ಪ್ರಚಲಿತ

ಲಂಚಕೋರ ಕಾಂಗ್ರೆಸ್ ಜನ್ಮ ಜಾಲಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಮೂಲಕ ದೇಶವನ್ನು ಕೊಳ್ಳೆ ಹೊಡೆದ ಕಾಂಗ್ರೆಸ್ ಪಕ್ಷದ ಜನ್ಮ ಜಾಲಾಡಿದ್ದಾರೆ.

ಕಾಂಗ್ರೆಸ್‌ ಪಕ್ಷ ತನ್ನಲ್ಲಿ ದೇಶವನ್ನು ಲೂಟಿ ಹೊಡೆಯುವುದಕ್ಕೆ ಲೈಸನ್ಸ್ ಇದೆ ಎಂಬುದಾಗಿ ಭಾವಿಸಿತ್ತು. ಹಿಂದೆ ತನ್ನ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ನೀಡುವ ಅನುದಾನದ ಒಂದು ರೂ. ವಿನಲ್ಲಿ ಜನರಿಗೆ ತಲುಪುತ್ತಿದ್ದದ್ದು ಕೇವಲ 15 ಪೈಸೆ ಮಾತ್ರ. ಲೂಟಿಯ ಲೈಸನ್ಸ್ ತನ್ನ ಬಳಿ ಇದೆ ಎಂದು ಕಾಂಗ್ರೆಸ್ ತಿಳಿದಿತ್ತು. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ನಮ್ಮ ಸರ್ಕಾರ ಈಗ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ನ ಭ್ರಷ್ಟಾಚಾರದ ಲೈಸನ್ಸ್ ನಾವು ರದ್ದು ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಈಗ ನಮ್ಮ ಸರ್ಕಾರ ನೀಡುವ ಹಣ ಫಲಾನುಭವಿಗಳಿಗೆ ನೇರವಾಗಿ ಹೋಗುತ್ತಿದೆ. ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ತಿಲಾಂಜಲಿ ಇರಿಸಿದೆ. ಸುಧೀರ್ಘವಾಗಿ ಈ ಹಿಂದೆ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸರ್ಕಾರ ದೇಶದ ಬಡ ಜನರನ್ನು ನಿರ್ಲಕ್ಷ್ಯ ಮಾಡಿತ್ತು. ಭಾರತದಲ್ಲಿ 2014 ಕ್ಕೂ ಮೊದಲು ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಲವಾರು ಭ್ರಷ್ಟಾಚಾರ, ಹಲವು ಲಕ್ಷ ಕೋಟಿಗಳ ಅಕ್ರಮ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಈ ದೇಶದ ಬಡವರಿಗೆ ಅನ್ಯಾಯ ಮಾಡಿತ್ತು ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಭ್ರಷ್ಟಾಚಾರವೇ ದೇಶದ ಅಸ್ಮಿತೆ ಎಂಬುದಾಗಿ ಭಾವಿಸಿತ್ತು. ದೇಶವನ್ನು ಕೊಳ್ಳೆ ಹೊಡೆಯುವುದಕ್ಕಾಗಿಯೇ ಲೈಸನ್ಸ್ ಇದೆ ಎನ್ನುವುದಾಗಿ ಕಾಂಗ್ರೆಸ್ ಭಾವಿಸಿತ್ತು. ದೇಶದ ಬಡ ಜನರ ಅಗತ್ಯತೆಗಳನ್ನು ನಿರ್ಲಕ್ಷ್ಯ ಮಾಡಿದ ಕಾಂಗ್ರೆಸ್, ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲಿಲ್ಲ. ನಮ್ಮ ಸರ್ಕಾರ ಆಡಳಿತ ವಹಿಸಿಕೊಂಡ ಬಳಿಕ ಕಾಂಗ್ರೆಸ್‌ನ ಕೊಳ್ಳೆ ಹೊಡೆಯುವ ಲೈಸನ್ಸ್ ಅನ್ನು ರದ್ದು ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ದಿ. ರಾಜೀವ್ ಗಾಂಧಿ ಅವರೇ ಹಿಂದೊಮ್ಮೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಸರ್ಕಾರ ನೀಡುವ ಒಂದು ರೂ. ಗಳಲ್ಲಿ ಫಲಾನುಭವಿಗಳಿಗೆ ಕೇವಲ 15 ಪೈಸೆ ಮಾತ್ರವೇ ತಲುಪುತ್ತಿದೆ, ಜನರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಳಕೆಯಾಗುತ್ತಿರಲಿಲ್ಲ ಎಂದು. ಹಾಗಾದರೆ ಸರ್ಕಾರ ನೀಡುತ್ತಿದ್ದ ಹಣದಲ್ಲಿ ಉಳಿದ 85 ಪೈಸೆ ಎಲ್ಲಿಗೆ ಹೋಗುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ನಮ್ಮ ಬಿಜೆಪಿ ಸರ್ಕಾರ ತಂದಿರುವ ಯೋಜನೆಗಳು ಭ್ರಷ್ಟಾಚಾರ ಮುಕ್ತವಾಗಿವೆ. ಕೊರೋನಾ ಸಮಯದಲ್ಲಿಯೂ ಬಿಜೆಪಿ ಜನತೆಯ ಪರವಾಗಿ ನಿಂತಿತ್ತು. ಉಚಿತ ಔಷಧ, ಲಸಿಕೆಗಳನ್ನು ನೀಡುವ ಮೂಲಕ ಜನರಿಗೆ ನೆರವಾಗಿತ್ತು. ಭಾಜಪ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ ಅನುದಾನ ಫಲಾನುಭವಿಗಳ ಖಾತೆಗೆ ನೇರವಾಗಿ ತಲುಪಿದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇದ್ದಿದ್ದರೆ, ಒಂದು ರೂ. ಗಳಲ್ಲಿ ಹದಿನೈದು ಪೈಸೆ ಜನರಿಗೆ ತಲುಪುವುದೇ ಮುಂದುವರಿಯುತ್ತಿತ್ತು ಎಂದು ಅವರು ಕಾಂಗ್ರೆಸ್ ಕರ್ಮಕಾಂಡವನ್ನು ಬಯಲಿಗೆ ಎಳೆದಿದ್ದಾರೆ.

Tags

Related Articles

Close