ಪ್ರಚಲಿತರಾಜ್ಯ

ಸಿಎಂ ತವರಿಗೆ ಲಗ್ಗೆಯಿಟ್ಟ ಮೋದಿ!! ನಡುಗಲು ಪ್ರಾರಂಭಿಸಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಕುರ್ಚಿ !! ಯಾಕೆ ಗೊತ್ತಾ?!

ಮೊನ್ನೆಯಷ್ಟೇ ಕರ್ನಾಟಕ ಕ್ಕೆ ಕಾಲಿಟ್ಟಿದ್ದ ಮೋದಿ, ಬಿಜೆಪಿಯ ಪರಿವರ್ತನಾ ಸಮಾರೋಪದಲ್ಲಿ ಕರ್ನಾಟಕ ಕಾಂಗ್ರೆಸ್ ನ ಮೈ ಚಳಿ ಬಿಡಿಸಿದ್ದು ಗೊತ್ತೇ ಇದೆ! ಕೇವಲ ಕರ್ನಾಟಕ ಕಾಂಗ್ರೆಸ್ ಕಳೆದ ನಾಲ್ಕೂವರೆ ವರ್ಷಗಳಿಂದ ಏನೇನು ಹಗರಣ ಮಾಡಿದೆ, ಯಾವ್ಯಾವ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದೆ ಎನ್ನುವುದನ್ನು ಮಾತ್ರವೇ ಅಲ್ಲ, ಬದಲಾಗಿ ಬಿಜೆಪಿ ಸರಕಾರ ಯಾವ್ಯಾವ ಪರಿವರ್ತನೆ ಸಾಧಿಸಿದೆ ಎನ್ನುವುದನ್ನೂ ಹೇಳಿದ್ದ ಪ್ರಧಾನಿ ಮೋದಿ, ಬರುತ್ತಿದ್ದ ಹಾಗೇ ಕಾಂಗ್ರೆಸ್ ವಿವಾದಕ್ಕಿಟ್ಟುಕೊಂಡಿತ್ತು!!

ಇವತ್ತು ಮೈಸೂರಿಗಾಗಮಿಸಿರುವ ಮೋದಿ ಶ್ರವಣ ಬೆಳಗೊಳದಲ್ಲಿ ಮಸ್ತಕಾಭಿಷೇಕದಲ್ಲಿ ಭಾಗಿಯಾಗಲಿದ್ದಾರೆ! ವ್ಹಾ!! ಅಂತೂ ಸಿಎಂ ತವರಿಗೂ ಲಗ್ಗೆಯಿಡಲಿರುವ ಪ್ರಧಾನಿ ಮೋದಿಯ ದಿನಚರಿ ನೋಡಿಯೇ ಕಾಂಗಿಗಳು ಹಾರಿ ಕುಣಿಯುತ್ತಿದ್ದಾರೆ! ಪ್ರಧಾನಿ ಎಂಬ ಗೌರವವನ್ನೂ ನೀಡದೇ ಏಕವಚನದಲ್ಲಿಯೇ ಕಾಂಗಿಗಳು ಮೋದಿಗೆ ಹೀಯಾಳಿಸುತ್ತಿರುವಾಗ ಅತ್ತ ಮೈಸೂರು ರೈಲ್ವೇ ನಿಲ್ದಾಣದಲ್ಲಿಯೇ ಯೋಜನೆಗಳ ಉದ್ಘಾಟನೆ ಪ್ರಾರಂಭಿಸಲಿದ್ದಾರೆ ಮೋದಿ!

ಬಿಜೆಪಿ ಸಮಾವೇಶಕ್ಕಾಗಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ! ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಕಾಶ್ ಜಾವ್ಡೇಕರ್, ಅನಂತ ಕುಮಾರ್, ಅನಂತ ಕುಮಾರ್ ಹೆಗಡೆ, ರಾಜ್ಯ ಉಸ್ತುವಾರಿ ಮುರಳಿಧರ ರಾವ್, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ , ಜಗದೀಶ್ ಶೆಟ್ಟರ್, ವಿ.ಶ್ರೀನಿವಾಸ ಪ್ರಸಾದ್, ಕೆ ಎಸ್ ಈಶ್ವರಪ್ಪ, ಶ್ರೀ ರಾಮುಲು ಸೇರಿ ಒಟ್ಟು 20 ಮಂದಿ ಭಾಗವಹಿಸಲಿದ್ದಾರೆ!

ಮೋದಿ ಮಾತ್ರವಲ್ಲ!! ಅಮಿತ್ ಷಾ ರೂ ಕೂಡ ದಕ್ಷಿಣ ಕನ್ನಡದಲ್ಲಿ ಘರ್ಜಿಸಲಿದ್ದಾರೆ! ಅದಲ್ಲದೇ, ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೂ ಭೇಟಿ ನೀಡಲಿರುವ ಅಮಿತ್ ಷಾ, ದಕ್ಷಿಣ ಕನ್ನಡದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಅದ್ದೂರಿಯಾಗಿ ಪಾಲ್ಗೊಳ್ಳಲಿದ್ದಾರೆ!

ಅದಲ್ಲದೇ, ಈ ಹಿಂದೆ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದಿದೆ ಎಂದಿದ್ದ ಪ್ರಧಾನಿ ಮೋದಿಗೆ ಟಾಂಗ್ ಕೊಡುವ ಹಾಗೆ, ನಂ 1 ರಾಜ್ಯಕ್ಕೆ ಸ್ವಾಗತ ಎಂದು ರಾತ್ರೋ ರಾತ್ರಿ ಫ್ಲೆಕ್ಸುಗಳನ್ನು ಕಟ್ಟಿಸಿ, ಕೊನೆಗೆ ಕನ್ನಡಿಗರೇ ಉಗಿದು ಉಪ್ಪಿನಕಾಯಿ ಹಾಕಿದ್ದರು! ಆದರೀಗ, ಮತ್ತೆ ಪ್ರಧಾನಿ ಮೋದಿ ಮತ್ತೆ ಕರ್ನಾಟಕಕ್ಕೆ ಬಂದಿದ್ದಾರೆ!

