ಪ್ರಚಲಿತ

ರಮ್ಯಾ – ರಾಹುಲ್‍ ಗಾಂಧಿಯ ಚಳಿ ಬಿಡಿಸಿದ ಮೋದಿ ಬಂಟ! ಪ್ರಶ್ನೆಗೆ ಉತ್ತರಿಸದೆ ಕಂಗಾಲಾದ ಕಾಂಗ್ರೆಸ್ ನಾಯಕರು!

ಚುನಾವಣೆ ಗೆಲ್ಲಲು ಕಾಂಗ್ರೆಸ್ ಪಕ್ಷ ಯಾವ ದಾರಿಯನ್ನೂ ಹಿಡಿಯುತ್ತೆ ಎಂಬುವುದನ್ನು ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ಅಂದ್ರೇನೆ ಹಾಗೆ. ಅದು ಅಕ್ರಮಗಳ ಕೂಟ. ಬ್ರಟಿಷರೇ ಸೃಷ್ಟಿ ಮಾಡಿದ ಈ ಪಕ್ಷದಲ್ಲಿ ಬ್ರಿಟಿಷ್ ಪದ್ದತಿಯೇ ತಾಂಡವವಾಡುತ್ತಿದೆ ಎಂಬುವುದು ಈಗ ಹಳೆಯ ವಿಚಾರ. ನೆಹರೂ ಕಾಲದಿಂದ ಇಂದಿನವರೆಗೂ ವಾಮ ಮಾರ್ಗದಿಂದಲೇ ಚುನಾವಣೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ಇದೀಗ ಮತ್ತೆ ವಾಮ ಮಾರ್ಗ ಹಿಡಯಲು ಮುಂದಾಗಿದೆ. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ 132 ವರ್ಷದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಐತಿಹಾಸಿಕ ಹೀನಾಯ ಸ್ಥಿತಿಯನ್ನು ತಲುಪಿತ್ತು. ಈ ಸೋಲಿನ ನಂತರ ಬಹತೇಕ ಚುನಾವಣೆ ಎದುರಿಸಿ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಸೋತು ಮಖಾಡೆ ಮಲಗಿತ್ತು. ಈ ಕಾರಣದಿಂದಲೇ ಮುಂದಿನ 2019ರ ಚುನಾವಣೆಗೆ ಕಾಂಗ್ರೆಸ್ ಪಕ್ಷ ವಾಮ ಮಾರ್ಗ ಹಿಡಿದು ಶಸ್ತ್ರ ಸನ್ನದ್ಧವಾಗಿ ನಿಂತಿತ್ತು.

ಕೇಂಬ್ರಿಡ್ಜ್ ಜೊತೆ ಕಾಂಗ್ರೆಸ್ ಒಪ್ಪಂಧಕ್ಕೆ ಕೇಂದ್ರ ಗರಂ..!

ಚುನಾವಣೆ ಗೆಲ್ಲಲು ವಾಮ ಮಾರ್ಗ ಹಿಡಿದಿರುವ ಕಾಂಗ್ರೆಸ್ ಪಕ್ಷ ಈಗ ಅಮೇರಿಕಾದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಮೊರೆ ಹೋಗಿದೆ. ಇದು ವಿಶ್ವದ ದಿಗ್ಗಜರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಖ್ಯಾತಿ ಗಳಿಸಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಜೊತೆಗೆ ಈಗ ಕಾಂಗ್ರೆಸ್ ಒಪ್ಪಂಧ ಮಾಡಿಕೊಂಡಿದ್ದು ರಾಷ್ಟ್ರವ್ಯಾಪಿ ಭಾರೀ ಆಕ್ರೋಷಕ್ಕೆ ಕಾರಣವಾಗಿದೆ. ಫೇಸ್ ಬುಕ್‍ನಲ್ಲಿರುವ ರಹಸ್ಯ ಮಾಹಿತಿಗಳನ್ನು ಕಳ್ಳತನ ಮಾಡಿ ಅದರ ಮೂಲಕ ಚುನಾವಣಾ ಆಟ ಆಡುವ ಈ ಸಂಸ್ಥೆಯೊಂದಿಗೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿರುವುದು ಇದೀಗ ಬಯಲಾಗಿದ್ದು, ಇದನ್ನು ಕೇಂದ್ರ ಮೋದಿ ಸರ್ಕಾರದ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಕಟುವಾಗಿ ಪ್ರಶ್ನಿಸಿದ್ದಾರೆ. ಇಷ್ಟೆಲ್ಲಾ ಪ್ರಕರಣಗಳು ಸಂಭವಿಸುತ್ತಿದ್ದರೂ, ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದರೂ ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.

