ಪ್ರಚಲಿತ

ದಿಢೀರ್ ಮಂಗಳೂರಿನಲ್ಲಿ ಪ್ರತ್ಯಕ್ಷರಾದ ಮೋದಿ ಬಿಜೆಪಿ ಶಾಸಕರ ಬಳಿ ಏನಂದ್ರು ಗೊತ್ತಾ..?ಗೆಲುವಿನ ಕಳೆ ಹೊಂದಿದ್ದ ನಮೋ…! 

ನರೇಂದ್ರ ಮೋದಿ ಅಂದ್ರೇನೆ ಹಾಗೆ. ಅವರೋರ್ವ ಡೈನಾಮಿಕ್ ನಾಯಕ. ಸದಾ ವಿಭಿನ್ನ ಚಟುವಟಿಕೆಯಿಂದ ಗುರುತಿಸಿಕೊಂಡಿರುವ ಅವರು ಓರ್ವ ಅದ್ಭುತ ವಿಶ್ವನಾಯಕ. ಅವರು ಯಾವಾಗ ಎಲ್ಲಿರ್ತಾರೆ ಎಂಬುವುದು ಸ್ವತಃ ಅವರ ಸಂಪುಟದ ಸಚಿವರಿಗೇ ಗೊತ್ತಿರೋದಿಲ್ಲ. ಈ ಹಿಂದೆ ವಿದೇಶ ಪ್ರಯಾಣದ ಸಂದರ್ಭದಲ್ಲಿ ಏಕಾಏಕಿ ಪಾಕಿಸ್ಥಾನಕ್ಕೆ ಹಾರಿ ಪಾಕಿಸ್ಥಾನದ ಅಂದಿನ ಪ್ರಧಾನಿ ನವಾಜ್ ಶರೀಫ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಒಮ್ಮೆ ಜಗತ್ತಿಗೇ ಬ್ರೆಕಿಂಗ್ ನ್ಯೂಸ್ ಆದವರು. ಇಂತಹಾ ಪ್ರಧಾನಿ ಮೋದಿಯವರು ಇದೀಗ ವಿಶ್ವನಾಯಕರು.

ಅವರು ಎಲ್ಲೇ ಹೋದರೂ ಒಂದೊಂದು ವಿಶೇಷವನ್ನು ಹೊತ್ತು ತೆರಳುತ್ತಾರೆ. ಹೀಗಾಗಿಯೇ ಅವರನ್ನು ನೋಡಲೆಂದೇ ಲಕ್ಷಾಂತರ ಜನರು ಸಾಗರದ ಅಲೆಯಂತೆ ಧಾವಿಸಿ ಬರುತ್ತಾರೆ. ವಿದೇಶಕ್ಕೇ ಹೋಗಲಿ ಸ್ವದೇಶದಲ್ಲೇ ಇರಲಿ, ಅವರನ್ನು ನೋಡುವುದೆಂದರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಮತ್ಯಾವುದೂ ಇಲ್ಲ ಎಂಬಂತಾಗಿದೆ.

ಇದೀಗ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣಾ ಸಮಯ. ಈ ಸಮಯದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದಾರೆ. ಬರೋಬ್ಬರಿ 21 ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹೋದಲ್ಲೆಲ್ಲಾ ಜನವೋ ಜನ. ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದಾಗಲೂ ಲಕ್ಷ ಲಕ್ಷ ಜನರು ಅವರನ್ನು ನೋಡಲು ಸಾಗರದಂತೆ ಆಗಮಿಸಿದ್ದರು. ಅಂತೆಯೇ ಎಲ್ಲಾ ಕಡೆಗಳ ಸಮಾವೇಶವೂ ಒಂದು ಇತಿಹಾಸವನ್ನೇ ಸೃಷ್ಟಿಸಿತ್ತು.

ಮತ್ತೊಮ್ಮೆ ಪ್ರತ್ಯಕ್ಷರಾದ ನಮೋ..!

ಮೋದಿ ಮಂಗಳೂರಿಗೆ ಬಂದು ಹೋಗಿ 4 ದಿನದಲ್ಲಿ ಮತ್ತೆ ಮಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದರು. ದಿನಾಂಕ 05.05.2018ರ ಶನಿವಾರ ಮಂಗಳೂರಿನಲ್ಲಿ ನಡೆ ಬೃಹತ್ ಚುನಾವಣಾ ಸಮಾವೇಶವನ್ನು ಮುಗಿಸಿಕೊಂಡು ತೆರಳಿದ್ದ ಮೋದಿ 09.05.2018ರ ಬುಧವಾರ  ಮತ್ತೆ ಮಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದರು.

ಹೌದು. ಅಂದು ಚಿಕ್ಕಮಗಳೂರಿನಲ್ಲಿ ನಡೆದಿದ್ದ ಭಾರತೀಯ ಜನತಾ ಪಕ್ಷದ ಬೃಹತ್ ಚುನಾವಣಾ ಜಾಥಾವನ್ನು ಉದ್ಧೇಶಿಸಿ ಭಾಷಣ ಮಾಡಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಕ್ಕೆ ಬಂದಿಳಿದಿದ್ದರು. ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಚಿಕ್ಕಮಗಳೂರಿಗೆ ತೆರಳಿದ್ದರು. ಹೀಗಾಗಿ ಕೇವಲ 4 ದಿನಗಳ ಅಂತರದಲ್ಲಿ ಎರಡು ಬಾರಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದಂತಾಗಿದೆ.

