ಪ್ರಚಲಿತ

ಜನಾರ್ದನ ರೆಡ್ಡಿ ಈ ಓರ್ವ ವ್ಯಕ್ತಿಗಾಗಿ ತನ್ನ ಪಕ್ಕದಲ್ಲಿದ್ದ ಕುರ್ಚಿಯನ್ನೇ ಕಾಯ್ದಿರಿಸಿದ್ದರು..! ಸರಳತೆಯ ಸರದಾರರು ಇವರು…

ಗಣಿ ಧನಿ, ಬಳ್ಳಾರಿ ದಿಗ್ಗಜ ಜನಾರ್ದನ ರೆಡ್ಡಿ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ರಾಜ್ಯ ರಾಜಕೀಯದಲ್ಲಿ ಜನಾರ್ದನ ರೆಡ್ಡಿ ಅವರ ಮಹತ್ವ ಹೊಸದೇನಲ್ಲ. ಕೇವಲ ರಾಜಕೀಯದಲ್ಲಿ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಯೂ ರೆಡ್ಡಿಯವರದ್ದು ಎತ್ತಿದ ಕೈ. ಪ್ರತಿ ವರ್ಷ ನಡೆಸುವ ಸಾಮೂಹಿಕ ವಿವಾಹದಲ್ಲಿ ಮದುವೆಯಾದ ಅದೆಷ್ಟೋ ಬಡ ಕುಟುಂಬ ಇಂದಿಗೂ ಸುಖ ಜೀವನ ನಡೆಸುತ್ತಿದೆ. ಜನಾರ್ದನ ರೆಡ್ಡಿ ಎಂದರೆ ಶ್ರೀಮಂತ ಎಂಬುದು ಉತ್ಪ್ರೇಕ್ಷೆ ಅಲ್ಲ. ಆದರೆ ಅವರ ಹೃದಯ ಕೂಡಾ ಅಷ್ಟೇ ಶ್ರೀಮಂತಿಕೆಯನ್ನು ಹೊಂದಿರುವುದು ಮಾತ್ರ ಸುಳ್ಳಲ್ಲ.

ಅವರು ಅಗರ್ಭ ಶ್ರೀಮಂತರು ಹಾಗೂ ರಾಜಕೀಯ ನಾಯಕರೂ ಮತ್ತು ಪ್ರಭಾವಿ ವ್ಯಕ್ತಿಯಾಗಿದ್ದ ಕಾರಣ ಅವರ ಭೇಟಿಗೆ ಅದೆಷ್ಟೋ ಜನರು ಛಾತಕ ಪಕ್ಷಿಗಳಂತೆ ಕಾಯುತ್ತಾ ಕುಳಿತಿರುತ್ತಾರೆ. ಕೆಲವರಿಗೆ ಮಾತ್ರ ಅವರ ಭೇಟಿಗೆ ಅವಕಾಶ ಸಿಗುತ್ತದೆ.

ಸಾಮೂಹಿಕ ವಿವಾಹದಂದು ಪ್ರದರ್ಶವಾಯಿತು ಸಾಮಾನ್ಯ ಮುಖ!

ಅದೊಂದು ದಿನ ಪ್ರತಿ ವರ್ಷದಂತೆ ನಡೆದ ಸಾಮಾಹಿಕ ವಿವಾಹದ ಕಾರ್ಯಕ್ರಮ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಶ್ರೀ ಜನಾರ್ದನ ರೆಡ್ಡಿ ಯವರ ಬಲ ಬದಿಯಲ್ಲಿ ಅವರ ಪ್ರಾಣ ಸ್ನೇಹಿತ, ಬಳ್ಳಾರಿ ಸಂಸದ ಶ್ರೀರಾಮುಲು ಕುಳಿತಿದ್ದರು. ಆದರೆ ಅವರ ಎಡ ಭಾಗದ ಕುರ್ಚಿಯೊಂದು ಯಾರೋ ಓರ್ವ ಪ್ರಮುಖ ವ್ಯಕ್ತಿಗೆ ಕಾಯತ್ತಾ ಇರುತ್ತಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅದೆಷ್ಟೋ ನಾಯಕರು ಆ ಕುರ್ಚಿಯನ್ನು ತುಂಬಿಕೊಳ್ಳುವ ಉತ್ಸುಕದಲ್ಲಿದ್ದರು. ಆದರೆ ರೆಡ್ಡಿಯವರ ಪಕ್ಕದ ಕುರ್ಚಿ ಆ ಓರ್ವ ವ್ಯಕ್ತಿಯನ್ನೇ ಹಂಬಲಿಸುತ್ತಿತ್ತು. ಅಷ್ಟರಲ್ಲೇ ಆ ವ್ಯಕ್ತಿ ಬಂದೇ ಬಿಟ್ಟಿದ್ದರು.

ಮಹೇಶ್ ವಿಕ್ರಂ ಹೆಗ್ಡೆಗೆ ಕಾಯುತ್ತಿತ್ತು ಆ ಕುರ್ಚಿ!

