ಪ್ರಚಲಿತ

ಉಗ್ರ ಬುರ್ಹಾನ್ ವಾನಿಯನ್ನು ಹುತಾತ್ಮ ಎಂದು ಕರೆದ ಪಾಕಿಸ್ತಾನದ ಮಾಜಿ ಪ್ರಧಾನಿ!! ನವಾಜ್ ಶರೀಫ್ ಗೆ ರಾಜಕೀಯದಲ್ಲಿ ಇನ್ನಿಲ್ಲ ಜಾಗ!!

ಸದಾ ಒಂದಲ್ಲ ಒಂದು ವಿಚಾರದಲ್ಲಿ ಭಾರತವನ್ನು ಮಟ್ಟ ಹಾಕುವುದರಲ್ಲೇ ತಲ್ಲೀನನಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಈಗಾಗಲೇ ಬಹಿರಂಗವಾಗಿಯೇ ಭಯೋತ್ಪಾದನೆಯ ಕಡೆ ಒಲವು ತೋರಿಸಿರುವ ಜೊತೆಗೆ ಭಯೋತ್ಪಾದನಾ ಸಂಘಟನೆಗಳಿಗೆ ಕುಮ್ಮಕ್ಕನ್ನು ನೀಡುತ್ತಿರುವ ವಿಚಾರ ತಿಳಿದೇ ಇದೆ!! ಆದರೆ, ತಪ್ಪು ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನುವಂತೆ ಇದೀಗ ಮಾಜಿ ಪ್ರಧಾನಿ ನವಾಜ್ ಶರೀಫ್ ಜೀವಿತಾವಧಿವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಅಲ್ಲಿನ ಸುಪ್ರೀಂಕೋರ್ಟ್ ಆದೇಶ ನೀಡಿದೆ!!

ಹೌದು… ಈಗಾಗಲೇ ಕಾಶ್ಮೀರದಲ್ಲಿ ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ವಾನಿ ಹುತಾತ್ಮ ಎಂದು ಕರೆಯುವ ಮೂಲಕ ಸುದ್ದಿಯಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್, ಆತನ ಹತ್ಯೆ ಖಂಡಿಸಿ ಕರಾಳ ದಿನ ಆಚರಿಸುವುದಾಗಿ ಹೇಳಿ, ಉಗ್ರರಿಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದರು!! ಅನ್ಯಾಯ, ಅನಾಚಾಗಳಿಂದಲೇ ಸುದ್ದಿಯಾಗುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಮಾಫಿಯಾ ಬಯಲಿಗೆಳೆಯುತ್ತೇನೆ ಎಂದು ಈ ಹಿಂದೆ ಪಾಕಿಸ್ತಾನ್ ತೆಹ್ರರೀಕ್ ಐ ಇನ್ಸಾಪ್ ಮುಖಂಡ ಇಮ್ರಾನ್ ಖಾನ್ ಹೇಳಿದ್ದರು!!

ಶರೀಫ್ ಮಾಫಿಯಾ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಹೊಸ ಚಿಂತನೆಗಳನ್ನು ಅಭಿವೃದ್ಧಿಗೊಳಿಸುವಂತೆ ಸಾಮಾಜಿಕ ಜಾಲ ತಾಣದ ತಂಡವನ್ನು ಕೇಳಿದ ಇಮ್ರಾನ್ ಖಾನ್, ನವಾಜ್ ಶರೀಫ್ ರಾಷ್ಟ್ರದ ಸಂಪತ್ತನ್ನು ಕೊಳ್ಳೆ ಹೊಡೆದು ವಿದೇಶದಲ್ಲಿಟ್ಟಿದ್ದಾರೆ ಎಂದು ಅಪಾದಿಸಿದ್ದರಲ್ಲದೇ ಪಾಕಿಸ್ತಾನದಲ್ಲಿನ ಯುವಕರ ಅದೃಷ್ಟವನ್ನು ಮುಂದಿನ ಚುನಾವಣೆ ನಿರ್ಧರಿಸಲಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಜನಪ್ರಿಯತೆ ಹಾಗೂ ಅರ್ಹತೆ ಆಧಾರದ ಮೇಲೆ ಟಿಕೆಟ್ ನೀಡಲಾಗುವುದು, ಒಂದು ವೇಳೆ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಕಂಡುಬಂದರೆ ಸರ್ವೇ ಮಾಡಿಸಲಾಗುವುದು ಎಂದು ಹೇಳಿದ್ದರು!! ಆದರೆ ಇದೀಗ ನವಾಜ್ ಶರೀಫ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಹಾಗೂ ಸಾರ್ವಜನಿಕ ಸಭೆಗಳನ್ನು ಏರ್ಪಡಿಸುವುದಕ್ಕೆ ಜೀವಮಾನ ನಿಷೇಧ ಹೇರಲಾಗಿದೆ.

Related image

ಅಷ್ಟಕ್ಕೂ ನವಾಜ್ ಶರೀಫ್ ಜೀವಿತಾವಧಿವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಯಾಕೆ ಗೊತ್ತೇ??

