ಪ್ರಚಲಿತ

ಪಾಕ್ ಗೆ ಶಾಕ್ ನೀಡಿದ ಎಫ್ ಎ ಟಿ ಎಫ್!! ಕೊನೆಗೂ ಬಯಲಾಯಿತು ಪಾಕಿಸ್ತಾನದ ಅಸಲಿ ಮುಖ!!

ಇತ್ತೀಚೆಗಷ್ಟೇ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡಿ ಗಡಿಯಲ್ಲಿನ ಭಯೋತ್ಪಾದನೆಗೆ ಸುರಕ್ಷಿತ ನೆಲೆ ಕಲ್ಪಿಸಿಕೊಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿರುವ ಬೆನ್ನಲ್ಲೇ ಜಾಗತಿಕ ಎಚ್ಚರಿಕೆಯ ನಡುವೆಯೂ ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ ಪಾಕಿಸ್ತಾನ ಇದೀಗ, ಭಯೋತ್ಪಾದನೆಗೆ ಹಣಕಾಸು ನೆರೆವು ನೀಡುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಂಡಿದೆ ಎನ್ನುವ ಸುದ್ದಿ ಇದೀಗ ಕೇಳಿ ಬಂದಿದೆ.

ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿರುವ  ಸೈಯದ್ ಅಕ್ಬರುದ್ದೀನ್  ಭಯೋತ್ಪಾದನೆಗೆ ಸುರಕ್ಷಿತ ನೆಲಗಳನ್ನು ಕಲ್ಪಿಸಿಕೊಡುತ್ತಿರುವ ಪಾಕ್ ಅಘ್ಘಾನಿಸ್ತಾನ ಮತ್ತು ಇತರ ಭಾಗದಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆಯಲು ಸಹಕಾರ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ತಾಲಿಬಾನ್, ಹಕ್ಕಾನಿ ನೆಟ್ ವರ್ಕ್, ಇಸಿಸ್, ಅಲ್ ಖೈದಾ, ಲಷ್ಕರ್-ಇ-ತೊಯ್ಬಾದಂತಹ ಉಗ್ರ ಸಂಘಟನೆಗಳ ಕಪ್ಪು ಅಜೆಂಡಾಗಳಿಗೆ ಬೆಂಬಲ ನೀಡುತ್ತಿರುವವರು ಈಗಾಲೂ ಇದ್ದಾರೆ ಎಂದಿದ್ದರು!!

ಅದರಂತೆಯೇ ಇದೀಗ ಭಯೋತ್ಪಾದನೆಗೆ ಉತ್ತೇಜಿಸುವ ರಾಷ್ಟ್ರವೆಂದೇ ಜಗತ್ ವಿಖ್ಯಾತಿಯನ್ನು ಗಳಿಸಿರುವ ಪಾಕಿಸ್ತಾನವು ಹಣಕಾಸು ನೆರವು ನೀಡುತ್ತಿರುವ ರಾಷ್ಟ್ರ ಎನ್ನುವುದನ್ನು ಜಾಗತಿಕ ಉಗ್ರ ಹಣಕಾಸು ವಿರೋಧಿ ವಾಚ್ ಡಾಗ್ ಫಿನಾನ್ಯಿಯಲ್ ಟಾಸ್ಕ್ ಫೋರ್ಸ್(ಎಫ್ ಎ ಟಿ ಎಫ್) ಅಧಿಕೃತವಾಗಿ ಭಯೋತ್ಪಾದನೆಗೆ ಹಣಕಾಸು ಪೂರೈಸುತ್ತಿರುವ ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರ್ಪಡೆಗೊಳಿಸಿದೆ.

 

ಇತ್ತಿಚೆಗಷ್ಟೇ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂಬುದನ್ನು ಸಾಬೀತು ಮಾಡುವ ಬಲವಾದ ಸಾಕ್ಷ್ಯಾಧಾರಗಳನ್ನು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಬಹಿರಂಗಗೊಳಿಸಿದೆ. ಪಾಕಿಸ್ತಾನದ ಮಾಜಿ ಪ್ರಧಾನಿಯೊಬ್ಬರು ಹವಾಲ ಏಜೆಂಟ್ ಮತ್ತು ಕಳಂಕಿತ ಉದ್ಯಮಿ ಜಹೂರ್ ಅಹಮದ್ ಶಾ ವಟಾಲಿಗೆ ಬರೆದಿದ್ದ ಪತ್ರವೊಂದನ್ನು ನ್ಯಾಯಾಲಯಕ್ಕೆ ಎನ್ ಐ ಎ ಹಾಜರುಪಡಿಸಿದೆ. ಮೊಹರು ಆದ ದಾಖಲೆಪತ್ರಗಳಲ್ಲಿ ಈ ಪತ್ರವೂ ಸೇರಿದ್ದು, ಮಾಜಿ ಪ್ರಧಾನಿಯ ಹೆಸರನ್ನು ಬಹಿರಂಗಗೊಳಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಕಳೆದ ವರ್ಷ ವಟಾಲಿ ನಿವಾಸದಲ್ಲಿ ಈ ಪತ್ರ ಪತ್ತೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪಿಗಳ ಬಗ್ಗೆ ಕೋರ್ಟ್‍ಗೆ ಎನ್ ಐ ಎ ಚಾರ್ಚ್‍ಶೀಟ್ ಸಲ್ಲಿಸಿದೆ. ಅದಕ್ಕೆ ಪೂರಕವಾಗಿ ಕೆಲವು ಮಹತ್ವದ ದಾಖಲೆ ಪತ್ರಗಳು ಮತ್ತು ದಸ್ತಾವೇಜುಗಳನ್ನು ಸಹ ಹಾಜರುಪಡಿಸಿದೆ. ಈ ದಾಖಲೆಗಳಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಬೇಹುಗಾರಿಕೆ ಸಂಸ್ಥೆ ಐ ಎಸ್ ಐ ಕಾಶ್ಮೀರದ ಹುರಿಯತ್ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿರುವುದನ್ನೂ ದೃಢಪಡಿಸುವ ಪುರಾವೆಗಳೂ ಇವೆ.

