ಪ್ರಚಲಿತ

ಭಾರತದ ಸಮಗ್ರತೆ, ಸಾರ್ವಭೌಮತೆ ರಕ್ಷಣೆಗೆ ಪ್ರಧಾನಿ ಮೋದಿ ಕ್ರಮ ಕೈಗೊಳ್ಳುತ್ತಾರೆ: ಮನಮೋಹನ್ ಸಿಂಗ್

ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿ ಅವರ ಕಾರ್ಯ ವೈಖರಿಯಲ್ಲಿ, ಬಿಜೆಪಿಯಲ್ಲಿ ಏನಾದರೂ ಹುಳುಕುಗಳನ್ನು ಹುಡುಕುವುದು, ಇಲ್ಲವೇ ತಾವೇ ಸ್ವತಃ ಏನಾದರೂ ಅವಾಂತರಗಳನ್ನು ಮಾಡಿ ಬಿಜೆಪಿ, ಪ್ರಧಾನಿ ಅವರ ಮೇಲೆ ಗೂಬೆ ಕೂರಿಸುವುದು ಇತ್ಯಾದಿಗಳಲ್ಲಿ ನಿಸ್ಸೀಮರು. ಕಾಂಗ್ರೆಸಿಗರು ತಾವು ಯಾವುದೇ ಉತ್ತಮ ಕೆಲಸಗಳನ್ನು ಮಾಡದೇ ಹೋದರೂ, ಬೇರೆಯವರು ಮಾಡುವ ಸತ್ಕಾರ್ಯಗಳಿಗೆ ಅಡ್ಡಗಾಲು ಹಾಕುವುದರಲ್ಲಿಯೂ ಎತ್ತಿದ ಕೈ.

ಆದರೂ, ಕಾಂಗ್ರೆಸ್‌ನ ಕೆಲವೊಂದು ನಾಯಕರಿಗೆ ಪ್ರಧಾನಿ ಮೋದಿ ಅವರು ಈ ದೇಶಕ್ಕಾಗಿ ಏನೋ ಒಳ್ಳೆಯ ಕೆಲಸ ಮಾಡುತ್ತಿರುತ್ತಾರೆ. ನಕಲಿ ಗಾಂಧಿ ಕುಟುಂಬವನ್ನು ಬೆಂಬಲಿಸುವ ಸಲುವಾಗಿ ಪ್ರಧಾನಿಗಳು ದೇಶದ ಹಿತಾಸಕ್ತಿಗಾಗಿ ಕೈಗೊಳ್ಳುತ್ತಿರುವ ಸತ್ಕಾರ್ಯಗಳನ್ನು ಒಪ್ಪಿಕೊಳ್ಳದೆ ಇರಬಾರದು ಎನ್ನುವುದು ಜ್ಞಾನೋದಯವಾಗಿ ಬಿಡುತ್ತದೆ. ಕಾಂಗ್ರೆಸ್ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರ ವಿಚಾರದಲ್ಲಿ ಮೌನ ಮುರಿದು ಹೇಳಿಕೆ ನೀಡಿದ್ದು, ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ನಡೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಸ್ತುತ ಭಾರತವು ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ತನ್ನ ಸಾರ್ವಭೌಮ, ಆರ್ಥಿಕ ಹಿತಾಸಕ್ತಿಗಳಿಗೆ ಸರಿಯಾದ ಆದ್ಯತೆ ನೀಡುವಲ್ಲಿ ಸೂಕ್ತವಾದ ನೀತಿಯನ್ನು ಅನುಸರಿಸಿದೆ, ಶಾಂತಿಗಾಗಿ ಮನವಿ ಮಾಡಿದೆ ಎನ್ನುವ ಮೂಲಕ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ನಡೆ ಗೆ ಬಹುಪರಾಕ್ ಹೇಳಿದ್ದಾರೆ.

