ಪ್ರಚಲಿತ

2014 ರಿಂದ 2026ರವರೆಗೆ ಮೋದಿ ಶಕೆ!! 16ನೇ ಶತಮಾನದಲ್ಲೇ ಭವಿಷ್ಯ ನುಡಿದಿದ್ದರಾ ನಾಸ್ಟ್ರಾಡಾಮಸ್?!

ಭಾರತದ ಸ್ನೇಹ ಬಯಸಲು ಹಿಂದೆ ಸರಿಯುತ್ತಿದ್ದ ರಾಷ್ಟ್ರಗಳೆಲ್ಲವೂ ಇಂದು ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಅದೆಷ್ಟೋ ದೇಶಗಳು ನಾ ಮುಂದು ತಾ ಮುಂದು ಎಂದು ಸ್ನೇಹ ಬೆಳಸಲು ಮುಂದಾಗುತ್ತಿದೆ ಎಂದರೆ ನರೇಂದ್ರ ಮೋದಿಯವರ ಪ್ರಭಾವ ಅದೆಷ್ಟು ಇರಬಹುದು ಎನ್ನುವುದನ್ನು ಊಹಿಸಲಸಾಧ್ಯ!! ಯಾಕೆಂದರೆ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಗೆ ಭೇಟಿ ನೀಡುತ್ತಿರುವ ವೇಳೆ ಅಲ್ಲಿನ ಪ್ರಮುಖ ಬ್ಯುಸಿನೆಸ್ ದಿನ ಪತ್ರಿಕೆಯು, “ಎದ್ದೇಳಿ… ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿ ಬರುತ್ತಿದ್ದಾರೆ” ಎಂದು ನರೇಂದ್ರ ಮೋದಿಯವರ ಬಗ್ಗೆ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದರು!!

ಆದರೆ, “ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾರತದ 21 ನೇ ಶತಮಾನದ ಸರ್ವಶ್ರೇಷ್ಠ ನೇತಾರರಾಗಿದ್ದು ಅವರ ಆಡಳಿತಾವಧಿಯಲ್ಲಿ ಜಗತ್ತಿನಾದ್ಯಂತ ಹಿಂದೂ ಧರ್ಮದ ಪ್ರಸಾರವಾಗುವುದು ಮತ್ತು ಪ್ರಳಯಕಾಲದಿಂದ ಜಗತ್ತಿನ ರಕ್ಷಣೆಯಾಗುವುದು; ಆದರೆ ಹಿಂದೂ ಮತ್ತು ಆದರ್ಶಗಳಿಗೆ ವಿಶ್ವಾಸಘಾತ ಮಾಡಿದರೆ ಮಾತ್ರ, ಮೋದಿ ಅಧಿಕಾರವನ್ನು ಕಳೆದುಕೊಳ್ಳುವರು” ಎಂಬ ಭವಿಷ್ಯವಾಣಿಯನ್ನು 16 ನೇ ಶತಮಾನದ ಖ್ಯಾತ ಕಾಲಜ್ಞಾನಿ ಮೈಕಲ್ ನಾಸ್ಟ್ರಾಡಾಮಸ್ ಇವರು ಭಾರತದ ಬಗ್ಗೆ ಹೇಳಿರುವ ಭವಿಷ್ಯವಾಣಿಯಲ್ಲಿ ಬರೆದಿಟ್ಟಿದ್ದಾರೆ ಎನ್ನುವ ವಿಚಾರ ಗೊತ್ತಿದೆಯೇ??