ಐಎಸ್‍ಐಗೆ ಅತ್ಯಂತ ಆಪ್ತವಾಗಿರುವ ವಟಾಲಿ ಹವಾಲ ಮತ್ತಿತರ ವಾಮ ಮಾರ್ಗಗಳ ಮೂಲಕ ಹಲವು ಕೋಟಿ ರೂ.ಗಳ ಅವ್ಯವಹಾರಗಳನ್ನು ನಡೆಸಿರುವ ಬಗ್ಗೆ ಚಾರ್ಚ್‍ಶೀಟ್‍ನಲ್ಲಿ ವಿವರಗಳನ್ನು ದಾಖಲಿಸಲಾಗಿದೆ. ವಟಾಲಿಗೆ ವೀಸಾ ನೀಡಬೇಕೆಂದು ನವದೆಹಲಿಯಲ್ಲಿನ ಪಾಕಿಸ್ತಾನ ಹೈ ಕಮಿಷನರ್ಗೆ ಅಲ್ ಶಫಿ ಗ್ರೂಪ್ಸ್ ಆಫ್ ಕಂಪನಿಯ ಮಾಲೀಕ ತಾರೀಖ್ ಶಫಿ ಬರೆದಿರುವ ಪತ್ರವೂ ಇದರಲ್ಲಿದೆ ಎನ್ನುವ ವಿಚಾರವನ್ನು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಬಹಿರಂಗಗೊಳಿಸಿದೆ!!

Image result for terrorist nation pak flag

ಇದಕ್ಕೆ ಪುಷ್ಠಿ ನೀಡುವಂತೆ, ಇದೀಗ ಪಾಕಿಸ್ತಾನವನ್ನು ಅಧಿಕೃತವಾಗಿ ಭಯೋತ್ಪಾದನೆಗೆ ಹಣಕಾಸು ಪೂರೈಸುತ್ತಿರುವ ರಾಷ್ಟ್ರಗಳ ಪಟ್ಟಿಗೆ ವಾಚ್ ಡಾಗ್ ಫಿನಾನ್ಯಿಯಲ್ ಟಾಸ್ಕ್ ಫೋರ್ಸ್(ಎಫ್ ಎ ಟಿ ಎಫ್) ಸೇರ್ಪಡೆಗೊಳಿಸಿದೆ. ಅಷ್ಟೇ ಅಲ್ಲದೇ, ಪ್ಯಾರೀಸ್ ನಲ್ಲಿ ನಡೆದ ಎಫ್ ಎ ಟಿ ಎಫ್ ನ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ತನ್ನ ನೆಲದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಸಿಗುತ್ತಿರುವುದನ್ನು ತಡೆಯಲು ಆ ರಾಷ್ಟ್ರ ಸಂಪೂರ್ಣ ವಿಫಲವಾಗಿದೆ ಎಂದಿದೆ.

ಪಾಕಿಸ್ತಾನ ಬರೀ ಭಯೋತ್ಪಾದನೆಗಷ್ಟೇ ಆಶ್ರಯ ನೀಡುತ್ತಿಲ್ಲ. ಬದಲಾಗಿ ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿರುವುದು ನಿಜಕ್ಕೂ ಕೂಡ ಹೇಯ ಸಂಗತಿ!! ಅಷ್ಟು ಮಾತ್ರವಲ್ಲದೇ, ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವ ದೇಶವಾಗಿರುವ ಪಾಕಿಸ್ತಾನ ನಮ್ಮ ನೆರೆರಾಷ್ಟ್ರವಾಗಿರುವುದು ಕೂಡ ನಮ್ಮ ದುರ್ದೈವ!!

ಮೂಲ:http://news13.in/archives/104996

– ಅಲೋಖಾ

Tags

Related Articles

Close