ಪ್ರಚಲಿತ

ರಷ್ಯಾ ಹಿಂದೂ ರಾಷ್ಟ್ರವಾಗಿತ್ತು ಎಂದು ನಿಮಗೆ ತಿಳಿದಿದೆಯಾ? ಇಲ್ಲಿವೆ ಇದಕ್ಕೆ ಪುರಾವೆಗಳು!!

ಹಿಂದೂ ಸಾಮ್ರಾಜ್ಯ ಒಂದು ಕಾಲದಲ್ಲಿ ಎಷ್ಟು ವಿಸ್ತಾರವಾಗಿತ್ತೆಂದು ತಿಳಿದರೆ ಖಂಡಿತಾ ಅಚ್ಚರಿಯಾಗಬಲ್ಲುದು. ಹಿಂದೂ ಧರ್ಮ ಕೇವಲ ಭಾರತದಲ್ಲೇ ಇತ್ತು ಎನ್ನುವವರಿಗೆ ರಷ್ಯಾ ದೇಶದಲ್ಲಿ ಸಿಕ್ಕ ಕುರುಹುಗಳು ಪ್ರಾಚೀನ ಕಾಲದಲ್ಲಿದ್ದ ಹಿಂದೂ ಧರ್ಮದ ವಿಸ್ತಾರವನ್ನು ತಿಳಿಸುತ್ತದೆ.

ಅಖಂಡ ಭಾರತವನ್ನು ಕಲ್ಪಿಸಿದರೆ ಚೀನಾ, ಪಾಕಿಸ್ತಾನ, ಅಫಘಾನಿಸ್ತಾನ, ಕೊರಿಯಾ, ರಷ್ಯಾ, ಜಪಾನ್ ಮುಂತಾದ ರಾಷ್ಟ್ರಗಳು ಭಾರತಕ್ಕೆ ಸೇರಿತ್ತು. ಇದಕ್ಕೆ ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳು, ಸಿಗುತ್ತಿರುವ ಪುರಾವೆಗಳು ಪುಷ್ಠಿ ನೀಡುತ್ತದೆ. ಇದರ ನಡುವೆ ಉದಿಸಿದ ಬೌದ್ಧ ಧರ್ಮ ಹಿಂದೂ ಧರ್ಮದ ಬೇರುಗಳನ್ನು ಜತನದಲ್ಲಿ ಉಳಿಸಿಕೊಂಡರೂ ಆಮೇಲೆ ಉದಿಸಿದ ಕ್ರೈಸ್ತ ಹಾಗೂ ಇಸ್ಲಾಂ ಮತಗಳು ಹಿಂದೂ ಧರ್ಮದ ಬೇರುಗಳನ್ನು ಅಲುಗಾಡಿಸತೊಡಗಿತು.

ಒಂದು ಕಾಲದಲ್ಲಿ ಇಡೀ ಪ್ರಪಂಚವೇ ಹಿಂದೂವಾಗಿದ್ದರೂ ಆಮೇಲೆ ಬಂದ ಕ್ರೈಸ್ತ ಹಾಗೂ ಇಸ್ಲಾಂ ಮತಗಳ ವಿಸ್ರಣವಾದ ಸಾಮ್ರಾಜ್ಯಶಾಹಿತನ , ಕೊಳ್ಳೆ ಹೊಡೆಯುವುದು, ದೇವಸ್ಥಾನಗಳ ಲೂಟಿ ನರಮೇಧ , ಮತಾಂತರ ಇವೆಲ್ಲಾ ಪ್ರಾಚೀನ ಕಾಲದಿಂದ ಇದ್ದ ಧರ್ಮನಿಷ್ಠೆ ಹಿಂದೂ ಧರ್ಮದ ಮೇಲೆ ತೀವ್ರ ಹೊಡೆತ ಬಿದ್ದಿತು… ಪರಿಣಾಮವಾಗಿ ಹಿಂದೂ ಧರ್ಮವಿದ್ದ ಸ್ಥಳದಲ್ಲಿ ಕ್ರೈಸ್ತ, ಇಸ್ಲಾಂ ಮತಗಳು ಬೆಳೆದು ಪ್ರಾಚೀನ ಕಾಲದಲ್ಲಿದ್ದ ಹಿಂದೂ ಧರ್ಮ ಅವನತಿ ಹೊಂದಿತು… ದುರದೃಷ್ಟವೆಂದರೆ ಈ ಹಿಂದೂ ಧರ್ಮ ಭಾರತ, ನೇಪಾಳದಲ್ಲಿದ್ದರೆ ಉಳಿದ ನೆರೆರಾಷ್ಟ್ರಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ಸನಾತನ ಧರ್ಮ ಎಂದರೆ ಅದಕ್ಕೆ ಅದರದ್ದೇ ಆದಂತಹ ಕೆಲ ಆಚಾರ ವಿಚಾರಗಳಿವೆ!! ಹಿಂದೂ ಎನ್ನುವುದು ಇತರ ಧರ್ಮಗಳಾದ ಮುಸ್ಲಿಮ್, ಬೌದ್ಧ , ಜೈನ ಇತ್ಯಾದಿಗಳಂತೆ ಯಾವುದೇ ವ್ಯಕ್ತಿಯ ಅಥವಾ ಯಾವುದೇ ಧಾರ್ಮಿಕ ಸಂಪ್ರದಾಯಗಳನ್ನು ಆಧರಿಸಿದ ಹೆಸರಾಗಿರದೆ ಒಂದು ಸಮುದಾಯದ ಹೆಸರಾಗಿದೆ..

