ಪ್ರಚಲಿತ

ಈ ಬಾರಿ ನಾಮ್ ದಾರ್ ವರ್ಸಸ್ ಕಾಮ್ ದಾರ್ ಸರಕಾರ್!! ನಾಮಧಾರಿ ಗಾಂಧಿಗಳ 48 ವರ್ಷಗಳ ಆಡಳಿತ ವಿರುದ್ದ ಮೋದಿ ಸರ್ಕಾರದ 48 ತಿಂಗಳುಗಳ ಲೆಕ್ಕ ಕೊಡುತ್ತಾರೆ ಪ್ರಧಾನ ಸೇವಕ!!

ಇದೆ ಬರುವ ಮೇ ಇಪ್ಪತ್ತಾರಕ್ಕೆ ಮೋದಿ ಸರಕಾರಕ್ಕೆ ನಾಲ್ಕು ವರ್ಷಗಳು ತುಂಬಲಿವೆ. ಕಳೆದ 48 ತಿಂಗಳುಗಳಲ್ಲಿ ಭ್ರಷ್ಟಚಾರದ ಒಂದೇ ಒಂದು ಆರೋಪವೂ ಇಲ್ಲದ ಏಕೈಕ ಸರಕಾರ ಮೋದಿ ಸರಕಾರ. ಬುಲೆಟ್ ವೇಗದಲ್ಲಿ ದೇಶದ ಅಭಿವೃದ್ದಿ ನಡೆಸಿ, ವಿಶ್ವವೆಲ್ಲಾ ಕಣ್ ಕಣ್ ಬಿಟ್ಟು ನೋಡುವಂತೆ ಮಾಡಿದ ಮೋದಿ ಸರಕಾರ ತನ್ನ ನಾಲ್ಕನೆ ವರ್ಷದ ಸಂಭ್ರಮಾಚರಣೆಯಂದು “48 ತಿಂಗಳುಗಳ ವಿರುದ್ಧ 48 ವರ್ಷಗಳು” ಎನ್ನುವ ಟ್ಯಾಗ್ ಲೈನಿನೊಂದಿಗೆ ಜನತೆಯ ಮುಂದೆ ಬರಲಿದೆ ಎನ್ನಲಾಗಿದೆ. ಈ ಬಾರಿ “ಮೋದಿ ವರ್ಸಸ್ ಗಾಂಧಿ” ಆಡಳಿತದ ಲೆಕ್ಕ ದೇಶದ ಜನತೆಯ ಮುಂದಿಡಲಿದ್ದಾರೆ ಪ್ರಧಾನ ಸೇವಕ ಮೋದಿ.

ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕಾಂಗ್ರೆಸಿನ ನಾಮಧಾರಿ ಗಾಂಧಿಗಳ ಪರಿವಾರದ ಜನರು 48 ವರ್ಷಗಳು ದುರಾಡಳಿತ ನಡೆಸಿದ್ದಾರೆ. ಇವತ್ತು ಆಲೂಗಡ್ಡೆಯಿಂದ “ಚಿನ್ನ ತಯಾರಿಸುವ” ಮಾತನಾಡುವ ಮಂದಬುದ್ದಿಯ ಬಾಲಕನ ಪಕ್ಷ ತಮ್ಮ ಅರ್ಧಶತಕದ ಆಡಳಿತದಲ್ಲಿ ಕನಿಷ್ಟ ಶೌಚಾಲಯಗಳನ್ನೂ ಕಟ್ಟಲಿಲ್ಲ. ಜನರಿಗೆ ಸ್ವಛ್ಛತೆಯ ಪಾಠ ಹೇಳಿಕೊಡಲು ಖುದ್ದು ಪ್ರಧಾನ ಮಂತ್ರಿ ಮೋದಿ ಪೊರಕೆ ಹಿಡಿದು ಗುಡಿಸಬೇಕಾಯಿತು!! ಇಂತಹ ಕಾಮ್ ದಾರ್ ಪ್ರಧಾನ ಸೇವಕ ದೊರಕಿರುವುದು ನಮ್ಮೆಲ್ಲರ ಪುಣ್ಯ. ಕೂತರೂ ನಿಂತರೂ ದೇಶದ ಏಳಿಗೆಯ ಬಗ್ಗೆ ಯೋಚಿಸುವ, ಹದಿನಾರು ವರ್ಷಗಳಲ್ಲಿ ಒಂದೇ ಒಂದು ರಜೆಯನ್ನೂ ತೆಗೆಯದ, ದಿನದಲ್ಲಿ ಹದಿನೆಂಟು ಘಂಟೆ ದುಡಿಯುವ ಕಾಮ್ ದಾರ್ ಮೋದಿ ಕಳೆದ 48 ತಿಂಗಳುಗಳ ತಮ್ಮ ಆಡಳಿತದ ಲೆಕ್ಕ ಕೊಡಲಿದ್ದಾರೆ.

