ಪ್ರಚಲಿತ

ಕಾಂಗ್ರೆಸ್ ಸಪ್ತ ದಶಕಗಳ ಬಗ್ಗೆ ಪ್ರಧಾನಿ ಮೋದಿ ಕೊಟ್ಟ ಟಾಂಗ್ ಹೇಗಿತ್ತು ಗೊತ್ತಾ?

ಕಳೆದ ಅರವತ್ತು ದಶಕಗಳ ಕಾಂಗ್ರೆಸ್ ಆಡಳಿತದಲ್ಲಿ ಕಾಣದ ಅಭಿವೃದ್ಧಿಯನ್ನು ಕಳೆದ ಹತ್ತು ವರ್ಷಗಳ ಪ್ರಧಾನಿ ಮೋದಿ ನೇತೃತ್ವದ ಆಡಳಿತದಲ್ಲಿ ಭಾರತ ಕಂಡಿದೆ ಎನ್ನುವುದು ನಿಸ್ಸಂಶಯ.

ದೇಶದ ಎಲ್ಲಾ ವಲಯಗಳ ಅಭಿವೃದ್ಧಿಯ ಆಶಯದಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತಂದಿದೆ. ಆ ಮೂಲಕ ದೇಶದ ಪ್ರಗತಿಯ ಕನಸನ್ನು ನನಸಾಗಿಸಲು ಪಣ ತೊಟ್ಟಿದೆ. ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರುವ ಹಾಗೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ಕಾರ್ಯಗಳನ್ನು ಮಾಡುತ್ತಿದೆ ಎಂಬುದು ನಿರ್ವಿವಾದ.

ಕಲುಷಿತ ಕಾಂಗ್ರೆಸ್ ಪಕ್ಷದ ದುರಾಡಳಿತದ ಬಗ್ಗೆ ಪ್ರಧಾನಿ ಮೋದಿ ಕಿಡಿ ಕಾರಿದ್ದಾರೆ. ಕೆಲ ದಿನಗಳ ಹಿಂದೆ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ಹಾಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಮಾಡಲು ಇಪ್ಪತ್ತು ವರ್ಷಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ದೇಶ ಸ್ವಾತಂತ್ರ್ಯಗೊಂಡ ದಿನದಿಂದ 2014 ರ ವರೆಗೆ ಈಶಾನ್ಯ ಭಾಗದಲ್ಲಿ ಸುಮಾರು ಹತ್ತು ಸಾವಿರ ಕಿ.ಮೀ. ಗಳಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಆರು ಸಾವಿರ ಕಿ.ಮೀ. ಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಕಾಂಗ್ರೆಸ್ ‌ಏಳು ದಶಕಗಳ ಅವಧಿಯಲ್ಲಿ ಮಾಡಿದ್ದನ್ನು ನಾವು ಕೇವಲ ಒಂದೇ ಒಂದು ವರ್ಷದ ಅವಧಿಯಲ್ಲಿ ಪೂರೈಸಿದ್ದೇವೆ. 2014 ರ ಅನಂತರ ಈಶಾನ್ಯ ರಾಜ್ಯಗಳಲ್ಲಿ ಸುಮಾರು ಎರಡು ಸಾವಿರ ಕಿ. ಮೀ. ಗಳಷ್ಟು ರೈಲ್ವೆ ಹಳಿಗಳನ್ನು ಸ್ಥಾಪಿಸಲಾಯಿತು. ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆಯೂ ನಮ್ಮ ಸರ್ಕಾರ ಮಹತ್ವದ ಹಲವಾರು ಕೊಡುಗೆಗಳನ್ನು ನೀಡಿದೆ ಎಂದು ಮೋದಿ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿ ಮಾಡುವ ಗುರಿಯು ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಮ್ಮ ಸರ್ಕಾರದ‌ ಗುರಿಯಾಗಿದೆ. ಈ ಭಾಗದ ಅಭಿವೃದ್ಧಿಗೆ ನಮ್ಮ ದೃಷ್ಟಿಕೋನ ಅಷ್ಚಲಕ್ಷಿಯಾಗಿದೆ. ಈ ಹಾಕಲು ಭಾರತವು ದಕ್ಷಿಣ, ಪೂರ್ವ ಏಷ್ಯಾಗಳ ಜೊತೆಗೆ ವ್ಯಾಪಾರ ನಡೆಸುವ ಕೊಂಡಿಯಾಗಿದೆ. ಇತರ ಸಂಬಂಧಗಳಿಗೂ ಇದು ಬಲವಾದ ಕೊಂಡಿಯಾಗಲಿದೆ ಎಂದು ಅವರು ಹೇಳಿದ್ದಾರೆ. 

Tags

Related Articles

Close