ಪ್ರಚಲಿತ

ನಿತ್ಯ ನಿರಂತರ ನಡೆಯುತ್ತಿರುವ ಲವ್ ಜಿಹಾದ್‌ಗೆ ಕಡಿವಾಣ ಹಾಕಲು ಬಿಜೆಪಿಗೆ ಧಮ್ ಇಲ್ವೇ?

ದಕ್ಷಿಣ ಕನ್ನಡ‌ದಲ್ಲಿ ಜಿಹಾದಿಗಳ ಅಟ್ಟಹಾಸ

ಲವ್ ಜಿಹಾದ್ ಕರಾಳತೆಗೆ ಇಡೀ ದೇಶದ ಕೆಲ ಹಿಂದೂ ಕುಟುಂಬ‌ಗಳು ಸಂತ್ರಸ್ತರಾಗಿರುವ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಿದ್ದರೂ, ಇನ್ನೂ ಕೆಲವು ಹೆಣ್ಣು ಮಕ್ಕಳು ಜಿಹಾದಿಗಳೇ ಬೇಕು ಎಂದು, ಅವರ ಸಾಂಗತ್ಯಕ್ಕೆ ಬೀಳುತ್ತಿದ್ದಾರೆ ಎನ್ನುವುದು ಅವರ ಬದುಕಿಗೆ ಮತ್ತು ಹಿಂದೂ ಧರ್ಮದ ಮೇಲೆ ಕಪ್ಪು ಚುಕ್ಕೆ‌ಯೂ ಹೌದು, ಅಪಾಯದ ಸಂಕೇತವೂ ಹೌದು.

ಶ್ರದ್ಧಾ ತನ್ನ ಪ್ರಿಯಕರ ಅಫ್ತಾಬ್‌ನಿಂದ ತುಂಡು ತುಂಡಾಗಿ, ಗುರುತೂ ಸಿಗದಂತೆ ಇನ್ನಿಲ್ಲವಾದದ್ದು ಗೊತ್ತು. ಹಾಗೆಯೇ ಅಷ್ಟು ದೂರದ ಘಟನೆಯ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು, ನಮ್ಮ ಸಮೀಪದ ಮಂಗಳೂರಿನಲ್ಲಿ ಮುಸ್ಲಿಂ ಯುವಕರಿಬ್ಬರ ಜೊತೆಗೆ ಹಿಂದೂ ಹುಡುಗಿಯರು ಮಧ್ಯರಾತ್ರಿ ಜಾಲಿ ವಾಕ್‌ ಮಾಡುತ್ತಿದ್ದದ್ದು ಸಹ ಮಾಧ್ಯಮ‌ದಲ್ಲಿ ಸುದ್ದಿಯಾಗಿದೆ. ಒಂದು ಕಡೆಯಲ್ಲಿ ಜಿಹಾದಿಗಳ ಕಪಿಮುಷ್ಟಿಗೆ ಸಿಲುಕಿ, ಆಮೇಲೆ ತಮ್ಮ ತಪ್ಪು ನಿರ್ಧಾರದಿಂದ ತಮ್ಮ ಬದುಕೇ ಹಾಳಾಗಿದ್ದಕ್ಕೆ ಪರಿತಪಿಸುವ ಅದೆಷ್ಟೋ ಹೆಣ್ಣು ಮಕ್ಕಳ ನರಕ ಯಾತನೆಯ ಬಗ್ಗೆ ತಿಳಿದೂ ಸಹ, ನಮ್ಮ ಇನ್ನು ಕೆಲವು ಹೆಣ್ಣುಮಕ್ಕಳು ಪಾಪಿ ಜಿಹಾದಿಗಳ ಹಿಂದೆ ಹೋಗುತ್ತಿರುವುದು ದುರಂತವಲ್ಲದೆ ಮತ್ತಿನ್ನೇನು.

ನಿನ್ನೆ ನಡೆದ ಘಟನೆ ಸಹ ಅಂತದ್ದೇ. ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ನಿನ್ನೆ ರಾತ್ರಿ ಹೊರಟ ಖಾಸಗಿ ಸ್ಲೀಪರ್ ಬಸ್ಸೊಂದರಲ್ಲಿ ಹಿಂದೂ ಹುಡುಗಿ ಮತ್ತು ಮುಸ್ಲಿಂ ಯುವಕನೊಬ್ಬ ಜೊತೆಯಾಗಿ ಪ್ರಯಾಣ ನಡೆಸುತ್ತಿದ್ದರು. ಈ ಬಗ್ಗೆ ವಿಚಾರ ತಿಳಿದ ಹಿಂದೂ ಸಂಘಟನೆಗಳು ಮುಸ್ಲಿಂ ಯುವಕ ಮಹಮ್ಮದ್ ರಾಯಿಫನೊಂದಿಗಿನ ಆಕೆಯ ಪ್ರಯಾಣವನ್ನು ತಡೆಯಲು ಪಂಪ್ವೆಲ್ ಬಳಿ ಪ್ರಯತ್ನ ನಡೆಸಿದರೂ ವಿಫಲರಾಗಿ, ಆ ಬಳಿಕ ಕಲ್ಲಡ್ಕ ಎಂಬಲ್ಲಿ‌ನ ಹಿಂದೂ ಸಂಘಟನೆಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲಿನ ಹಿಂದೂ ಸಂಘಟನೆ‌ಯ ಕಾರ್ಯಕರ್ತರು ಕಲ್ಲಡ್ಕ‌ದ ದಾಸಕೊಡಿ ಎಂಬಲ್ಲಿ ಬಸ್ ಅನ್ನು ತಡೆದು ನಿಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಈ ಜೋಡಿ ಹಕ್ಕಿಗಳ ಜೊತೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ್ದಾರೆ. ಹಾಗೆಯೇ ಈ ಇಬ್ಬರೂ ಜೊತೆಯಾಗಿ ಪ್ರಯಾಣ ಮಾಡುವುದಕ್ಕೂ ಅಡ್ಡಿಪಡಿಸಿದ್ದಾರೆ. ಆ ನಂತರ ಬಂಟ್ವಾಳ‌ದ ಪೊಲೀಸ್ ಠಾಣೆಗೆ ಈ ವಿಷಯವನ್ನು ತಲುಪಿಸಿದ್ದಾರೆ. ಪ್ರಕರಣ ಠಾಣೆ‌ಯ ಮೆಟ್ಟಿಲೇರಿದೆ.

ಈ ಯುವತಿ ಮಂಗಳೂರು ಮೂಲದವಳಾಗಿದ್ದು, ಯುವಕ ಬಟ್ಕಳದವನು ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಈ ಇಡೀ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಜಿಹಾದಿ ಶಕ್ತಿ’ ಗಳ ಆಟ ಬಲು ಜೋರಾಗಿದೆ ಎನ್ನುವುದಕ್ಕೆ ಸಾಕ್ಷಿ. ಹಿಂದೂ ಯುವತಿಯರೇ, ನಿಮ್ಮ ಒಂದು ತಪ್ಪು ನಿರ್ಧಾರ ನಿಮ್ಮ ಹೆಸರು, ಬದುಕನ್ನು ಕೆಡಿಸುವ ಜೊತೆಗೆ, ನಿಮ್ಮ ಹೆತ್ತವರು, ಹಿಂದೂ ಧರ್ಮ‌ಕ್ಕೂ ಕೆಟ್ಟ ಹೆಸರು ತರುತ್ತಿದೆ. ಎಚ್ಚರಾಗಿ.

Tags

Related Articles

Close