ಪ್ರಚಲಿತ

ಭಾರತದ ವಿರುದ್ಧ ಮಾತನಾಡುವ ಬುದ್ಧಿಜೀವಿಗಳೇ! ಪಾಕ್ ಆಟಗಾರ ರಿಜ್ವಾನ್‌ನದ್ದು ಕ್ರೀಡಾ ಸ್ಪೂರ್ತಿಯೇ?

ಮೊನ್ನೆಯಷ್ಟೇ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ಗೆಲುವು ಸಾಧಿಸಿತ್ತು. ಭಾರತೀಯ ಕ್ರಿಕೆಟ್ ತಂಡದ ಈ ಗೆಲುವನ್ನು ಭಾರತದ ಅಭಿಮಾನಿಗಳು ‘ಜೈ ಶ್ರೀರಾಮ್’ ಘೋಷಣೆ ಕೂಗುವ ಮೂಲಕ ಸಂಭ್ರಮಿಸಿದ್ದರು. ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಈ ನಡೆಯನ್ನು ಕೆಲ ಲದ್ದಿಜೀವಿಗಳು ಪ್ರಶ್ನೆ ಮಾಡಿ, ಇದು ಆಟದಲ್ಲಿ ಧಾರ್ಮಿಕತೆ ಬೆರೆಸುವ ಪ್ರಕ್ರಿಯೆ ಎಂದು ವಿವಾದ ಸೃಷ್ಟಿ ಮಾಡಿದ್ದರು.

ಸನಾತನ ಹಿಂದೂ ಧರ್ಮ, ಹಿಂದೂ ದೇವರುಗಳ ವಿರೋಧಿ ತಮಿಳುನಾಡಿನ ಉದಯ ನಿಧಿ ಸ್ಟ್ಯಾಲಿನ್ ಅಭಿಮಾನಿಗಳು ಜೈ ಶ್ರೀರಾಮ್ ಕೂಗಿದ್ದರಿಂದ ಕ್ರೀಡೆಗೆ ಅಪಮಾನವಾಗಿದೆ, ಕ್ರೀಡೆಯ ಜೊತೆಗೆ ಧಾರ್ಮಿಕತೆ ಬೆರೆಸಬಾರದು ಎಂದೆಲ್ಲಾ ಉದ್ದುದ್ದ ಭಾಷಣ ಬಿಗಿದಿದ್ದರು. ಆ ಮೂಲಕವೂ ತಮ್ಮ ಸನಾತನ ಹಿಂದೂ ಧರ್ಮದ ಮೇಲಿನ ದ್ವೇಷವನ್ನು ಕಾರುವ ಜೊತೆಗೆ, ಪಾಕ್ ಪರ ತಮಗಿದ್ದ ಒಲವನ್ನು ಪ್ರಸ್ತುತ ಪಡಿಸಿದ್ದರು.

ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ನೆದರ್‌ಲ್ಯಾಂಡ್ ಜೊತೆಗಿನ ಪಂದ್ಯಾಟದ ಸಂದರ್ಭದಲ್ಲಿ ಹೈದರಾಬಾದ್ ಕ್ರೀಡಾಂಗಣದಲ್ಲಿ ನಮಾಜ್ ಮಾಡುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು. ಪಂದ್ಯದ ನಡುವೆಯೇ ರಿಜ್ವಾನ್ ತಮ್ಮ ಅತಿರೇಖ ಎನಿಸುವ ವರ್ತನೆ ತೋರಿದ್ದರು. ಈ ಸಂಬಂಧ ಭಾರತೀಯ ವಕೀಲರು ರಿಜ್ವಾನ್ ವಿರುದ್ಧ ಐಸಿಸಿ ಯಲ್ಲಿ ದೂರನ್ನು ಸಹ ನೀಡಿದ್ದಾರೆ. ಕ್ರೀಡೆಯಲ್ಲಿ ಧಾರ್ಮಿಕತೆ ಬೆರೆಸಿದ ಆರೋಪವನ್ನು ರಿಜ್ವಾನ್ ವಿರುದ್ಧ ಮಾಡಲಾಗಿದ್ದು, ಆ ಮೂಲಕ ಆತನಿಗೆ ಎಲ್ಲಿ, ಹೇಗಿರಬೇಕು ಎಂಬ ಪಾಠವನ್ನು ಹೇಳಿ ಕೊಡಲು ಭಾರತೀಯ ವಕೀಲರ ತಂಡ ಸಿದ್ಧತೆ ನಡೆಸಿದೆ.

