ಪ್ರಚಲಿತ

ಜ್ಞಾನವಾಪಿ ಮಸೀದಿಯನ್ನು ಮಂದಿರದ ಮೇಲೆಯೇ ನಿರ್ಮಿಸಲಾಗಿದೆ: ಎಎಸ್ಐ ವರದಿಯಲ್ಲೇನಿದೆ ಗೊತ್ತಾ?

ಹಲವು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಬಹುಸಂಖ್ಯಾತ ಸನಾತನ ಹಿಂದೂ ಧರ್ಮೀಯರ ಮೇಲೆ ಅಲ್ಪಸಂಖ್ಯಾತ ಸಮುದಾಯದವರಿಂದ ಹಾನಿಯಾಗುತ್ತಿತ್ತು. ನಮ್ಮ ಹಿಂದೂ ಧರ್ಮದ ಮಂದಿರ, ಕಟ್ಟಡಗಳನ್ನು ಕೆಡಹಿ‌ ಅದರ ಮೇಲೆ ಅಲ್ಪಸಂಖ್ಯಾತ ಅವಿವೇಕಿಗಳು ತಮ್ಮ ಧರ್ಮದ ಕಟ್ಟಡಗಳನ್ನು ಕಟ್ಟುತ್ತಿದ್ದರು ಎಂಬ ವಾದಕ್ಕೆ ನಮ್ಮ ದೇಶದಲ್ಲಿ ಅಸಂಖ್ಯಾತ ಸಾಕ್ಷಿಗಳು ಸಿಗುತ್ತಿವೆ.

ಇಂತಹ ಪ್ರಮುಖ ಸಾಕ್ಷ್ಯಗಳಲ್ಲಿ ಒಂದು ಪ್ರಸ್ತುತ ಹಿಂದೂಗಳ‌ ಸ್ವಂತವಾಗಿರುವ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ. ಈ ಹಿಂದೆ ಅಂದರೆ ಸುಮಾರು ಐನೂರು ವರ್ಷಗಳಿಗೂ ಹಿಂದೆ ಈ ರಾಮ ಜನ್ಮ ಭೂಮಿಯಲ್ಲಿದ್ದ ಹಿಂದೂ ಮಂದಿರವನ್ನು ಕೆಡಹಿ ಮುಸಲ್ಮಾನರು ಇಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಿದ್ದರು. ಹಲವಾರು ವರ್ಷಗಳ ಕಾಯುವಿಕೆಯ ಬಳಿಕ ಎಲ್ಲಾ ರೀತಿಯ ದಾಖಲೆಗಳನ್ನು ಆಧರಿಸಿ ಇದನ್ನು ಮತ್ತೆ ಹಿಂದೂಗಳಿಗೆ ನೀಡುವ ಕಾರ್ಯವನ್ನು ಸುಪ್ರೀಂ ಕೋರ್ಟ್ ಮಾಡಿತ್ತು. ಇದರ ಫಲವಾಗಿ ಮಸೀದಿಯಡಿಯಲ್ಲಿ ತನಗೆಂದು ನ್ಯಾಯ ಸಿಗುವುದೋ ಎಂದು ಕಾಯುತ್ತಿದ್ದ ಶ್ರೀ ರಾಮ ಕೊನೆಗೂ ಭವ್ಯ ಮಂದಿರದಲ್ಲಿ ಕುಳಿತು ನಗುವಂತಾಗಿದೆ. ಆ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಯಾಗಿದೆ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದಾಗಿದೆ.

ಪ್ರಸ್ತುತ ಹಿಂದೂಗಳಿಗೆ ಸಂತಸ ನೀಡುವ ಮತ್ತೊಂದು ಸುದ್ದಿಯನ್ನು ಭಾರತೀಯ ಪುರಾತತ್ವ ಇಲಾಖೆ ಬಹಿರಂಗಗೊಳಿಸಿದೆ.

ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಂಕೀರ್ಣದಲ್ಲಿ ದೊಡ್ಡ ಮಟ್ಟದ ಹಿಂದೂ ಮಂದಿರದ ರಚನೆ ಇತ್ತು ಎಂದು ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ್‌ನ ಸರ್ವೇಯಲ್ಲಿ ಈ ಅಂಶ ಬಯಲಾಗಿರುವ ಬಗ್ಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹಿಂದೂಗಳ ಪರ ವಾದ ಮಂಡನೆ ಮಾಡುತ್ತಿರುವ ವಕೀಲ ವಿಷ್ಣು ಶಂಕರ್ ಜೈನ್ ಅವರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಎಸ್‌ಐ ಸಮೀಕ್ಷೆಯಲ್ಲಿ ಈಗಿರುವುದಕ್ಕಿಂತ ದೊಡ್ಡ ಮಟ್ಟದ ಹಿಂದೂ ದೇವಾಲಯದ ರಚನೆ ಇದ್ದದ್ದು ತಿಳಿದು ಬಂದಿರುವುದಾಗಿ ಹೇಳಿದ್ದಾರೆ. ಆ ಕಟ್ಟಡದ ಮೇಲೆಯೇ ಮಸೀದಿ ನಿರ್ಮಾಣ ಮಾಡಲಾಗಿದೆ. ಮಸೀದಿಯ ಪಶ್ಚಿಮ ಗೋಡೆ ಹಿಂದೂ ದೇವಾಲಯದ್ದಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮಂದಿರವನ್ನು ಹದಿನೇಳನೇ ಶತಮಾನದಲ್ಲಿ ನಾಶ ಮಾಡಲಾಗಿದೆ. ಇದರಲ್ಲಿ ಮೂವತ್ತೇಳು ಹಿಂದೂ ದೇವಾಲಯಗಳ ಶಾಸನಗಳು ಪತ್ತೆಯಾಗಿದೆ. ಇವು ಕನ್ನಡ, ತೆಲುಗು ಮತ್ತು ದೇವನಾಗರಿ ಲಿಪಿಯಲ್ಲಿ ಇರುವುದಾಗಿಯೂ ಅವರು ಹೇಳಿದ್ದಾರೆ.

ಈ ಸಮೀಕ್ಷೆಯ ವರದಿಯು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ವರದಿಯನ್ನೂ ಒಳಗೊಂಡಿದ್ದು, ಇದರಲ್ಲಿ ಈ ಮಸೀದಿಯನ್ನು ಬೇರೆ ಕಟ್ಟಡದ ಮೇಲೆ ನಿರ್ಮಾಣ ಮಾಡಿರುವುದು ಖಚಿತವಾಗಿ ತಿಳಿದು ಬಂದಿದೆ ಎಂದಿದ್ದಾರೆ. ಹಾಗೆಯೇ ಮಸೀದಿಯ ಕಂಬಗಳು ಹಿಂದೂ ದೇವಾಲಯಗಳ ಕೆತ್ತನೆಯನ್ನೇ ಹೋಲುತ್ತಿದ್ದು, ಕೆಲವು ಕಡೆಗಳಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ವರದಿ ಹೇಳಿದೆ.

ಕಾಶೀ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಸಂಕೀರ್ಣದ ಸಮೀಕ್ಷೆ ವರದಿಯನ್ನು ಹಿಂದೂ ಮತ್ತು ಮುಸಲ್ಮಾನರ ಎರಡೂ ಕಡೆಯವರಿಗೂ ನೀಡಬೇಕು ಎಂದು ಕೋರ್ಟ್ ತಿಳಿಸಿತ್ತು.

Tags

Related Articles

Close