗಳ ಮೇಲೆ ನಿರಂತರ ಹಲ್ಲೆ ನಡೆಸುತ್ತಾ ಬಂದಿದ್ದಾರೆ. ಹಿಂದೂ ಧರ್ಮ, ದೇವರು, ಜನರ ಅವಹೇಳನ, ಧಮ್ಕಿ, ಭಯೋತ್ಪಾದಕ ಚಟುವಟಿಕೆಗಳು, ಬಾಂಬ್ ಹಾಕುವ ಘಟನೆಗಳು ಸಹ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಕಾಂಗ್ರೆಸ್ ದುರಾಡಳಿತದ ವಿರುದ್ಧ ಬಿಜೆಪಿ ನಾಯಕರು ಕಿಡಿ ಕಾರಿರುವುದಾಗಿದೆ.

ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನ ಲಕ್ಷ್ಮಣ ಸವದಿ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ನಾನು ಭಾರತ ಮಾತೆಗೆ ಜೈ ಎನ್ನಬಹುದೇ ಖರ್ಗೆ ಸಾಹೇಬರೇ ಎಂದು ವಿನಮ್ರವಾಗಿ ಕೇಳಿದ್ದಾರೆ. ಖರ್ಗೆ ಅದಕ್ಕೆ ಅನುಮತಿ ನೀಡಿದ್ದಾರೆ. ಡಿ ಕೆ ಸುರೇಶ್ ಅವರು ರಾಮ ದೇವರಲ್ಲ. ನಾವು ನಮ್ಮ ಮನೆಯಲ್ಲಿ ಅವನ ಫೋಟೋ ಇರಿಸಿಲ್ಲ ಎಂದು ಹೇಳುತ್ತಾರೆ. ಸುರೇಶ್ ಅವರೇ, ನೀವು ಕಲ್ಲು ಬಂಡೆ ವ್ಯಾಪಾರಿಗಳಲ್ಲವೇ. ಮನೆಯಲ್ಲಿ ಕಲ್ಲು ಬಂಡೆ ಇಟ್ಟುಕೊಳ್ಳಿ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.

ಕರ್ನಾಟಕದಲ್ಲಿ ಮುಸ್ಲಿಂ ಭಯೋತ್ಪಾದನೆ ಹೆಚ್ಚಾಗಿದೆ. ರಾಮ ಮಂದಿರಕ್ಕೆ ತೆರಳುವ ಹಿಂದೂಗಳ ಮೇಲೆ ಕೇಸು ಬೀಳುತ್ತದೆ. ಡಿ ಕೆ ಸುರೇಶ್ ದೇಶ ಇಬ್ಭಾಗ ಮಾಡಬೇಕು ಎಂದು ಹೇಳುತ್ತಾರೆ. ಇಂತಹ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ ಹೇಳಿಕೆಗಳೇ ಮುಸ್ಲಿಂ ಪುಂಡರಿಗೆ ಹುರುಪು ನೀಡುತ್ತಿರುವುದು. ರಾಮೇಶ್ವರಂ ಕೆಫೆ ಬಾಂಬ್ ಹೊಗೆ ಏಳುವ ಸಮಯದಲ್ಲಿ ಕಾಂಗ್ರೆಸ್ ಇದನ್ನು ಹೊಟೇಲ್ ವೈಷಮ್ಯ ಎಂದು ಹೇಳಿತ್ತು ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದೆ.

ಇಂತಹ ಘಟನೆಗಳನ್ನು ಕಂಡಾಗ ನಾವು ಎಲ್ಲಿ ಜೀವಿಸುತ್ತಿದ್ದೇವೆ ಎನ್ನುವ ಸಂದೇಹ ಮೂಡುತ್ತದೆ. ಅಲ್ಲಾ ಎಂದು ಮಾತ್ರ ಹೇಳಬೇಕು. ಜೈ ಶ್ರೀರಾಮ್ ಎನ್ನಬಾರದು ಎಂದರೆ ಏನಿದು? ನಾವೇನು ಪಾಕಿಸ್ತಾನದಲ್ಲಿ ಇದ್ದೇವೆಯೇ? ಇಂತಹ ಕೆಟ್ಟ ವಾತಾವರಣ ನಿರ್ಮಾಣದ ಹಿಂದೆ ಕಾಂಗ್ರೆಸ್ ಪ್ರಚೋದನೆ ಇದೆ. ನಾವು ಏನು ಘೋಷಣೆ ಕೂಗಬೇಕು?, ಯಾರನ್ನು ಪೂಜೆ ಮಾಡಬೇಕು ಎನ್ನುವುದನ್ನು ಬೇರೆಯವರಿಂದ ಹೇಳುವ ದುಸ್ಥಿತಿ ಬಂದಿದೆಯೇ?. ರಾಜ್ಯದಲ್ಲಿ ಬಹುಸಂಖ್ಯಾತ ಭಾವನೆಗಳಿಗೆ ಸ್ಪಂದಿಸದ ಸರ್ಕಾರದ ಅಗತ್ಯತೆ ಇಲ್ಲ. ಈ ಸರ್ಕಾರ ವಜಾ ಆಗಬೇಕು ಎಂದು ಬಿಜೆಪಿ ಹೇಳಿದೆ.

Tags

Related Articles

Close