ಪ್ರಚಲಿತ

ಮೋದಿ ಸಾಧನೆಗಳ ಮುಕುಟಕ್ಕೆ ಮತ್ತೊಂದು ಮಣಿ ಸೇರ್ಪಡೆ! ಮೋದಿ ಸರ್ಕಾರದ ವಿದ್ಯುತ್ ಉತ್ಪಾದನೆ ಕಂಡು ಬೆರಗಾದ ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾ ದೇಶಗಳು ತಮ್ಮನ್ನು “ಬೆಳಗಲು” ಇತ್ತರು ಭಾರತಕ್ಕೆ ಮೊರೆ!!

ಪ್ರತಿ ಭಾರತೀಯನಿಗೂ ಗೌರವದ ವಿಚಾರವಿದು. 1000 ದಿನಗಳ ಗಡುವಿಗೂ ಮೊದಲೆ ದೇಶದ ಗ್ರಾಮೀಣ ಭಾಗಗಳಲ್ಲಿ ನೂರಕ್ಕೆ ನೂರು ವಿದ್ಯುದೀಕರಣ ಪೂರೈಸಿದ ಮೋದಿ ಸರಕಾರದ ಸಾಧನೆಗೆ ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾ ದೇಶಗಳು ಮನಸೋತಿವೆ. ಮೋದಿ ಸರಕಾರದ ಗ್ರಾಮೀಣ ವಿದ್ಯುಚ್ಛಕ್ತಿ ಯೋಜನೆಯಿಂದ ಪ್ರಭಾವಿತರಾದ ಆಫ್ರಿಕಾ ಮತ್ತು ಮಧ್ಯ ಪ್ರಾಚ್ಯ ದೇಶಗಳು ತಮ್ಮ ಹಳ್ಳಿಗಳನ್ನೂ ಕೂಡಾ ಭಾರತದ ಮಾದರಿ ಸಂಪೂರ್ಣ ವಿದ್ಯುದೀಕರಣಗೊಳಿಸಲು ಮೋದಿ ಸರ್ಕಾರದ ನೆರವು ಕೇಳಿದ್ದಾರೆ. ಈ ದೇಶಗಳ ಸರಕಾರಗಳು ಭಾರತ ಸರಕಾರದಿಂದ ನಡೆಸಲ್ಪಡುವ ಗ್ರಾಮೀಣ ವಿದ್ಯುದೀಕರಣ ನಿಗಮದೊಂದಿಗೆ ಕೈ ಜೋಡಿಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಮಿಂಟ್ ಪತ್ರಿಕೆ ವರದಿ ಮಾಡಿದೆ.

ವರದಿಯ ಪ್ರಕಾರ, ಜೋರ್ಡಾನ್, ಸಿರಿಯಾ ಮತ್ತು ಆಫ್ರಿಕಾದಲ್ಲಿನ ಉಪ-ಸಹಾರಾ ದೇಶಗಳು RECಯ ಸಹಾಯ ಪಡೆಯಲು ಆಸಕ್ತಿ ವಹಿಸಿವೆ. ಆಫ್ರಿಕಾದಲ್ಲಿನ ದೇಶಗಳು ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು ಒಳಗೊಂಡಿರುವ ಸಂಪೂರ್ಣ ವಿದ್ಯುದೀಕರಣ ಪ್ಯಾಕೇಜ್ ಬಯಸುತ್ತಿವೆ. ಮತ್ತೊಂದೆಡೆ ಯುದ್ದ ತ್ರಸ್ತ ದೇಶ ಸಿರಿಯಾ ಕೂಡಾ ವಿದ್ಯುತ್ ಅಭಾವದಿಂದ ನರಳುತ್ತಿದೆ. ಇಂತಹ ದೇಶಗಳು ತಮ್ಮ ಹಳ್ಳಿಗಳನ್ನು “ಬೆಳಗಲು” ಭಾರತದ ಸಹಾಯ ಬಯಸುತ್ತಿವೆ. ಅಲ್ಲಿಗೆ ಮೋದಿಯವರು ತಮ್ಮ ದೇಶದ ಹಳ್ಳಿಗಳನ್ನು ಮಾತ್ರವಲ್ಲ ವಿದೇಶದ ಹಳ್ಳಿಗಳನ್ನೂ ಬೆಳಗುವ ಭಾಗ್ಯ ವಿಧಾತ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. “ವಿರೋಧಿ”ಗಳಿಗೆ ಉರಿಯಲು ಮತ್ತು “ಭಕ್ತ”ರಿಗೆ ಸಂಭ್ರಮಿಸಲು ಮತ್ತೊಂದು ಕಾರಣ ಸಿಕ್ಕಂತಾಯಿತು!!

