ಪ್ರಚಲಿತ

ಚೀನಾವನ್ನು ಮಣಿಸಲು ಮೋದಿಯವರ ಮಾಸ್ಟರ್ ಪ್ಲಾನ್! 2020 ರ ಹೊತ್ತಿಗೆ ಎಲ್ಲಾ ಈಶಾನ್ಯ ರಾಜಧಾನಿಗಳನ್ನು ಸಂಪರ್ಕಿಸಲು ಭಾರತೀಯ ರೈಲ್ವೆಗೆ 90,000 ಕೋಟಿ ರುಪಾಯಿ ಭರ್ಜರಿ ಬಹುಮಾನ!!

ಚೀನಾಕ್ಕೆ ಹೋಗಿ ಚಹಾ ಕುಡಿದು ಬಂದರೂ ತಾನು ದೇಶದ ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿ ಕೊಳ್ಳುವುದಿಲ್ಲವೆನ್ನುವುದನ್ನು ಮೋದಿ ಜಗತ್ತಿಗೆ ಸಾರುತ್ತಲೆ ಬಂದಿದ್ದಾರೆ. ರಾಜತಾಂತ್ರಿಕ ಮೈತ್ರಿ ಒಂದು ಕಡೆ ಆದರೆ ದೇಶದ ಸುರಕ್ಷತೆ ಇನ್ನೊಂದೆಡೆ ಎನ್ನುವುದು ಮೋದಿಯವರ ಸ್ಪಷ್ಟ ನೀತಿ. ಡೋಖಲಾಮ್ ಮತ್ತು ಸಿಕ್ಕಿಂನಲ್ಲಿ ಅನುದಿನ ಖ್ಯಾತೆ ತೆಗೆಯುವ ಚೀನಾದ ಸೊಂಟ ಮುರಿಯಲು ಮೋದಿಯವರು ಮಾಸ್ಟರ್ ಪ್ಲಾನ್ ಮಾಡುತ್ತಲೆ ಬಂದಿದ್ದಾರೆ. ಚೀನಾವನ್ನು ಎದುರಿಸಬೇಕಾದರೆ ಭಾರತದ ಪೂರ್ವೋತ್ತರ ರಾಜ್ಯಗಳು ಸಶಕ್ತವಾಗಿರಬೇಕು ಮತ್ತು ಭಾರತದ ಮುಖ್ಯಧಾರೆಯಲ್ಲಿ ಒಂದಾಗಿರಬೇಕು. ಅದಕ್ಕಾಗಿಯೆ ಅಸ್ಸಾಂನಲ್ಲಿ ಸೇತುವೆ ನಿರ್ಮಿಸಿದ ಮೋದಿ ಸರಕಾರ, ಸಿಕ್ಕಿಂನಲ್ಲಿ ಎಪ್ಪತ್ತು ವರ್ಷಗಳ ಬಳಿಕ ವಿಮಾನ ನಿಲ್ದಾಣ ನಿರ್ಮಿಸಿ ಮೊದಲ ಬಾರಿಗೆ ನಾಗರಿಕ ವಿಮಾನ ಇಳಿಯುವಂತೆ ಮಾಡಿದರು. ರಕ್ಷಣೆಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿರುವ ಈ ವಿಮಾನ ನಿಲ್ದಾಣ ಭಾರತೀಯ ಸೇನೆಯ ಸುಪರ್ದಿಯಲ್ಲೆ ಇರುತ್ತದೆ.

ಇದೀಗ ಈಶಾನ್ಯ ರಾಜ್ಯಗಳ ರಾಜಧಾನಿಗಳನ್ನು ಬೆಸೆಯಲು ಭಾರತೀಯ ರೈಲ್ವೆಗೆ 90,000 ಕೋಟಿ ರುಪಾಯಿ ಭರ್ಜರಿ ಬಹುಮಾನ ನೀಡಿದ್ದಾರೆ ಮೋದಿ. 2020 ರ ಹೊತ್ತಿಗೆ ಈಶಾನ್ಯ ರಾಜ್ಯಗಳ ಎಲ್ಲಾ ರಾಜಧಾನಿಗಳಿಗೆ ರೈಲ್ವೆ ಸಂಪರ್ಕವನ್ನು ಒದಗಿಸುವ ಗುರಿಯನ್ನು ರಾಜ್ಯ ಸ್ವಾಮ್ಯದ ಭಾರತೀಯ ರೈಲ್ವೆಗಳು ಹೊಂದಿವೆ. ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ತ್ರಿಪುರಾ ಈಗಾಗಲೇ ರೈಲ್ವೆ ಸಂಪರ್ಕ ಹೊಂದಿದ್ದು, ಮಿಜೋರಾಂ, ಮೇಘಾಲಯ, ಮಣಿಪುರ, ಸಿಕ್ಕಿಂ ಮತ್ತು ನಾಗಾಲ್ಯಾಂಡಿನ ರಾಜಧಾನಿಗಳು ರೈಲ್ವೇ ಸಂಪರ್ಕವನ್ನು ಹೊಂದಿಲ್ಲ. ಈ ಎಲ್ಲಾ ರಾಜ್ಯಗಳ ರೈಲ್ವೆ ಸಂಪರ್ಕವು ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಮಾತ್ರವಲ್ಲ ದೇಶದ ಸೈನ್ಯವು ತಮ್ಮ ಶಸ್ತ್ರಾಸ್ತ ಮತ್ತು ಸೇನಾ ಉಪಕರಣಗಳನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ತ್ವರಿತಗತಿಯಲ್ಲಿ ಸಾಗಿಸಲು ನೆರವಾಗುತ್ತವೆ.

