ಪ್ರಚಲಿತ

ಹಿಂದೂಯೇತರರು ಹಿಂದೂ ದೇವಾಲಯಗಳನ್ನು ಪ್ರವೇಶಿಸುವುದಕ್ಕೆ ನಿರ್ಬಂಧ

ಹಿಂದೂ ಧರ್ಮದ ಮೇಲೆ ನಂಬಿಕೆ ಹೊಂದದವರು, ಹಿಂದೂ ಧರ್ಮವನ್ನು ಅವಮಾನಿಸುವ ಉದ್ದೇಶದಿಂದಲೇ ಕೆಲವು ವಿಕೃತ ಮನಸ್ಸಿನ ಜನರು ಹಿಂದೂ ದೇವಾಲಯಗಳನ್ನು ಗುರಿಯಾಗಿಸಿ ಅವಮಾನ, ಅಪಮಾನ ಎಸಗುವ ದುಷ್ಕೃತ್ಯಗಳನ್ನು ಎಸಗುತ್ತಲೇ ಇರುತ್ತಾರೆ. ಅಂತಹ ದುರಳರನ್ನು ಉದ್ದೇಶಿಸಿ ಮದ್ರಾಸ್ ಹೈಕೋರ್ಟ್ ತಮಿಳುನಾಡಿಗೆ ಸಂಬಂಧಿಸಿದ ಹಾಗೆ ನಿರ್ದೇಶನವೊಂದನ್ನು ನೀಡಿದೆ.

ದೇವಾಲಯಗಳ ಕೊಡಿಮರಂ ಅಥವಾ ಧ್ವಜ ಸ್ತಂಭ ಕ್ಕಿಂತ ಮುಂದುವರಿದು ದೇಗುಲಗಳಿಗೆ ಅನ್ಯ ಧರ್ಮೀಯರು ಪ್ರವೇಶಿಸಬಾರದು ಎಂಬುದಾಗಿ ಈ ನಿರ್ದೇಶನದಲ್ಲಿ ಸೂಚಿಸಲಾಗಿದೆ. ತಮಿಳುನಾಡಿನ ಮಾನವ ಸಂಪನ್ಮೂಲ ಮತ್ತು ಸಿಇ ಇಲಾಖೆಗೆ ಕೋರ್ಟ್ ಈ ನಿರ್ದೇಶನವನ್ನು ನೀಡಿರುವುದಾಗಿದೆ.

ಹಿಂದೂಯೇತರರು ದೇವಾಲಯಗಳ ಕೊಡಿಮರಂ ಅಥವಾ ಧ್ವಜಸ್ತಂಭವನ್ನು ಬಿಟ್ಟು ಮುಂದಕ್ಕೆ ಪ್ರವೇಶಿಸದ ಹಾಗೆ ಬೋರ್ಡ್ ಲಗತ್ತಿಸುವಂತೆ‌ ಕೋರ್ಟ್ ಸೂಚಿಸಿದೆ. ಅರುಗು ಪಳನಿ, ದಂಡಾಯುತಪಾಣಿ ಸ್ವಾಮಿ ದೇಗುಲ ಮತ್ತು ಅವುಗಳ ಉಪ ದೇವಾಲಯ ಗಳಿಗೆ ಹಿಂದೂ ಧರ್ಮೀಯರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಎಸ್. ಶ್ಯಾಮಲ ಅವರು ವಿಚಾರಣೆ ನಡೆಸಿದ್ದರು.

ಇದರ ಹಿನ್ನಲೆಯಲ್ಲಿ ಪ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸುವ ಪಳನಿ ದೇಗುಲದ ವ್ಯವಸ್ಥಾಪಕ ನಿರ್ದೇಶಕರು ಅರ್ಜಿಯನ್ನು ಸ್ವೀಕಾರ ಮಾಡಿದ ಪ್ರತಿವಾದಿಗಳಿಗೆ ಹಿಂದೂ ದೇಗುಲಗಳ ಪ್ರವೇಶದ್ವಾರ, ಧ್ವಜಸ್ತಂಭದ ಹತ್ತಿರ, ದೇಗುಲದ ಪ್ರಮುಖ ಸ್ಥಳಗಳಲ್ಲಿ ‘ದೇವಾಲಯದ ಕೊಡಿಮಾರಂ ನಂತರ ಹಿಂದೂಯೇತರರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇಲ್ಲ’ ಎಂದು ಸೂಚನಾ ಫಲಕಗಳನ್ನು ಲಗತ್ತಿಸುವಂತೆ‌ ಸೂಚಿಸಿದೆ.