ಹೌದು…. ಸುಮಾರು 450 ವರ್ಷಗಳ ಹಿಂದೆಯೇ ಫ್ರೆಂಚ್ ಕಾಲಜ್ಞಾನಿ ನಾಸ್ಟ್ರಡಾಮಸ್ 2014 ರಿಂದ 2026 ರವರೆಗೆ ನರೇಂದ್ರ ಮೋದಿ ಅವರು ಭಾರತವನ್ನು ಆಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು ಎಂದರೆ ಎಂತಹ ಅಚ್ಚರಿಯ ವಿಚಾರ ಅಲ್ವೇ?? ಹೀಗಿರಬೇಕಾದರೆ ನರೇಂದ್ರ ಮೋದಿಯವರನ್ನು ವಿಶ್ವದ ಪ್ರಭಾವಿ ಪ್ರಧಾನಿ ಎಂದು ಹೇಳದಿರಲು ಸಾಧ್ಯವೇ ಇಲ್ಲ!! “ಮಹಾನ್ ವ್ಯಕ್ತಿಯೊಬ್ಬರು ಭಾರತವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ. ಆಡಳಿತದ ಆರಂಭದಲ್ಲಿ ಇವರನ್ನು ದ್ವೇಷಿಸುವವರ ಸಂಖ್ಯೆ ಹೆಚ್ಚಿದ್ದರೂ, ದೇಶವನ್ನು ಅಭಿವೃದ್ದಿಯತ್ತ ಮುನ್ನಡೆಸುವ ಗುಣದಿಂದಾಗಿ ಇವರನ್ನು ಎಲ್ಲರೂ ಪ್ರೀತಿಸುತ್ತಾರೆ. 2014 ರಿಂದ 2026ರ ವರೆಗೆ ಭಾರತದಲ್ಲಿ ಮೋದಿ ಶಕೆಯಿರಲಿದೆ” ಎಂದು ನಾಸ್ಟ್ರಡಾಮಸ್ ಭವಿಷ್ಯವಾಣಿಯಲ್ಲಿ ಉಲ್ಲೇಖಿಸಿದ್ದಾರೆ ಎಂದರೆ ಮೋದಿಯವಲ್ಲಿ ಅಡಕವಾಗಿರುವ ಶಕ್ತಿ ಅದೆಂತಹದ್ದೂ ನಾ ಕಾಣೆ!!

Modi defeated Sonia Gandhi's party in 2014, but Nostradamus knew that 400 years ago

ಆದರೆ ಈ ಭವಿಷ್ಯವಾಣಿಯನ್ನು ಓದಿದಾಗ ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಅರ್ಜುನನಿಗೆ ಹೇಳಿರುವ ಶ್ಲೋಕವು ನೆನಪಿಗೆ ಬರುತ್ತೆ!! ಅದೇನೆಂದರೆ…..

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
(ಯಾವಾಗ ಮತ್ತು ಎಲ್ಲೆಲ್ಲಿ ಧರ್ಮದಲ್ಲಿ ಏರುಪೇರುಗಳು ವ್ಯಕ್ತಗೊಂಡು, ಅಧರ್ಮವು ಮೆರೆಯತೊಡಗುತ್ತದೆಯೋ, ಆಗ ಶಿಷ್ಟ ರಕ್ಷಣೆ ಮತ್ತು ದುಷ್ಟರ ನಿಗ್ರಹಕ್ಕಾಗಿ, ಹಾಗೂ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಸ್ವಯಂ ವ್ಯಕ್ತವಾಗುತ್ತೇನೆ) ಎಂದು!!

ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ 2026ರ ವರೆಗೆ ಭಾರತದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ಬಗ್ಗೆ ಫ್ರಾನ್ಸ್ ದೇಶದ ಖ್ಯಾತ ಕಾಲಜ್ಞಾನಿ, ಪ್ರವಾದಿ ನಾಸ್ಟ್ರಡಾಮಸ್ 450 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿರುವ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ “ಅಚ್ಚರಿಯ ವಿಷಯಗಳು” ಎನ್ನುವ ಶೀರ್ಷಿಕೆಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

16 ನೇ ಶತಮಾನದ ಖ್ಯಾತ ಕಾಲಜ್ಞಾನಿ ಮೈಕಲ್ ನಾಸ್ಟ್ರಾಡಾಮಸ್, ನರೇಂದ್ರ ಮೋದಿಯವರ ಬಗ್ಗೆ ಅದೆಷ್ಟು ಸ್ಪಷ್ಟ ಮಾಹಿತಿಯನ್ನು ನೀಡುತ್ತಾನೆ ಎಂದರೆ ಒಂದು ಕ್ಷಣ ಅಚ್ಚರಿಯಾಗಬಹುದು!! 1555ರಲ್ಲಿ ನಾಸ್ಟ್ರಡಾಮಸ್ ಹೇಳಿರುವ ಪ್ರಕಾರ, ಮಧ್ಯ ವಯಸ್ಸಿನ ನಾಯಕರೊಬ್ಬರು ಭಾರತವನ್ನು ಮುನ್ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಆತ ಜಗತ್ತಿನ ‘ಸೂಪರ್ ಪವರ್’ ನಾಯಕನಾಗುತ್ತಾನೆ. ವಿಶ್ವದ ಹಲವಾರು ದೇಶಗಳಿಗೆ ಭಾರತ ಆಸರೆಯಾಗಲಿದೆ. ಅಷ್ಟೇ ಅಲ್ಲದೇ ಜಾಗತಿಕ ವಿದ್ಯಮಾನಗಳು ನಾಸ್ಟ್ರಡಾಮಸ್ ಹದಿನಾರನೇ ಶತಮಾನದಲ್ಲೇ ವಿಶ್ವದಲ್ಲಿ ಮುಂದಾಗುವ ಪ್ರಮುಖ ವಿದ್ಯಮಾನಗಳ ಬಗ್ಗೆ (ಫ್ರೆಂಚ್ ಕ್ರಾಂತಿ, ಹಿರೋಶಿಮಾ ಅಣುಬಾಂಬ್ ದಾಳಿ, ಅಮೆರಿಕ ಮೇಲೆ ಉಗ್ರರ ದಾಳಿ) ಹೇಳಿದ್ದಾರೆಂದು ಜನ ನಂಬುತ್ತಾರೆಂದು ಅರುಣಾಚಲ ಪ್ರದೇಶದ ಸಂಸದರೂ ಆಗಿರುವ ಕಿರಣ್ ರಿಜೆಜು ತನ್ನ ಫೇಸ್ ಬುಕ್ ಟೈಂಲೈನ್ ನಲ್ಲಿ ಬರೆದುಕೊಂಡಿದ್ದರು!!

