ಪ್ರಚಲಿತ

ಸಿಡಿದೆದ್ದ ಬಿಜೆಪಿ ಕಾರ್ಯಕರ್ತರಿಂದ ರಷ್ಯಾ ದೊರೆಯ ಪ್ರತಿಮೆ ಧ್ವಂಸ! ತ್ರಿಪುರದ 25 ವರ್ಷಗಳ ನಂತರ ಅಳಿಯಿತು ಕಳಂಕ!!

ತ್ರಿಪುರಾದಲ್ಲಿ ಅಚ್ಚರಿಯ ರೀತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ರಷ್ಯಾದ ಕಮ್ಯುನಿಸ್ಟ್ ನಾಯಕ  ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.!!

ರಾಜ್ಯದ ಬೆಲೋನಿಯಾ ಎಂಬ ಪ್ರದೇಶದಲ್ಲಿ ಲೆನಿನ್ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಪುತ್ಥಳಿಯನ್ನು ಸ್ಥಳೀಯರು ಧ್ವಂಸ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದ್ದು, ಧ್ವಂಸ ಮಾಡುತ್ತಿರುವವರು ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದ್ದಾರೆ.!!

ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಿರುವುದರ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪ್ರತಿಕ್ರಿಯೆ ನೀಡಿದ್ದು, ತ್ರಿಪುರಾದಲ್ಲಿದ್ದ ರಷ್ಯಾ ಕಮ್ಯುನಿಸ್ಟ್ ನಾಯಕ ವಾಡ್ಲಿಯರ್ ಲೆನಿನ್ ಪ್ರತಿಮೆ ಧ್ವಂಸ ಮಾಡಿರುವುದು ರಾಜ್ಯದ ಜನತೆ ಬಯಸುತ್ತಿರುವ ಬದಲಾವಣೆಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ. ತ್ರಿಪುರಾದಲ್ಲಿನ ಬಿಜೆಪಿ ಗೆಲುವು “ರಾಜ್ಯದಲ್ಲಿ ಕಾರ್ಲ್ ಮಾಕ್ಸ್   ಲೆನಿನ್‍ನಂತಹವರು ಆದರ್ಶಗಳಿಗೆ ಅಂಕುಶ ಹಾಕುವುದಕ್ಕೆ ಮುನ್ನುಡಿ ಎಂದು ಬಿಜೆಪಿ ಹೇಳಿತ್ತು!!

ವರದಿಯ ಪ್ರಕಾರ ಕಳೆದ 5 ವರ್ಷಗಳಿಂದ ಆ ಪ್ರತಿಮೆ ಅಲ್ಲಿ ಸ್ಥಾಪನೆಗೊಂಡಿದ್ದು ಅಧಿಕಾರ ವಹಿಸಿಕೊಂಡು 48 ಘಂಟೆಯೊಳಗೆ ಭಾರತ್ ಮಾತಾಕೀ ಜೈ ಎಂಬ ಘೋಷಣೆ ವಾಕ್ಯದೊಂದಿಗೆ ಲೆನಿನ್ ಸ್ಮಾರಕವನ್ನು ಕೆಡವಿದ್ದಾರೆ.!! ಲೆನಿನ್ ಪ್ರತಿಮೆಯನ್ನು ಕೆಡವಿದ್ದಕ್ಕೆ ಅದನ್ನು ವಿರೋಧಿಸಿ ಸಿಪಿಎಂ ಕಮ್ಯುನಿಸಂ ಫೋಬಿಯಾ ಎಂದು ಕರೆಯುತ್ತಾರೆ.. ಪ್ರತಿಮೆ ಕುಸಿಯುತ್ತದೆ.. ದೇಹದಿಂದ ಮೊದಲು ತಲೆ ನೆಲಕ್ಕುರುಳುತ್ತದೆ … ಪ್ರತಿಮೆ ಕೆಳಗೆ ಬೀಳುತ್ತಿದ್ದಂತೆಯೇ ಲೆನಿನ್ ತಲೆಯನ್ನು ಬೇರ್ಪಡಿಸಿ , ಫುಟ್ ಬಾಲ್ ಆಡಿದ್ದಾರೆ ಎಂಬ ಮಾಹಿತಿಯನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ

3 ಲಕ್ಷ ವೆಚ್ಚದಲ್ಲಿ 11.5 ಅಡಿ ಎತ್ತರದ ಲೆನಿನ್ ಪ್ರತಿಮೆಯನ್ನು ಫೈಬರ್ ಗ್ಲಾಸ್ ನಿಂದ ಸ್ಥಳೀಯ ಕಲಾವಿದರೊಬ್ಬರಿಂದ ಕೆತ್ತಿಸಲಾಗಿತ್ತು. 2013 ರಲ್ಲಿ ಸಿಪಿಐಎಂ ಗೆದ್ದ ನಂತರ 21 ನೇ ಶತಮಾನದಲ್ಲಿ ಪಕ್ಷ ಅಧಿಕಾರದಲ್ಲಿ ಮುಂದುವರೆದ ಸ್ಮರಣಾರ್ಥವಾಗಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು.

ಜನರ ಆಕ್ರೋಶವೇ ಲೆನಿನ್ ಪ್ರತಿಮೆ ನೆಲಕ್ಕುರುಳಲು ಕಾರಣ ಎಂದು ಬಿಜೆಪಿ ದಕ್ಷಿಣ ಕಾರ್ಯದರ್ಶಿ ರಾಜುನಾಥ್ ಎಂಬುವವರು ಹೇಳಿದ್ದಾರೆ. ಹಲವು ವರ್ಷಗಳಿಂದ ಈ ಪ್ರತಿಮೆ ಸ್ಥಾಪನೆ ವಿಷಯದಲ್ಲಿ ವಿರೋಧವಿತ್ತು. ಪುರಸಭೆ ವತಿಯಿಂದ ಇದನ್ನು ನಿರ್ಮಿಸಲಾಗಿತ್ತು, ಅಂದರೆ ತೆರಿಗೆದಾರರ ಹಣವನ್ನು ಇದಕ್ಕೆ ಖರ್ಚು ಮಾಡಲಾಗಿತ್ತು.

ಲೆನಿನ್ ಪ್ರತಿಮೆಗೆ ತೆರಿಗೆದಾರರ ಹಣವನ್ನೇಕೆ ಖರ್ಚು ಮಾಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಸಿಪಿಐಎಂ ನ ಮಾಜಿ ಮುಖ್ಯಮಂತ್ರಿಯ ಪ್ರತಿಮೆಯಾಗಿದ್ದರೆ ಯಾರೂ ಮುಟ್ಟುತ್ತಿರಲಿಲ್ಲ, ಆದರೆ ಈ ವಿದೇಶಿಗ ಲೆನಿನ್ ನಿಂದ ನಮಗೇನು ಪ್ರಯೋಜನ ಎಂದು ಅವರು ಹೇಳಿದ್ದಾರೆ.

ಲೆನಿನ್ ಒಬ್ಬ ರಷ್ಯಾದ ಕ್ರಾಂತಿಕಾರ!! ಭಾರತಕ್ಕೂ ರಷ್ಯಾದ ಲೆನಿನ್ ಯಾವುದೇ ಸಂಬಂಧವಿರುವುದಿಲ್ಲ.. ಹೀಗಾಗಿ ನಾವು ಯಾತಕ್ಕಾಗಿ ಲೆನಿನ್ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸ ಬೇಕು ಎಂಬುವುದು ಎಲ್ಲರ ಪ್ರಶ್ನೆ!!

ಪವಿತ್ರ

Tags

Related Articles

Close