ಹೌದು. ಎಲ್ಲರಿಗೂ ಆ ಕುರ್ಚಿಯ ಮೇಲೆಯೇ ಕಣ್ಣಿತ್ತು. ಯಾರಿಗೋಸ್ಕರ ಈ ಕುರ್ಚಿ ಕಾಯುತ್ತಿದೆ ಎಂಬ ಕುತೂಹಲಕ್ಕೆ ಅದಾಗಲೇ ತೆರೆ ಬಿದ್ದಿತ್ತು. ಕೆಲವೇ ಕ್ಷಣಗಳಲ್ಲಿ ಓರ್ವ ಯುವ ನಾಯಕ ಆ ಕುರ್ಚಿಯನ್ನು ತುಂಬಿಕೊಳ್ಳುತ್ತಾನೆ. ಬಳ್ಳಾರಿ ಒಡೆಯ ಜನಾರ್ದನ ರೆಡ್ಡಿ ಆ ಯುವಕನನ್ನು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಪಕ್ಕದಲ್ಲಿರುವ ಕುರ್ಚಿಯಲ್ಲಿ ಕುಳ್ಳಿರಿಸುತ್ತಾರೆ. ಆ ಪುಣ್ಯಾತ್ಮ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಅವರು “ಮಹೇಶ್ ವಿಕ್ರಂ ಹೆಗ್ಡೆ ಮೂಡುಬಿದಿರೆ” ಎಂದು.

ಎಸ್… ಮಹೇಶ್ ವಿಕ್ರಂ ಹೆಗ್ಡೆ ಅಂದರೆ ಜನಾರ್ದನ ರೆಡ್ಡಿಯವರಿಗೆ ತುಂಬಾನೆ ಅಚ್ಚುಮೆಚ್ಚು. ಕಟ್ಟರ್ ಬಲಪಂಥೀಯ ವಾದಿ ಹಾಗೂ ಹಿಂದೂ ಧರ್ಮದ ಪರಿಪಾಲಕನಾಗಿರುವ ಮಹೇಶ್ ವಿಕ್ರಂ ಹೆಗ್ಡೆಯವರ ವ್ಯಕ್ತಿತ್ವ ರೆಡ್ಡಿ ಯವರಿಗೆ ತುಂಬಾನೆ ಫಿದಾ ಆಗಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಕೇಂದ್ರ ಸಚಿವ ಶಶಿ ತರೂರ್, ಸೋನಿಯಾ ಗಾಂಧಿ ಸಹಿತ ಅನೇಕ ಭ್ರಷ್ಟರ ಮುಖವನ್ನು ತನ್ನ ಮಾಧ್ಯಮದ ಮೂಲಕ ಅನಾವರಣಗೊಳಿಸಿದ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಜನಾರ್ದನ ರೆಡ್ಡಿ ತುಂಬಾನೆ ಮೆಚ್ಚಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಬಳ್ಳಾರಿ ಯಲ್ಲಿ ನಡೆದಿದ್ದ ಆ ಮಹಾ ಸಾಮೂಹಿಕ ವಿವಾಹಕ್ಕೆ ವಿಶೇಷ ಅಥಿತಿಯಾಗಿ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಆಮಂತ್ರಿಸಿದ್ದರು.

ಭಿಕ್ಷಾಂದೇಹಿಯಲ್ಲಿ ಮಹಾಪಾಲು ನೀಡಿದ್ದ ರೆಡ್ಡಿ…!

ಸುಮಾರು ೮ತಿಂಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಒಡೆತನದ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಕೊಲ್ಲೂರು ದೇವಾಲಯದಿಂದ ಬರುತ್ತಿದ್ದ ಅನ್ನವನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದಾಗ “ಭಿಕ್ಷಾಂದೇಹಿ” ಎಂಬ ಆಂದೋಲನವೊಂದು ಜನ್ಮ ತಾಳಿತ್ತು. ಈ ಆಂದೋಲನದ ರೂವಾರಿ ಪೋಸ್ಟ್ ಕಾರ್ಡ್ ಮಾಧ್ಯಮದ ಮಾಲೀಕರಾದ ಶ್ರೀ ಮಹೇಶ್ ವಿಕ್ರಂ ಹೆಗ್ಡೆ. ತನ್ನ ಮಾಲೀಕತ್ವದ ಪೋಸ್ಟ್ ಕಾರ್ಡ್ ಮಾಧ್ಯಮದಲ್ಲಿ ಭಿಕ್ಷಾಂದೇಹಿ ಆಂದೋಲನವನ್ನು ಹಮ್ಮಿಕೊಂಡು ಧನ ಸಂಪನ್ಮೂಲವನ್ನು ಕ್ರೋಡೀಕರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಪ್ರಸ್ತುತ ಇರುವ ರಾಜ್ಯ ಸರ್ಕಾರ ಬದಲಾಗುವವರೆಗೆ (ಅಂದರೆ ೮ತಿಂಗಳು) ಸಾಕಾಗುವಷ್ಟು ೫೦೦೦ಕೆಜಿ ಅಕ್ಕಿ ಹಾಗೂ ೪೮ ಲಕ್ಷ ಹಣಗಳನ್ನು ಕ್ರೋಡೀಕರಿಸಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ನೀಡಿದ್ದರು. ಇದು ದೇಶದಲ್ಲೇ ಒಂದು ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗಿತ್ತು.