ಮೋದಿ ದೇಶಕ್ಕೆ ಏನು ಮಾಡಿದ್ದಾರೆ? ಅಚ್ಛೇ ದಿನ್ ಆಯೇ ಕ್ಯಾ? ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ, ಮೋದಿ ಬಡವರಿಗೇನು ಮಾಡಿಲ್ಲ, ಮೋದಿ ವಿದೇಶ ಯಾತ್ರೆ ಕೈಗೊಳ್ಳುತ್ತಾರೆ, ನೀರವ್ ಮೋದಿ-ವಿಜಯ್ ಮಲ್ಯ ದೇಶ ಬಿಟ್ಟೋಡುವಾಗ ಮೋದಿ ಕಣ್ಣು ಮುಚ್ಚಿ ಕುಳಿತಿದ್ದರೆ? ಮೋದಿ ಕೃಷಿಕರಿಗೆ ದ್ರೋಹ ಬಗೆದಿದ್ದಾರೆ, ಮೋದಿಗೆ ಅದಾನಿ-ಅಂಬಾನಿಗಳ ಮೇಲೆ ವಿಪರೀತ ಕಾಳಜಿ, ರಾಜ್ಯದಲ್ಲಿ ಇರುವೆ ಸತ್ತರೂ ಮೋದಿ ಕಾರಣ, ಮೋದಿ ಜಿ ಜವಾಬ್ ದೋ…..ಅಬ್ಬ ಒಂದೇ..ಎರಡೇ ಆರೋಪಗಳು? ಎಲ್ಲಾ ಆರೋಪಗಳಿಗೂ ದಾಖಲೆ ಸಮೇತ ಉತ್ತರ ಸಿಗಲಿದೆ ಈ ಬಾರಿ. ಜೊತೆಗೆ ಗಾಂಧಿ ಪರಿವಾರದ ಆಡಳಿತ ಲೆಕ್ಕವೂ ಬೋನಸ್ ಆಗಿ ದೊರಕಲಿದೆ!! ಎಲ್ಲಾದಕ್ಕೂ ಲೆಕ್ಕ ಕೇಳುತ್ತೀರಲ್ಲ ವಿರೋಧಿಗಳೇ, ನಮ್ಮ ಲೆಕ್ಕದ ಜೊತೆ ನಿಮ್ಮ ಲೆಕ್ಕವೂ ಕೊಡುತ್ತೇವೆ, ಮಡಿಕ್ಕಳಿ ಎಂದು ರಿಪೋರ್ಟ್ ಕಾರ್ಡ್ ನೀಡಲಿದ್ದಾರೆ ಮೋದಿ.

ತನ್ನ ಆಡಳಿತದ ಕೊನೆಯ ನಾಲ್ಕು ವರ್ಷಗಳಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಸಲ್ಪಟ್ಟಿದೆಯೆಂದು ಲೆಕ್ಕಾಚಾರ ಮಾಡಲು ಪ್ರಧಾನಿ ಕಚೇರಿಯು ಈಗಾಗಲೆ ಸಚಿವರಿಗೆ ನಿರ್ದೇಶನ ನೀಡಿದೆ. ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಹೇಳಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ಸರಕಾರದ ಸಾಧನೆಗಳನ್ನು ಜನರ ಮುಂದಿಡುವ ಜೊತೆಗೆ “ಭ್ರಷ್ಟಾಚಾರ ರಹಿತ” ಆಡಳಿತದ ಸಫಲತೆಯೊಂದಿಗೆ ತನ್ನ ಸಂಭ್ರಮವನ್ನು ಆಚರಿಸಿಕೊಳ್ಳಲಿದೆ ಮೋದಿ ಸರಕಾರ. ಯುಪಿಎ ಆಡಳಿತದ ಅವಧಿಯಲ್ಲಿ ನಡೆದ ದೊಡ್ಡ ಪ್ರಮಾಣದ ಭ್ರಷ್ಟಾಚಾರಗಳ ಲೆಕ್ಕವನ್ನೂ ನೀಡಲಿದ್ದಾರೆ ಮೋದಿ.