ಅದೇನೇ ಇರಲಿ, ಭಾರತ ಗೆದ್ದ ಸಂಭ್ರಮಕ್ಕೆ ಅಭಿಮಾನಿಗಳು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ್ದು. ಅದಲ್ಲದೆ ಭಾರತ ತಂಡದ ಕ್ರಿಕೆಟ್ ಆಟಗಾರರು ಕ್ರೀಡೆಯ ಜೊತೆ ಧಾರ್ಮಿಕತೆ ಬೆರೆಸಿಲ್ಲ ಎಂಬುದು ಸ್ಪಷ್ಟ. ಆದರೆ ರಿಜ್ವಾನ್ ಓರ್ವ ಆಟಗಾರನಾಗಿದ್ದುಕೊಂಡು, ಪಂದ್ಯಾಟದ ನಡುವೆ ಮೈದಾನದಲ್ಲಿಯೇ ನಮಾಜ್ ಮಾಡಿ, ಕ್ರೀಡೆ ಮತ್ತು ಧಾರ್ಮಿಕ ವಿಷಯಗಳನ್ನು ಬೆರೆಸಿದ್ದಾನಲ್ಲಾ.. ಈ ಬಗ್ಗೆ ಉದಯ ನಿಧಿ ಸ್ಟ್ಯಾಲಿನ್ ತುಟಿ ಪಿಟಿಕ್ ಎಂದಿಲ್ಲ. ಅಂದರೆ ಅವರ ಪ್ರಕಾರ ಪಾಕ್ ಕ್ರಿಕೆಟಿಗನ ಈ ನಡೆ ಸರಿ. ಆದರೆ ಭಾರತೀಯ ಅಭಿಮಾನಿಗಳು ಜೈ ಶ್ರೀರಾಮ್ ಕೂಗಿದ್ದು ತಪ್ಪು ಎಂಬುದೇ?

ಸನಾತನ ಹಿಂದೂ ಧರ್ಮವನ್ನು ದೂಷಣೆ ಮಾಡುವುದು ಮಾತ್ರ ಈ ವ್ಯಕ್ತಿಯ ಕಾಯಕವೇ. ಅಥವಾ ಪಾಕ್ ಮೇಲಿನ ಪ್ರೀತಿ ಈ ವಿಷಯದಲ್ಲಿ ರಿಜ್ವಾನ್ ಕ್ರೀಡೆಯ ಜೊತೆ ಧಾರ್ಮಿಕತೆ ಬೆರೆಸಿದ್ದು, ಕ್ರೀಡಾ ಸ್ಪೂರ್ತಿ ಮರೆತದ್ದು ಪ್ರಶ್ನೆ ಮಾಡಬೇಕಾದ ವಿಷಯ ಎಂದು ಉದಯ ನಿಧಿಯ ಅರಿವಿಗೆ ಬಾರದೆ ಹೋಯ್ತೇ? ಎನ್ನುವುದು ಭಾರತೀಯರ ಪ್ರಶ್ನೆ.‌ಇದಕ್ಕೆ ಸ್ವತಃ ಉದಯ ನಿಧಿಯೇ ಉತ್ತರಿಸಬೇಕಷ್ಟೇ.

ಹಾಗೆಯೇ ನಮಾಜ್ ಮಾಡಿ ತಾನೊಬ್ಬ ಮುಸ್ಲಿಂ ಎಂದು ಪ್ರಕಟಿಸಿದ್ದ ರಿಜ್ವಾನ್, ಶ್ರೀಲಂಕಾ ವಿರುದ್ಧ ಪಾಕ್ ತಂಡ ಗೆದ್ದಾಗ ಆ ಗೆಲುವನ್ನು ಗಾಜಾ‌ದ ಹಮಾಸ್ ಉಗ್ರರಿಗೆ ಸಮರ್ಪಣೆ ಮಾಡಿದ್ದರು. ಈ ಮೂಲಕ ರಾಜಕೀಯ ಸಿದ್ದಾಂತವನ್ನು ಸಹ ರಿಜ್ವಾನ್ ಕ್ರೀಡೆ ಜೊತೆ ಬೆರೆಸಿದ್ದಾರೆ. ಆದರೂ ಭಾರತೀಯರನ್ನು ಪ್ರಶ್ನೆ ಮಾಡುವ ಉದಯನಿಧಿಯಂತಹ ನಾಲಾಯಕುಗಳು ಪಾಕಿಸ್ತಾನೀಯರನ್ನು ಪ್ರಶ್ನೆ ಮಾಡಲು ಮುಂದಾಗದೇ ಇರುವುದು ಅವರ ದ್ವಿಮುಖ ನೀತಿಗೆ ಹಿಡಿದ ಕೈಗನ್ನಡಿ.

ಒಟ್ಟಿನಲ್ಲಿ ಭಾರತದಲ್ಲಿ ಇದ್ದು, ಇಲ್ಲಿನ ಅನ್ನ ತಿಂದು ನಮ್ಮ ದೇಶಕ್ಕೆಯೇ ಅವಮಾನ ಎಸಗುವ ಉದಯ ನಿಧಿಯಂತಹ ನಾಲಾಯಕರಿಗೆ ಏನೆನ್ನಬೇಕೋ..

Tags

Related Articles

Close