ಬಹುನಿರೀಕ್ಷಿತ ಮೈಸೂರು-ಬೆಂಗಳೂರು ನಡುವಿನ ರೈಲು ಸಂಚಾರ ಸೇರಿದಂತೆ ಹಲವು ಯೋಜನೆಗಳ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಇವತ್ತು ಪ್ರಧಾನಿ ಮೈಸೂರಿಗೆ ಆಗಮಿಸಿ ಮಹತ್ವದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸಂಸದ ಪ್ರತಾಪ್ ‍ಸಿಂಹ ತಿಳಿಸಿದ್ದಾರೆ. ಅಂದು ಪ್ರಧಾನಿ ಮೈಸೂರು-ಬೆಂಗಳೂರು ಜೋಡಿ ಹಳಿ ರೈಲು ಮಾರ್ಗವನ್ನು ಲೋಕಾರ್ಪಣೆಗೊಳಿಸಲಿದ್ದು, ಇದರೊಂದಿಗೆ ಮಾರ್ಗದ ವಿದ್ಯುದ್ಧೀಕರಣಕ್ಕೂ ಚಾಲನೆ ನೀಡಲಾಗುವ ಕಾರ್ಯಕ್ರಮವಿದೆ!!

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರು, ರಾಜಸ್ಥಾನ ನಡುವಿನ ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ!! ಪ್ರಸಕ್ತ ಬಜೆಟ್‍ನಲ್ಲಿ 789.29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುವ ನಾಗನಹಳ್ಳಿ ಸಾಟಸೈಟ್ ರೈಲ್ವೆ ನಿಲ್ದಾಣವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.ಹಾಗೆಯೇ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮೈಸೂರು-ಬೆಂಗಳೂರು ನಡುವೆ 8 ಪಥದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.ಅದಲ್ಲದೆ, ಇಎಸ್‍ಐ ಆಸ್ಪತ್ರೆಯನ್ನೂ ಸಹ ಉದ್ಘಾಟಿಸಲಿದ್ದಾರೆ. ಅದೇ ದಿನ ಸಂಜೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ 89.60ಕೋಟಿ ರೂ. ಬಿಡುಗಡೆ ಯಾಗಲಿದೆ!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 89.60ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಪ್ರತಾಪ್ ಸಿಂಹ ಮೈಸೂರು ನಗರದ ಮೆಟ್ರೋಪೋಲ್ ವೃತ್ತದಿಂದ ಜಲದರ್ಶಿನಿ ಅತಿಥಿಗೃಹದ ವರೆಗಿನ ರಸ್ತೆ ಅಭಿವೃದ್ಧಿಗೆ 5 ಕೋಟಿ, ಮೈಸೂರು ತಾಲೂಕು ಎಂ.ಬಿ.ರಸ್ತೆಯಿಂದ ಕೂರ್ಗಳ್ಳಿ ಮಾಗ್ವಂಗಿ ಕೆಆರ್‍ಎಸ್ ಸಂಪರ್ಕಿಸುವ ರಸ್ತೆಗೆ 5 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರಷ್ಟೇ! ಕಾಂಗಿಗಳಿಗೆ ಈಗಲೇ ಮೈ ಉರಿದು ಹೋಗಿದೆ!!

ಇದರೊಂದಿಗೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭದ್ರಕಾಳೇಶ್ವರ ದೇವಸ್ಥಾನ ರಸ್ತೆಯ ಹಿಂಭಾಗದಿಂದ ಚೈನಾಧೀರ ಕುಟುಂಬದ ರಸ್ತೆ ಸಂಪರ್ಕಿಸುವ 1.50 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ 2 ಕೋಟಿ ಹಾಗೂ ವಿರಾಜಪೇಟೆ ತಾಲೂಕು ಕೊಣನೂರು-ಮಾರ್ಕೂಟ ರಸ್ತೆಯ ಅಂಬಟ್ಟಿ ವೃತ್ತದಲ್ಲಿ ರಸ್ತೆ ಸುರಕ್ಷತೆ ಕಾಮಗಾರಿಗಾಗಿ 4 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇದು ಸೇರಿದಂತೆ ಹುಣಸೂರು, ಪಿರಿಯಾಪಟ್ಟಣದ ಹಲವು ರಸ್ತೆಗಳ ಅಭಿವೃದ್ಧಿಗಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ!!

ಅನುದಾನ ನೀಡಿದ ಮೋದಿಯ ಚಾಣಾಕ್ಷತನಕ್ಕೆ ಈಗಾಗಲೇ ಸಿಎಂ ಗದ್ದುಗೆ ಅಲುಗಾಡಲು ಶುರುವಾಗಿದೆ! ಪಾಪ! ಚುನಾವಣೆ ಹತ್ತಿರ ಬರುತ್ತಿರುವಾಗಲೇ ಪ್ರಧಾನಿ ಆಡುತ್ತಿರುವಾಟಕ್ಕೆ ಬ್ಲಡ್ ಪ್ರೆಶರ್ ಜಾಸ್ತಿಯಾಗಿ ತಲೆ ತಿರುಗಿ ಸಿದ್ಧರಾಮಯ್ಯರವರು ಬೀಳದೇ ಇರಲಿ ಎಂಬುದೇ ಆಶಯ!

– ಪೃಥು ಅಗ್ನಿಹೋತ್ರಿ

Tags

Related Articles

Close