ಪ್ರಚಲಿತ

ಭಾರತೀಯ ಸೇನೆಯ ಪ್ರತಿದಾಳಿಗೆ ತತ್ತರಿಸಿದ ಪಾಕಿಸ್ತಾನ!! ಗುಂಡಿನ ಮಳೆ ನಿಲ್ಲಿಸುವಂತೆ ಬಿ.ಎಸ್.ಎಫ್ ಗೆ ಮನವಿ!! ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟಿತು ಭಾರತೀಯ ಸೇನೆ!

ಮುಸಲ್ಮಾನರ ಪವಿತ್ರ ಉತ್ಸವ ರಂಜಾನ್ ಅಂಗವಾಗಿ ಭಾರತ ತನ್ನ ಗಡಿರೇಖೆಯಲ್ಲಿ ಕದನ ವಿರಾಮ ಘೋಷಿಸಿದ್ದರೂ ತನ್ನ ಹಳೇ ಚಾಳಿಯನ್ನೇ ಪಾಕಿಸ್ತಾನ ಮುಂದುವರಿಸಿತ್ತು. ಭಾರತದ ಮೇಲೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಪ್ರತ್ಯುತ್ತರ ಕೊಡುತ್ತಾ ಭಾರತೀಯ ಸೇನೆಯೂ ಕೂಡಾ ಪಾಕಿಸ್ತಾನದ ಮೇಲೆ ಗುಂಡಿನ ಮಳೆಗರೆದಿದೆ. ಭಾರತದ ದಾಳಿಗೆ ತತ್ತರಿಸಿ ಹೋದ ಪಾಕಿಸ್ತಾನ ದಾಳಿ ನಿಲ್ಲುಸುವಂತೆ ಸೇನೆಗೆ ಕೈ ಮುಗಿಯುತ್ತಿದೆ!! ಭಾರತದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಭಾರತ-ಪಾಕ್ ಗಡಿಯುದ್ದಕ್ಕೂ ಪಾಕಿಸ್ತಾನಿ ಪಿಕೆಟ್ ನಾಶವಾಗುವುದನ್ನು ತೋರಿಸುವ 19-ಸೆಕೆಂಡ್ಗಳ ಥರ್ಮಲ್-ಚಿತ್ರಣದ ತುಣುಕನ್ನು ಬಿಡುಗಡೆ ಮಾಡಿದೆ.

ಈ ವೀಡಿಯೋ ತುಣುಕಿನಲ್ಲಿ ಭಾರತೀಯ ಸೇನೆ ಭಾರೀ ಫಿರಂಗಿಗಳನ್ನು ಉಪಯೋಗಿಸಿ ಪಾಕಿಸ್ತಾನದ ಬಂಕರ್ ಗಳನ್ನು ನೆಲಸಮ ಮಾಡುವ ದೃಶ್ಯ ಸೆರೆಹಿಡಿಯಲಾಗಿದೆ. ಈ ದಾಳಿಯಲ್ಲಿ ಒಬ್ಬ ಪಾಕ್ ಸೈನಿಕ ಹತನಾಗಿರುವುದಾಗಿಯೂ ವರದಿಯಾಗಿದೆ. ಭಾರತದ ದಾಳಿಯಿಂದ ಕಂಗೆಟ್ಟ ಪಾಕಿಸ್ತಾನದ ರೇಂಜರ್ಸ್ ಖುದ್ದು ಬಿ.ಎಸ್.ಎಫ್ ಗೆ ಕರೆಮಾಡಿ ಪ್ರತಿದಾಳಿ ನಿಲ್ಲಿಸುವಂತೆ ವಿನಂತಿ ಮಾಡಿದ್ದಾರೆ. ಭಾರತೀಯ ಸೇನೆಯನ್ನು ಯಾವತ್ತಿಗೂ ಪಾಕಿಸ್ತಾನ ಎದುರಿಸಲಾರದು. ಪ್ರತಿ ಬಾರಿಯೂ ಭಾರತೀಯ ಸೇನೆಯ ಕೈಯಲ್ಲಿ ಮಣ್ಣು ಮುಕ್ಕುವ ಪಾಕಿಸ್ತಾನಕ್ಕೆ ಬುದ್ದಿ ಮಾತ್ರ ಇನ್ನೂ ಬಂದಿಲ್ಲ. ಭಾರತದ ಕಡೆಯಿಂದ ಕದನ ವಿರಾಮ ಘೋಷಿಸಿದ್ದರೂ ತನ್ನ ಅಪ್ರಚೋದಿತ ದಾಳಿಯನ್ನು ಮುಂದುವರಿಸಿದ “ಪಾಪಿ”ಸ್ತಾನಕ್ಕೆ ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ ಗಡಿ ಕಾವಲು ಪಡೆಯ ಸೈನಿಕರು.