ಜಿ20 ಶೃಂಗಸಭೆಗೂ ‌ಮುನ್ನ ಖಾಸಗಿ ಮಾಧ್ಯಮವೊಂದಕ್ಕೆ ಮನಮೋಹನ್ ಸಿಂಗ್ ಅವರು ಸಂದರ್ಶನ ಕೊಟ್ಟಿದ್ದು, ದೇಶೀಯ ರಾಜಕಾರಣದ ಸಂದರ್ಭದಲ್ಲಿ ವಿದೇಶಾಂಗ ನೀತಿಯನ್ನು ಬಹಳ ಎಚ್ಚರಿಕೆಯಿಂದ ಬಳಕೆ ಮಾಡುವಂತೆಯೂ ಸೂಚಿಸಿದ್ದಾರೆ. ದೇಶೀಯ ರಾಜಕಾರಣಕ್ಕೆ ವಿದೇಶಾಂಗ ನೀತಿ ಬಹಳ ಪ್ರಮುಖವಾದದ್ದಾಗಿದೆ. ರಾಜತಾಂತ್ರಿಕತೆಯ ವಿಚಾರದಲ್ಲಿ ಸಂಯಮ ಕಾಪಿಟ್ಟುಕೊಳ್ಳುವುದು ಸಹ ಬಹಳ ಮುಖ್ಯವಾಗುತ್ತದೆ ಎಂದು ಅವರು ನುಡಿದಿದ್ದಾರೆ.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ಕಠಿಣ ರಾಜತಾಂತ್ರಿಕ ನೀತಿಯನ್ನು ಸಮರ್ಥವಾಗಿ ನಿಭಾಯಿಸಿರುವ ಬಗೆಗೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗೆಗೂ ಮಾತನಾಡಿದ ಅವರು ವಿಶ್ವದ ಎರಡು ರಾಷ್ಟ್ರಗಳ ನಡುವೆ ಯುದ್ಧದ, ಸಂಘರ್ಷದ ಸನ್ನಿವೇಶ ಎದುರಾದಾಗ, ತಾವು ಯಾವ ದೇಶದ ಪರ ವಹಿಸಬೇಕು ಎನ್ನುವ ಸಂದಿಗ್ಧ ಪರಿಸ್ಥಿತಿ ಉಳಿದ ರಾಷ್ಟ್ರಗಳಿಗೆ ಎದುರಾಗುತ್ತದೆ. ಆದರೆ ಭಾರತ ನಮ್ಮ ಸಾರ್ವಭೌಮತ್ವ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡುವ ಜೊತೆಗೆ ವಿಶ್ವ ಶಾಂತಿಗಾಗಿ ಮನವಿ ಮಾಡುವಲ್ಲಿಯೂ ಸರಿಯಾದ ಕೆಲಸ ಮಾಡಿರುವುದಾಗಿ ನಾನು ನಂಬುತ್ತೇನೆ ಎಂದಿದ್ದಾರೆ.

ಹಾಗೆಯೇ ಜಿ20 ಸಭೆಯನ್ನು ಭದ್ರತೆಗೆ ಸಂಬಂಧಿಸಿದ ಘರ್ಷಣೆಯನ್ನು ಇತ್ಯರ್ಥ ಮಾಡುವ ವೇದಿಕೆಯಾಗಿ ಎಂದಿಗೂ ಕಲ್ಪಿಸಲಾಗಿಲ್ಲ. ಜಾಗತಿಕ ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಹವಾಮಾನ, ಅಸಮಾನತೆ, ವಿಶ್ವಾಸದ ಸವಾಲುಗಳನ್ನು ಸೂಕ್ತವಾಗಿ ನಿಭಾಯಿಸಲು ಭದ್ರತಾ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ನೀತಿ ಸಮನ್ವಯತೆಗಳತ್ತ ಗಮನ ಹರಿಸುವುದು ಈ ಸಭೆಯ ಮುಖ್ಯ ಆಶಯವಾಗಿದೆ ಎಂದೂ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ದೇಶದ ಸಾರ್ವಭೌಮತೆಯ ರಕ್ಷಣೆ, ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಪ್ರಧಾನಿ ಮೋದಿ ತೆಗೆದುಕೊಳ್ಳುವ ವಿಶ್ವಾಸವನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.

Tags

Related Articles

Close