ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಆಗಸದಲ್ಲೇ ಬಾಹುಬಲಿಗೆ ನಮೋ ಎಂದ ಪ್ರಧಾನಿ ಮೋದಿ!! ಶ್ರವಣಬೆಳಗೊಳದಲ್ಲಿ ಮೋದಿ ಮೇನಿಯಾ…

ನಿನ್ನೆ ಮೈಸೂರಿಗೆ ಬಂದಿಳಿದಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ವೇಳಾಪಟ್ಟಿಯಂತೆ ಶ್ರವಣಬೆಳಗೊಳಿಕ್ಕೆ ಆಗಮಿಸಿ ಗೋಮಟೇಶ್ವರನ ಮಹಾ ಮಸ್ತಕಾಭೀಶೇಕದಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರಿನ ಲಲಿತ್ ಮಹಲ್ ಹೊಟೇಲ್‍ನಿಂದ ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಗೋಮಟೇಶ್ವರನ ಪ್ರತಿಮೆಗೆ ನಡೆಯುವ ಮಹಾ ಮಜ್ಜನ ಕಾರ್ಯಕ್ರಮದಲ್ಲಿ ಭಾಗಿದ್ದಾರೆ. ಮೈಸೂರಿನಿಂದ ಹೆಲಿಕಾಫ್ಟರ್ ಮೂಲಕ ಹಾಸನಕ್ಕೆ ಬಂದಿಳಿದ ಪ್ರಧಾನಿಯನ್ನು ಹಾಸನದಲ್ಲಿ ಭವ್ಯ ಸ್ವಾಗತವನ್ನು ನೀಡಲಾಯಿತು.

ತಡ ರಾತ್ರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕಕ್ಕೆ ಆಗಮಿಸಿದ ನರೇಂದ್ರ ಮೋದಿ ರಾತ್ರಿ ವಿಶೇಷ ವಿಮಾನದ ಮೂಲಕ ಬಂದಿಳಿದಿದ್ದರು. ಪ್ರಧಾನಿಯ ಸ್ವಾಗತಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ರಾಜ್ಯ ಬಿಜೆಪಿ ನಾಯಕರು ವಿಮಾನ ನಿಲ್ದಾಣಕ್ಕೆ ತೆರಳಿದ್ದು ಅದ್ದೂರಿ ಸ್ವಾಗತ ನೀಡಿದ್ದಾರೆ.

ಬೆಳಿಗ್ಗೆ ೮:೩೦ ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದ ನರೇಂದ್ರ ಮೋದಿಯವರು ನಂತರದಲ್ಲಿ ಹಾಸನದ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾ ಮಸ್ತಾಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರಾತ್ರಿ ಮೈಸೂರಿಗೆ ಆಗಮಿಸಿದ ನರೇಂದ್ರ ಮೋದಿ, ಹೆಸರಾಂತ ಹೋಟೆಲ್ ಲಲಿತ್ ಮಹಲ್ ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಲಲಿತ್ ಮಹಲ್ ನ ಹೆಲಿಪ್ಯಾಡ್ ನಿಂದಲೇ ಶ್ರವಣಬೆಳಗೊಳದ ಕಡೆ ಪ್ರಯಾಣ ಆರಂಭಿಸಿದ ನಮೋ ಶ್ರವಣಬೆಳಗೊಳದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

12 ವರ್ಷಗಳಿಗೊಮ್ಮೆ ನಡೆಯುವ ಶ್ರವಣಬೆಳಗೊಳದ ಗೋಮಟೇಶ್ವರನ ಮಹಾ ಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿರುವ ನರೇಂದ್ರ ಮೋದಿ ಭಾಗಿಯಾಗಿ ತ್ಯಾಗ ಮೂರ್ತಿ ನಮನವನ್ನು ಸಲ್ಲಿಸಲಿದ್ದಾರೆ. ಈಗಾಗಲೇ ಶ್ರವಣಬೆಳಗೊಳಕ್ಕೆ ಆಗಮಿಸಿರುವ ಪ್ರಧಾನಿ ಮೋದಿಯವರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು,  ಹಾಸನದ ಜಿಲ್ಲಾಧಿಕಾರಿಗಳಾದ ಶ್ರೀಮತೀ ರೋಹಿನಿ ಸಿಂಧೂರಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಮಂಜು, ಕೇಂದ್ರ ಸಚಿವರಾದ ಅನಂತ್ ಕುಮಾರ್ ಸಹಿತ ಅನೇಕ ಮುಖಂಡರುಗಳು ಸ್ವಾಗತಿಸಿದ್ದಾರೆ.

ಮೋದಿಯಿಂದ ಪುಷ್ಪಾರ್ಚನೆ ಕಾರ್ಯಕ್ರಮವಿಲ್ಲ…!

