ಪ್ರಚಲಿತ

ವಿಕಸಿತ ಭಾರತಕ್ಕಾಗಿ ಈ ಚುನಾವಣೆ

ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣಾ ಹಬ್ಬ ನಡೆಯಲಿದ್ದು, ಈ ಸಂಬಂಧ ಎಲ್ಲಾ ರೀತಿಯ ತಯಾರಿಗಳೂ ನಡೆಯುತ್ತಿವೆ. ಜೊತೆಗೆ ಎಲ್ಲಾ ಪಕ್ಷಗಳೂ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿ ನರೇಂದ್ರ ಮೋದಿ ಆವರು ಮಾತನಾಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ವಿಕಸಿತ ಭಾರತದ ಸಂಕಲ್ಪ ಈಡೇರಿಕೆಗಾಗಿ ಎಂದು ಅವರು ತಿಳಿಸಿದ್ದಾರೆ.

ವಿಕಸಿತ ಭಾರತವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಅವರು ತಿಳಿಸಿದ್ದು, ಇದಕ್ಕಾಗಿ ಬಿಜೆಪಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿ‌ಎ ಮಿತ್ರಪಕ್ಷಗಳ ಅಭ್ಯರ್ಥಿಗಳಿಗೆ ಮತ ನೀಡಿ ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

ಕೇವಲ ಸರ್ಕಾರ ರಚನೆಯ ಉದ್ದೇಶದಿಂದ ಮಾತ್ರವೇ ಈ ಬಾರಿಯ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂದರೆ ಅದು ತಪ್ಪು. ಈ ಹತ್ತು ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ಟ್ರೇಲರ್ ಅನ್ನು ಮಾತ್ರವೇ ಭಾರತದ ಜನರು ನೋಡಿರುವುದಾಗಿದೆ. ಆದರೆ ನಾವು ಮುಂದಿನ ಐದು ವರ್ಷಕ್ಕೆ ಬೇಕಾದಂಂತಹ ಅಭಿವೃದ್ಧಿಯ ಮಾರ್ಗಸೂಚಿಗಳನ್ನು ಹಾಕಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಹಾಗೆ ದೇಶ ಯಾವ ಮಟ್ಟಕ್ಕೆ ಏರಬೇಕು ಎನ್ನುವುದಕ್ಕೆ ನಾವು ಮಾರ್ಗಸೂಚಿ ಹಾಕಿಕೊಳ್ಳುತ್ತಿದ್ದೇವೆ. ಜೊತೆಗೆ ಸರ್ಕಾರ ರಚನೆ ಮಾಡಿದ ಬಳಿಕ ಮೊದಲ ನೂರು ದಿನಗಳಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯ ಗಳ ಬಗೆಗೂ ನಾವು ರೂಪುರೇಶೆ ‌ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಈ ಎಲ್ಲಾ ಕೆಲಸಗಳನ್ನೂ ಬಹಳಷ್ಟು ವೇಗವಾಗಿ ನಾವು ಮಾಡಿ ಮುಗಿಸುತ್ತಿದ್ದೇವೆ. ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಜನತೆ ಕೇವಲ ಟ್ರೇಲರ್ ಅಷ್ಟೇ ನೋಡಿದ್ದು, ಮುಂಬರುವ ದಿನಗಳನ್ನು ದೇಶವನ್ನು ಅಭಿವೃದ್ಧಿಗೆ ಸಂಬಂಧಿಸಿದ ಹಾಗೆ ಬಹಳ ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದು ತಿಳಿಸಿದ್ದಾರೆ.

ನಾನು ಸಹ ಬಡತನವನ್ನು ಕಂಡಿದ್ದೇನೆ. ಅದರಲ್ಲೇ ಜೀವನ ನಡೆಸಿದವನಾಗಿದ್ದೇನೆ. ಹಾಗಾಗಿ, ನನಗೆ ಬಡವರ ಸಂಕಷ್ಟ ಅರಿವಾಗುತ್ತದೆ. ಹಾಗಾಗಿ ಬಡವರ ಕಷ್ಟ, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇವೆ.‌ ನಾವು ಬಡವರನ್ನು ಸಬಲರನ್ನಾಗಿ ಮಾಡಿರುವುದಲ್ಲ. ಬದಲಾಗಿ ಅವರ ಆತ್ಮವಿಶ್ವಾಸವನ್ನು ಮರಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close