ಪ್ರಚಲಿತ

ತ್ರಿಪುರಾದಲ್ಲಿ ಮತ್ತೊಮ್ಮೆ ನೂತನ ಇತಿಹಾಸ ಸೃಷ್ಟಿಸಿದ ಬಿಜೆಪಿ ಸರ್ಕಾರ!! ವಿಧಾನಸಭೆಯಲ್ಲಿಯೇ ಮೊದಲ ಬಾರಿ ಮೊಳಗಿತು ರಾಷ್ಟ್ರಗೀತೆ!

ಆಡಳಿತ ವಿರೋಧಿ ಅಲೆ, ಚಾಣಾಕ್ಷತನದ ಪ್ರಾದೇಶಿಕ ಮೈತ್ರಿ, ಮಾತೃಸಂಘಟನೆ ಆರ್ ಎಸ್ ಎಸ್ ನ ಬಲದೊಂದಿಗೆ ಈಶಾನ್ಯ ರಾಜ್ಯಗಳಲ್ಲೂ ಕೇಸರಿ ಧ್ವಜ ಅರಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 25 ವರ್ಷಗಳಿಂದ ಕೆಂಪು ರಾಜಕೀಯ ಪಕ್ಷದಿಂದ ಆಡಳಿತಕ್ಕೆ ಒಳಗಾಗಿದ್ದರೂ, ಅಭಿವೃದ್ಧಿಯನ್ನು ಕಾಣದೇ ನಿತ್ಯ ಸಂಕಷ್ಟದಲ್ಲಿ ದಿನದೂಡುತ್ತಿದ್ದ ತ್ರಿಪುರಾದ ಜನರು ಬಿಜೆಪಿನ್ನು ಗೆಲ್ಲಿಸುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ತ್ರಿಪುರಾದ ಬಿಜೆಪಿ ಸರ್ಕಾರ ಮತ್ತೊಂದು ಇತಿಹಾಸವನ್ನೇ ಸೃಷ್ಟಿಸಿದೆ!!

ಮೋದಿ ಅಲೆಗೆ ತ್ರಿಪುರಾದಲ್ಲಿ ಎಡಪಕ್ಷದ ಭದ್ರಕೋಟೆ ಕುಸಿದಿದ್ದಲ್ಲದೇ 25 ವರ್ಷಗಳ ಬಳಿಕ ಸಿಪಿಐ(ಎಂ) ಸರ್ಕಾರ ಅಧಿಕಾರ ಕಳೆದುಕೊಂಡಿರುವ ವಿಚಾರ ತಿಳಿದೇ ಇದೆ!! 2013ರಲ್ಲಿ ಖಾತೆ ತೆರೆಯಲೂ ಸಾಧ್ಯವಾಗದ ಬಿಜೆಪಿ ಐ ಪಿ ಎಫ್ ಟಿ ಜತೆಗಿನ ಮೈತ್ರಿಯಿಂದಾಗಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.31ರಷ್ಟಿರುವ ಬುಡಕಟ್ಟು ಮತದಾರರ ಆಶೀರ್ವಾದದೊಂದಿಗೆ 43 ಸ್ಥಾನ ಗೆದ್ದು ಭರ್ಜರಿ ಬಹುಮತ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ ತ್ರಿಪುರಾದಲ್ಲಿ ಇದೀಗ ದೇಶ ಪ್ರೇಮದ ಅಲೆಯನ್ನು ಹರಿಸುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ.

ಹೌದು… ಸುಮಾರು 25 ವರ್ಷ ಕಮ್ಯುನಿಸ್ಟರ್ ಆಡಳಿತದಿಂದ ಬೇಸತ್ತಿದ್ದ ತ್ರಿಪುರಾ ಜನರು ಬಿಜೆಪಿ ಗೆ ಭರ್ಜರಿ ಗೆಲುವು ದೊರಕಿಸಿ ಕೊಟ್ಟಿದ್ದಾರೆ. ಹಾಗಾಗಿ ಬಿಜೆಪಿಯ ವಿಜಯದ ಪರಿಣಾಮ ತ್ರಿಪುರಾದಲ್ಲಿ ಹೊಸ ಅಲೆ ಸೃಷ್ಟಿಯಾಗಿದ್ದು, ದೇಶದ ಐಕ್ಯತೆ, ಭಾವೈಕ್ಯತೆ, ಸಂಸ್ಕೃತಿಯ ಪ್ರತಿಬಿಂಬವಾಗಿರುವ ರಾಷ್ಟ್ರಗೀತೆಯನ್ನು ತ್ರಿಪುರಾದ ವಿಧಾನಸಭೆಯಲ್ಲಿ ಮೊಳಗಿಸುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ.