ಪಾಕಿಸ್ತಾನದ ಮಾಜಿ ಅಧ್ಯಕ್ಷ ನವಾಜ್ ಶರೀಫ್ ಗೆ ಭಾರೀ ಹಿನ್ನಡೆಯಾಗುವ ರೀತಿಯಲ್ಲಿ, ಪಾಕಿಸ್ತಾನ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿ ನವಾಜ್ ಶರೀಫ್ ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಮತ್ತು ಇನ್ನು ಮುಂದೆ ಸಾರ್ವಜನಿಕ ಜೀವನದ ಹುದ್ದೆ ನಿಭಾಯಿಸುವಂತಿಲ್ಲ ಎಂದು ಹೇಳಿದೆ.

ಸಂವಿಧಾನ ಪ್ರಕಾರ ಒಬ್ಬ ಜನಪ್ರತಿನಿಧಿಯನ್ನು ಅನರ್ಹಗೊಳಿಸಲಾದರೆ ಅದರ ಅವಧಿ ಜೀವನ ಪರ್ಯಂತವಾಗಿರುತ್ತದೆ ಎಂದು ಪಂಚ ಸದಸ್ಯ ಪೀಠ ಹೇಳಿದೆ. ಅನುಚ್ಛೇದ 62 (1)(ಎಫ್)ನಲ್ಲಿ ಜನಪ್ರತಿನಿಧಿಗಳ ಅನರ್ಹತೆ ಬಗ್ಗೆ ಮಾತ್ರ ಉಲ್ಲೇಖವಿದೆ. ಆದರೆ ಅರ್ನಹತೆ ಜಾರಿಯಲ್ಲಿರುವ ಅವಧಿ ಮಾತ್ರ ಸ್ಪಷ್ಟವಾಗಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ಪಿಐಎಲ್ ಸಲ್ಲಿಕೆಯಾಗಿತ್ತು. ಅಷ್ಟೇ ಅಲ್ಲದೇ ಅನುಚ್ಛೇದ ಅನ್ವಯ ಸಂಸದನ ಪೂರ್ವಾರ್ಹತೆ ಪ್ರಾಮಾಣಿಕತೆ, ನ್ಯಾಯಪರತೆಯಾಗಿರಬೇಕು ಎಂದಿದೆ.

ಈಗಾಗಲೇ ನವಾಜ್ ಶರೀಫ್ ವಿರುದ್ದ ಪನಾಮ ಹಗರಣದಲ್ಲಿ ಆರೋಪ ಕೇಳಿ ಬಂದಿದ್ದು, ಇವರನ್ನು 2017ರ ಜುಲಾಯಿ 28ರಂದು ಷರೀಫ್ ಸಂಸದೀಯ ಸ್ಥಾನದಿಂದ ಅನರ್ಹಗೊಂಡಿದ್ದರು. ನಂತರ ಆಡಳಿತ ಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದ ಮುಖ್ಯಸ್ಥ ಹುದ್ದೆಯಿಂದಲೂ ಕೋರ್ಟ್ ಅವರನ್ನು ಅನರ್ಹಗೊಳಿಸಿತ್ತು.

ಆದರೆ ಇದೀಗ ಪಾಕಿಸ್ತಾನ ಸಂವಿಧಾನ ವಿಧಿ 62(1)(ಎಫ್) ನಡಿ ನವಾಜ್ ಷರೀಫ್ ಗೆ ಸಾರ್ವಜನಿಕ ಹುದ್ದೆ ವಹಿಸುವುದಕ್ಕೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕೋರ್ಟ್ ನಿರಾಕರಿಸಿದೆ. ಅಷ್ಟೇ ಅಲ್ಲದೆ ನ್ಯಾಯಮೂರ್ತಿಗಳಾದ ಆಸಿಫ್ ಸಯೀದ್ ಕೋಸಾ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಸಂವಿಧಾನ ವಿಧಿ 62(1)(ಎಫ್)ನಡಿ ನವಾಜ್ ಷರೀಫ್ ಗೆ ನಿರಾಕರಣೆ ಘೋಷಿಸಿದೆ.

ಒಟ್ಟಿನಲ್ಲಿ ತನ್ನ ಕುತಂತ್ರ ಬುದ್ದಿಯಿಂದಲೇ ರಾಜಕೀಯದ ಮೆಟ್ಟಿಲುಗಳನ್ನೇರುತ್ತಿದ್ದ ನವಾಜ್ ಶರೀಫ್, ತನ್ನ ರಾಜಕೀಯ ಬಲದಿಂದಾಗಿ ಭಯೋತ್ಪಾದನೆಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಾ ಅದನ್ನು ಪೋಷಿಸುತ್ತಿರುವ ಇವರಿಗೆ ಇನ್ನು ಮುಂದೆ ಜೀವಿತಾವಧಿವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ!!

ಮೂಲ: https://goo.gl/3xA6X1

– ಅಲೋಖಾ

Tags

Related Articles

Close