ಹಿಂದೂ ಧರ್ಮವು ಭಾರತ ಮತ್ತು ನೇಪಾಳದಿಂದ ಹಿಡಿದು ಇಂದು ರಷ್ಯಾ, ಚೀನಾ, ಶ್ರೀಲಂಕಾ, ಇಂಡೋನೇಷಿಯಾ ಇನ್ನೂ ಹಲವಾರು ರಾಷ್ಟ್ರಗಳಲ್ಲಿ ಹರಡಿದೆ..ಅದರಲ್ಲಿಯೂ ರಷ್ಯಾದಲ್ಲಿ ಹಿಂದೂ ಧರ್ಮದ ಭಾಗವಾದ ಬೌದ್ಧ ಧರ್ಮವು ಎಲ್ಲೆಡೆ ನೆಲೆಸಿದೆ.. ರಷ್ಯಾದ 2010 ರ ಧರ್ಮವನ್ನು ಆಧರಿಸಿದ ಜನಗಣತಿಯ ಪ್ರಕಾರ ಅಲ್ಲಿನ ಹಿಂದೂಗಳ ಸಂಖ್ಯೆ 140,000 ರಷ್ಯಾದಲ್ಲಿ ಧಾರ್ಮಿಕ, ಆಧ್ಯಾತ್ಮಿಕತೆಯ ಮೂಲಕ ಸನಾತನ ಧರ್ಮ ವೇಗವಾಗಿ ಪಸರಿಸುತ್ತಿದೆ. ಇಲ್ಲಿನ ಹಿಂದೂ ಧರ್ಮದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವಂತಹ ಕೆಲವು ಅಂಶಗಳು ಈ ಕೆಳಗಿನಂತೆ ಇವೆ..

1) ಪ್ರಾಚೀನ ವಿಷ್ಣು ದೇವತೆಯ ವಿಗ್ರಹ:

ರಷ್ಯಾದ ವೋಲ್ಗಾ ಡಿವಿಷನ್ ಗೆ ಸೇರಿದ ಒಂದು ಹಳೆಯ ಹಳ್ಳಿಯಲ್ಲಿ ಪ್ರಾಚೀನವಾದ ವಿಷ್ಣು ವಿಗ್ರಹ ದೊರೆತಿದ್ದು ಈ ಹಳ್ಳಿಯ ಹೆಸರು ಸ್ತರಯ ಮೈನಾ ಎಂದಾಗಿದೆ.. ಮತ್ತು ಇದು 7 ಮತ್ತು 10 ನೆ ಶತಮಾನದ ವೈದಿಕ ಪರಂಪರೆಯ ಅಸ್ತಿತ್ವವನ್ನು ದೃಢಪಡಿಸುತ್ತದೆ.. ಹಾಗೂ ಋಗ್ವೇದ ದಲ್ಲಿ ಈ ಸ್ತರಯ ಮೈನಾ ಗ್ರಾಮದ ಉಲ್ಲೇಖವಿದ್ದು ಇಲ್ಲಿ ಋಷಿಗಳು ವಾಸವಿದ್ದರು, ಈ ಜಾಗ 45 ನದಿಗಳ ಉಗಮ ಭೂಮಿಯಾಗಿತ್ತು ಎಂದು ಉಲ್ಲೇಖಿಸಲಾಗಿದೆ..