ಸತತ 25 ವರ್ಷಗಳ ಎಡಪಕ್ಷದ ಆಡಳಿತ ಅಂತ್ಯಗೊಂಡು ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿರುವ ತ್ರಿಪುರಾ ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಗೀತೆ ಮೊಳಗಿತು. ಹೊಸದಾಗಿ ರಚನೆಯಾಗಿರುವ ಬಿಜೆಪಿ ಸರಕಾರದ ಮೊದಲ ಅಧಿವೇಶನದಲ್ಲಿ ರೆಬತಿ ಮೋಹನ್ ದಾಸ್ ಅವರನ್ನು ಸಭಾಪತಿಯಾಗಿ ಆಯ್ಕೆ ಮಾಡಲಾಯಿತು. ಅಷ್ಟೇ ಅಲ್ಲದೇ ಹೊಸದಾಗಿ ಆಯ್ಕೆಯಾಗಿರುವ ಹೊಸ ಸರ್ಕಾರದ ಪ್ರಥಮ ಅಧಿವೇಶನ ಶುಕ್ರವಾರ ಆರಂಭವಾಗಿದ್ದು, ಸಭಾಪತಿ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಗೆ ಮುಂಚೆ ರಾಷ್ಟ್ರಗೀತೆ ಮೊಳಗಿಸಲಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರಗೀತೆಗೆ ಸದನದ ಎಲ್ಲ ಸಿಬ್ಬಂದಿ, ಶಾಸಕರು, ಅಧಿಕಾರಿಗಳು, ಪತ್ರಕರ್ತರು ಎದ್ದು ನಿಂತು ಗೌರವ ನೀಡಿದ್ದಾರೆ.

ಕಳೆದ 25 ವರ್ಷಗಳಿಂದ ತ್ರಿಪುರಾ ರಾಜ್ಯದಲ್ಲಿ ಸಿಪಿಎಮ್ ಎಂಬ ಎಡ ಪಂಥೀಯ ಸರ್ಕಾರ ಆಡಳಿತವನ್ನು ನಡೆಸುತ್ತಿದ್ದು, ಚೀನಾ ಪ್ರೇರಿತ ಎಡ ಪಂಥೀಯ ಸರ್ಕಾರ ಭಾರತದ ಆ ರಾಜ್ಯದಲ್ಲಿ ಕಮಾಲ್ ಮಾಡಿತ್ತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇತೃತ್ವದ ಆಡಳಿತ ಅಲ್ಲಿ ಅಭಿವೃದ್ಧಿಯನ್ನೇ ಕಾಣದೆ ಅಲ್ಲಿನ ಜನ ರೋಸಿ ಹೋಗಿದ್ದದಂತೂ ಅಕ್ಷರಶಃ ನಿಜ!! ಆದರೆ ಈ ಬಾರಿ ಭಾರತೀಯ ಜನತಾ ಪಕ್ಷ ಭರ್ಜರಿ ಭೇಟೆಯಾಡಿ ಕೆಂಪು ನಾಡಿನಲ್ಲಿ ಕೇಸರಿ ಪತಾಕೆಯನ್ನು ಹಾರಿಸಿದೆ. ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರನ್ನು ಕೆಳಗಿಳಿಸಿದ ಭಾರತೀಯ ಜನತಾ ಪಕ್ಷದ ಮಾಣಿಕ್ಯ (ಪ್ರಧಾನಿ ಮೋದಿ) ಶೂನ್ಯ ಸಾಧನೆ ಮಾಡಿದ್ದ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೇರಿಸುವಂತೆ ಮಾಡಿದೆ.