ಈ ಮಧ್ಯೆ ಕಾಂಗ್ರೆಸ್‍ನ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಮಾಜಿ ಸಂಸದೆ ರಮ್ಯಾ ಈ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. “ಮೋದಿ ಅಮೇರಿಕಾಕ್ಕೆ ತೆರಳಿದ ಸಂದರ್ಭದಲ್ಲಿ ಫೇಸ್ ಬುಕ್ ಸಂಸ್ಥಾಪಕ ಜುಕರ್ ಬರ್ಗ್‍ರನ್ನು ಅಪ್ಪಿಕೊಂಡಿದ್ದಾರೆ. ಇವರಲ್ಲೇನೋ ಸಂಬಂಧವಿರಬಹುದು” ಎಂದು ವ್ಯಂಗ್ಯವಾಡಿದ್ದಾರೆ. ಆದರೆ ಕೇಂದ್ರ ಕಾನೂನು ಸಚಿವರ ಹೇಳಿಕೆಯು ರಾಹುಲ್ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾರನ್ನೂ ಚಳಿ ಬಿಡಿಸಿದಂತಿದೆ. ರಮ್ಯಾ ಈ ರೀತಿ ಟ್ವೀಟ್ ಮಾಡುತ್ತಲೇ ಅತ್ತ ರವಿಶಂಕರ್ ಪ್ರಸಾದ್ ಸುದ್ಧಿಗೋಷ್ಟಿ ನಡೆಸಿ ನಿಮ್ಮ ಕಳ್ಳಾಟವನ್ನು ಬಯಲಿಗೆಳೆಯುತ್ತೇನೆ ಎಂದು ಅಬ್ಬರಿಸಿದ್ದಾರೆ.

ಆದರೆ ಸದಾ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಇರುವ ರಾಹುಲ್ ಗಾಂಧಿ ಹಾಗೂ ರಮ್ಯಾ ಜೋಡಿ ಅದೇ ಕಾಂಗ್ರೆಸ್ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂಬ್ರಿಡ್ಜ್ ಜೊತೆ ಒಪ್ಪಂಧವನ್ನು ಮಾಡಿಕೊಂಡಿದ್ದರ ಬಗ್ಗೆ ಸೊಲ್ಲೆತ್ತುವುದಿಲ್ಲ. ಎಲ್ಲಿ ತಮ್ಮ ಪಕ್ಷದ ಕಳ್ಳಾಟಿಕೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತೋ ಎನ್ನುವ ಭಯದಿಂದ ಈ ಬಗ್ಗೆ ಜಾಣ ಮೌನವನ್ನು ಅನುಸರಿಸಿದ್ದಾರೆ. ಆದರೆ ಮೋದಿ ಸರ್ಕಾರದ ಎಚ್ಚರಿಕೆಯ ನಂತರ ಸ್ವತಃ ಫೇಸ್ ಬುಕ್ ಸಂಸ್ಥಾಪಕ ಜುಕರ್ ಬರ್ಗ್ ಅವರೇ ಕ್ಷಮೆ ಕೇಳಿದ್ದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನೆಡೆಯನ್ನೇ ಉಂಟು ಮಾಡಿದೆ.

ಯಾಕೆ ಆಕ್ರೋಶ..?

ಇನ್ನೇನು ಲೋಕಸಭಾ ಚುನಾವಣೆಯ ಅಬ್ಬರವೂ ಆರಂಭವಾಗುತ್ತದೆ. ಸಾಮಾಜಿಕ ಜಾಲತಾಣದ ಮೂಲಕವೇ ಭಾರತೀಯ ಜನತಾ ಪಕ್ಷಕ್ಕೆ ಭರ್ಜರಿ ಜಯವನ್ನು ನೀಡಿದ್ದನ್ನು ಮನಗಂಡಂತಹ ಕಾಂಗ್ರೆಸ್ ಪಕ್ಷ ತನ್ನ ನೀತಿಯಲ್ಲಿ ಸಡಿಲಿಕೆಯನ್ನು ಮಾಡಿಕೊಂಡಿತ್ತು. ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕಾಂಗ್ರೆಸ್ ಪಕ್ಷ ಮುಂದಾಗಿತ್ತು. ಮಾತ್ರವಲ್ಲದೆ ಅಮೇರಿಕಾ ಮೂಲದ “ಕೇಂಬ್ರಿಡ್ಜ್ ಅನಾಲಿಟಿಕಾ ” ಎಂಬ ಸಂಸ್ಥೆಯೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ತಂತ್ರ ಹೂಡಿರುವ ಕಾಂಗ್ರೆಸ್ ಈ ಸಂಸ್ಥೆಗೆ ಗುತ್ತಿಗೆ ನೀಡಿದೆ.