ಪ್ರಧಾನಿ ನರೇಂದ್ರ ಮೋದಿಯವರಿಂದ ವೈರಾಗ್ಯ ಮೂರ್ತಿ ಗೋಮಟೇಶ್ವರನಿಗೆ ಮಹಾ ಮಜ್ಜನ ಸಂದರ್ಭ ಪುಷ್ಪಾರ್ಚನೆ ನಡೆಯುತ್ತದೆ ಎಂಬ ಮಾಹಿತಿ ಇತ್ತು. ಆದರೆ ಭದ್ರತೆಯ ದೃಷ್ಟಿಯಿಂದ ಪ್ರಧಾನಿ ಮೋದಿಯವರು ಪುಷ್ಪಾರ್ಚನೆಯ ಕಾರ್ಯಕ್ರಮವನ್ನು ಕೈಬಿಡಲಾಗಿದೆ. ಗೋಮಟೇಶ್ವರನ ದರ್ಶನ ಪಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

12 ನಿಮಿಷ ಮಾತನಾಡಲಿದ್ದಾರೆ ಪ್ರಧಾನಿ…

ಬಾಹುಬಲಿಯ ಮಹಾ ಮಜ್ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಯೇ ಏರ್ಪಡಿಸಿದ್ದ ಒಂದು ಕಾರ್ಯಕ್ರಮವನ್ನು ಉದ್ಧೇಶಿಸಿ ಕೂಡಾ ಮಾತನಾಡಿದ್ದಾರೆ. ಈಗಾಗಲೇ ಪ್ರಧಾನಿ ಮೋದಿಯವರ ಮಾತಿಗೆ ಸಮಯವೂ ನಿಗಧಿ ಮಾಡಲಾಗಿದ್ದು, ಸುಮಾರು 12 ನಿಮಿಷಗಳು ಮಾತನಾಡಿದ್ದಾರೆ.

ವೇದಿಕೆಯಲ್ಲಿರಲಿದ್ದಾರೆ ಮುಖ್ಯಮಂತ್ರಿಗಳು…

ಹಲವಾರು ಕಾರ್ಯಕ್ರಮಗಳ ಉಧ್ಘಾಟನೆ ಹಾಗೂ ವಿನೂತನ ವಿಶೇಷತೆಗಳನ್ನು ಶ್ರವಣಬೆಳಗೊಳದಲ್ಲಿ ಪ್ರಧಾನಿ ಮೋದಿಯವರು ವೀಕ್ಷಿಸಲಿದ್ದಾರೆ. ಬಾಹುಬಲಿ ಜನರಲ್ ಆಸ್ಪತ್ರೆ ಹಾಗೂ 630 ಮೆಟ್ಟಿಲುಗಳಿರುವ ವಿಂಧ್ಯಪರ್ವತದ ಮೆಟ್ಟಿಲುಗಳನ್ನು ಉಧ್ಘಾಟಿಸಲಿದ್ದಾರೆ. ಶ್ರವಣಬೆಳಗೊಳದಲ್ಲಿ ನಿರ್ಮಾಣವಾಗಿದ್ದ ಚಾವುಂಡರಾಯ ಮಂಟಪಕ್ಕೆ ಅಲ್ಲಿ ನೆರೆದಿದ್ದ ಲಕ್ಷಾಂತರ ಜನರನ್ನು ಉದ್ಧೇಶಿಸಿ ಸಮಸ್ತ ಭಕ್ತರನ್ನು ಉದ್ಧೇಶಿಸಿ ಮಾತನಾಡಿದ್ದಾರೆ. ಹಾಗೂ ಜೈ ಸಮುದಾಯದ ಮುಖಂಡರೊಡನೆ ಮಾತುಕತೆಯೂ ನಡೆಸಲಿದ್ದಾರೆ ಎಂಬ ಮಾಹಿತಿಯೂ ದೊರಕಿದೆ.

ಬಾನಲ್ಲೇ ದರ್ಶನ…

ಪ್ರಧಾನಿ ನರೇಂದ್ರ ಮೋದಿಯವರು ಹೆಲಿಕಾಫ್ಟರ್‍ನ್ಲಲಿಯೇ ಆಗಸದಲ್ಲಿಯೇ ಗೋಮಟೇಶ್ವರನ ದರ್ಶನ ಪಡೆದಿದ್ದಾರೆ. ಅಟ್ಟಣಿಗೆಯ ಭದ್ರತೆ ಹಾಗೂ ಇನ್ನಿತರ ಭದ್ರತೆಯ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಹೆಲಿಕಾಫ್ಟರ್‍ನಲ್ಲಿಯೇ ನಮನವನ್ನು ಸಲ್ಲಿಸಿದ್ದಾರೆ. ಆಗಸದಲ್ಲೇ ಶ್ರೀ ಗೋಮಟೇಶ್ವರನ ದರ್ಶನವನ್ನು ಪಡೆದ ಪ್ರಧಾನಿ ನರೇಂದ್ರ ಮೋದಿಯವರು ಬಾಹುಬಲಿಗೆ ನಮೋ ಎಂದಿದ್ದಾರೆ.