ಈಗಾಗಲೇ ಮಧ್ಯಪ್ರದೇಶದ ಜಬಲ್ ಪುರ್ ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿರುವ ಬಿ.ಎಸ್.ಎನ್.ಎಲ್ ತರಬೇತಿ ಕೇಂದ್ರಗಳಲ್ಲಿ ಹಲವು ವರ್ಷಗಳಿಂದ ರಾಷ್ಟ್ರಗೀತೆ ಹಾಡಿದ ನಂತರವೇ ಕೆಲಸ ಆರಂಭಿಸುವ ಸಂಪ್ರದಾಯ ಇತ್ತು!! ಆದರೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಕಡ್ಡಾಯ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ಇಲ್ಲಿನ ನೌಕರರು ಕೆಲಸ ಆರಂಭಿಸುವ ಮುನ್ನ ಪ್ರಾರ್ಥನೆಯಾಗಿ ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿದ್ದಾರೆ. ಆದರೆ ತ್ರಿಪುರಾ ರಾಜ್ಯದಲ್ಲಿ ಇದೇ ಮೊದಲ ಬಾರಿ ಬಿ.ಎಸ್.ಎನ್.ಎಲ್ ಶಾಖೆಯಲ್ಲೂ ರಾಷ್ಟ್ರಗೀತೆ ಹಾಡಿದ ನಂತರ ಕೆಲಸ ಆರಂಭಿಸುವ ಪರಿಪಾಠ ಆರಂಭವಾಗಿದೆ ಎಂದು ತ್ರಿಪುರಾ ಬಿ.ಎಸ್.ಎನ್.ಎಲ್ ಪ್ರಧಾನ ಅಕೌಂಟೆಂಟ್ ಆಫೀಸರ್ ಆಶಿಮ್ ಭಟ್ಟಾಚಾರ್ಯ ಹೇಳಿದ್ದರು.

ಆದರೆ ಇದೀಗ ದೇಶದ ಐಕ್ಯತೆ, ಭಾವೈಕ್ಯತೆ, ಸಂಸ್ಕೃತಿಯ ಪ್ರತಿಬಿಂಬವಾಗಿರುವ ರಾಷ್ಟ್ರಗೀತೆಯನ್ನು ತ್ರಿಪುರಾದ ವಿಧಾನಸಭೆಯಲ್ಲಿ ಮೊಳಗಿಸುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿರುವುದೇ ಹೆಮ್ಮೆಯ ವಿಚಾರವಾಗಿದೆ. ವಿಧಾನಸಭೆಯಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಪತ್ರಕರ್ತರು ಎದ್ದು ನಿಂತು ಗೌರವ ಸಲ್ಲಿಸಿದರಲ್ಲದೇ ಪ್ರತಿದಿನ ರಾಷ್ಟ್ರಗೀತೆ ಮೊಳಗಿಸಲು ಪ್ರಯತ್ನಿಸುತ್ತೇವೆ ಎಂದು ವಿಧಾನಸಭೆ ಕಾರ್ಯದರ್ಶಿ ಬಾಮ್ದೇಬ್ ಮಜುಂದರ್ ತಿಳಿಸಿದ್ದಾರೆ!!

