ಪ್ರಚಲಿತ

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ಪಕ್ಷಕ್ಕೆ ಸುಪ್ರೀಂ ಕೋರ್ಟ್‍ನಿಂದ ಭಾರೀ ಮುಖಭಂಗ..! ಮತ್ತೆ ಸೋತ ಕಾಂಗ್ರೆಸ್.!

ರಾಜ್ಯದಲ್ಲಿ ರಾಜಕೀಯ ಡೊಂಬರಾಟಗಳು ಬಹಳ ಕುತೂಹಲದ ಘಟ್ಟಗಳನ್ನು ತಲುಪುತ್ತಿದ್ದಂತೆಯೇ ಕಾಂಗ್ರೆಸ್‍ಗೆ ಮತ್ತೊಂದು ಶಾಕ್ ಎದುರಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೆ ಆಹ್ವಾನಿಸಿ ಸರ್ಕಾರ ನಡೆಸುವಂತೆ ಆಹ್ವಾನಿಸಿದ್ದ ರಾಜ್ಯದ ರಾಜ್ಯಪಾಲ ಶ್ರೀ ವಜುಬಾಯಿ ವಾಲ ಅವರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಕಾಂಗ್ರೆಸ್ ಹಾಗೂ ಜನತಾ ದಳ ಅಲ್ಲಿಯೂ ಮುಖಭಂಗವನ್ನು ಅನುಭವಿಸಿಕೊಂಡು ಬಂದಿದ್ದರು. ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಇದು ಭಾರೀ ಹಿನ್ನೆಡೆಯಾಗಿತ್ತು. ಇದೀಗ ಮತ್ತೆ ಖ್ಯಾತೆ ತೆಗೆದ ಕಾಂಗ್ರೆಸ್ ಮೈತ್ರಿಕೂಟಕ್ಕೆ ಮತ್ತೆ ಮುಖಭಂಗವಾಗಿದೆ.

ನಿನ್ನೆ ತಾನೇ ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ವಿಧಾನ ಸಭೆಗೆ ಹಂಗಾಮಿ ಸ್ಪೀಕರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಿತ್ತು. ಅಂತೆಯೇ ರಾಜ್ಯಪಾಲರು ರಾಜ್ಯ ಅತಿದೊಡ್ಡ ಪಕ್ಷವಾಗಿದ್ದ ಭಾರತೀಯ ಜನಾತಾ ಪಕ್ಷದ ಶಾಸಕ ಹಾಗೂ ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರನ್ನಾಗಿ ಆಯ್ಕೆ ಮಾಡಿದ್ದರು.

ವಿರಾಜ ಪೇಟೆಯ ಭಾರತೀಯ ಜನತಾ ಪಕ್ಷದ ಶಾಸಕ ಕೆಜಿ ಬೋಪಯ್ಯ ಅವರನ್ನು ರಾಜ್ಯಪಾಲರು ಹಂಗಾಮಿ ಸ್ಪೀಕರನ್ನಾಗಿ ಆಯ್ಕೆ ಮಾಡಿದ ನಂತರ ಕಾಂಗ್ರೆಸ್ ಹಾಗೂ ಜನತಾ ದಳಕ್ಕೆ ಇದು ಭಾರೀ ತಲೆನೋವುಂಟಾಗಿತ್ತು. ಆ ಕೂಡಲೇ ಮತ್ತೆ ರಾಜ್ಯಪಾಲರ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ್ದರು. ಈ ಬಗ್ಗೆ ಕಾಂಗ್ರೆಸ್ ಹಾಗೂ ಜನತಾ ದಳ ಸುಪ್ರೀಂ ಕೋರ್ಟ್‍ಗೂ ಹೋಗಿತ್ತು. ನಿನ್ನೆ ಸಂಜೆ ವೇಳೆ ಕಾಂಗ್ರೆಸ್ ಹಾಗೂ ಜನತಾ ದಳ ಹಂಗಾಮಿ ಸ್ಪೀಕರ್ ಆಯ್ಕೆಯ ವಿಚಾರವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.

Related image

ಕಾಂಗ್ರೆಸ್‍ಗೆ ಮತ್ತೆ ಮುಖಭಂಗ..!

ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರವಾಗಿದೆ. ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಕಾಂಗ್ರೆಸ್ ವಜಾ ಮಾಡಿದೆ. ಈ ಮೊದಲೇ ಸುಪ್ರೀಂ ಕೋರ್ಟ್ ಆದೇಶಿಸಿದಂತೆ ರಾಜ್ಯಪಾಲರ ವಿವೇಚನೆಗೆ ಹಂಗಾಮಿ ಸ್ಪೀಕರ್ ಆಯ್ಕೆಯ ವಿಚಾರವನ್ನು ಬಿಟ್ಟಿದೆ. ಹೀಗಾಗಿ ಅವರು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಮತ್ತೆ ಕೋರ್ಟ್ ಮಧ್ಯಪ್ರವೇಶ ಮಾಡೋದಿಲ್ಲ. ಹಂಗಾಮಿ ಸ್ಪೀಕರ್ ಆಗಿ ವಿರಾಜ ಪೇಟೆಯ ಭಾರತೀಯ ಜನತಾ ಪಕ್ಷದ ಶಾಸಕ ಕೆಜಿ ಬೋಪಯ್ಯನವರೇ ಮುಂದುವರೆಯುತ್ತಾರೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಈ ಮೂಲಕ ಸದಾ ಸೋಲಿನ ಹತಾಶೆಯಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಕಾಲು ಕೆರೆದು ಜಗಳಕ್ಕೆ ನಿಂತಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಿದೆ. ಇನ್ನು ಈ ಪಕ್ಷವನ್ನೇ ನಂಬಿಕೊಂಡು ಮುಖ್ಯಮಂತ್ರಿಯಾಗುತ್ತೇನೆ ಎಂದು ಆಸೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೂ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

-ಸುನಿಲ್ ಪಣಪಿಲ

Tags

Related Articles

Close