ಪ್ರಚಲಿತ

ಭಾರತಕ್ಕೆ ಬೇಕಾದ ಪಾಕ್ ಉಗ್ರ ಅಪರಿಚಿತರಿಂದ ಹತ

ಭಾರತ ವಿರೋಧಿ ಪಾಕಿಸ್ತಾನಿ ಉಗ್ರರ ಮಾರಣ ಹೋಮ ಮುಂದುವರಿದಿದೆ. ಅಪರಿಚಿತ ಭಾರತ ಪ್ರಿಯರು ಭಾರತಕ್ಕೆ ಕಂಟಕಪ್ರಾಯರಾಗಿರುವ ಮತ್ತು ಭಾರತಕ್ಕೆ ಬೇಕಾದ ಉಗ್ರರ ರುಂಡ ಚೆಂಡಾಡುವ ಕಾಯಕವನ್ನು ಮುಂದುವರೆಸಿದ್ದು, ಆ ಮೂಲಕ ಪಾಕಿಸ್ತಾನಕ್ಕೆ ಬೆನ್ನಿಂದ ಬೆನ್ನಿಗೆ ಆಘಾತ ವನ್ನು ಉಂಟುಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಪಾಕ್ ಪ್ರೇರಿತ ಭಯೋತ್ಪಾದಕ ಸಂಘಟನೆ ಜೈಷ್ ಎ ಮೊಹಮ್ಮದ್ ನ ಬೆಂಬಲಿಗ ಮತ್ತು ವಿವಾದಾತ್ಮಕ ಇಸ್ಲಾಮಿಕ್ ಬೋಧರ ಮೌಲಾನಾ ಶೇರ್ ಬಹದ್ದೂರ್ ಎಂಬ ಉಗ್ರ ನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿ ಯಮಪುರಕ್ಕೆ ಅಟ್ಟಿದ್ದಾರೆ.

ಇದನ್ನು ಪಾಕಿಸ್ತಾನದ ಪೊಲೀಸರು, ಅಲ್ಲಿನ ಸರ್ಕಾರ ಅಧಿಕೃತವಾಗಿ ಖಚಿತಗೊಳಿಸಿಲ್ಲ. ಪೇಶಾವರದ ಖೈಬರ್ ಪಂಖ್ತುಖ್ವಾ ಪ್ರದೇಶದಲ್ಲಿ ಅಪರಿಚಿತರು ಈ ಉಗ್ರನನ್ನು ಹತ್ಯೆ ಮಾಡಿದ್ದಾಗಿ ತಿಳಿದು ಬಂದಿದೆ.

ಭಾರತ ವಿರೋಧಿ ಎಂದೇ ಹೆಸರು ಪಡೆದಿರುವ ಪಾಕಿಸ್ತಾನ ಮತ್ತು ವಿದೇಶಗಳಲ್ಲಿ ಭಾರತ ವಿರೋಧಿ ಉಗ್ರರನ್ನು ಅಪರಿಚಿತರು ಹತ್ಯೆ ಮಾಡುತ್ತಿರುವ ಇಪ್ಪತ್ತೊಂದನೆಯ ಘಟನೆ ಇದಾಗಿದೆ. ಮೌಲಾನಾ ಶೇರ್ ನ ಹೋಲಿಕೆಯುಳ್ಳ ರಕ್ತ ಸಿಕ್ತವಾದ ದೇಹವನ್ನು ಪೊಲೀಸರು ಎತ್ತುತ್ತಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಆತ ತನ್ನ ಹಾಸಿಗೆಯಲ್ಲಿ ಹತ್ಯೆಯಾಗಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.

ಒಟ್ಟಿನಲ್ಲಿ ಭಾರತಕ್ಕೆ ಅಪಾಯ ಎಸಗುವ ಉಗ್ರರಿಗೆ ತಕ್ಕ ಶಾಸ್ತಿ ಮಾಡುವ ಕೆಲಸವನ್ನು ಅಪರಿಚಿತ ವ್ಯಕ್ತಿಗಳು ಮಾಡುತ್ತಿದ್ದು, ಆ ಮೂಲಕ ಅವರನ್ನು ಪೋಷಣೆ ಮಾಡುತ್ತಿರುವ ರಾಷ್ಟ್ರಗಳಿಗೆ ಶಾಕ್ ನೀಡುವ ಕೆಲಸವನ್ನು ಮುಂದುವರೆಸಿದ್ದಾರೆ. ಇಂತಹ ಹತ್ಯೆ ನಡೆಸುತ್ತಿರುವ ಕಾಣದ ಕೈಗಳು ಯಾರದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂಬ ವಿಚಾರಗಳು ನಿಗೂಢವಾಗಿದ್ದು, ಎಲ್ಲರ ತಲೆಯಲ್ಲಿ ಓಡುತ್ತಿರುವ ಸಾವಿರ ಮಿಲಿಯನ್ ಪ್ರಶ್ನೆಯಾಗಿಯೂ ಈ ಹತ್ಯೆಯ ಹಿಂದಿನ ರುವಾರಿಗಳು ಉಳಿದಿದ್ದಾರೆ ಎನ್ನುವುದು ಸತ್ಯ.

Tags

Related Articles

Close