ಹಮ್ ಜೀತೇಂಗೆ” ಎಂದ ನಮೋ…

ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಹಾಗೂ ಬೀಳ್ಕೊಡಲು ಭಾರತೀಯ ಜನತಾ ಪಕ್ಷದ ನಾಯಕರು ಹಾಗೂ ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಬಿಜೆಪಿ ನಾಯಕರಾದ ಬೃಜೇಶ್ ಚೌಟ ಸಹಿತ ಕೆಲ ನಾಯಕರು ತೆರಳಿದ್ದರು.

ಚಿಕ್ಕಮಗಳೂರಿನಲ್ಲಿ ಬೃಹತ್ ಚುನಾವಣಾ ಭಾಷಣವನ್ನು ಮುಗಿಸಿಕೊಂಡು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನರೇಂದ್ರ ಮೋದಿಯವರನ್ನು ಕ್ಯಾ.ಗಣೇಶ್ ಕಾರ್ಣಿಕ್ ಸಹಿತ ಗಣ್ಯರ ತಂಡವು ಸ್ವಾಗತಿಸಿ ಬೀಳ್ಕೊಟ್ಟಿತು. ಈ ವೇಳೆ ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಮೋದಿ ಕೆಲ ಸಮಯ ರಾಜಕೀಯ ಚರ್ಚೆಯನ್ನು ನಡೆಸಿದ್ದಾರೆ.

ಬಿಜೆಪಿ ನಾಯಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರೊಂದಿಗೆ ಜಿಲ್ಲಾ ಚುನಾವಣೆಯ ತಯಾರಿಗಳು ಯಾವ ರೀತಿ ಎಂದು ಕೇಳಿದರು. ಅದೇ ದಿನ ಮಂಗಳೂರಿನಲ್ಲಿದ್ದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಜಾಥಾದ ಬಗ್ಗೆ ವಿವರಣೆ ಕೇಳಿದರು. ಈ ವೇಳೆ ಗಣೇಶ್ ಕಾರ್ಣಿಕ್ ಅವರು ಮೋದಿ ಬಳಿ ಉತ್ತಮ ಸ್ಪಂದನೆ ಇದೆ ಮೋದೀಜಿ ಎಂದು ಉತ್ತರಿಸಿದ್ದಾರೆ.

“ತಾವು ಮಂಗಳೂರಿಗೆ ಆಗಮಿಸಿ ಚುನಾವಣಾ ಪ್ರಚಾರದ ಭಾಷಣವನ್ನು ನಡೆಸಿದ ನಂತರ ಇಲ್ಲಿನ ವಾತಾವರಣವೇ ಬದಲಾಗಿದೆ. ಭಾರತೀಯ ಜನತಾ ಪಕ್ಷದ ಪರವಾಗಿ ಹೊಸ ಅಲೆ ಎದ್ದಿದೆ. ಅಮಿತ್ ಶಾ ಜೀ ಹಾಗೂ ಯೋಗಿ ಆದಿತ್ಯನಾಥ್ ಜೀ ಅವರ ರೋಡ್ ಶೋ ಗೆ ಕೂಡಾ ಸಾವಿರಾರು ಕಾರ್ಯಕರ್ತರು ಆಗಮಿಸುವ ಮೂಲಕ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ” ಎಂದು ವಿವರಿಸಿದರು.

ಇದಕ್ಕೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿಯವರು “ಶಕ್ ಮತ್ ಕರೋ, ಕರ್ನಾಟಕ ಮೇ ಹಮ್ ಜೀತೇಂಗೆ” ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ. “ಸಂಶಯವೇ ಬೇಡ. ಈ ಬಾರಿ ನಾವು ಕರ್ನಾಟಕದಲ್ಲಿ ಗೆಲ್ಲುತ್ತೇವೆ” ಎಂದು ಹೇಳಿದ್ದಾರೆ. ನಂತರ ಕ್ಯಾ.ಗಣೇಶ್ ಕಾರ್ಣಿಕ್ ಸಹಿತ ಬಿಜೆಪಿ ನಾಯಕರು ಮೋದಿಯವರನ್ನು ಬೀಳ್ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ನಡೆದ ಬೃಹತ್ ಚುನಾವಣಾ ಜಾಥಾಗೆ ನಮೋ ತೆರಳಿದ್ದರು.

“ಮೋದಿಯವರ ಕಣ್ಣುಗಳಲ್ಲಿ ಗೆಲುವಿನ ಸೂಚನೆ ಇತ್ತು, ಹೀಗಾಗಿ ಈ ಬಾರಿ ನಾವು ಗೆದ್ದೇ ಗೆಲ್ಲುತ್ತೇವೆ. ಮುಂದಿನ ಸರ್ಕಾರ ನಮ್ಮದೇ” ಎಂದು ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಮೋದಿಯವರು ಈ ಹಿಂದೆ ಕೇರಳ ಭೇಟಿಯ ಸಂದರ್ಭದಲ್ಲೂ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಸುತ್ತಮುತ್ತಲಿನ ಕೆಲ ಜಿಲ್ಲೆಗಳಿಗೆ ಮಂಗಳೂರು ವಿಮಾನ ನಿಲ್ದಾಣವೇ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಮೋದಿಯವರು ಚಿಕ್ಕಮಗಳೂರಿನ ಭೇಟಿಯ ಸಂದರ್ಭದಲ್ಲೂ ಮಂಗಳೂರಿಗೆ ಭೇಟಿ ನೀಡಿದ್ದಾರೆ. 

-ಸುನಿಲ್ ಪಣಪಿಲ

Tags

Related Articles

Close