ಪ್ರಚಲಿತ

ಮತದಾರರಲ್ಲಿ ವಿಶೇಷ ಮನವಿ ಮಾಡಿದ ಪ್ರಧಾನಿ ಮೋದಿ

ದೇಶದೆಲ್ಲೆಡೆ ಲೋಕಸಭಾ ಚುನಾವಣಾ ಹಬ್ಬ ಆರಂಭವಾಗಿದ್ದು, ಅದೆಷ್ಟೋ ಹೊಸ, ಯುವ ಮತದಾರರು ಈ ಬಾರಿ ತಮ್ಮ ಮೊದಲ ಮತವನ್ನು ಚಲಾಯಿಸಲಿದ್ದಾರೆ. ಆ ಮೂಲಕ ದೇಶದ ಭವಿಷ್ಯ ರೂಪಿಸುವಲ್ಲಿ ತಮ್ಮದೇ ಕೊಡುಗೆ ನೀಡಲಿದ್ದಾರೆ.

ದೇಶದಲ್ಲಿ ಈಗಾಗಲೇ ಲೋಕಸಭಾ ಚುನಾವಣೆಯ ಮೊದಲ ಹಂತ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷವಾದ ಮನವಿಯೊಂದನ್ನು ತಮ್ಮ ಎಕ್ಸ್ ಖಾತೆಯ ಮೂಲಕ ಮಾಡಿಕೊಂಡಿದ್ದಾರೆ. ದೇಶದ ಎಲ್ಲಾ ಮತದರರನ್ನೂ ಗಮನದಲ್ಲಿ ಇರಿಸಿಕೊಂಡು ಅವರು ಈ ಮನವಿ ಮಾಡಿರುವುದಾಗಿದೆ‌.

ಇಂದಿನಿಂದ ದೇಶದಲ್ಲಿ 2024 ರ ಲೋಕಸಭಾ ಚುನಾವಣೆ ಆರಂಭವಾಗುತ್ತಿದೆ. ದೇಶದ ಇಪ್ಪತ್ತೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 102 ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಗಳಲ್ಲಿ ಮತ ಚಲಾವಣೆ ಮಾಡುವವರೆಲ್ಲರೂ ತಮ್ಮ ಹಕ್ಕುಗಳನ್ನು ದಾಖಲೆಯ ಸಂಖ್ಯೆಯಲ್ಲಿ ಚಲಾವಣೆ ಮಾಡುವ ಹಾಗೆ ನಾನು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಮುಖ್ಯವಾಗಿ ಈ ಬಾರಿ ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಪಿ ಎಂ ಮೋದಿ ಮನವಿ ಮಾಡಿದ್ದು, ‘ವಿಶೇಷವಾಗಿ ಯುವ ಪೀಳಿಗೆ ಮತ್ತು ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿರುವವರು ಅಧಿಕ ಸಂಖ್ಯೆಯಲ್ಲಿ ಮತ ಚಲಾಯಿಸುವ ಹಾಗೆ ನಾನು ಮನವಿ ಮಾಡುತ್ತೇನೆ. ಪ್ರತಿಯೊಬ್ಬ ಮತದಾನ ಒಂದು ಮತ ಭಾರತದ ಅಭಿವೃದ್ಧಿ ಮತ್ತು ಸಮಾನತೆಯನ್ನು ಬಲಪಡಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತದಾನ ದೇಶದ ಪ್ರತಿಯೊಬ್ಬ ಅರ್ಹ ನಾಗರಿಕನ ಮುಖ್ಯ ಕರ್ತವ್ಯವಾಗಿದ್ದು, ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿದಲ್ಲಿ ದೇಶದ, ದೇಶದ ಜನರ ಪ್ರಗತಿ ಸಾಧ್ಯವಾಗುತ್ತದೆ. ಈ ದೇಶವನ್ನು ಎಂತಹ ನಾಯಕನ ಕೈಗೆ ನೀಡಿದಲ್ಲಿ ಭದ್ರ ಎಂಬುದನ್ನು ನಿರ್ಧಾರ ಮಾಡುವುದು ಸಹ ನಾವು ನೀಡುವ ಮತಗಳೇ ಎನ್ನುವುದು ಬಲು ಮುಖ್ಯ ವಿಷಯ.

ಮತದಾನ ದೇಶದ ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕ ಹಕ್ಕಾಗಿದ್ದು, ಈ ಹಕ್ಕನ್ನು ಎಲ್ಲರೂ ಚಲಾಯಿಸುವ ಮೂಲಕ ದೇಶಕ್ಕೆ ಸುಭದ್ರ ಸರ್ಕಾರ ಸಿಗಲು ಎಲ್ಲರೂ ಪ್ರಯತ್ನ ಮಾಡೋಣ. ಮತದಾನ ನಮ್ಮೆಲ್ಲರ ಹಕ್ಕು. ಆ ಹಕ್ಕನ್ನು ಮರೆಯದೆ ಚಲಾಯಿಸೋಣ. ಆ ಮೂಲಕ ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡೋಣ.

Tags

Related Articles

Close