ಹದಿಮೂರು ಸಂಖ್ಯಾಶಾಸ್ರ ರಾಜಕೀಯಕ್ಕೆ ಮತ್ತು ಸಂಖ್ಯಾಶಾಸ್ತ್ರ ಮಹತ್ವದ್ದು ಎಂದು ಹೇಳಿರುವ ರಿಜೆಜು, ಅದಕ್ಕೆ ಲೋಕಸಭೆಯಲ್ಲಿ ಈಗಿರುವ ಪಕ್ಷಗಳ ಬಲಾಬಲವನ್ನು ತಾಳೆ ಮಾಡಿ ಬರೆದಿದ್ದಾರಲ್ಲದೇ ರಿಜೆಜು ಈ ಲೆಕ್ಕಾಚಾರದ ಬಗ್ಗೆ ತನ್ನ ಫೇಸ್ ಬುಕ್ ಪೆÇೀಸ್ಟ್ ಇಲ್ಲಿ ಹಾಕಿದ್ದಾರೆ!! ಪ್ರವಾದಿ ಮೈಕಲ್ ಡಿ ನಾಸ್ಟ್ರಡಾಮಸ್ ಹದಿನಾರನೇ ಶತಮಾನದಲ್ಲಿ ಬದುಕಿದ್ದ ಫ್ರೆಂಚ್ ಪ್ರವಾದಿ ಮೈಕಲ್ ಡಿ ನಾಸ್ಟ್ರಡಾಮಸ್ ಈ ರೀತಿ ಭವಿಷ್ಯ ನುಡಿದಿದ್ದು 1555ನೇ ಇಸವಿಯಲ್ಲಿ. ಮಧ್ಯ ವಯಸ್ಸಿನ ಆ ವ್ಯಕ್ತಿಯ ಆಡಳಿತ ದೇಶ ಮತ್ತು ವಿಶ್ವಕ್ಕೂ ಸುವರ್ಣಯುಗವನ್ನು ತರಲಿದೆ ಎಂದು ರಿಜಿಜು ಬರೆದುಕೊಂಡಿದ್ದಾರೆ.

16 ನೇ ಶತಮಾನದ ಖ್ಯಾತ ಕಾಲಜ್ಞಾನಿ ಮೈಕಲ್ ನಾಸ್ಟ್ರಾಡಾಮಸ್ ಭಾರತದ ಬಗ್ಗೆ ತನ್ನ ಭವಿಷ್ಯವಾಣಿಯಲ್ಲಿ ಈ ರೀತಿ ಬರೆದಿಟ್ಟಿದ್ದಾರೆ ಎಂದು ಝೀ ನ್ಯೂಸ್ ನ ವಾರ್ತಾ ಜಾಲತಾಣದಲ್ಲಿ ಸುದ್ದಿಯನ್ನು ಪ್ರಕಟಿಸಲಾಗಿತ್ತು!! ಅದರಲ್ಲಿ ಈ ರೀತಿ ಇದೆ………