ಭಾರತೀಯ ರೈಲ್ವೇಯ ಈಶಾನ್ಯ ಸಂಪರ್ಕ ಯೋಜನೆಯು ಅರುಣಾಚಲ ಪ್ರದೇಶದ 795 ಕಿ.ಮೀ ರೈಲ್ವೆ ಮಾರ್ಗವನ್ನೂ ಸಹ ಒಳಗೊಂಡಿದೆ. ಇದರಿಂದ ತುರ್ತು ಸಮಯದಲ್ಲಿ ಭಾರತೀಯ ಸೇನೆಯು ಚೀನಾದ ಗಡಿಯವರೆಗೆ ನಿರಾಯಾಸದಿಂದ ಪ್ರವೇಶಿಸಬಹುದು!! ಎಂಥಾ ಮಾಸ್ಟರ್ ಪ್ಲಾನ್ ಮೋದಿಯವರದ್ದು!! ತನ್ನ ದೇಶದ ಭದ್ರತೆಯ ವಿಷಯದಲ್ಲಿ ಶತ್ರುಗಳಿಗಿಂತ ಒಂದು ಹೆಜ್ಜೆ ಮುಂದೆ ಯೋಚಿಸುತ್ತಾರೆ ಮೋದಿ. ಇಂಡೋ-ಚೈನಾ ಗಡಿಯಲ್ಲಿ ಮೂರು ವಿಭಿನ್ನ ಮಾರ್ಗಗಳಿಗೆ ಅಂತಿಮ ಭೂ-ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಮತ್ತು ಅಂತಿಮ ವರದಿಯನ್ನು ಶೀಘ್ರವೆ ರಕ್ಷಣಾ ಸಚಿವಾಲಯಕ್ಕೆ ನೀಡಲಾಗುತ್ತದೆ. ದೇಶಾದ್ಯಂತ ಇಂತಹ 14 ಯೋಜನೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ನಾಲ್ಕು ಯೋಜನೆಗಳಿಗೆ ರೂಪುರೇಷೆ ನೀಡಿ ಅಂತಿಮ ಪ್ರಕ್ರಿಯೆಗಳನ್ನು ಮುಗಿಸಲಾಗಿದೆ. ಈ ನಾಲ್ಕು ಯೋಜನೆಗಳಲ್ಲಿ ಒಂದು ಮಾರ್ಗವು ಲೇಹ್ ಅನ್ನು ನೇರವಾಗಿ ಪಠಾನ್ ಕೋಟ್ ಗೆ ಸಂಪರ್ಕಿಸಿದರೆ, ಉಳಿದವು ಈಶಾನ್ಯ ರಾಜ್ಯಗಳಲ್ಲಿವೆ.

ಲೇಹ್, ಪಠಾಣ್ ಕೋಟ್ ಮತ್ತು ಈಶಾನ್ಯ ರಾಜ್ಯಗಳು ಪಾಕಿಸ್ತಾನ ಮತ್ತು ಚೀನಾ ಗಡಿಗೆ ಅಂಟಿಕೊಂಡಿರುವ ಅತಿ ಮಹತ್ವದ ಜಾಗಗಳು. ಚೀನಾ ಮತ್ತು ಪಾಕಿಸ್ತಾನ ನಿತ್ಯ ಭಾರತೀಯ ಗಡಿ ರೇಖೆಯಲ್ಲಿ ತಂಟೆ ನೀಡುತ್ತಿವೆ. ಯುದ್ದ ನಡೆದರೆ ಹಿಂದಿನಂತೆ ಭಾರತ ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಯಲ್ಲಿ ಈಗ ಇಲ್ಲ. ಯಾವುದೆ ಸಂಧರ್ಭದಲ್ಲೂ ಯುದ್ದಕ್ಕೆ ಅಣಿಯಾಗಿರಲು ಮುನೆಚ್ಚರಿಕಾ ಕ್ರಮವಾಗಿ ಮೋದಿಯವರು ಒಂದೊಂದು ಹೆಜ್ಜೆಯನ್ನೂ ಯೋಚಿಸಿ ಇಡುತ್ತಿದ್ದಾರೆ. ದೇಶದ ರಾಜ ಮಾರ್ಗದಲ್ಲಿ ಸೇನಾ ವಿಮಾನವನ್ನು ಇಳಿಸಿ ಶತ್ರುಗಳಿಗೆ ‘ನಮ್ಮ ಸೇನೆ ಯುದ್ದಕ್ಕೆ ಸದಾ ಸನ್ನದ್ದ’ ಎನ್ನುವ ಎಚ್ಚರಿಕೆಯನ್ನು ಈಗಾಗಾಲೆ ನೀಡಿದ್ದಾರೆ. ಈಶಾನ್ಯ ರಾಜ್ಯಗಳಿಗೆ ರೈಲ್ವೆ ಸಂಪರ್ಕ ಅದರ ಮುಂದುವರಿದ ಭಾಗವಷ್ಟೆ. ಸದಾ ದೇಶದ ರಕ್ಷಣೆಯ ಬಗ್ಗೆ ಚಿಂತಿಸುವ ಇಂತಹ ಪ್ರಧಾನ ಮಂತ್ರಿ ನಮ್ಮ ಹೆಮ್ಮೆ…ನಮ್ಮ ಗೌರವ…ಮುಂದಿನ ಹಲವಾರು ವರ್ಷಗಳ ಕಾಲ ಮೋದಿಯೆ ಭಾರತದ ಪ್ರಧಾನಿಯಾಗಿರಲಿ ಎಂಬುದೆ ದೇಶಪ್ರೇಮಿಗಳ ಹಾರೈಕೆ..

-ಶಾರ್ವರಿ

Tags

Related Articles

Close