ಏನಿದು ಕೇಂಬ್ರಿಡ್ಜ್ ಅನಾಲಿಟಿಕಾ ..?

ಕೇಂಬ್ರಿಡ್ಜ್ ಅನಾಲಿಟಿಕಾ . ಇದು ಒಂದು ಸಾಮಾಜಿಕ ಜಾಲತಾಣದ ಸಮೂಹ ಸಂಸ್ಥೆ. ರಾಜಕೀಯವಾಗಿ ಒಂದು ಪಕ್ಷವನ್ನು ಅಥವಾ ಒಬ್ಬ ವ್ಯಕ್ತಿಯನ್ನು
ಪ್ರತಿನಿದಿಸುವ ಸಂಸ್ಥೆ. ಈ ಸಂಸ್ಥೆ ಈ ಹಿಂದೆ ಅಮೇರಿಕಾದ ಚುನಾವಣಾ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಟ್ರಂಪ್ ಪರವಾಗಿ ಕೆಲಸ ಮಾಡಿತ್ತು. ಈ ಮೂಲಕ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್‍ಗೆ ಸುಲಭ ಜಯ ದೊರೆಯುವಂತೆ ಮಾಡಿತ್ತು.

ಕೇಂಬ್ರಿಡ್ಜ್ ಅನಾಲಿಟಿಕಾ ಎಂಬ ಸಂಸ್ಥೆ ಫೇಸ್ ಬುಕ್‍ನೊಂದಿಗೂ ನಂಟನ್ನು ಹೊಂದಿಕೊಂಡಿದೆ. ಅಮೇರಿಕಾದ ಚುನಾವಣೆಯಲ್ಲಿ ಈ ಸಂಸ್ಥೆ ಸುಮಾರು 5 ಕೋಟಿ ಜನರನ್ನು ತಲುಪಿದೆ. ಹೀಗೆ ಪ್ರತಿಯೊಬ್ಬರ ಡೇಟಾವನ್ನು ಕಳ್ಳತನ ಮಾಡಿ ಅವರನ್ನು ಬ್ಲಾಕ್ ಮೇಲ್ ಮಾಡುವ ತಂತ್ರವನ್ನು ಈ ಸಂಸ್ಥೆ ಅನುಸರಿಸಿಕೊಂಡು ಬರುತ್ತಿದೆ. ಫೇಸ್ ಬುಕ್ ಗ್ರಾಹಕರ ಖಾತೆಗಳನ್ನು ಹೈಜಾಕ್ ಮಾಡಿ ಅವರ ಆಂತರಿಕ ಭದ್ರೆತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಕಳೆ ಹಾಕಿ ಬೆದರಿಸುವ ತಂತ್ರವನ್ನು ಅನುಸರಿಸುತ್ತಿದೆ. ಇದು ಈಗ ಎಲ್ಲಡೆ ಆಕ್ರೋಷಕ್ಕೆ ಕಾರಣವಾಗಿದೆ.

ಸೆಕ್ಸ್ ವರ್ಕರ್ ತಂತ್ರ..!

ಈ ಸಂಸ್ಥೆ ಯಾವ ರೀತಿಯ ವಾಮ ಮಾರ್ಗವನ್ನು ಹಿಡಿದಿದೆ ಎಂದರೆ ಸೆಕ್ಸ್ ವರ್ಕರ್ ಅಂತಹ ನೀಚ ಕೆಲಸಕ್ಕೂ ಇದು ಇಳಿದಿದೆ. ಉಕ್ರೇನ್ ಮೂಲದ ಅಂದದ ಹುಡುಗಿಯರನ್ನು ತಾನು ಕೆಲಸ ಮಾಡುತ್ತಿರುವ ಪಕ್ಷದ ವಿರೋಧಿ ಗುಂಪಿನ ವ್ಯಕ್ತಿಯ ಬಳಿ ಕಳಿಸಿ ಅವರೊಂದಿಗೆ ಲೈಂಗಿಕ ಸಂಪರ್ಕವನ್ನು ಬೆಳೆಸಿಕೊಂಡು, ಹಾಗೂ ಅದನ್ನು ಗುಪ್ತವಾಗಿ ರೆಕಾರ್ಡ್ ಮಾಡಿ ನಂತರ ಅದನ್ನು ಹರಿಯ ಬಿಡುವ ಮೂಲಕ ತೇಜೋವಧೆ ಮಾಡುವ ಕೆಲಸಕ್ಕೂ ಈ ಸಂಸ್ಥೆ ಕೈ ಹಾಕಿದೆ. ಇದು ಅಮೇರಿಕಾದಲ್ಲಿ ಭಾರೀ ಸುದ್ಧಿ ಮಡಿತ್ತು. ಇಂತಹ ತಂತ್ರಗಳ ಮೂಲಕ ವಿರೋಧ ಪಕ್ಷಗಳನ್ನು ಈ ಸಂಸ್ಥೆ ಸದಾ ಸನ್ನದ್ಧವಾಗಿರುತ್ತಿತ್ತು.