ಜೈನಮುನಿಗಳ ಆಶಿರ್ವಾದ ಪಡೆದ ನಮೋ…

ಪ್ರಧಾನಿ ನರೇಂದ್ರ ಮೋದಿ ಸಾನಿಧ್ಯದಲ್ಲಿ ನೆರೆದಿದ್ದ 108 ಜೈನ ಸನ್ಯಾಸಿಗಳ ಆಶೀರ್ವಾದವನ್ನು ಪಡೆದಿದ್ದಾರೆ. ಈ ವೇಳೆ ಜೈನ ಸನ್ಯಾಸಿಗಳು ನೀಡಿದ್ದ ನೀಡಿದ್ದ ಹಾರವನ್ನು ನರೇಂದ್ರ ಮೋದಿಯವರು ಧರಿಸಿದ್ದಾರೆ. ಸನ್ಯಾಸಿಗಳು ನೀಡಿದ ದಾರವನ್ನು ತನ್ನ ಕೈಗೆ ಪ್ರಧಾನಿ ಮೋದಿಯವರು ಕಟ್ಟಿಕೊಂಡಿದ್ದಾರೆ.

ಎ.ಮಂಜು ಸ್ವಾಗತ…

ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಅವರು ಸ್ವಾಗತಿಸಿದ್ದಾರೆ. ಆಗಮಿಸಿದ್ದ ಕೇಂದ್ರ ಸಚಿವರಾದ ಫಿಯೂಶ್ ಗೋಯಲ್, ಅನಂತ್ ಕುಮಾರ್, ಸದಾನಂದ ಗೌಡ ಸಹಿತ ಅನೇಕರನ್ನು ಸಚಿವ ಎ.ಮಂಜು ಸ್ವಾಗತಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಗೈರು ಹಾಜರಿದ್ದರೂ ಅವರನ್ನು ಸ್ವಾಗತಿಸಿ ಹೊಗಳುವ ಮೂಲಕ ಆ ಕಾರ್ಯಕ್ರಮದಲ್ಲೂ ರಾಜಕೀಯ ಮಾಡುವುದನ್ನು ಮರೆಯಲಿಲ್ಲ.

ಪ್ರಧಾನಿ ಮೋದಿಗೆ ಗೌರವಾರ್ಪಣೆ…

ಪ್ರಧಾನಿ ನರೇಂದ್ರ ಮೋದಿಯವರಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಂದ ಗೌರವಾರ್ಪಣೆ ಕೂಡಾ ನಡೆಯಿತು. ಪ್ರಧಾನಿ ಮೋದಿಯವರಿಗೆ ಶಾಲು ಹಾಗೂ ಜೈನ ಧ್ವಜವನ್ನು ನೀಡಿ ಗೌರವಿಸಲಾಯಿತು. ಏಲಕ್ಕಿ ಹಾರ, ಬೆಳ್ಳಿ ಕಳಸ ಹಾಗೂ ಬಾಹಬಲಿಯ ಮೂರ್ತಿಯನ್ನು ನೀಡಿ ಸನ್ಮಾನಿಸಲಾಯಿತು. ನಂತರ ಶ್ರವಣಬೆಳಗೊಳದ ಬೆಳಕು ಎಂಬ ನೂತನ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಸಿಎಂ ಸಿದ್ದರಾಮಯ್ಯ, ಮಾಜಿ ಪಿಎಂ ದೇವೇಗೌಡ ಗೈರು…

ಪ್ರಧಾನಿ ನರೇಂದ್ರ ಮೋದಿಯವರ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಭಾಗವಹಿಸಿಲ್ಲ. ಪ್ರಧಾನಿ ಮೋದಿಯವರ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಾರೆ ಎಂಬ ನಿರೀಕ್ಷೆಯೂ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿಲ್ಲ. ಮಾತ್ರವಲ್ಲದೆ ಮಾಜಿ ಪ್ರಧಾನಿ ದೇವೇಗೌಡರೂ ಈ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ತನ್ನ ಕ್ಷೇತ್ರವಾಗಿದ್ದರೂ ಕೂಡಾ ದೇವೇಗೌಡರೂ ಶಿಷ್ಟಾಚಾರಕ್ಕೂ ಈ ಕಾರ್ಯಕ್ರಮದಲ್ಲಿ ದೇವೇಗೌಡರು ಭಾಗವಹಿಸಿಲ್ಲ

-ಸುನಿಲ್ ಪಣಪಿಲ

Tags

Related Articles

Close