ಭಾರತ ಈಗಾಗಲೇ ವಿದ್ಯುತ್ ವಲಯದಲ್ಲಿ ಹಲವು ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ. ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ (PGCIL) ವು ಕೀನ್ಯಾ, ನೇಪಾಳ, ಭೂತಾನ್, ಬಾಂಗ್ಲಾದೇಶ, ಕಿರ್ಗಿಜ್ ರಿಪಬ್ಲಿಕ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳ ಗ್ರಾಹಕರನ್ನು ಹೊಂದಿದೆ. ಭಾರತವು ಈಗ ಕೊಳ್ಳುವ ದೇಶವಾಗಿ ಸೀಮಿತವಾಗಿಲ್ಲ ಬದಲಾಗಿ ಕೊಡುವ ದೇಶವಾಗಿ ಪರಿವರ್ತನೆ ಹೊಂದಿದೆ. ತಮ್ಮ ಅನುಭವ ಮತ್ತು ಪರಿಣತಿಯನ್ನು ಆರ್ಥಿಕವಾಗಿ ಉದಯೋನ್ಮುಖವಾಗುತ್ತಿರುವ ಇತರ ದೇಶಗಳಲ್ಲಿ ವಿದ್ಯುತ್ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ತಾವು ಹಲವಾರು ಸೇವೆಗಳನ್ನು ನೀಡಲು ಮತ್ತು ಹಣಕಾಸು ಒದಗಿಸಲು ಸಿದ್ಧರಾಗಿದ್ದೇವೆ ಎಂದು RECಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ವಿ. ರಮೇಶ್ ಹೇಳಿದ್ದಾರೆ. ಇದು ಭಾರತದ ಸಾಮರ್ಥ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.

PGCIL ಮತ್ತು REC ಯ ಸಹಾಯ ಪಡೆಯಲು ಬಯಸುವವರಿಗೆ ಸಹಾಯ ನೀಡಲು ನಾವು ಸದಾ ತಯಾರಾಗಿದ್ದೇವೆ ಎಂದು ವಿದ್ಯುತ್ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಹೇಳಿದ್ದಾರೆ. ನೋಡಿ… ಅದೆ ಅಧಿಕಾರಿಗಳು, ಅದೆ ಕಾರ್ಮಿಕರು, ಅದೆ ಯಂತ್ರಗಳು… ಆದರೆ ಸರಕಾರ ಮಾತ್ರ ಬೇರೆ, ಸರಕಾರದ ರಾಜ ಬೇರೆ. “ಯಥಾ ರಾಜ ತಥಾ ಪ್ರಜಾ” ಎನ್ನುವ ಮಾತಿನಂತೆ ಗದ್ದುಗೆಯಲ್ಲಿ ಕುಳಿತ ರಾಜ ಸರಿಯಾಗಿದ್ದರೆ ಆತನ ಸೇನಾಪತಿಗಳು, ಮಂತ್ರಿಗಳು ಅಷ್ಟೇ ಏಕೆ ಪ್ರಜೆಗಳು ಕೂಡಾ ಸರಿಯಾದ ರೀತಿಯಲ್ಲೆ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದು ಮೋದಿ ಅವರ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಿಜ. “ರೋಬೋಟ್” ಪ್ರಧಾನ ಮಂತ್ರಿ ಇದ್ದ ಕಾಲದಲ್ಲಿ ಉಳ್ಳವನ ಮನೆಯಲ್ಲಿ ಉಂಡವನೆ ಜಾಣ ಎಂದು ಕೊಳ್ಳೆ ಹೊಡೆದದ್ದೆ ಹೊಡೆದದ್ದು. ಆದರೆ ಈಗ ಹಾಗಲ್ಲ, ಮೋದಿ ತಾನೂ ತಿನ್ನುವುದಿಲ್ಲ, ಇತರನ್ನು ತಿನ್ನಲೂ ಬಿಡುವುದಿಲ್ಲ. ತಾನೂ ಮಲಗುವುದಿಲ್ಲ, ಅಧಿಕಾರಿಗಳನ್ನು ಮಲಗಲೂ ಬಿಡುವುದಿಲ್ಲ!! ಅದಕ್ಕೆ ತಾನೆ 1000 ದಿನಗಳ ಗಡುವಿಗೆ ಇನ್ನೂ 12 ದಿನ ಬಾಕಿ ಇರುವಾಗಲೆ ದೇಶದ ಹಳ್ಳಿ ಹಳ್ಳಿಗೂ ವಿದ್ಯುತ್ ತಲುಪಿಸಿದ್ದು.

ತನ್ನ ದೇಶವನ್ನು “ಅಭಿವೃದ್ದಿಯ ಗೌರಿ ಶಂಕರ” ಶಿಖರ ಹತ್ತಿಸುತ್ತಿರುವ ಮೋದಿ ತಮ್ಮ ಜೊತೆ ಇತರ ರಾಷ್ಟ್ರಗಳ ಅಭಿವೃದ್ದಿಯೆಡೆಗೂ ಗಮನ ಹರಿಸುತ್ತಿದ್ದಾರೆ. ಅಭಿವೃದ್ದಿಯ ದೃಷ್ಠಿಯಲ್ಲಿ “ವಾಮನನಂತಿದ್ದ ಭಾರತವು ತ್ರಿವಿಕ್ರಮನಾಗಿ” ಬೆಳೆಯುತ್ತಲಿದೆ. ಇದಕ್ಕೆಲ್ಲ ಕಾರಣ ಮೋದಿ. ಮನಸ್ಸುಗಳಿಗೆ ಹಿಡಿದ ಪೂರ್ವಾಗ್ರಹದ ಪಾಚಿಗಳನ್ನು ಕಳಚಿ ನೋಡಿ, ಮೋದಿಯಂತಹ ಪ್ರಧಾನಮಂತ್ರಿ ಹಿಂದೆ ಬಂದಿಲ್ಲ ಮುಂದೆ ಬರುವುದೂ ಇಲ್ಲ ಬರೆದಿಟ್ಟುಕೊಳ್ಳಿ..

-ಶಾರ್ವರಿ

Tags

Related Articles

Close