ಪ್ರಚಲಿತ

ಬ್ರೇಕಿಂಗ್! ಡಿಸಿಎಂನ್ನೇ ಬೆಚ್ಚಿಬೀಳಿಸಿದ ಕಾಂಗ್ರೆಸ್ ಶಾಸಕ..! ಪ್ರಶ್ನೆಯಲ್ಲೇ ಕಟ್ಟಿಹಾಕಿದ ಪಾಟೀಲ್..!

ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಅತೃಪ್ತ ಶಾಸಕರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈಗಾಗಲೇ ತಮ್ಮ ಒಗ್ಗಟ್ಟು ಏನೆಂಬುದನ್ನು ನೇರವಾಗಿ ಕಾಂಗ್ರೆಸ್ ಹೈಕಮಾಂಡ್‌ಗೂ ಮುಟ್ಟಿಸಿದ್ದಾರೆ. ಒಂದೆಡೆ ಅತೃಪ್ತ ಶಾಸಕರನ್ನು ಸುಮ್ಮನಾಗಿಸಲು ಸ್ವತಃ ಹೈಕಮಾಂಡ್ ಎಚ್ಚರಿಕೆ ನೀಡಿದ್ದರೂ ಕೂಡಾ ಕ್ಯಾರೇ ಅನ್ನದ ಶಾಸಕರು ತಮಗಾದ ಅನ್ಯಾಯದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಮುಖಂಡ ಮತ್ತು ಶಾಸಕರಾಗಿರುವಂತಹ ಎಂಬಿ ಪಾಟೀಲ್ ಅವರು ಈಗಾಗಲೇ ತಮ್ಮ ಆಕ್ರೋಶ ಹೊರಹಾಕಿದ್ದು, ಪಕ್ಷ ನಮ್ಮನ್ನು ಕೇವಲ ಅಧಿಕಾರಕ್ಕಾಗಿ ಬಳಸಿಕೊಂಡು ಇದೀಗ ಕಡೆಗಣಿಸುತ್ತಿದೆ ಎಂದು ಹೇಳಿಕೊಂಡಿದ್ದರು. ಇದೀಗ ಅತೃಪ್ತ ಶಾಸಕರ ಮನವೊಲಿಸಲು ತೆರಳಿದ ರಾಜ್ಯ ನಾಯಕರಿಗೂ ಕಪಾಳಮೋಕ್ಷ ಉಂಟಾಗಿದೆ.!

ಎಂಬಿ ಪಾಟೀಲ್ ಮನವೊಲಿಕೆ ವಿಫಲ..!

ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಮುಖಂಡ , ಶಾಸಕರಾಗಿರುವಂತಹ ಎಂಬಿ ಪಾಟೀಲ್ ಅವರು ಸಚಿವ ಸಂಪುಟ ರಚನೆಯಾದ ದಿನದಂದೇ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯ ನಾಯಕರ ಮತ್ತು ಹೈಕಮಾಂಡ್ ಮಾತಿಗೂ ಜಗ್ಗದ ಎಂಬಿ ಪಾಟೀಲ್ ಅವರು ಅತೃಪ್ತ ಶಾಸಕರನ್ನು ಒಗ್ಗೂಡಿಸಿ ಸಭೆ ಕರೆದಿದ್ದರು. ಅತೃಪ್ತ ಶಾಸಕರ ನಡೆಯನ್ನು ಕಂಡು ಕಂಗಾಲಾಗಿದ್ದ ಕಾಂಗ್ರೆಸ್ ಹೈಕಮಾಂಡ್ ಶಾಸಕರನ್ನು ತಣ್ಣಗಾಗಿಸುವ ಸಲುವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಆದರೂ ಎಂಬಿ ಪಾಟೀಲ್ ಮಾತ್ರ ಯಾರ ಮಾತಿಗೂ ಬಗ್ಗಲೇ ಇಲ್ಲ. ನಾವೇನು ಸೆಕೆಂಡ್ ಕ್ಲಾಸ್ ಜನರಲ್ಲ, ನಮಗೂ ಮರ್ಯಾದೆ ಇದೆ , ಮೊದಲ ಸುತ್ತಿನಲ್ಲಿ ನಮ್ಮ ಹೆಸರನ್ನು ಕೈಬಿಟ್ಟು ಇದೀಗ ಎರಡನೇ ಸುತ್ತಿನಲ್ಲಿ ಸಚಿವ ಸ್ಥಾನ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನಮಗೆ ಅದರ ಅವಶ್ಯಕತೆ ಇಲ್ಲ ಎಂದು ರಾಜ್ಯ ನಾಯಕರಿಗೂ ಮತ್ತು ಹೈಕಮಾಂಡ್ ಗೂ ಕಪಾಳಮೋಕ್ಷ ಮಾಡಿದ್ದಾರೆ.!

Image result for parameshwar with mb pateel

 

ಕುಮಾರಸ್ವಾಮಿ ಮಾತಿಗೂ ಕ್ಯಾರೇ ಅನ್ನಲಿಲ್ಲ ಪಾಟೀಲ್..!

ಈಗಾಗಲೇ ಎಂಬಿ ಪಾಟೀಲ್ ಅವರನ್ನು ಮನವೊಲಿಸುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಅವರೂ ಕೂಡ ಮನವೊಲಿಸಲು ಎಂಬಿ ಪಾಟೀಲ್ ಅವರ ಮನೆಗೆ ತೆರಳಿದ್ದರು. ಆದರೆ ಎಂಬಿ ಪಾಟೀಲ್ ಮಾತ್ರ ಯಾರ ಮಾತಿಗೂ ಕ್ಯಾರೇ ಅನ್ನಲಿಲ್ಲ. ಆದ್ದರಿಂದ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಪಾಟೀಲ್ ಮನೆಗೆ ಭೇಟಿ ನೀಡಿ ಸಾಂತ್ವಾನಗೊಳಿಸಲು ಪ್ರಯತ್ನಿಸಿದ್ದಾರೆ. ಆದರೂ ಕೂಡ ಎಂಬಿ ಪಾಟೀಲ್ ಮಾತ್ರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತಿಗೂ ಜಗ್ಗಲಿಲ್ಲ. ಆದ್ದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಾಸಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ನಿರಾಸೆಗೊಂಡಿದ್ದಾರೆ..!

Related image

 

ಆದ್ದರಿಂದ ಅಸಮಧಾನಗೊಂಡ ಶಾಸಕರನ್ನು ತಣ್ಣಗಾಗಿಸಲು ಶಥ ಪ್ರಯತ್ನಿಸುತ್ತಿರುವ ಮೈತ್ರಿ ಸರಕಾರದ ಮುಖಂಡರಿಗೆ ಮತ್ತು ಹೈಕಮಾಂಡ್‌ಗೆ ಭಾರೀ ಹೊಡೆತ ಬಿದ್ದಿದೆ. ಎಂಬಿ ಪಾಟೀಲ್ ಅವರು ತಮ್ಮ ಮುಂದಿನ ನಿರ್ಧಾರವನ್ನು ರಾಹುಲ್ ಗಾಂಧಿ ಭೇಟಿಯ ಬಳಿಕವಷ್ಟೇ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿಕೊಂಡಿದ್ದು, ಭಾರೀ ಕುತೂಹಲ ಕೆರಳಿಸಿದೆ..!

–ಅರ್ಜುನ್

Tags

Related Articles

Close