ಕೆಲವು ಅನ್ಯಧರ್ಮೀಯರು ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದಿದ್ದರೂ, ಹಿಂದೂ ದೇಗುಲಗಳನ್ನು ಪ್ರವೇಶಿಸಿ, ಅಲ್ಲಿ ಅತಿರೇಕದ ವರ್ತನೆ ತೋರಿ, ಧಾರ್ಮಿಕ ಸ್ಥಳಗಳನ್ನು ಅಪವಿತ್ರ ಮಾಡುವ ಕೆಲಸ ಮಾಡುತ್ತಾರೆ. ಹಾಗಾಗಿ ಹಿಂದೂ ಧರ್ಮದಲ್ಲಿ ನಂಬಿಕೆ ಹೊಂದದವರನ್ನು ಹಿಂದೂ ದೇವಾಲಯಗಳ ಪ್ರವೇಶಕ್ಕೆ ಬಿಡಬೇಡಿ ಎಂದು ಸೂಚಿಸಲಾಗಿದೆ. ಹಿಂದೂಗಳ ಹೊರತಾಗಿ ಯಾರಾದರೂ ಹಿಂದೂ ದೇಗುಲಗಳಿಗೆ ತೆರಳುವುದಾಗಿ ಹೇಳಿಕೊಂಡರೆ, ಅವರಿಗೆ ಆ ದೇವರಲ್ಲಿ ನಂಬಿಕೆ ಬೇಕು. ಹಿಂದೂ ಸಂಪ್ರದಾಯ, ಆಚರಣೆಗಳನ್ನು ಅನುಸರಿಸಬೇಕು. ಹಾಗಿದ್ದಲ್ಲಿ ಮಾತ್ರ ಹಿಂದೂಯೇತರರಿಗೆ ಹಿಂದೂ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಅನುಮತಿ ನೀಡಬಹುದು ಎಂದು ಈ ನಿರ್ದೇಶನದಲ್ಲಿ ಕೋರ್ಟ್ ತಿಳಿಸಿದೆ.

ದೇಶದ ಎಲ್ಲಾ ದೇಗುಲಗಳಲ್ಲಿಯೂ ಹಿಂದೂಗಳ ಹೊರತಾಗಿ, ಇತರ ಧರ್ಮೀಯರಿಗೆ ಭಕ್ತಿ ಇಲ್ಲದ ಸಂದರ್ಭದಲ್ಲಿ ದೇವಾಲಯ ಪ್ರವೇಶ ನಿಷೇಧವಾಗಬೇಕು. ಹೇಗೆ ಅನ್ಯ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ಹಿಂದೂಗಳು ಹೋಗುವುದಕ್ಕೆ ನಿರ್ಧಿಷ್ಟ ಸೂಚನೆಗಳಿವೆಯೋ, ಅಂತೆಯೇ ಹಿಂದೂ ಧರ್ಮದಲ್ಲಿಯೂ ಅನ್ಯ ಧರ್ಮೀಯರಿಗೆ ಸಂಬಂಧಿಸಿದ ಹಾಗೆ ಕಾನೂನು, ನಿಯಮಗಳು ಬಂದಲ್ಲಿ ಉತ್ತಮ. ಇದು ದೇವಾಲಯಗಳು ಅನ್ಯ ಧರ್ಮೀಯರ ಕಾರಣಕ್ಕೆ ಅಪವಿತ್ರವಾಗುವುದಕ್ಕೂ ಪರಿಹಾರವಾದೀತು.

Tags

Related Articles

Close