2) ಹಿಂದೂ ಧಾರ್ಮಿಕ ಸಂಸ್ಥೆಗಳು:

ರಷ್ಯಾದಲ್ಲಿ ನಾವು ಅನೇಕ ಧಾರ್ಮಿಕ ಸಂಘಟನೆಗಳನ್ನು ಕಾಣಬಹುದು.. ಬ್ರಹ್ಮಕುಮಾರಿ, ರಾಮಕೃಷ್ಣ ಮಿಷನ್, ಆನಂದ ಮಾರ್ಗ ಇನ್ನು ಮುಂತಾದವು ರಷ್ಯಾದಲ್ಲಿ ನೆಲೆಯೂರಿವೆ.. ಅಲ್ಲದೆ ಇಸ್ಕಾನ್ ಮತ್ತು ಬ್ರಹ್ಮಕುಮಾರಿ ಸಂಸ್ಥೆಗಳು ರಷ್ಯಾ ಸಮಾಜದ ಭಾಗವೇ ಆಗಿ ಹೋಗಿವೆ.. ಮತ್ತು ಈ ಧಾರ್ಮಿಕ ಸಂಸ್ಥೆಗಳು ಹಿಂದೂ ಧರ್ಮವನ್ನು ರಷ್ಯಾದಲ್ಲಿ ಮತ್ತೆ ಚಿಗುರೊಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ?

3) ಸಿಟಿ ಆಫ್ ಆರ್ಯನ್ ಅಥವ ಆರ್ಯರ ನಗರ:

ರಷ್ಯಾದಲ್ಲಿ ಸರಿಸುಮಾರು 4000 ವರ್ಷಗಳಷ್ಟು ಹಳೆಯ ದಾದ ಆರ್ಯನ್ ಸಿಟಿ ಅನಾವರಣಗೊಂಡಿದ್ದು .. ಇಲ್ಲಿ ಕೆಲವು ಪ್ರಾಚೀನ ವಸ್ತುಗಳು ದೊರೆತಿವೆ.. ದಕ್ಷಿಣ ಸೈಬೀರಿಯ ಹಾಗು ಗಡಿ ಭಾಗದ ಕಜಕಿಸ್ಥಾನ ದಲ್ಲಿ ಕೆಲವು ಕಟ್ಟಡಗಳ ಮೇಲೆ ಸುರುಳಿಯಾಕಾರದ ಚಿನ್ಹೆಗಳಿದ್ದು ಈ ಕಟ್ಟಡಗಳು ಪಾಶ್ಚಿಮಾತ್ಯ ನಾಗರೀಕತೆಯ ಆರಂಭಕ್ಕೂ ಮುಂಚೆ ನಿರ್ಮಿಸಿದವುಗಳಾಗಿವೆ..

ಯುರೋಪಿಯನ್ ಸ್ಥಳೀಯ ಭಾಷೆಗಳ ಮೂಲ ಭಾಷೆ ಆರ್ಯನ್ ಭಾಷೆ ಯಾಗಿದ್ದು ಇಲ್ಲಿನ ಒಬ್ಬ ಇತಿಹಾಸಕಾರ ಬೆಟ್ಟಿನ್ ಹ್ಯೂಗ್ ಹೇಳುವಂತೆ, ಯುರೋಪ್ ನ ಎಲ್ಲ ಭಾಷೆಗಳಲ್ಲಿ ಈ ಆರ್ಯನ್ ಭಾಷೆ ಅಥವ ಪೆÇ್ರಟೋ-ಇಂಡೋ-ಯುರೋಪಿಯನ್ ಭಾಷೆ ಮಿಳಿತವಾಗಿದೆ..