* ಭಾರತದ ಫ್ರೆಂಚ್ ಪತ್ರಕರ್ತ ಹಾಗೂ ಇತಿಹಾಸತಜ್ಞರಾದ ಫ್ರಾನ್ಸುಆ ಗೋತಿಯೆ ಇವರು ಅವರ ಬ್ಲಾಗ್ ನಲ್ಲಿ ನಾಸ್ಟ್ರಾಡಾಮಸ್ ಇವರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಇವರ ಉತ್ಕರ್ಷದ ಬಗ್ಗೆ ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಬರೆದ ಭವಿಷ್ಯವಾಣಿಯನ್ನು ವಿವರಗಳೊಂದಿಗೆ ವರ್ಣಿಸಿದ್ದಾರೆ. ಈ ಭವಿಷ್ಯವಾಣಿಗನುಸಾರ ನರೇಂದ್ರ ಮೋದಿ ಈ ಭಾರತದ ಸರ್ವಶ್ರೇಷ್ಠ ನೇತಾರರ ಜನ್ಮವು ಗುಜರಾತ್ ರಾಜ್ಯದ ಒಬ್ಬ ಚಹಾ ಮಾರುವವನ ಮನೆಯಲ್ಲಿ ಆಗಲಿದ್ದು, ಅವರು ಸತತ 3 ಬಾರಿ ಗುಜರಾತ್ ರಾಜ್ಯದ ನೇತೃತ್ವ ವಹಿಸುವರು. ಅಷ್ಟೇ ಅಲ್ಲದೇ ಅವರ ಆಡಳಿತಾವಧಿಯಲ್ಲಿ ರಾಜ್ಯದ ಉತ್ಕರ್ಷವಾಗಿ ಅಲ್ಲಿ ಪ್ರಾಮಾಣಿಕತೆಯು ಮನೆ ಮಾಡುವುದು!!

* ಭಾರತದಲ್ಲಿ ಹಿಂದೂ ರಾಜಕೀಯ ಪಕ್ಷದ (ಭಾಜಪ) ವೃದ್ಧಿಯಾಗಿ 2014 ರಲ್ಲಿ ಹಿಂದೂಗಳು ರಾಜ್ಯವನ್ನಾಳುವರು. ಸಂಪೂರ್ಣ ಏಶಿಯಾ ಖಂಡದಲ್ಲಿ ಅವರಿಗೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ, ಅದೇ ರೀತಿ ನರೇಂದ್ರ ಮೋದಿಯವರು ಕಲಂ 370 ರದ್ದುಗೊಳಿಸುವುದು, ರಾಮಮಂದಿರ ನಿರ್ಮಾಣ ಕಾರ್ಯ, ಸಮಾನ ನಾಗರಿಕ ಕಾನೂನಿನ ಕಾರ್ಯಾಚರಣೆ ಮಾಡುವುದರೊಂದಿಗೆ ಕಾಶ್ಮೀರವನ್ನು ಸಂರಕ್ಷಿಸುವರು. ಅಷ್ಟೇ ಅಲ್ಲದೇ ಹಿಂದೂ ಆಡಳಿತವೇ ಭಾರತಕ್ಕೆ ಹಿತಕರವಾಗಿದೆ. ಭಾರತದಂತಹ ದೇಶದಲ್ಲಿ ಹಿಂದೂಗಳು ಇರುವುದೇ ಶ್ರೇಯಸ್ಕರ. ಅವರ ವಿಶ್ವವ್ಯಾಪಕ ತತ್ತ್ವಗಳು ಪ್ರತಿಯೊಂದರಲ್ಲಿ ಈಶ್ವರನನ್ನು ಸ್ವೀಕರಿಸುವಂತಹವು ಇರುತ್ತವೆ ಮತ್ತು ಅವರ ಮನಸ್ಸಿನಲ್ಲಿ ಇಡೀ ಜಗತ್ತಿನ ಬಗ್ಗೆ ಕರುಣೆ ನೆಲೆಸಿರುತ್ತದೆ.

* ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಓರ್ವ ಬಿಳಿ ಮಹಿಳೆ (ಸೋನಿಯಾ ಗಾಂಧಿ) ಭಾರತದ ಮೇಲೆ ರಾಜ್ಯಭಾರ ನಡೆಸುವಳು. ಅವಳ ಆಡಳಿತದ 10 ವರ್ಷಗಳಲ್ಲಿ ಅಪ್ರಾಮಾಣಿಕತೆ ಎಂಬುದು ಗಗನಕ್ಕೇರುವುದರೊಂದಿಗೆ ನರೇಂದ್ರ ಮೋದಿಯವರು ಈ ಮಹಿಳೆಯ ವಿರುದ್ಧ ಹೋರಾಡುವರು ಎಂದು ಹೇಳಿದ್ದಾರೆ!! ಅಷ್ಟೇ ಅಲ್ಲದೇ ನರೇಂದ್ರ ಮೋದಿ ಇವರು ಹಿಂದೂಗಳಿಗೆ ವಿಶ್ವಾಸಘಾತ ಮಾಡಿದರೆ, ಅವರಿಗೆ ಹಿಂದೂಗಳ ಶಾಪ ತಟ್ಟುವುದು ಮತ್ತು ಅವರು ಅಧಿಕಾರವನ್ನು ಕಳೆದುಕೊಳ್ಳುವರು; ಆದುದರಿಂದ ಅವರು ಹಿಂದೂ ಮತ್ತು ಆದರ್ಶಗಳೊಂದಿಗೆ ವಿಶ್ವಾಸಘಾತ ಮಾಡಬಾರದು, ಎಂಬುದಾಗಿ ಎಚ್ಚರಿಕೆಯನ್ನೂ ನಾಸ್ಟ್ರಾಡಾಮಸ್ ಇವರು ಮೋದಿ ಇವರಿಗೆ ನೀಡಿದ್ದಾರೆ.

ಇವಿಷ್ಟೇ ಅಲ್ಲದೇ ನರೇಂದ್ರ ಮೋದಿ ಇವರು ತಮ್ಮ ಆದರ್ಶಗಳ ಬಗ್ಗೆ ದೃಢವಾಗಿದ್ದರೆ, ಹಿಂದೂ ಧರ್ಮದ ಜ್ಞಾನವು ಜಗತ್ತಿನಾದ್ಯಂತ ಹರಡುವುದು ಮತ್ತು ಮನುಕುಲವು ಪ್ರಳಯಕಾಲದಿಂದ ಸಂರಕ್ಷಿಸಲ್ಪಡುವುದು, ಎಂಬುದಾಗಿಯೂ ನಾಸ್ಟ್ರಾಡಾಮಸ್ ಇವರು ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ. ಒಟ್ಟಿನಲ್ಲಿ 1789ರ ಫ್ರೆಂಚ್ ಕ್ರಾಂತಿ, 1945ರಲ್ಲಿ ಜಪಾನ್ ಮೇಲೆ ಅಣುಬಾಂಬ್ ದಾಳಿ, 2001ರಲ್ಲಿ ಅಮೆರಿಕದ ಮೇಲೆ ಉಗ್ರರ ದಾಳಿ ಸೇರಿದಂತೆ ಹಲವು ಘಟನೆಗಳ ಬಗ್ಗೆ ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದರು ಎಂಬ ನಂಬಿಕೆಯಿದೆ.

ನರೇಂದ್ರ ಮೋದಿಯವರು ಭಾರತದ 21 ನೇ ಶತಮಾನದ ಸರ್ವಶ್ರೇಷ್ಠ ನೇತಾರರಾಗಿದ್ದು ಅವರ ಆಡಳಿತಾವಧಿಯಲ್ಲಿ ಜಗತ್ತಿನಾದ್ಯಂತ ಹಿಂದೂ ಧರ್ಮದ ಪ್ರಸಾರವಾಗುವುದು ಮತ್ತು ಪ್ರಳಯಕಾಲದಿಂದ ಜಗತ್ತಿನ ರಕ್ಷಣೆಯಾಗುವುದು ಎಂದು 16 ನೇ ಶತಮಾನದಲ್ಲಿ ಕಾಲಜ್ಞಾನಿ ಮೈಕಲ್ ನಾಸ್ಟ್ರಾಡಾಮಸ್ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನ ಬಗ್ಗೆ ಅಂದು ಭವಿಷ್ಯ ನುಡಿದಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ. ಅಷ್ಟೇ ಅಲ್ಲದೇ ಇದಕ್ಕೆಲ್ಲ ಇಂದು ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸುಗಳೇ ಸಾಕ್ಷಿಯಾಗಿ ನಿಂತಿದೆ!!

source: https://www.scoopwhoop.com/Kiren-Rijiju-On-Facebook-Claims-Nostradamus-Predicted-This-About-Modi-Era-450-Years-Ago/#.l36kx308k

https://www.firstpost.com/india/nostradamus-predicted-modis-victories-hindutvas-rise-sonia-gandhis-fall-3357952.html

– ಅಲೋಖಾ

Tags

Related Articles

Close