ಪ್ರಚಲಿತ

ಪ್ರಧಾನಿ ಮೋದಿ ಅವರ ಕಠಿಣ ವ್ರತ ಹೇಗಿದೆ ಗೊತ್ತಾ?

ಒಬ್ಬ ಪ್ರಧಾನಿ ದೇಶಕ್ಕಾಗಿ, ದೇಶದ ಜನರು ಮತ್ತು ಅವರ ನಂಬಿಕೆಗಳಿಗೆ ಜೀವ ತುಂಬಲು ಹೀಗೂ ಮಾಡಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ್ಗೆ ಸಾಬೀತು ಮಾಡುತ್ತಲೇ ಬಂದಿದ್ದಾರೆ. ದೇಶದ, ಜನರ ಅಭಿವೃದ್ಧಿಯ ಮೂಲ ಮಂತ್ರದ ಜೊತೆಗೆ ಭಾವನೆಗಳಿಗೆ ಜೀವ ತುಂಬುವ ಕಾರ್ಯವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಇದು ಭಾರತೀಯರಾದ ನಮ್ಮೆಲ್ಲರ ಪುಣ್ಯ ಎಂದು ಯಾವುದೇ ಸಂದೇಹ, ಅಂಜಿಕೆ ಇಲ್ಲದೆ ಹೇಳಬಹುದು.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ರೂವಾರಿ ಎಂದರೂ ಅತಿಶಯವಾಗಲಾರದು. ಕೋಟ್ಯಾನುಕೋಟಿ ಭಾರತೀಯರ ಧಾರ್ಮಿಕ ನಂಬಿಕೆ, ಮನೋಭಿಲಾಷೆಗೆ ರಾಮ ಮಂದ್ರ ನಿರ್ಮಾಣದ ಮೂಲಕ ಪ್ರಾಣ ಪ್ರತಿಷ್ಠೆ ಮಾಡಿದವರು. ಇನ್ನೇನು ಎರಡೇ ದಿನಗಳಲ್ಲಿ ಅಯೋಧ್ಯೆಯ ಭವ್ಯ ಮಂದಿರ ಲೋಕಾರ್ಪಣೆ, ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಒಟ್ಟು ಹನ್ನೊಂದು ದಿನಗಳ ಕಠಿಣ ವ್ರತಾಚಾರಣೆಗೆ ತೊಡಗಿದ್ದಾರೆ.

ಜನವರಿ 22 ರಂದು ನಡೆಯುವ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಅನುಸರಿಸುತ್ತಿದ್ದಾರೆ. ಈ ಬಗ್ಗೆ ಮೂಲಗಳು ಮಾಹಿತಿ ನೀಡಿರುವಂತೆ ಪ್ರಧಾನಿ ಮೋದಿ ಅವರು ‘ಯಾಮ್’ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಧಾನಿ ಮೋದಿ ಅವರು ಹನ್ನೊಂದು ದಿನಗಳ ಕಾಲ ಕಠಿಣ ವ್ರತ, ಧ್ಯಾನ, ಸಾತ್ವಿಕ ಆಹಾರ ಸೇವನೆಗಳ ಸೇವನೆ ಮಾಡುತ್ತಿದ್ದಾರೆ. ಮನಸ್ಸು ಮತ್ತು ದೇಹದ ಶುದ್ಧೀಕರಣ ಸಹ ಈ ವ್ರತದಲ್ಲಿ ಒಳಗೊಂಡಿದೆ. ಈರುಳ್ಳಿ, ಬೆಳ್ಳುಳ್ಳಿ ಸೇರಿದ ಹಾಗೆ ಇನ್ನಿತರ ವಸ್ತುಗಳ ಸೇವನೆ ಸಹ ಈ ವ್ರತದಲ್ಲಿ ನಿಷೇಧಿಸಲಾಗಿದೆ. ನೆಲದ ಮೇಲೆ ಕೇವಲ ಹೊದಿಕೆ ಹೊದ್ದು ಮಲಗುವುದು, ಆಹಾರವಾಗಿ ಎಳನೀರನ್ನು ಮಾತ್ರ ಪ್ರಧಾನಿ ಮೋದಿ ಅವರು ಸೇವನೆ ಮಾಡುತ್ತಿದ್ದಾರೆ.

ಈ ವ್ರತಾಚರಣೆಯನ್ನು ಪ್ರಧಾನಿ ಮೋದಿ ಅವರು ಜನವರಿ ಹನ್ನೆರಡರಂದು, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದ ದಿನದಿಂದಲೇ ಆರಂಭ ಮಾಡಿದ್ದಾರೆ. ಜನವರಿ 22 ರಂದು ಪ್ರಧಾನಿ ಮೋದಿ ಅವರು ಪ್ರಾಣ ಪ್ರತಿಷ್ಠೆಯ ಧಾರ್ಮಿಕ ಕಾರ್ಯಕ್ರಮಗಳ ಯಜಮಾನಿಕೆಯನ್ನೂ ವಹಿಸಲಿದ್ದಾರೆ.

Tags

Related Articles

Close