ಗಡಿರೇಖೆಯಾಚಿಂದ ಗುಂಡಿನ ದಾಳಿ ನಡೆಸಿದ ಪಾಕ್ ರೇಂಜರ್ಸ್ ಗಳಿಗೆ ಅವರದೆ ಭಾಷೆಯಲ್ಲಿ ಪ್ರತ್ಯುತ್ತರ ನೀಡಿದ್ದರಿಂದಾಗಿ ಪಾಕಿಸ್ತಾನ ದಾಳಿ ನಿಲ್ಲಿಸುವಂತೆ ದಮ್ಮಯ್ಯ ಹಾಕುತ್ತಿದೆ ಎಂದು ಬಿ.ಎಸ್.ಎಫ್ ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ಗಡಿ ನಿಯಂತ್ರಣ ರೇಖೆಯಲ್ಲಿ ನಿರಂತರ ದಾಳಿ ನಡೆಸಿದ್ದರಿಂದಾಗಿ ಜಮ್ಮು ಬಿ.ಎಸ್.ಎಫ್ ನ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಕೆಲವು ನಾಗರಿಕರು ಗಾಯ ಗೊಂದಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ಮೋದಿ ಅವರ ಭೇಟಿ ಹಿನ್ನಲೆಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಆದರೆ ಈಗ ಭಾರತದ ಪ್ರತಿ ದಾಳಿಯಿಂದ ತತ್ತರಿಸಿದ ಪಾಕಿಸ್ತಾನ ಬಿ.ಎಸ್.ಎಫ್ ನ ಕೈ ಕಾಲು ಹಿಡಿಯುವಷ್ಟರ ಮಟ್ಟಿಗೆ ಸೋತಿದೆ!!

ಪಾಕಿಸ್ತಾನ ಮಾಡಿದ್ದೆಲ್ಲವನ್ನೂ ನೋಡಿಕೊಂಡು ಕೂರಲು ಇದು ಅವರ “ಅಮ್ಮಿ ಜಾನ್” ಪೋಷಿತ “ಮೌನ” ಸರಕಾರವಲ್ಲ, ಇದು ಮೋದಿ ಸರಕಾರ. ಕೈ ಗೆ ಕೈ, ತಲೆಗೆ-ತಲೆ, ಮುಯ್ಯಿಗೆ ಮುಯ್ಯಿ, ಸೇಡಿಗೆ-ಸೇಡು ಎನ್ನುವ ಮೋದಿ ಸರಕಾರ ದೇಶದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವವರೆ ಅಲ್ಲ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರು ಘಳಿಗೆಯೆ ಭಾರತೀಯ ಸೇನೆಗೆ ದೇಶ ಹಿತದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ ಏಕೈಕ ಪ್ರಧಾನಿ ಮೋದಿ. ಮೋದಿಯವರ ಬೆಂಬಲವಿರುವುದರಿಂದಲೆ ಇಂದು ಭಾರತೀಯ ಸೇನೆ ತುರ್ತಾಗಿ ಮತ್ತು ಸ್ವತಂತ್ರವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿ ಬಾರಿ ಸೋಲಿನ ರುಚಿ ಉಂಡರೂ ಮತ್ತೆ ಭಾರತದ ಮೇಲೆ ಕತ್ತಿ ಮಸೆಯುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಶಾಸ್ತಿಯನ್ನೆ ಮಾಡುತ್ತಿದೆ. ಭಾರತದ ಒಳ್ಳೆಯತನವನ್ನು ದೌರ್ಬಲ್ಯವೆಂದು ಅಪಾರ್ಥ ಮಾಡಿಕೊಳ್ಳುವ ಪಾಕಿಸ್ತಾನಕ್ಕೆ, ಮತ್ತೆ ಮೇಲೇಳಬಾರದು ಅಂತಹ ಪಾಠ ಕಲಿಸಬೇಕು. ಆದಷ್ಟು ಬೇಗನೆ ಮೋದಿ ಪಾಪಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡುತ್ತಾರೆನ್ನುವ ನಂಬಿಕೆ ದೇಶಕ್ಕಿದೆ.

-ಶಾರ್ವರಿ

Tags

Related Articles

Close