4) ಪ್ರಾಚೀನ ಹಸ್ತ ಕೃತಿಗಳು:

ರಷ್ಯಾದ ಕೆಲವು ಜಾಗಗಳಲ್ಲಿ ಪ್ರಾಚೀನ ಕಲಾಕೃತಿಗಳು ದೊರೆತಿದ್ದು ಅವುಗಳಲ್ಲಿ ರಾಜರಥ, ಶೃಂಗಾರ ಸಾಧನಗಳ ಉಪಕರಣಗಳು, ಮತ್ತು ಮಡಿಕೆಯ ಚೂರುಗಳು ದೊರೆತಿವೆ.. ಮತ್ತು ಈ ಕಲಾಕೃತಿಗಳ ಮೇಲೆ ಸ್ವಸ್ತಿಕ್ ಚಿಹ್ನೆ ಇದೆ.. ಪ್ರಾಚೀನ ಕಾಲದಲ್ಲಿ ಸ್ವಸ್ತಿಕ್ ಚಿಹ್ನೆಯು ಸೂರ್ಯ ಮತ್ತು ಶಾಶ್ವತ ಜೀವನದ ಸಂಕೇತವಾಗಿತ್ತು.. ಕಾಲ ಕ್ರಮೇಣ ನಾಜಿಗಳು ಈ ಚಿಹ್ನೆಯನ್ನು ತಮ್ಮಲ್ಲಿನ ಆರ್ಯ ಜನಾಂಗದ ಚಿಹ್ನೆಯಾಗಿ ತೆಗೆದುಕೊಂಡರು..

5) ಇಂದು ರಷ್ಯಾದಲ್ಲಿ ಹಿಂದೂ ಧರ್ಮ:

ರಷ್ಯಾದ ಫೆಡರಲ್ ರಿಜಿಸ್ಟ್ರೇಷನ್ ಆಫ್ ಸರ್ವಿಸ್ ನ ಪ್ರಕಾರ ಡಿಸೆಂಬರ್ 2005 ರಲ್ಲಿ 84 ಶ್ರೀ ಕೃಷ್ಣ ಕಮಿಟಿಗಳು ನೊಂದಾಯಿಸಲ್ಪಟ್ಟಿವೆ.. ಇಂದು ಅನೇಕ ರಷ್ಯನ್ನರಲ್ಲಿ ಹಿಂದೂ ಧರ್ಮದ ಹೋಲಿಕೆಯುಳ್ಳ ಸಾಲ್ವಿಕ್ ವೇದಿಸಂ ಅನ್ನು ಅಳವಡಿಸಿಕೊಂಡಿದ್ದಾರೆ.. ಎಲ್ಲದಕ್ಕಿಂತ ಹೆಚ್ಚಿನದಾಗಿ ಇಲ್ಲಿನ ಮಾಸ್ಕೋ ದ ಇಸ್ಕಾನ್ ಮಂದಿರ ತನ್ನ ವಾಸ್ತು ಶಿಲ್ಪ ದಿಂದ ಜಗತ್ತನ್ನೇ ನಿಬ್ಬೆರಗುಗೊಳಿಸುತ್ತದೆ.. ಬ್ರಹ್ಮ ಕುಮಾರಿ ಸಂಸ್ಥೆಯು 20 ದಶಕಗಳಿಂದ ರಷ್ಯಾದಲ್ಲಿ ಸ್ಥಿರಗೊಂಡಿದೆ.. ಹೀಗೆ ಇಂದು ನಾವು ರಷ್ಯಾದಲ್ಲಿ ಸನಾತನ ಧರ್ಮವು ಬೆಳೆಯುತ್ತಿರುವುದನ್ನ ಕಾಣಬಹುದು…

ಕೇವಲ ಭಾರತ ಮಾತ್ರವಲ್ಲದೆ ಇಡೀ ರಾಷ್ಟ್ರವೇ ಹಿಂದೂ ರಾಷ್ಟ್ರವಾಗಿತ್ತು ಎಂಬುವುದಕ್ಕೆ ಇದಕ್ಕಿಂತ ಬೇರೆ ಪುರಾವೆಗಳು ಬೇಕಾ?!!

ಪವಿತ್ರ

Tags

Related Articles

Close