ಹೌದು… ಸಭಾಪತಿ ಚುನಾವಣೆ ನಡೆಸಲು ರತನ್ ಚಕ್ರವರ್ತಿ ಆಗಮಿಸುತ್ತಿದ್ದಂತೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಕಾರ್ಯದರ್ಶಿ ಬಂಬದೇಬ್ ಮುಜುಂದಾರ್ “ವಿಧಾನಸಭೆಯಲ್ಲಿ ನಿತ್ಯ ರಾಷ್ಟ್ರಗೀತೆಯನ್ನು ಮೊಳಗಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದ್ದಾರೆ. ಆದರೆ ರಾಷ್ಟ್ರಗೀತೆ ಹಾಡುವುದರಲ್ಲೂ ರಾಜಕೀಯ ಬೆರೆಸಿರುವ ಕಮ್ಯುನಿಸ್ಟ್ ಪಾರ್ಟಿ ಮುಖಂಡ ಬಾದಲ್ ಚೌದರಿ “ರಾಷ್ಟ್ರಗೀತೆ ಕುರಿತು ವಿಧಾನಸಭೆ ಅಧಿಕಾರಿಗಳು ಪ್ರತಿಪಕ್ಷಗಳ ಅಭಿಪ್ರಾಯ ಪಡೆದಿಲ್ಲ. ಇಂತಹ ಮಹತ್ವದ ತೀರ್ಮಾನ ಕೈಗೊಳ್ಳುವ ಮುನ್ನ ಪ್ರತಿಪಕ್ಷಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಿತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂತಹ ವಿಪರ್ಯಾಸ ನೋಡಿ ರಾಷ್ಟ್ರಗೀತೆಯನ್ನು ಹಾಡುವುದೆಂದರೆ ದೇಶದ್ರೋಹದ ಕೆಲಸ ಎನ್ನುವ ಮಟ್ಟಿಗೆ ಮಾತಾನಾಡುತ್ತಾರಲ್ಲ ಈ ಕಮ್ಯುನಿಸ್ಟರು!! ಇವರು ಭಾರತದಲ್ಲಿದ್ದಾರೆ, ಅದರಲ್ಲೂ ಭಾರತೀಯರು ಎಂದು ಹೇಳಲು ನಾಚಿಕೆಯಾಗುತ್ತಿದೆ!! ಯಾಕೆಂದರೆ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳದ ಕಮ್ಯುನಿಸ್ಟರ ನಿಲುವುಗಳು ದೇಶಪ್ರೇಮಿಗಳಂತೆ ಕಾಣಲು ಅದು ಹೇಗೆ ಸಾಧ್ಯ!! ರಾಷ್ಟ್ರಗೀತೆ ಹಾಡುವುದರಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇಂತಹ ಕಮ್ಯುನಿಸ್ಟರಿಗೆ ಅದೇನೂ ಹೇಳಬೇಕೋ ನಾ ಕಾಣೆ!!

ಆದರೆ ಕಮ್ಯುನಿಸ್ಟರ ಅಧಿಪತ್ಯ ತ್ರಿಪುರಾ ಹಾಗೂ ಕೇರಳದಲ್ಲಿ ಮಾತ್ರ ಇದ್ದರೂ ಕೂಡ ತಮ್ಮ ಅಹಂಕಾರವನ್ನು ಬಿಡದ ಕಮ್ಯುನಿಸ್ಟರಿಗೆ ರಾಷ್ಟ್ರಗೀತೆ ಹಾಡುವುದೆಂದರೆ ದೇಶದ್ರೋಹದ ಕೆಲಸ ಎಂದರೆ ಇವರು ಭಾರತದಲ್ಲಿ ಇರುವುದಾದರೂ ಯಾಕೆ ಎನ್ನುವ ಪ್ರಶ್ನೆಯೂ ಮೂಡುವುದಂತೂ ಸಹಜ!! ಆದರೆ ಇದೀಗ ಇದೇ ಕಮ್ಯುನಿಸ್ಟರ ನಾಡಿನಲ್ಲಿ, ಇದೇ ಮೊದಲ ಬಾರಿಗೆ ದೇಶದ ಐಕ್ಯತೆ, ಭಾವೈಕ್ಯತೆ, ಸಂಸ್ಕೃತಿಯ ಪ್ರತಿಬಿಂಬವಾಗಿರುವ ರಾಷ್ಟ್ರಗೀತೆಯನ್ನು ತ್ರಿಪುರಾದ ವಿಧಾನಸಬೆಯಲ್ಲಿ ಮೊಳಗಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ ಎಂದರೆ ಇದಕ್ಕಿಂತಲೂ ದೊಡ್ಡದಾದ ಹೆಮ್ಮೆಯ ವಿಚಾರ ಮತ್ತೊಂದಿಲ್ಲ ಎಂದನಿಸುತ್ತದೆ.

Source :https://www.indiatvnews.com/news/india-national-anthem-played-for-first-time-in-tripura- assembly-434126

– ಅಲೋಖಾ

Tags

Related Articles

Close