100% ಗ್ರಾಮೀಣ ವಿದ್ಯುದೀಕರಣ, ದಿನಕ್ಕೆ 28 ಕಿ.ಮೀ.ರಸ್ತೆ ನಿರ್ಮಾಣ, ಬಡ ಮಹಿಳೆಯರಿಗೆ ಉಜ್ವಲಾ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕದ ಜೊತೆಗೆ ಪ್ರತಿ ಮಂತ್ರಾಲಯವೂ ಕೂಡಾ ತಮ್ಮ ತಮ್ಮ ಸಾಧನೆಗಳ ವೀಡೀಯೋ ಚಿತ್ರಣ ನಡೆಸಲಿದೆ. ಖುದ್ದು ಸಚಿವಾಲಯಗಳ ಮಂತ್ರಿಗಳು ದೇಶದೆಲ್ಲೆಲ್ಲಾ ಸಂಚರಿಸಿ ಈ ಸಾಧನೆಗಳ ತುಣುಕುಗಳನ್ನು ಮನೆ ಮನೆಗೆ ತಲುಪಿಸಲಿದ್ದಾರೆ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚು ಕಡಿಮೆ 10 ಕೋಟಿಯಷ್ಟು ಉದ್ಯೋಗ ಸೃಷ್ಟಿಸಲಾಗಿದೆ ಮತ್ತು 1.5 ಕೋಟಿ ಜನರಿಗೆ ಉದ್ಯೊಗ ದೊರಕಿದೆ ಎಂದು ಸರಕಾರದ ಹಿರಿಯ ಮಂತ್ರಿಯೊಬ್ಬರು ಹೇಳಿದ್ದಾರೆ. ಅಷ್ಟಾಗ್ಯೂ ವಿರೋಧಿಗಳು ಮೋದಿ ತಮ್ಮ ವಚನವನ್ನು ಪಾಲಿಸಿಲ್ಲ ಎಂದು ಮೋದಿಜಿಯವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅಂಥ ಆರೋಪಗಳಿಗೆ ಈ ಬಾರಿ ದಾಖಲೆ ಸಮೇತ ಉತ್ತರ ನೀಡಲಿದ್ದಾರೆ ಮೋದಿ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 370 ರ ಸ್ಥಾನ ಮಾನ, ಸ್ಮಾರ್ಟ್ ನಗರಗಳು ಮತ್ತು ಅವುಗಳ ಅಭಿವೃದ್ಧಿ, ನಮಾಮಿ ಗಂಗೆ ಯೋಜನೆ, ಉದ್ಯೋಗ ಉತ್ಪಾದನೆ, NDA ಸರಕಾರದ ಅವಧಿಯಲ್ಲಾದ ವಿದೇಶಿ ನಿವೇಶಗಳ ಹರಿವು, ಕಪ್ಪು ಹಣದಲ್ಲಿ ಕಡಿತ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸದ ಸ್ವತ್ತುಗಳ ಸ್ಥಿತಿಗತಿ ಹೀಗೆ ಹತ್ತು ಹಲವು ವಿಷಯಗಳ ರಿಪೋರ್ಟ್ ಕಾರ್ಡ್ ನೀಡಲು ಮೋದಿ ತಯಾರಾಗಿದ್ದಾರೆ. ಅಂಕ ನೀಡಲು ನೀವು ತಯಾರಾಗಿದ್ದೀರಾ?? ಅಬ್ ಕೀ ಬಾರ್ ಕಾಮ್ ದಾರ್ ಮೋದಿ ವರ್ಸಸ್ ನಾಮ್ ದಾರ್ ಗಾಂಧಿ ಸರ್ಕಾರ್ ನ ಪೈಸೆ ಪೈಸೆ ಲೆಕ್ಕ ಸಿಗಲಿದೆ….

-ಶಾರ್ವರಿ

Tags

Related Articles

Close