ಪ್ರಚಲಿತ

ಕೆಂಪು ಉಗ್ರರ ನಿಗ್ರಹಕ್ಕೆ ಪ್ರಧಾನಿ ಮೋದಿ ಸರ್ಕಾರ ಬದ್ಧ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಉಗ್ರವಾದ, ನಕ್ಸಲಿಸಂ ವಿರುದ್ಧ ಅತ್ಯಂತ ಕಠಿಣ ಕ್ರಮಗಳನ್ನು ಹೇರುವ ಮೂಲಕ ನಿಯಂತ್ರಣಕ್ಕೆ ತರುವ ಪ್ರಯತ್ನಗಳನ್ನು ನಡೆಸಿದ್ದಾರೆ ಎನ್ನುವುದು ಸ್ಪಷ್ಟ.

ಕೆಲ ದಿನಗಳ ಹಿಂದೆ ಛತ್ತೀಸ್‍ಘಡ್ ‌ನಲ್ಲಿ ಇಪ್ಪತ್ತೊಂಬತ್ತು ನಕ್ಸಲರನ್ನು ಎನ್‌ ಕೌಂಟರ್ ನಡೆಸಿ ಭದ್ರತಾ ಪಡೆಗಳು ಯಮಲೋಕಕ್ಕೆ ಅಟ್ಟಿದ್ದು, ಕೇಂದ್ರ ಸರ್ಕಾರ ದೇಶದಿಂದ ಕೆಂಪು ಉಗ್ರರನ್ನು ಅಟ್ಟಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದು, ಭಾರತದಿಂದ ನಕ್ಸಲಿಸಂ ಎಂಬ ಪಿಡುಗನ್ನು ತೊಡೆದು ಹಾಕಲು ಕೇಂದ್ರ ಸರ್ಕಾರ ಸಂಕಲ್ಪ ತೊಟ್ಟಿದೆ ಎಂದು ಹೇಳಿದ್ದಾರೆ. ಕೆಂಪು ಭಯೋತ್ಪಾದನೆಯನ್ನು ದೇಶದಿಂದ ಬೇರು ಸಹಿತ ಕಿತ್ತು ಹಾಕಲು ಬೇಕಾದ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ‌.

ನಮ್ಮ ಪಕ್ಷ ಛತ್ತೀಸ್‍ಘಡ್‌ನಲ್ಲಿ ಸರ್ಕಾರ ರಚನೆ ಮಾಡಿದ ಸುಮಾರು ಮೂರು ತಿಂಗಳ ಅವಧಿಯಲ್ಲಿ ಸುಮಾರು ಎಂಬತ್ತಕ್ಕೂ ಹೆಚ್ಚು ಮಾವೋವಾದಿಗಳನ್ನು ಕೊಲ್ಲಲಾಗಿದೆ. ನೂರಾರು ಇಪ್ಪತೈದಕ್ಕೂ ಅಧಿಕ ನಕ್ಸಲರನ್ನು ಬಂಧಿಸಲಾಗಿದೆ. ನೂರೈವತ್ತಕ್ಕೂ ಅಧಿಕ ಮಾವೋವಾದಿಗಳು ಶಸ್ತ್ರ ತ್ಯಾಗ ಮಾಡಿದ್ದಾರೆ. ನಕ್ಸಲ್ ವಿರೋಧಿ ಕಾರ್ಯಾಚರಣೆಯ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೀಘ್ರದಲ್ಲೇ ಮಾವೋವಾದಿಗಳನ್ನು ಮಟ್ಟ ಹಾಕಿ, ಶಾಂತಿಯುತ ವಾತಾವರಣ ನಿರ್ಮಾಣದ ಕನಸನ್ನು ನನಸು ಮಾಡುತ್ತದೆ. ಭಯಮುಕ್ತ ವಾತಾವರಣ ನಿರ್ಮಾಣ ಮಾಡುತ್ತದೆ. ನಮ್ಮ ಸರ್ಕಾರ ನಕ್ಸಲ್ ಬೆದರಿಕೆಯನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತದೆ ಎಂದು ಶಾ ಹೇಳಿದ್ದಾರೆ.

ಛತ್ತೀಸ್‍ಘಡ್‌ನ ಕಂಕೇರ್ ಜಿಲ್ಲೆಯಲ್ಲಿ ಎಡಪಂಥೀಯ ಉಗ್ರರ ವಿರುದ್ಧ ಯಶಸ್ವಿಯಾದ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳ ಕಾರ್ಯವನ್ನು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಗುಪ್ತಚರ ದಳ ನೀಡುತ್ತಿರುವ ಬೆಂಬಲವನ್ನು, ರಾಜ್ಯದ ಪೊಲೀಸರ ಕಾರ್ಯಕ್ಕೆ ಅವರು ಅಭಿನಂದಿಸಿದರು.

Tags

Related Articles

Close