ಇದು ಸಾಮಾಜಿಕ ಜಾಲತಾಣದಲ್ಲಿ ನಡೆದ ಕ್ರಾಂತಿಯಾದರೆ ಇದಕ್ಕೆ ಮತ್ತಷ್ಟು ಶಕ್ತಿ ನೀಡಿದ್ದು ಮಾಜಿ ಸಚಿವ ಗಣಿ ಧನಿ ಜನಾರ್ದನ ರೆಡ್ಡಿ. ಮಹೇಶ್ ವಿಕ್ರಂ ಹೆಗ್ಡೆಯವರು ಜನಾರ್ದನ ರೆಡ್ಡಿಯವರ ಬಳಿ ಮಾಡಿದ ಒಂದೇ ಒಂದು ವಿನಂತಿ ಗೆ ರೆಡ್ಡಿ ಯವರು ನಾನಿದ್ದೇನೆ ಎಂಬ ಅಭಯ ಹಸ್ತ ವನ್ನು ನೀಡಿದ್ದರು. ಮಾತ್ರವಲ್ಲದೆ ಬರೋಬ್ಬರಿ ೨೫ಲಕ್ಷ ರೂಪಾಯಿ ಬಹುದೊಡ್ಡ ಮೊತ್ತವನ್ನು ಮಹೇಶ್ ವಿಕ್ರಂ ಹೆಗ್ಡೆಯವರ ಭಿಕ್ಷಾಂದೇಹಿ ಅಭಿಯಾನಕ್ಕೆ ಧೇಣಿಗೆಯಾಗಿ ನೀಡಿದ್ದರು. ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮಕ್ಕಳು ಇಂದು ಊಟ ಮಾಡುತ್ತಿದ್ದರೆ ಅದಕ್ಕೆ ಮಹೇಶ್ ವಿಕ್ರಂ ಹೆಗ್ಡೆ ಹಾಗೂ ಜನಾರ್ದನ ರೆಡ್ಡಿಯವರ ಕೊಡುಗೆ ಅನನ್ಯ.

https://m.facebook.com/story.php?story_fbid=2036657716582254&id=2011412312440128

https://m.facebook.com/story.php?story_fbid=2036267723287920&id=2011412312440128

ಮಹೇಶ್ ವಿಕ್ರಂ ಹೆಗ್ಡೆಯವರ ಈ ಚಟುವಟಿಕೆಗಳನ್ನು ನೋಡಿದ್ದಂತಹಾ ಜನಾರ್ದನ ರೆಡ್ಡಿ ಮಹೇಶ್ ವಿಕ್ರಂ ಹೆಗ್ಡೆಯವರಿಗೆ ತುಂಬಾ ಹತ್ತಿರವಾಗಿದ್ದರು. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಾಹಸವನ್ನು ಮಾಡಬಹುದೇ ಎಂಬ ಅಚ್ಚರಿಗೂ ಕಾರಣವಾಗಿದ್ದರು. ಆದರೆ ಮಹೇಶ್ ವಿಕ್ರಂ ಹೆಗ್ಡೆಯವರ ಈ ಕೆಲಸ ಭಾರೀ ಪ್ರಸಂಶೆಗೆ ಕಾರಣವಾಗಿತ್ತು. ಈ ಕಾರಣಕ್ಕಾಗಿಯೇ ಮಹೇಶ್ ವಿಕ್ರಂ ಹೆಗ್ಡೆ ಯವರನ್ನು ಕಂಡರೆ ಜನಾರ್ದನ ರೆಡ್ಡಿ ಯವರಿಗೆ ತುಂಬಾ ಇಷ್ಟ.

ಹೀಗಾಗಿಯೇ ಜನಾರ್ದನ ರೆಡ್ಡಿಯವರು ಅವರು ನಡೆಸಿ ಕೊಡುವ ಅತೀದೊಡ್ಡ ಕಾರ್ಯಕ್ರಮಕ್ಕೆ ಮಹೇಶ್ ವಿಕ್ರಂ ಹೆಗ್ಡೆಯವರನ್ನು ವಿಶೇಷ ಅಥಿತಿ ಯಾಗಿ ಆಮಂತ್ರಿಸಿ ತನ್ನ ಪಕ್ಕದಲ್ಲೇ ಆಸನದ ವ್ಯವಸ್ಥೆ ಮಾಡಿ ಗೌರವ ನೀಡಿದ್ದರು. ಇದು ಮಹೇಶ್ ವಿಕ್ರಂ ಹೆಗ್ಡೆಯವರ ಉದಾರತೆ ಹಾಗೂ ಜನಾರ್ದನ ರೆಡ್ಡಿ ಯವರ ಸರಳತೆಗೆ ಹಿಡಿದ ಕೈ ಗನ್ನಡಿಯಾಗಿತ್ತು…

ಸುನಿಲ್ ಪಣಪಿಲ.

Tags

Related Articles

Close