ಕಾಂಗ್ರೆಸ್‍ಗೆ ಯಾಕೆ ಬೇಕಿತ್ತು..?

ಈಗ ಭಾರತದಲ್ಲಿ ಎದ್ದಿರುವ ವಿಚಾರವೂ ಇದೇ. ಅಮೇರಿಕಾದಲ್ಲಿ ಟ್ರಂಪ್ ಗೆಲ್ಲುವ ಯಾವುದೇ ಸ್ಥಿತಿ ಅಲ್ಲಿ ಇರಲಿಲ್ಲ. ಆದರೆ ಇಂತಹಾ ವಾಮಮಾರ್ಗ ಹಿಡಿದು ಅಲ್ಲಿ ಟ್ರಂಪ್‍ರನ್ನು ಗೆಲ್ಲಿಸಿ ಬಿಟ್ಟಿತ್ತು ಈ ಸಂಸ್ಥೆ. ಇದೀಗ ಈ ಸಂಸ್ಥೆ ಭಾರತದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಪಣ ತೊಟ್ಟಿದ್ದು ಕಾಂಗ್ರೆಸ್ ಪಕ್ಷ ಈ ಸಂಸ್ಥೆಯೊಂದಿಗೆ ಒಪ್ಪಂಧವನ್ನು ಮಾಡಿಕೊಂಡಿದೆ. ಇದರಲ್ಲಿ ಯಾವ ವಿಚಾರ ಅಡಗಿದೆ ಎಂಬುವುದು ಇನ್ನೂ ರಹಸ್ಯವಾಗಿಯೇ ಇದೆ. ವಾಮ ಮಾರ್ಗ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುವ ಈ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಕಾಂಗ್ರೆಸ್ ಭಾರತದಲ್ಲಿಯೂ ಭಾರತೀಯ ಜನತಾ ಪಕ್ಷದ ವಿರುದ್ಧ ಸೆಕ್ಸ್ ವರ್ಕರ್ ಅಥವಾ ಇನ್ನಿತರ ವಿದ್ರೋಹಿ ದಾರಿಗಳನ್ನು ಹಿಡಿಯುತ್ತಾ ಎಂಬ ಸಂಶಯಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಈ ಸಂಸ್ಥೆಯ ವಿರುದ್ಧ ಹಾಗೂ ಈ ಸಂಸ್ಥೆಯೊಂದಿಗೆ ಕೈಜೋಡಿಸಿ ತಮ್ಮ ಖಾತೆಗಳ ರಹಸ್ಯಗಳನ್ನು ಸೋರಿಕೆ ಮಾಡಲು ಅವಕಾಶ ನೀಡಿರುವ ಫೇಸ್ ಬುಕ್ ಸಂಸ್ಥೆಗೂ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಪ್ರಧಾನಿ ಮೋದಿಯನ್ನು ಸೋಲಿಸಿ ಅಧಿಕಾರದ ಪಾರುಪತ್ಯವನ್ನು ಸ್ಥಾಪಿಸಬೇಕೆಂಬ ಹಠಕ್ಕೆ ಬಿದ್ದಿರುವ ರಾಷ್ಟ್ರ ಕಾಂಗ್ರೆಸ್ ಪಕ್ಷ ಈ ರೀತಿಯ ವಾಮಮಾರ್ಗವನ್ನು ಹಿಡಿದು ಈಗ ಪೇಚಿಗೆ ಸಿಲುಕಿದೆ. ಇದು ಮುಂದಿನ ದಿನಗಳಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ಇದು ಭಾರೀ ಹಿನ್ನೆಡೆಯೆಂದೂ ಪರಿಗಣಿಸಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close